ಭಾಗ - 10, ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ಆ ಕಾಲದಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದ ರಾಮಕೃಷ್ಣ ಅಯ್ಯ೦ಗಾರ್, ಪಶ್ಚಾತ್ತಾಪದಿಂದ ವಕೀಲಿ ವೃತ್ತಿಯಿಂದ ನಿವೃತ್ತರಾದ ಬದರಿನಾರಾಯಣ ಅಯ್ಯಂಗಾರ್
#ಭಾಗ_10.
#ವಕೀಲಿ_ವೃತ್ತಿ_ತೊರೆಯಲು_ಕಾರಣ_ಆದ_ಆ_ಪ್ರಕರಣ
#ದೇಣಿಗೆ_ನೀಡಿದ_ಅಮೂಲ್ಯ_ದಾಖಲೆ_ವಿವರದ_ತಾಮ್ರದ_ಫಲಕ_ಈಗ_ಎಲ್ಲಿದೆ?
ರಾಮ ಕೃಷ್ಣ ಆಯ್ಯಂಗಾರರ ಶ್ರೀಮ೦ತಿಕೆ, ಸಮಾಜದಲ್ಲಿ ಅವರು ಪಡೆದ ಘನತೆ ಗೌರವಗಳು ಅವರ ಮಕ್ಕಳಲ್ಲಿ ಅಹಂಕಾರ ಅಥವ ದುರ್ಜಟಗಳಿಗೆ ಕಾರಣವಾಗದ್ದು ಸೋಜಿಗ.
ಅಯ್ಯಂಗಾರರ ಕುಟುಂಬದಲ್ಲಿ ಕಾಫಿ ಟೀ ಬಳಕೆ ಯಾವತ್ತೂ ಇರಲಿಲ್ಲ, ಬೆಳಿಗ್ಗೆ 9 ಕ್ಕೆ ತೆಳು ಮಜ್ಜಿಗೆ ನಂತರ ಸ್ನಾನ ಪೂಜೆ ನಂತರ ಉಪಹಾರ, ಬದರಿನಾರಾಯಣ ಅಯ್ಯಂಗಾರರು ಮಾತ್ರ ರಾಜಕಾರಣಿ ಆದ್ದರಿಂದ ಅಪರೂಪಕ್ಕೆ ಕಾಫಿ ಸೇವಿಸುತ್ತಿದ್ದರು.
ಆ ಕಾಲದಲ್ಲಿ ಶಿವಮೊಗ್ಗದಲ್ಲಿ ಬ್ರಿಟಿಷ್ ವೈದ್ಯ ಮೆಗ್ಗಾನ್ ರ ಹೆಸರಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಲು ಮಹಾರಾಜರು ಯೋಜಿಸುತ್ತಾರೆ, ಆಗ ಮೈಸೂರು ಮಹಾರಾಜರ ಕನಸು ನನಸು ಮಾಡಲು ಜಿಲ್ಲಾ ಪ್ರಮುಖರು ಕೈಜೋಡಿಸಲು ಮುಂದಾಗುತ್ತಾರೆ ಮತ್ತು ಆ ಕಾಲದಲ್ಲೇ ಆನಂದಪುರದಲ್ಲಿ ರಾಮಕೃಷ್ಣ ಅಯ್ಯಂಗಾರರು ತಮ್ಮ ಪತ್ನಿ ಸ್ಮರಣಾಥ೯ ಸಾರ್ವಜನಿಕರಿಗೆ ಆಸ್ಪತ್ರೆ ನಿರ್ಮಿಸಿದ್ದರಿಂದ ಅವರೊಡನೆ ಚರ್ಚಿಸುತ್ತಾರೆ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಆ ಕಾಲದಲ್ಲಿ ಅತ್ಯಂತ ದೊಡ್ಡ ಮೊತ್ತದ ದೇಣಿಗೆ (ಹತ್ತು ಸಾವಿರ) ನೀಡಿದ್ದರು ಆ ಕಾಲದಲ್ಲಿ ಮೆಗ್ಗಾನ್ ಆಸ್ಪತ್ರೆಯ ಎದರು ತಾಮ್ರದಲ್ಲಿ ಬರೆದ ದೇಣಿಗೆ ನೀಡಿದವರ ವಿವರ ಪಟ್ಟಿ ಇತ್ತು ಇತ್ತೀಚೆಗೆ ಆಸ್ಪತ್ರೆಯ ನವೀಕರಣದಲ್ಲಿ ಈ ಅಮೂಲ್ಯವಾದ ಮಾಹಿತಿಯ ತಾಮ್ರದ ಬೋರ್ಡ್ ಯಾರೋ ಗುಜರಿಗೆ ತಾಮ್ರದ ಈ ಬೋರ್ಡ್ ಹಣದಾಸೆಗೆ ಮಾರಿಕೊಂಡಿದ್ದಾರೆಂದು ಹೇಳುತ್ತಾರೆ ಇದನ್ನು ಹುಡುಕುವ ಯಾವ ಪ್ರಯತ್ನವೂ ಜಿಲ್ಲಾ ರಾಜಕೀಯ ಪ್ರಮುಖರು ಮಾಡದಿರವುದು ದುರಾದೃಷ್ಟ.
