ಭಾಗ - 23, ಆನಂದಪುರಂ ಅಂತ ನಮ್ಮ ಊರಿಗೆ ನಾಮಕರಣ ಮಾಡಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು,ಅವರ ದುರಂತ ಪ್ರೇಮ ಕಥೆಯ ನಾಯಕಿ ಚಂಪಕಾಳ ಸ್ಮರಣಾಥ೯ ಈ ಹೆಸರು ಬಂತು.
#ಭಾಗ_23.
#ಆನಂದಪುರಂ_ಎಂದು_ನಾಮಕರಣ_ಮಾಡಿದ್ದು_ಕೆಳದಿ_ರಾಜ_ವೆಂಕಟಪ್ಪನಾಯಕ.
#ನಿತ್ಯ_ರಾಜರು_ಸಾಗುವ_ಬೀದಿಯಲ್ಲಿ_ರಂಗೋಲಿ_ಬಿಡಿಸುತ್ತಿದ್ದ_ಸುಂದರಿ_ಚಂಪಕಳಿಗಾಗಿ_ಈ_ಹೆಸರು
#ಮೊದಲು_ಈ_ಊರಿನ_ಮೂಲ_ಹೆಸರು_ಯಡೇಹಳ್ಳಿಕೋಟೆ
#ಬದರಿನಾರಾಯಣ್_ಅಯ್ಯ೦ಗಾರರ_ಕುಟುಂಬದಲ್ಲಿ_ಎಲ್ಲರ_ಹೆಸರಿನ_ಮೊದಲು_ಆನಂದಪುರಂ_ಎಂದೇ_ಇದೆ.
ಎ.ಆರ್. ಬದರಿನಾರಾಯಣ್ ಅಯ್ಯಂಗಾರರು ಅಂದರೆ ಪೂರ್ಣವಾದ ಹೆಸರು ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಬದರಿನಾರಾಯಣ ಅಯ್ಯಂಗಾರ್ ಅಂತ.
ಇವರ ಅಣ್ಣ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ವೆಂಕಟಾಚಲ ಅಯ್ಯಂಗಾರ್ ಅಂತ ಸಂಕ್ಷಿಪ್ತವಾಗಿ ಎ.ಆರ್.ವೆಂಕಟಚಲ ಆಯ್ಯಂಗಾರ್ ಅಂತ.
ಈ ಕುಟುಂಬದ ಅನೇಕ ನ್ಯಾಯಾಲಯಗಳ (ಇನಾಂ ಅದೇ ಶ ರದ್ದು ಇತ್ಯಾದಿ) ಆದೇಶಗಳಲ್ಲೂ ಈ ಕುಟುಂಬದವರ ಹೆಸರುಗಳೆಲ್ಲ ಪ್ರಾರ೦ಭದಲ್ಲಿ ಆನಂದಪುರಂ ಎಂದೇ ಇದೆ ಇದು ಈ ಕುಟುಂಬಕ್ಕೆ ತಮ್ಮ ಊರಾದ ಆನಂದ ಪುರ೦ ಮೇಲಿನ ಅಭಿಮಾನ ತೋರಿಸುತ್ತದೆ.
ಎ.ಎಸ್. ಬೋಜರಾಜ ಆಯ್ಯಂಗಾರ್ ಅಂದರೆ ಆನಂದಪುರಂ ಸುಂದರ್ ರಾಜ್ ಬೋಜರಾಜ್ ಅಂತ.
ಎ.ಎಸ್. ಪ್ರಾಣೇಶ್ ಆಚಾರ್ ಅಂದರೆ ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ ಅಂತ.
ಬಹುಶಃ ಈ ಮೂರು ಕುಟುಂಬ ಹೊರತು ಪಡಿಸಿ ಆನಂದಪುರಂನ ನಿವಾಸಿಗಳಾರು ತಮ್ಮ ಹೆಸರಿನ ಮುಂದೆ ಆನಂದಪುರಂ ಎಂಬ ಇನಿಷಿಯಲ್ ನಮೂದಿಸಿದ್ದು ನಾನು ನೋಡಲಿಲ್ಲ.
