ಭಾಗ - 24,ಸುಮಾರು 400 ವರ್ಷದ ಹಿಂದೆ ದೂರದ ಗುಲ್ಬರ್ಗಾ ಜಿಲ್ಲೆಯ ಬ್ರಹ್ಮಪುರಿಯಿಂದ ಬಹುಮನಿ ಸುಲ್ತಾನರ ಅಕ್ರಮಣದಿಂದ ಕೆಳದಿ ರಾಜಾಶ್ರಯ ಬಯಸಿ ಆನಂದಪುರಕ್ಕೆ ಬ್ರಹ್ಮಪುರಿ ಆಂಜನೇಯನೊಂದಿಗೆ ಬಂದು ನೆಲೆಸಿದ ಮಾದ್ವ ಕುಟುಂಬದ ಇತಿಹಾಸದ ನಿಜ ಕಥೆ. (ರಂಗನಾಥ ಸ್ವಾಮಿ ದೇವಾಲಯದ ಸಮೀಪದ ಬ್ರಹ್ಮಪುರಿ ಆಂಜನೇಯ ಮೂಲ ವಿಗ್ರಹ ಈಗ ಪುನರ್ ಪ್ರತಿಷ್ಟಾಪನೆ ಆಗಿದೆ)
#ಭಾಗ_24.
#ಆನಂದಪುರಂ_ಶೇಷಾಚಾರ್_ಪ್ರಾಣೇಶಾಚಾರ್_ಕುಟುಂಬ
#ದೂರದ_ಗುಲ್ಬರ್ಗದ_ಬ್ರಹ್ಮಪುರಿಯಿಂದ_ಆನಂದಪುರಕ್ಕೆ_ಬಂದ_ಆಂಜನೇಯ_ಆರಾದಕರು
#ಬಹುಮನಿಸುಲ್ತಾನರ_ಕಿರುಕುಳದಿಂದ_ಕೆಳದಿ_ಅರಸರ_ಆಶ್ರಯ_ಕೇಳಿ_ಬಂದ_ಮಾಧ್ವ_ಬ್ರಾಹ್ಮಣ_ಕುಟುಂಬ
#ಕೆಳದಿ_ರಾಜಾಶ್ರಯ_ಪಡೆದಿದ್ದ_ಆನಂದಪುರ೦ನ_ರಂಗನಾಥ_ದೇವಸ್ಥಾನದ_ಎದುರಲ್ಲಿರುವ_ಬ್ರಹ್ಮಪುರಿ_ಆಂಜನೇಯ
#ಆನಂದಪುರಂನ_ಅಗ್ರಹಾರದಿಂದ_ಚಂಪಕಸರಸ್ಸು_ತನಕ_ಕೆಳದಿ_ಅರಸರು_ಜಾಗೀರು_ನೀಡಿದ್ದರು
#ಈ_ವಂಶದ_ಭಾಗೀರಥಿಬಾಯಿಯವರ_ಬಾಣಂತನದಲ್ಲಿ_ಶ್ರೀಕೃಷ್ಣನ_ದ್ವಾರಕೆ_ಸಂಶೋಧನೆ_ಮಾಡಿದ_ಎಸ್_ಆರ್_ರಾವ್
#ಆನಂದಪುರಂ_ಶೇಷಾಚಾರ್_ವಿದ್ಯಾಮಂತ್ರಿಗಳಾಗಿದ್ದ_ಬದರಿನಾರಾಯಣರು_ವ್ಯಾಸಂಗ_ಮಾಡಿದ_ಶಾಲೆಯಲ್ಲಿ_ಶಿಕ್ಷಕ_ವೃತ್ತಿ_ಮಾಡಿದವರು
ಈ ಕುಟುಂಬದಲ್ಲಿ ಆನಂದಪುರಂನ ಅಗ್ರಹಾರದ ತಮ್ಮ ಮೂಲ ಮನೆಯಲ್ಲಿ ವಾಸ ಇರುವವರು ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ (A.S.