ಭಾಗ - 27, ಮಾದರಿ ಆನಂದಪುರಂ ಕಟ್ಟುವಲ್ಲಿ ದೈಹಿಕ ಶಿಕ್ಷಕರಾದ S.R. ಕೃಷ್ಣಪ್ಪರ ಶ್ರಮವಿದೆ, ಇವರ ದೂರದೃಷ್ಟಿಯ ಯೋಜನೆಗಳನ್ನು ಅಯ್ಯಂಗಾರ್ ಕುಟುಂಬ ಬಳಸಿಕೊಂಡಿತು, ಇಡೀ ಆನಂದಪುರಂ ಇವರ ಹಿಂದೆ ಸಾಗಿದ್ದು ಒಂದು ಇತಿಹಾಸ.
#ಭಾಗ_27.
#ಆನಂದಪುರಂ_ಮಾದರಿ_ಊರಾಗಲು_ದೈಹಿಕ_ಶಿಕ್ಷಕರಾದ_ಎಸ್_ಆರ್_ಕೃಷ್ಣಪ್ಪರ_ಸೇವೆ_ಮತ್ತು_ಸಲಹೆ_ಮರೆಯಲಾಗದ್ದು,
#ಆನಂದಪುರಂಗೆ_ಬ್ಯಾಂಕ್_ಹಾಸ್ಟೆಲ್_ಅರುಣೋದಯ_ಕಲಾವೃಂದ_ರೋಟರಿಕ್ಷಬ್_ತಂದವರು
#ಶಿಸ್ತಿನ_ಸೇವಾದಳದ_ಪ್ರಮುಖರು.
#ಜಾತ್ಯಾತೀತರು_ದೈವ_ಭಕ್ತರು_ಮತ್ತು_ದೂರ_ದೃಷ್ಠಿಯವರು.
#ಬದರಿನಾರಾಯಣ_ಅಯ್ಯಂಗಾರರು_ವೆಂಕಟಾಚಲಾಯ್ಯಂಗಾರರು_ಇಡೀ_ವಿಲೇಜ್_ಪಂಚಾಯತ್_ಇವರ_ಮಾತು_ಮೀರುತ್ತಿರಲಿಲ್ಲ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರಾಮಪ್ಪರ ಪುತ್ರ S.R. ಕೃಷ್ಣಪ್ಪರವರು 1961ರಲ್ಲಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನುಗ್ಗೇಹಳ್ಳಿ ಪ್ರೌಡ ಶಾಲೆಯಿಂದ ವರ್ಗವಾಗಿ ಆನಂದಪುರಂನ ಜಿಲ್ಲಾ ಬೋರ್ಡ್ ಪ್ರೌಡ ಶಾಲೆಗೆ ದೈಹಿಕ ಶಿಕ್ಷಕರಾಗಿ ವರ್ಗವಾಗಿ ಬಂದವರು ಸುಮಾರು 15 ವರ್ಷ ಆನಂದಪುರಂನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸ್ವಂತ ಊರಾದ ಶಿಕಾರಿಪುರಕ್ಕೆ ಹೋಗಿ ನೆಲೆಸುತ್ತಾರೆ.
ಇವರನ್ನು ಆನಂದಪುರಂನಿಂದ ಕಳಿಸಲು ಇಡೀ ಊರೇ ವಿರೋದಿಸಿತ್ತು, ಹಳಿಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು ಅವರ ಪೋಷಕರು, ಸುತ್ತಮುತ್ತಲಿನ ಶಾಲಾ ಶಿಕ್ಷಕರು, ವಿಲೇಜ್ ಪಂಚಾಯತ್ ಅಧ್ಯಕ್ಷರು ಸದಸ್ಯರು, ಬದರಿನಾರಾಯಣ ಆಯ್ಯಂಗಾರರು ಅವರ ಅಣ್ಣ ವೆಂಕಟಚಲ ಆಯ್ಯಂಗಾರರು ಹೀಗೆ ಇಡೀ ಊರೇ ಇವರು ವರ್ಗಾಯಿಸಿಕೊಂಡು ಹೋಗಲು ಬಿಡಲಿಲ್ಲ.
