ಆನಂದಪುರಂ ಸಾಗರ ತಾಲ್ಲೂಕಿನ ದೊಡ್ಡ ಹೋಬಳಿ, ಇಲ್ಲಿ ನಿಯಂತ್ರಣಕ್ಕೆ ಬಾರದ ಕೊರಾನಾದಿ೦ದ ಇವತ್ತಿನಿ೦ದ ಒ೦ದು ವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
#ನಮಗಾಗಿ_ನಮ್ಮ_ನಮ್ಮದೇ_ಆರೋಗ್ಯ_ಕವಚ_ನಿರ್ಮಿಸಿಕೊಳ್ಳೋಣ
#ಮನೆಯ_ಒಳಗೆ_ಯಾರನ್ನೂ_ಸೇರಿಸಬೇಡಿ_ನೀವೂ_ಇನ್ನೊಬ್ಬರ_ಮನೆಗೆ_ಹೋಗಬೇಡಿ
#ನಿಮ್ಮ_ಅಂದು_ಬಂದುಗಳು_ಕೊರಾನಾಕ್ಕೆ_ಹೊರತಲ್ಲ
#ನಮ್ಮ_ಆನಂದಪುರಂ_ಹೋಬಳಿ_ಇವತ್ತಿಂದ_ಒಂದು_ವಾರ_ಸಂಪೂರ್ಣ_ಲಾಕ್_ಡೌನ್.
#ಎಲ್ಲಾ_ಊರು_ಕೇರಿ_ಅಷ್ಟೆ_ಅಲ್ಲ_ನಮ್ಮ_ಮನೆಯಲ್ಲೂ_ಜಾರಿ_ಆಗಲಿ
ಸಕಾ೯ರ - ಮೋದಿ - ಯಡೂರಪ್ಪ ಅಂತೆಲ್ಲ ನೆಪ ನೆವಗಳನ್ನು ಹೇಳುತ್ತಾ ತಾವೂ ರೋಗ ತಡೆಯುವ ಮುಂಜಾಗೃತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ಮತ್ತು ಪರಸ್ಪರ ಅಂತರ ಕಾಪಾಡದೆ ತಮ್ಮ ಮನೆಗಳಿಗೆ ಕೊರಾನಾ ವೈರಸ್ ಹರಡಿ ಅನಾಹುತ ಆದ ನಂತರ ಪಶ್ಚಾತ್ತಾಪ ಮತ್ತು ಪಾಪ ಪ್ರಜ್ಞೆಯಿಂದ ನರಳುತ್ತಾ ಇರುವ ನಮ್ಮ ಜನ (ಇದು ಇಡೀ ದೇಶಕ್ಕೆ ಅನ್ವಯ) ಈಗ ವಾಸ್ತವವಾದಿಗಳಾಗುತ್ತಿದ್ದಾರೆ.
ಪತ್ರಕರ್ತರು, ವೈದ್ಯರು, ಮಂತ್ರಿಗಳು ಕೂಡ ಕೊರಾನಾಕ್ಕೆ ಬಲಿ ಆಗಿದ್ದಾರೆ ಈಗ ಎರಡನೆ ಅಲೆಯಲ್ಲಿ ನಮ್ಮ ಊರು ಮನೆಯಲ್ಲಿಯೇ ಸಾವಿನ ಸುದ್ದಿ ಕೇಳುತ್ತಿದ್ದೇವೆ ಆದರೂ ಬುದ್ದಿಗೇಡಿ ಜನರು ಈ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸದೇ ದಿನೇ ದಿನೇ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ.
ಪ್ರತಿಯೊಬ್ಬನಿಂದ, ಪ್ರತಿ ಕುಟುಂಬದಿಂದ, ಪ್ರತಿಹಳ್ಳಿಯಿಂದ ದೇಶ ಎನ್ನುವುದನ್ನು ಸ್ಮರಿಸೋಣ. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬದ ಆರೋಗ್ಯ ಕವಚ ರಚಿಸಿಕೊಳ್ಳಬೇಕು, ಕಾಯಿಲೆ ಬಂದ ನಂತರದ ತಯಾರಿಗಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಕುಟುಂಬ ಸದಸ್ಯರ ಎದರು ಮಾಸ್ಕ್, ಸ್ಯಾನಿಟೈಸರ್, ಲಸಿಕೆ, ಪರಸ್ಪರ ಅಂತರ ಕಾಪಾಡುವ ಬಗ್ಗೆ ತಿಳಿ ಹೇಳಬೇಕು, ಈ ಮುನ್ನೆಚ್ಚರಿಕೆ ಬಗ್ಗೆ ಕನಿಷ್ಟ #ಸದಾಭಿಪ್ರಾಯ ಬಿಂಬಿಸಬೇಕು ಆದರೆ ವಿಷಾದನೀಯವೆಂದರೆ ನನ್ನ ಪರಿಚಿತ ಗೆಳೆಯರೆ ಲಸಿಕೆ ತೆಗೆದುಕೊಳ್ಳುವುದಿಲ್ಲ, ಮಾಸ್ಕ್ ಹಾಕುವುದಿಲ್ಲ, ಮೋದಿ ಬದಲಾಗಬೇಕು ಮುಂತಾದ ಮಾತುಗಳನ್ನು ಮಕ್ಕಳ ಎದುರೆ ಹೇಳಿ ಹೇಳಿ ಅವರೆಲ್ಲ ಮಾಸ್ಕ್ ಇಲ್ಲದೆ ಊರೆಲ್ಲ ತಿರುಗಾಡಿ ಮನೆಗೆ ಕೊರಾನಾ ತಂದು ಮನೆಯ ವಯಸ್ಸಾದವರ ಜೀವಕ್ಕೆ ಕಂಟಕ ಪ್ರಾಯರಾಗುತ್ತಿದ್ದಾರೆ.