ಪ್ರಾಣೇಶ್ ಆಚಾರ್ ) ಇವರ ಕುಟುಂಬ ಮಾತ್ರ, ಹಾಲಿ ಸಂತೋಷ್ ರೈಸ್ ಮಿಲ್ ನ ವ್ಯವಸ್ಥಾಪಕರಾಗಿದ್ದಾರೆ ಪತ್ನಿ ಗಾಯಿತ್ರಿ ಶಿಕ್ಷಕಿ ಪುತ್ರ ಶ್ರೀನಿಧಿ ಆಚಾರ್ ಸಿಂಗಾಪುರದಲ್ಲಿ ಮರ್ಚೆಂಟ್ ನೇವಿ ಇಂಜಿನಿಯರ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾಣೇಶ್ ಆಚಾರ್ ಇತ್ತೀಚೆಗೆ ನಾಲ್ಕು ವರ್ಷದ ಹಿಂದೆ ಈ ಕುಟುಂಬದ ಎಲ್ಲರನ್ನು ಸೇರಿಸಿ ತಮ್ಮ ಕುಟುಂಬದ ಮೂಲದ ಇತಿಹಾಸದಲ್ಲಿ ದಾಖಲಾಗಿರುವ ಕೆಳದಿ ಅರಸರ ರಾಜಾಶ್ರಯದ ಬ್ರಹ್ಮಪುರಿ ಆಂಜನೇಯನ ದೇವಾಲಯ ಪುನರ್ ನಿರ್ಮಿಸಿ, ಪುನರ್ ಪ್ರತಿಷ್ಟಾಪನೆ ಮಾಡಿಸಿದ್ದಾರೆ, ಪ್ರತಿಷ್ಟಾಪನಾ ಕಾಯ೯ಕ್ರಮದಲ್ಲಿ ಇವರ ಸಮಾಜದ ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀಥ೯ರು ಆಗಮಿಸಿದ್ದು ಕೂಡ ವಿಶೇಷವೆ.
ಈ ಆಂಜನೇಯನಿಗೆ ಬ್ರಹ್ಮಪುರಿ ಆಂಜನೇಯನೆಂದು ಹೆಸರು ಇದಕ್ಕೆ ಕಾರಣ ಈ ಆಂಜನೇಯ ವಿಗ್ರಹ ದೂರದ ಗುಲ್ಪರ್ಗ ಜಿಲ್ಲೆಯ ಬ್ರಹ್ಮಪುರಿಯಿಂದ ಇಲ್ಲಿಗೆ ಬಂದ ಒಂದು ವಿಶೇಷ ವೃತ್ತಾಂತ ಇದೆ.
ಬಹುಮನಿ ಸುಲ್ತಾನರು ಆ ಭಾಗದಲ್ಲಿ ಯುದ್ದದಲ್ಲಿ ಅಕ್ರಮಿಸುತ್ತಾರೆ ಆಗ ಅಲ್ಲಿನ ಈ ಆಂಜನೇಯ ದೇವರ ಆರಾದಕ ಕುಟುಂಬ ಆಂಜನೇಯ ವಿಗ್ರಹ ಸಮೇತ ಅಲ್ಲಿಂದ ವಲಸೆ ಪ್ರಾರಂಬಿಸಿ ಅಂತಿಮವಾಗಿ ಆನಂದಪುರಂ ನ ಕೆಳದಿ ಅರಸರಲ್ಲಿ ಆಶ್ರಯ ಕೋರುತ್ತಾರೆ, ದ್ಯೆವ ಭಕ್ತರಾದ ಕೆಳದಿ ಅರಸರು ದೂರದ ಬ್ರಹ್ಮಪುರಿಯಿಂದ ಬಂದ ಆಂಜನೇಯನಿಗೆ ಆನಂದಪುರಂನ ಈಗಿನ ರಂಗನಾಥ (ಆಗ ಶ್ರೀರಾಮ) ದೇವಾಲಯದ ಅವರಣದಲ್ಲಿ ಬ್ರಹ್ಮಪುರಿ ಆಂಜನೇಯ ದೇವಾಲಯ ನಿರ್ಮಿಸಿ,ಆಂಜನೇಯ ಪ್ರತಿಷ್ಠಾಪನೆ ಮಾಡಿಸಿ ಈ ದೇವಾಲಯದಿಂದ ಚಂಪಕ ಸರಸ್ಸುವರೆಗೆ ಭೂಮಿ ಜಾಗೀರು ನೀಡುತ್ತಾರೆ ಅಲ್ಲದೆ ಅರ್ಚಕರಿಗೆ ಸುಮಾರು 15 ಎಕರೆ ನೀರಾವರಿ ಜಮೀನು ನೀಡುತ್ತಾರೆ (ಈಗ ದಾಸಕೊಪ್ಪದ ಸರ್ವೆ ನಂಬರ್ 181 ಮತ್ತು 182 ರ ಮೂಲ ಖಾತೆದಾರರು ಇವರ ಕುಟುಂಬದವರದ್ದೆ )
