#ಭಾಗ_26.
#ವೆ೦ಕಟಾಚಲ_ಅಯ್ಯಂಗಾರರನ್ನು_ಆನಂದಪುರಂ_ವಿಲೇಜ್_ಪಂಚಾಯತ್_ಅಧ್ಯಕ್ಷ_ಗಾದಿ_ತಪ್ಪಿಸಿದ_ಘಟನೆ.
#ಸಹೋದರ_ಬದರಿನಾರಾಯಣ_ಅಯ್ಯಂಗಾರನ್ನು_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ತಲುಪಿಸಿದಾಗಲೇ_ನಡೆದ_ಘಟನೆ.
#ಬಂಡಾಯದ_ಗುಂಪಿನ_ಬೆಂಬಲ_ಪಡೆದ_ಆ_ಕಾಲದ_ಚಾಣಕ್ಷ_ರಾಜಕಾರಣಿ_ಭಾಲಗಂಗಾದರಪ್ಪಗೌಡರು .
#ವೆಂಕಟಾಚಲ_ಅಯ್ಯಂಗಾರ_ಅಧಿಕಾರದಿಂದ_ಬದಿಗೆ_ಸರಿಸಿದ_ಯಡೇಹಳ್ಳಿಜಲೀಲ್_ಸಾಬ್_ಮತ್ತು_ಮಲಂದೂರಿನ_ವಸಂತಪ್ಪ_ಜೋಡಿ
1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಇವರ ತಮ್ಮ ಬದರಿನಾರಾಯಣ ಆಯ್ಯಂಗಾರರು ಕಾಗೋಡು ಭೂಹೋರಾಟದ ಪ್ರಭಾವದಿಂದ ಸಾಗರ - ಹೊಸನಗರ- ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರ ಎದುರು ಪರಾಜಿತರಾದದ್ದು ಅವರ ತಂದೆ ಜಮೀನ್ದಾರ್ ಕೊಡುಗೈ ದಾನಿ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಈ ಪಲಿತಾಂಶದಿಂದ ಹೃದಯಾಘಾತದಿಂದ ಮೃತರಾದ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮನನ್ನು ವಿಧಾನಸಭೆಗೆ ಕಳಿಸಲೇ ಬೇಕೆಂದು ಎಲ್ಲಾ ರೀತಿಯ ಸಂಘಟನೆ ಮಾಡಿ 1957 ರ ಚುನಾವಣೆಯಲ್ಲಿ ತಮ್ಮ ಗುರಿ ಸಾದಿಸುವ ವೆಂಕಟಾಚಲ ಅಯ್ಯಂಗಾರ್ ಕೂಡ ಸತತವಾಗಿ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆರಿಸಿ ಬರುತ್ತಾರೆ ಮತ್ತು ನಿರಂತರವಾಗಿ ಚೇಮ೯ನ್ ಆಗಿ ಅವಿರೋದವಾಗಿ ಆಯ್ಕೆ ಆಗಿ ಆಡಳಿತ ನಡೆಸುತ್ತಾ ಬರುತ್ತಾರೆ.
ವೆಂಕಟಾಚಲ ಆಯ್ಯಂಗಾರರ ಮಾತಿಗೆ ಜಿಲ್ಲಾ ಆಡಳಿತ ಬೆಲೆ ನೀಡುವಂತೆ ಸಹೋದರ ಬದರಿನಾರಾಯಣ ಅಯ್ಯಂಗಾರರ ಅಧಿಕಾರ, ತಂದೆ ರಾಮಕೃಷ್ಣ ಅಯ್ಯಂಗಾರರ ಪ್ರಭಾವಳಿ ಕಾರಣ ಆಗಿರುತ್ತದೆ.
ವೆಂಕಟಾಚಲಯ್ಯ೦ಗಾರರಿಗೆ ವಿಲೇಜ್ ಪಂಚಾಯತ್ ಪ್ರಾತಿನಿಧ್ಯ ಬೇಡವಾಗಿದ್ದರೂ ಊರಿನ ಅಭಿವೃದ್ಧಿಗೆ ವೆಂಕಟಚಲಾಯ್ಯಂಗಾರ್ ಅನಿವಾಯ೯ ಎಂದು ಊರಿನ ಎಲ್ಲರೂ ಅವರನ್ನು ಪುರಸ್ಕರಿಸುತ್ತಿರುತ್ತಾರೆ.
1972 ರ ವಿಲೇಜ್ ಪಂಚಾಯತ್ ಚುನಾವಣೆಯಲ್ಲಿಯೂ ವೆಂಕಟಾಚಲಯ್ಯಂಗಾರ್ ಗುಂಪಿನವರೇ ಆದ ಯಡೇಹಳ್ಳಿ ಭಾಲಗಂಗಾದರ ಗೌಡರು, ಯಡೇಹಳ್ಳಿ ಜಲೀಲ್ ಸಾಹೇಬರು, ಮಲ್ಲಂದೂರಿನಿಂದ ಗೊಲ್ಲರ ವಸಂತಪ್ಪನವರು, ಪಟೇಲ್ ಚೆನ್ನಪ್ಪ ಗೌಡರು, ಆನಂದಪುರದಿಂದ ತಮ್ಮಣ್ಣೇ ಗೌಡರು, ಕೆ.ಎಂ.ಎಸ್. ಯೂಸೂಫ್ ಸಾಹೇಬರು, ಯಹ್ಯಾಸಾಹೇಬರು, ಜೋಗಿ ಹನುಮಂತಣ್ಣ, ಮಸಾಲ್ತಿ ರಾಮಣ್ಣ, ಗಂಗಪ್ಪ, ಶ್ರೀಮತಿ ಸೀತಮ್ಮ, ಶ್ರೀಮತಿ ಮುರಿಗೆಮ್ಮ ಗೆದ್ದು ಬಂದಿರುತ್ತಾರೆ.