ಇವತ್ತು ಆನಂದಪುರದ ಬಗ್ಗೆಯೋ ಭಾಗ 23 ಪೋಸ್ಟ್ ಮಾಡುವುದಿತ್ತು ಈ ಸಮಯದಲ್ಲೇ ದೂರದ ಕಾಶ್ಮೀರದಲ್ಲಿ ಸೇನೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ #ನಾಗರಾಜ_ನಾಯಕ್ ಆನಂದಪುರಂ ಅಂತ ಹೆಸರು ಬರಲು ಕಾರಣ ಏನಂತ ಬರೆಯಿರಿ ಅಂತ ಸಾವಿರಾರು ಕಿ.ಮೀ.ದೂರದಿಂದ ತಮ್ಮ ಹುಟ್ಟಿದ ಊರಿನ ಅಭಿಮಾನಕ್ಕಾಗಿ ವಿನ೦ತಿಸಿದ್ದಾರೆ ಇದೊಂದು ತರ ಕಾಕತಾಳೀಯ ಘಟನೆ ಎನ್ನಬಹುದು.
ಇವರು ಆನಂದಪುರದ ರಂಗನಾಥ ಬೀದಿಯ ಚಿರಪರಿಚಿತರಾದ ಬುದ್ದಿವಂತಣ್ಣ ಮತ್ತು ಗೌರಮ್ಮ ದಂಪತಿ ಪುತ್ರ (1989 ರಲ್ಲಿ PWD ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬುದ್ಧಿವಂತಣ್ಣ ಅಪಘಾತದಲ್ಲಿ ಮೃತರಾದರು)
ಬಹುಶಃ 400 ವರ್ಷದ ಹಿಂದೆ ಈ ಪ್ರದೇಶದ ಹೆಸರು #ಯಡೇಹಳ್ಳಿ_ಕೋಟೆ ಎಂದೇ ಇತ್ತು, ಕೆಳದಿ ಇತಿಹಾಸದಲ್ಲಿ ಕೆಳದಿ ಅರಸರು ಯಡೇಹಳ್ಳಿ ಕೋಟೆ ಅಕ್ರಮಿಸಿದ್ದ ಹರತಾಳಿನ ಕಿರಾತಕರ ಮೇಲೆ ಯುದ್ಧ ಮಾಡಿ ಯಡೇಹಳ್ಳಿ ಕೋಟೆ ಬಿಡಿಸಿಕೊಳ್ಳುತ್ತಾರೆಂದು ಇದೆ ಮತ್ತು ಆನಂದಪುರಂನ ರಂಗನಾಥ ದೇವರನ್ನು ಯಡೇಹಳ್ಳಿ ತಿರುಮಲ ಎಂದು ಕರೆದಿರುವ ಉದಾಹರಣೆ ಇದೆ.
ಕೆಳದಿ ರಾಜ ವೆಂಕಟಪ್ಪ ನಾಯಕರು ಯಡೇಹಳ್ಳಿ ಕೋಟೆಯಿಂದ ಸೂಯೋ೯ದಯಕ್ಕೆ ಮೊದಲೆ ರಾಜ ಮಾರ್ಗದಲ್ಲಿ ಕವಲೇದುರ್ಗ ಬಿದನೂರು ಕೋಟೆಗೆ ಹೋಗುವಾಗ ಪೇಟೆಯ ಗಂಗಾ ಮಠದ ಗುತ್ಯಮ್ಮ ದೇವಸ್ಥಾನದ ಎದರು ಮನೆಯ ಅಂಗಳದಲ್ಲಿ ಪ್ರತಿನಿತ್ಯ ಆಕರ್ಷಕವಾದ ಸುಂದರವಾದ ಬೃಹತ್ ರಂಗೋಲಿಯಿಂದ ಗಮನ ಸೆಳೆಯುವ ಬೆಸ್ತರ ಕನ್ಯೆ ಚಂಪಕಳ ಮೇಲೆ ಮನಸೋತು ವಿವಾಹವಾಗಿ ಕೋಟೆ ಅರಮನೆಯಲ್ಲಿಡುತ್ತಾರೆ ಇದು ಅವರ ಕುಟುಂಬದಲ್ಲಿ ಕೋಲಾಹಲವಾಗಿ ಮಹಾರಾಣಿ ಭದ್ರಮ್ಮಾಜಿ ಊಟ ಉಪಹಾರ ತ್ಯಜಿಸಿ ಕಾಯಿಲೆಯಿಂದ ದೇಹಾಂತ್ಯವಾಗುತ್ತದೆ ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಉಂಟಾಗುತ್ತದೆ ಇದಕ್ಕೆಲ್ಲ ಅನ್ಯ ಜಾತಿಯ ಚಂಪಕಳ ಮದುವೆ ಆದದ್ದೇ ಕಾರಣ ಎಂದು ಪ್ರಜೆಗಳು ಭಾವಿಸುತ್ತಾರೆ, ಇದರಿಂದ ನೊಂದ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ರಾಜ ಚಂಪಕಳ ಸ್ಮರಣಾರ್ಥ ಸುಂದರ ಕೊಳ ಅದರ ಮಧ್ಯೆ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಅಲ್ಲಿಗೆ ಹೋಗಲು ಕಲ್ಲಿನ ಸಂಕ, ಅದರ ಎದರು ಸುಂದರ ಕಲ್ಲಿನ ಎರೆಡು ಆನೆಯ ಮಧ್ಯದ ಪಾವಟಿಗೆ ದಾಟಿದರೆ ಸುತ್ತು ಪಗಾರದ ಮಧ್ಯ ಚಂಪಕಾಳ ಸಮಾದಿ ಇದೆ.