ಒಂದು ಹಂತದಲ್ಲಿ ಅಯ್ಯಂಗಾರ್ ಕುಟುಂಬದವರು ಇವರು ಬಾಡಿಗೆಗೆ ಇದ್ದ ಮನೆ ಅಲ್ಲದೆ ಪಕ್ಕದ ಇನ್ನೊಂದು ಮನೆ ಕೂಡ ಇವರ ಹೆಸರಿಗೆ ಖರೀದಿಸಿ ಕೊಡುತ್ತೇವೆ ಆದರೆ ಆನಂದಪುರಂ ಬಿಟ್ಟು ಹೋಗಬಾರದಾಗಿ ಪರಿಪರಿಯಾಗಿ ವಿನಂತಿಸಿದ್ದರು.
ದೀಘ೯ಕಾಲದ ಆನಂದಪುರಂ ಸೇವೆಯಿಂದ ತಮ್ಮ ಸ್ವಂತ ಊರಲ್ಲಿ ನೆಲೆಸುವ ಅನಿವಾರ್ಯತೆ ವಿವರಿಸಿ ಶಿಕಾರಿಪುರದಲ್ಲಿ ತಮ್ಮ ಕುಟುಂಬದ ಸ್ವಂತ ಮನೆ ತೋಟದಲ್ಲಿ ನೆಲೆಸಿ ಶಿಕಾರಿಪುರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ರಾಜ್ಯ ಸರ್ಕಾರದ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿ ಕೂಡ ಪಡೆದರು.
2016ರಲ್ಲಿ ಇವರ ಬಗ್ಗೆ ಇವರ ಅಳಿಯ ಸಾಗರದ ಉಪನ್ಯಾಸಕರಾದ ಎಸ್.ಎಂ.ಗಣಪತಿ ಮತ್ತು ಪುತ್ರಿ ಶ್ರೀಮತಿ ವಾಣಿ #ಎಸ್ಸಾರ್ಕೆ_ಮೇಷ್ಟ್ರು ಎಂಬ ಅಭಿನಂದನಾ ಗ್ರಂಥ ಹೊರ ತಂದಿದ್ದಾರೆ ಅದರಲ್ಲಿ 5ನೇ ಲೇಖನವೇ ನನ್ನದು ಈ ಅವಕಾಶ ದೊರೆತದ್ದು ನನ್ನ ಪುಣ್ಯ ಅಂತ ಬಾವಿಸಿದ್ದೇನೆ.
ಆನಂದಪುರಂನ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್, ಬ್ಯಾಡ್ಮಿಂಟನ್,ಕೋಕೋ ಮತ್ತು ಕಬ್ಬಡಿ ಅಂಗಳಗಳು ವರ್ಷ ಪೂರ್ತಿ ತುಂಬಿರುವಂತ ಕಾಳಜಿ ಜೊತೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆ ದೊರಕಿಸಿ ಕೊಟ್ಟ ಮಹಾನ್ ವ್ಯಕ್ತಿ ಇವರು.
ಇವರು 1961ರಲ್ಲಿ ಈ ಪ್ರೌಡ ಶಾಲೆಗೆ ಬಂದಾಗ ಮುಖ್ಯ ಶಿಕ್ಷಕರಾಗಿ ಮಂಜುನಾಥರು, ಗಣಿತ ಶಿಕ್ಷಕರಾಗಿ ಸ್ಥಳಿಯರಾದ ಬೋಜರಾಜ ಅಯ್ಯಂಗಾರರು ಮತ್ತು ಕೃಷ್ಣ ರಾವ್, ವಿಜ್ಞಾನ ಶಿಕ್ಷಕರಾಗಿ ಕೃಷ್ಣಮೂರ್ತಿಯವರು, ಹಿಂದಿ ಶಿಕ್ಷಕರಾಗಿ ಜಿ.ಬಸಪ್ಪ, ಇಂಗ್ಲೀಷ್ ಶಿಕ್ಷಕರಾಗಿ ಡಿ.ಕೆ. ಬಸಪ್ಪ, ಗುಮಸ್ತರಾಗಿ ಹುಚ್ಚಾಚಾರ್, ಅಟೆಂಡರ್ ಆಗಿ ಕೃಷ್ಣೆ ಗೌಡರು, ಸಹಾಯಕರಾಗಿ ಹನುಮಂತಪ್ಪ ಮತ್ತು ಚೆನ್ನಬಸಪ್ಪನವರು ಇದ್ದರು.