ಇವರ ಖಾತೆಯಲ್ಲಿರುವ ಜಾಗದಲ್ಲೇ ಈಗಿನ ದಾಸಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಿದ್ದಾರೆ, ಅನೇಕರು ಇವರ ಜಾಗದಲ್ಲೇ ಮನೆ ಕಟ್ಟಿ ವಾಸವಾಗಿದ್ದಾರೆ, ಭೂಸುದಾರಣೆ ಕಾನೂನಿನಲ್ಲಿ ಜಮೀನುಗಳೆಲ್ಲ ಹೋಗಿ ಈಗ ಸುಮಾರು 3 ಎಕರೆ ಪ್ರಾಣೇಶ್ ಆಚಾರ್ ಅನುಭವದಲ್ಲಿದೆ.
ಇವರ ವಂಶದ ಹಿರಿಯರು ಆನಂದಪುರಂ ಸ್ವಾಮಿರಾಯಾಚಾರ್, ನಂತರದ ಮುತ್ತಜ್ಜ ಆನಂದಪುರಂ ಗುರುರಾಜ ಆಚಾರ್, ಅಜ್ಜ ಕೃಷ್ಣಾಚಾರ್, ಇವರ ತಂದೆ ಆನಂದಪುರಂ ಶೇಷಾಚಾರ್ ಹೀಗೆ ಇವರ ವಂಶದವರ ಹೆಸರಿನ ಮುಂದೆ ಆನಂದಪುರ೦ ಅಂತ ಇರುವುದರಿಂದ ಇವರು ಕೆಳದಿ ಅರಸ ವೆಂಕಟಪ್ಪ ನಾಯಕರ ಆಡಳಿತದ ಅಂತಿಮ ಕಾಲಾವದಿ ಅಥವ ವೆಂಕಟಪ್ಪ ನಾಯಕರ ನಂತರ ಇಲ್ಲಿ ಆಶ್ರಯ ಪಡೆದಿರಬೇಕು.
ಆನಂದಪುರಂ ಕೃಷ್ಣಾ ಆಚಾರ್ ಮತ್ತು ರುಕ್ಮಿಣಿ ಬಾಯಿ ದಂಪತಿಗಳಿಗೆ ಶೇಷಾಚಾರ್, ಶಾರದಾ, ಯ೦ಕೂ ಬಾಯಿ ಮತ್ತು ತಂಗವ್ವ ಎಂಬ ಸಹೋದರಿಯರು.
ಶೇಷಾಚಾರ್ ಶಿಕ್ಷಕ ವೃತ್ತಿಯಿಂದ ಮತ್ತು ತಮ್ಮ ಕುಟುಂಬದ ಬ್ರಹ್ಮಪುರಿ ಆಂಜನೇಯನ ನಿತ್ಯ ಪೂಜೆ ಪುರಸ್ಕಾರಕ್ಕಾಗಿ ಆನಂದಪುರಂನಲ್ಲೇ ನೆಲೆಸುತ್ತಾರೆ.
ಶೇಷಾಚಾರ್ ಮೊದಲ ಪತ್ನಿ ಲಕ್ಷ್ಮೀ ಬಾಯಿಗೆ ಕೃಷ್ಣಾಚಾರ್, ರುಕ್ಮಿಣಿ, ಅಮೃತ ಮತ್ತು ಗುರುರಾಜ ಆಚಾರ್ ಎಂಬ ಎರೆಡು ಗಂಡು ಮತ್ತು ಎರೆಡು ಹೆಣ್ಣು ಮಕ್ಕಳು .