ಇದೆಲ್ಲ ಅಂದಾಜು ಕಾಲ ಮಾನ 1624-25 ಎಂದು ಪರಿಬಾವಿಸ ಬಹುದಾಗಿದ್ದು ಅಂದರೆ 2025 ಕ್ಕೆ ಈ ಸ್ಮಾರಕಕ್ಕೆ 400 ವಷಾ೯ಚರಣೆಯ ದಿನವಾಗಲಿದೆ ಹಾಗೆಯೇ ಆನಂದಪುರಂ ಎಂದು ನಾಮಕರಣವಾಗಿ 400 ವರ್ಷ ಆಗಲಿದೆ.
ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕರಾಣಿಯ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕ ಎಂಬ ನಾನು ಬರೆದ ಕಾದಂಬರಿಯಲ್ಲಿ ಹೆಚ್ಚಿನ ವಿವರಗಳಿದೆ.
ಆನಂದಪುರಂನ ಇತಿಹಾಸ, ಇದನ್ನು ಆಳಿದ ಕೆಳದಿ ಅರಸರು, ನಂತರ ಈ ಭಾಗದ ಅಭಿವೃದ್ಧಿ ಮಾಡಿದ ಜಮೀನ್ದಾರ್ ಅಯ್ಯಂಗಾರ್ ಕುಟುಂಬಗಳು, ಇಲ್ಲಿ ಹುಟ್ಟಿ ಬೆಳೆದು ಪ್ರಖ್ಯಾತರಾದವರು, ಇಲ್ಲಿಗೆ ಬಂದು ನೆಲೆಸಿ ತೃಪ್ತರಾದವರು,ಇಲ್ಲಿನ ನರಭಕ್ಷಕ ಕೇಸರಿ ಪಟ್ಟೆ ಹುಲಿ ಶಿಕಾರಿ ಮಾಡಿದ ಪ್ರಖ್ಯಾತ ಶಿಕಾರಿಕಾರ ಕೆನೆತ್ ಅಂಡರ್ ಸನ್ ಹೀಗೆ ಇಲ್ಲಿನ ಪ್ರತಿ ಘಟನೆಗೂ ಒಂದೊಂದು ಕಥೆ ಇದೆ.
ಸಾಧ್ಯವಾದಷ್ಟು ಸಂಗ್ರಹಿಸಿದ್ದು ಮುಂದಿನ ಭಾಗದಲ್ಲಿ ಪ್ರಕಟಿಸುತ್ತೇನೆ,ಇದನ್ನು ಓದಿ ಹೆಚ್ಚು ಶೇರ್ ಮಾಡಿದರೆ ಆನಂದಪುರಂ ನ ಇತಿಹಾಸ ಈಗಿನ ತಲೆಮಾರಿಗೆ ಹೆಚ್ಚು ಪ್ರಚಲಿತ ಆಗಲಿ, ನನ್ನ ಆಸೆ ಈಡೇರಲಿ ಎಂದು ಬಯಸುತ್ತೇನೆ.
Comments
Post a Comment