ಗೆದ್ದವರೆಲ್ಲ ಸ್ವಯಂ ಪ್ರೇರಿತರಾಗಿ ವೆಂಕಟಾಚಲಯ್ಯಂಗಾರರೆ ಚೇರ್ಮನ್ ಆಗಬೇಕೆಂದು ಒತ್ತಾಯಿಸುತ್ತಾರೆ, ವೆಂಕಟಾಚಲ ಅಯ್ಯಂಗಾರರು ಒಪ್ಪುತ್ತಾರೆ.
ಆದರೆ ಹಿಂದಿನ ರಾತ್ರಿಯೇ ಕೆಲ ಸದಸ್ಯರು ಸೇರಿ ವೆಂಕಟಾಚಲಯ್ಯಂಗಾರರನ್ನು ಅಧ್ಯಕ್ಷರನ್ನಾಗಿ ಮಾಡದಂತೆ ಪ್ರಯತ್ನ ನಡೆಸಿದ್ದು ವೆಂಕಟಾಚಲ ಅಯ್ಯಂಗಾರರ ಗಮನಕ್ಕೆ ಬರುತ್ತದೆ ಆದರೆ ಹೆಚ್ಚಿನ ಸದಸ್ಯರು ವೆಂಕಟಾಚಲಯ್ಯಂಗಾರರೇ ಅಧ್ಯಕ್ಷರಾಗಬೇಕೆಂದು ಹೇಳುತ್ತಾರೆ ಆದರೆ ಸ್ಪರ್ದಿಸಿ ಸೋತರೆ ಎಂಬ ಸಣ್ಣ ಶಂಕೆಯಿಂದ ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ವೆಂಕಟಾಚಲ ಅಯ್ಯಂಗಾರರು ಸ್ಪರ್ದಿಸುವುದಿಲ್ಲ ಈ ಸಂದರ್ಭದಲ್ಲಿ ಯಡೇಹಳ್ಳಿಯ ಪಟೇಲ್ ಸೋಮಶೇಖರಪ್ಪರ ಹಿರಿಯ ಪುತ್ರ ಸಜ್ಜನ ಸ್ಪುರದ್ರೂಪಿ ಭಾಲ ಗಂಗಾದರಪ್ಪಗೌಡರು ಅಧ್ಯಕ್ಷರಾಗುತ್ತಾರೆ ಇವರನ್ನು ಅಧ್ಯಕ್ಷರನ್ನಾಗಿಸಲು ವಿಶೇಷವಾಗಿ ಶಿವಗಂಗೆ ಶಾಂತಪ್ಪ ಗೌಡರು ( ಆಗ ತಾಲ್ಲೂಕ್ ಬೋರ್ಡ್ ಪ್ರತಿನಿದಿ ) ಪ್ರಯತ್ನಿಸುತ್ತಾರೆ, ವಸಂತಪ್ಪ ಮತ್ತು ಜಲೀಲ್ ಸಾಹೇಬರು ಈ ರಾಜಕೀಯ ಸ್ಥಿತ್ಯಂತರಕ್ಕೆ ಪ್ರಭಲವಾಗಿ ಕಾರಣ ಆಗುತ್ತಾರೆ.
ನಂತರ ಒಂದು ವಷ೯ ರಾಜಕಾರಣದಿಂದ ದೂರವೇ ಉಳಿಯುವ ವೆಂಕಟಾಚಲ ಆಯ್ಯಂಗಾರರನ್ನು ಆನಂದಪುರಂ ವಿಲೇಜ್ ಪಂಚಾಯಿತಿಯ ಅಧ್ಯಕ್ಷರು ಸದಸ್ಯರೆಲ್ಲ ಸೇರಿ ಮನ ಒಲಿಸಿ ಸಕ್ರೀಯ ರಾಜಕಾರಣಕ್ಕೆ ಪುನಃ ಬರುವಂತೆ ಮಾಡುತ್ತಾರೆ ಮತ್ತು ಆನಂದಪುರಂ ಅಭಿವೃದ್ಧಿಗಾಗಿ ರಾಯರ ( ವೆಂಕಟಾಚಲಯ್ಯ0ಗಾರವನ್ನು ಊರವರು ಗೌರವದಿಂದ ಕರೆಯುವುದು) ಮುಂದಿಟ್ಟುಕೊಂಡೆ ಮುಂದುವರಿಯುತ್ತಾರೆ ಇಲ್ಲದಿದ್ದರೆ ಯಾವಾಗಲೂ ಶಾಸಕರೂ ಸಂಸದರೂ ಮಂತ್ರಿಗಳಾಗುವ ಬದರಿನಾರಾಯಣರಿಂದ ಸಹಕರ ಪಡೆಯಲು ಕಷ್ಟಸಾಧ್ಯ ಎಂಬ ದೂರ ದೃಷ್ಠಿ ಚೇರ್ಮನ್ ಆಗಿದ್ದ ಭಾಲಗಂಗಾದರಪ್ಪ ಗೌಡರಿಗೆ ಇರುತ್ತದೆ.
ಈ ಘಟನೆ ವೆಂಕಟಾಚಲ ಆಯ್ಯಂಗಾರರಿಗೆ ರಾಜಕಾರಣದ ಬಗ್ಗೆ ನಿರಾಸಕ್ತಿಗೂ ಕಾರಣ ಆಗುತ್ತದೆ.
(ನಾಳೆ ಭಾಗ- 27).
Comments
Post a Comment