ಬದರಿನಾರಾಯಣ ಆಯ್ಯಂಗಾರರು ಪ್ರಾಥಮಿಕ ಶಿಕ್ಷಣ ಆನಂದಪುರಂ ನಲ್ಲಿ ಮಾಡುತ್ತಾರೆ ನಂತರ ತುಮಕೂರಿನಲ್ಲಿ ವಕೀಲಿ ಶಿಕ್ಷಣ ಪಡೆಯುತ್ತಾರೆ, ವಿದ್ಯಾಥಿ೯ ಜೀವನದಲ್ಲೇ ಕ್ವಿಟ್ ಇಂಡಿಯಾ ಚಳವಳಿ ಶಿವಮೊಗ್ಗದಲ್ಲಿ ಭಾಗವಹಿಸಿ ಜೈಲು ಅನುಭವಿಸುತ್ತಾರೆ.
ದೇಶ ಪ್ರೇಮ, ನ್ಯಾಯದ ಪರ ಮತ್ತು ದೈವ ಭಕ್ತಿ ಅವರಲ್ಲಿ ಹುಟ್ಟಿನಿಂದ ಬಂದಿರುತ್ತದೆ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರ೦ಭಿಸಿ ಪ್ರಖ್ಯಾತರಾಗುತ್ತಾರೆ ಆ ಸಂದರ್ಭದಲ್ಲೇ ನಡೆದ ಒಂದು ಘಟನೆ ಅವರಿಗೆ ತಮ್ಮ ವೃತ್ತಿ ತೊರೆಯಲು ಕಾರಣ ಆಗುತ್ತದೆ.
ಇವರು ಒಂದು ಕೇಸಿನಲ್ಲಿ ಗೆಲ್ಲುತ್ತಾರೆ ನಿಜಕ್ಕೂ ಅಪರಾದ ಮಾಡಿದವನನ್ನ ತಮ್ಮ ವೃತ್ತಿ ಚಾತುಯ೯ದಿಂದ ಖುಲಾಸೆ ಮಾಡುತ್ತಾರೆ ಆದರೆ ನಿರಪರಾದಿ ಇದರಿಂದ ಶಿಕ್ಷೆಗೆ ಗುರಿ ಆಗಿ ಜೈಲಿಗೆ ಹೋಗುವ ಪ್ರಸಂಗ ಇದು, ನಿರಪರಾದಿ ಬದರಿನಾರಾಯಣರ ಎದುರು ಬಂದಾಗ ದುಃಖದಲ್ಲಿ "ವಕೀಲರೆ ನೀವು ನೀರಪರಾಧಿ ಆದ ನನಗೆ ಜೈಲು ಶಿಕ್ಷೆ ಕೊಡಿಸಿ ಜೈಲು ಸೇರಬೇಕಾದ ಅಪರಾದಿನ ಖುಲಾಸೆ ಮಾಡಿಸಿದ್ದು ನ್ಯಾಯನಾ? ದೇವರು ಮೆಚ್ಚುತ್ತಾನ " ಎಂಬ ಮಾತು ಬದರಿನಾರಾಯಣರ ಹೃದಯಕ್ಕೆ ಚುಚ್ಚಿ ಘಾಸಿ ಮಾಡುತ್ತದೆ ಆಕ್ಷಣದಲ್ಲೇ ನಿರ್ದರಿಸಿ ಬಿಡುತ್ತಾರೆ "ನಾಳೆಯಿಂದ ನಾನು ವಕೀಲಿ ವೃತ್ತಿ ಮಾಡುವುದಿಲ್ಲ" ಅಂತ ಅನೇಕ ಸಹದ್ಯೋಗಿಗಳು ಸಮಾದಾನ ಮಾಡಿದರೂ ಅವರ ತೀಮಾ೯ನ ಅಚಲವಾಗುತ್ತದೆ ಮಗನ ಈ ನಿರ್ದಾರ ತಂದೆ ರಾಮಕೃಷ್ಣ ಅಯ್ಯಂಗಾರರು ವಿರೋದಿಸುವುದಿಲ್ಲ.
Comments
Post a Comment