ಸಾಗರ ತಾಲ್ಲೂಕಿನ ದೊಡ್ಡ ಹೋಬಳಿ ಆನಂದಪುರಂ, ಸರ್ಕಾರ ಈ ಭಾಗದ ಪಾಸಿಟಿವ್ ಮತ್ತು ಮರಣದ ಸಂಖ್ಯೆ ಆನಂದಪುರಂ ಎಂದು ನಮೂದಿಸದೆ ಸಮೀಪದ ಗ್ರಾಮ ಪಂಚಾಯತ್ ಗೌತಮಪುರದ PHC ಕೇಂದ್ರದ ಹೆಸರಲ್ಲಿ ಪ್ರಕಟಿಸುವ ಗೊಂದಲ ಶುರು ಮಾಡಿದೆ, ಉತ್ತಮ ಆಡಳಿತಕ್ಕಾಗಿ ಕಂದಾಯ ಇಲಾಖೆ ಹೋಬಳಿ, ತಾಲ್ಲೂಕ ಮತ್ತು ಜಿಲ್ಲೆಯಾಗಿ ವಿಂಗಡಿಸಿದೆ ಆದರೆ ಆರೋಗ್ಯ ಇಲಾಖೆ ಕಂದಾಯ ಗ್ರಾಮದ ಹೆಸರು ಬದಲಿಸುವುದರಿಂದ ಗೊಂದಲ ಹೆಚ್ಚು ಈ ಬಗ್ಗೆ ಶಾಸಕರು ಗಮನಿಸುವುದು ಒಳಿತು.
ಜಿಲ್ಲಾದಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಪ್ರದಾನ ಮಂತ್ರಿಗಳು ನೀಡಿದ ಅಧಿಕಾರದಿಂದ ಸ್ಥಳಿಯವಾಗಿ ಹೆಚ್ಚು ಸೊಂಕು, ಹೆಚ್ಚು ಸಾವುಗಳು ಉಂಟಾದ ಪ್ರದೇಶದಲ್ಲಿ ಇಂತಹ ಸಂಪೂರ್ಣ ಲಾಕ್ ಡೌನ್ ಸಾಧ್ಯ ಆಗಿದೆ.
ಇವತ್ತಿನಿಂದ ದಿನಾಂಕ 25-ಮೇ -2021 ಬುಧವಾರದಿ೦ದ ಆನಂದಪುರಂ ಹೋಬಳಿ ಸಂಪೂರ್ಣ ಲಾಕ್ ಡೌನ್ ತಾಲ್ಲೂಕ್ ಆಡಳಿತ ಸ್ಥಳಿಯ ಗ್ರಾಮ ಪಂಚಾಯಿತಗಳ ಸಹಯೋಗದಿಂದ ಘೋಷಿಸಿದೆ, ಪ್ರತಿ ದಿನ ಬೆಳಿಗ್ಗೆ 6ರಿಂದ 9 ಹಾಲು ತರಕಾರಿ ಸಿಗುತ್ತದೆ ಆದರೆ ಬ್ರಾಂಡಿ ಶಾಪ್, ದಿನಸಿ ಅಂಗಡಿ, ಮೀನು ಮಾಂಸದ ಅಂಗಡಿ ತೆರೆಯುವಂತಿಲ್ಲ, ಈ ವಾರ ಪೂರ್ಣ ಮನೆಯಿಂದ ಯಾರು ಹೊರ ಬಾರದ೦ತೆ ಧ್ವನಿವರ್ಧಕದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಇದರಿಂದ ಆದರೂ ಜನರ ಜೀವ ಉಳಿಯಲಿ, ನಮ್ಮ ಊರಲ್ಲಿ ಇಂತಹ ಮುಂಜಾಗೃತ ಕ್ರಮಕ್ಕೆ ಮುಂದಾದ ಎಲ್ಲರಿಗೂ ಅಭಿನಂದಿಸುತ್ತೇನೆ.
Comments
Post a Comment