ಮೊದಲ ಪತ್ನಿ ಅಕಾಲಿಕ ವಿದಿವಶರಾದ್ದರಿಂದ ಎರಡನೆ ವಿವಾಹ ಸರೋಜ ಬಾಯಿ ಅವರೊಂದಿಗೆ ಆಗುತ್ತಾರೆ ಎರಡನೆ ಪತ್ನಿಯಿಂದ ಎರೆಡು ಗಂಡು ಮತ್ತು ಒಬ್ಬ ಹೆಣ್ಣು ಮಗು ಆಗುತ್ತದೆ ರಾಘವೇಂದ್ರ ಆಚಾರ್, ಸುದರ್ಶನ ಆಚಾರ್ ಮತ್ತು ಪದ್ಮಾವತಿ.
ಎರಡನೆ ಪತ್ನಿ ಕೂಡ ಮೃತರಾದ್ಧರಿಂದ ದೊಡ್ಡ ಕುಟುಂಬ ಸಾಕಿ ಸಲುಹಲು ಮೂರನೆ ವಿವಾಹ ರಾಧಾ ಬಾಯಿಯೊ೦ದಿಗೆ ಆಗುತ್ತಾರೆ ಇವರಿಂದ ರಾಜ ಮಣಿ, ಪರಿಮಳ, ನಾಗರತ್ನ, ಪ್ರಾಣೇಶ್ ಆಚಾರ್, ಪುಷ್ಪಾವತಿ, ಮದ್ವೇಶ್ ಆಚಾರ್ ಎಂಬ ಎರೆಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಾಗುತ್ತಾರೆ.
ಶೇಷಾಚಾರ್ ತಂದೆ ಕೃಷ್ಣಾಚಾರ್ ಎರಡನೆ ಪತ್ನಿ (ಮಲ ತಾಯಿ) ಭಾಗಿರಥಿ ಬಾಯಿ ಆ ಕಾಲದಲ್ಲಿ ಆನಂದಪುರಂನ ಅಗ್ರಹಾರದಲ್ಲಿ ಪ್ರಸಿದ್ದ ಸೂಲಗಿತ್ತಿ ಆಗಿದ್ದರು ಅಯ್ಯಂಗಾರ್ ಕುಟುಂಬದ ಅನೇಕರ ಹೆರಿಗೆ ಮಾಡಿಸಿದವರು (ಬದರಿನಾರಾಯಣ ಅಯ್ಯಂಗಾರರು ಸೇರಿಸಿ) ಇವರು ಹೆರಿಗೆ ಮಾಡಿಸಿದ ಮಗು S.R. ರಾವ್, ಸಮುದ್ರದಲ್ಲಿ ಮುಳುಗಿದ್ದ ಶ್ರೀ ಕೃಷ್ಣನ ದ್ವಾರಕಾ ನಗರ ಉತ್ಕನನ ಮಾಡಿ ಕಂಡು ಹಿಡಿದ ನಮ್ಮ ದೇಶದ ಪ್ರಖ್ಯಾತ ಆರ್ಕಿಯಾಲಾಜಿಸ್ಟ್ ಎಂಬುದು ಹೆಮ್ಮೆಯ ಸಂಗತಿ.
ಶೇಷಾಚಾರ್ ಕೆಲಕಾಲ ದಾಸಕೊಪ್ಪದ ಶಾಲೆಯಲ್ಲಿ ನಂತರ ಆನಂದಪುರಂನ ಮಸೀದಿ ಎದುರಿನ ಶಾಲೆ ( ವಿದ್ಯಾ ಮಂತ್ರಿ ಬದರಿನಾರಾಯಣ್ ಆಯ್ಯಂಗಾರ್ ಓದಿದ್ದ) ಪ್ರಾಥಮಿಕ ಶಾಲೆ ಶಿಕ್ಷಕರಾಗಿ 1968 ರವರೆಗೆ ಕಾರ್ಯನಿರ್ವಹಿಸಿ ಪ್ರಖ್ಯಾತರಾಗಿದ್ದು ಇತಿಹಾಸ.
(ನಾಳೆ ಭಾಗ - 25)
Comments
Post a Comment