ಎಸ್ಸಾಕೆ೯ಯವರ ಸಮವಸ್ತ್ರ ಧ್ವನಿ ಶಿಸ್ತು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಅವರ ಪೋಷಕರು, ಗ್ರಾಮಸ್ಥರು ಊರಿನ ವ್ಯವಹಾರಸ್ಥರು, ಬ್ಯಾಂಕ್ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿಗಳು, ವಿಲೇಜ್ ಪಂಚಾಯತ್ ಪದಾಧಿಕಾರಿಗಳ ಪ್ರಶಂಸೆಗೆ ಕಾರಣ ಆಗಿತ್ತು.
ಇವರು ಸ್ಥಾಪಿಸಿದ್ದ ಅರುಣೋದಯ ಕಲಾವೃಂದ ಹಾಡು, ಭಜನೆ ಮತ್ತು ನಾಟಕಗಳಿಂದ ಪ್ರಸಿದ್ಧವಾಗಿತ್ತು.
ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಮಂಜೂರು ಮಾಡಿಸುವಲ್ಲಿ, ಗ್ರಾಮಾಭ್ಯುದಯಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತರುವಲ್ಲಿ ಮತ್ತು ರೋಟರಿ ಕ್ಲಬ್ ಸ್ಥಾಪನೆಯಲ್ಲಿ ಇವರ ಶ್ರಮವಿದೆ.
ರಾಷ್ಟ್ರೀಯ ಹಬ್ಬಗಳಲ್ಲಿ ಇಡೀ ಆನಂದಪುರಂ ಒ0ದೆಡೆ ಸೇರಿಸಿ ಇವರು ಮಾಡಿಸುತ್ತಿದ್ದ ಪ್ರಭಾತ್ ಪೇರಿ ಇವರ ನ೦ತರ ನೋಡಲೇ ಇಲ್ಲ.
ಇವರು ಆ ಕಾಲದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಾಡಿನ ಹೆಸರಾಂತ ಸಾಹಿತಿಗಳಾದ ಸಿದ್ದವನಹಳ್ಳಿ ಕೃಷ್ಣ ಶಮಾ೯, ಆ. ನ.ಕೃಷ್ಣರಾಯರು, ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರರು, ದತ್ತಾತ್ರೆಯ ರಾಮಚಂದ್ರ ಬೇಂದ್ರೆ, ಶ್ರೀರಂಗ, ಶಿವರಾಮ ಕಾರಂತರು, ಖ್ಯಾತ ನಾಟಕ ರಚನಾಕಾರ ಬೇಲೂರು ಕೃಷ್ಣ ಮೂರ್ತಿ, ಖ್ಯಾತ ಪೋಲಿಸ್ ಅಧಿಕಾರಿ ಸಾಂಗ್ಲಿಯಾನ ಹೀಗೆ ಸಾಲು ಸಾಲು ಪ್ರಖ್ಯಾತರನ್ನ ವಿದ್ಯಾರ್ಥಿಗಳಿಗೆ ಕರೆದು ಪರಿಚಯಿಸಿ, ಉಪನ್ಯಾಸ ನೀಡುವ ಕೆಲಸ ಇವರು ದೈಹಿಕ ಶಿಕ್ಷಕರಾಗಿಯೂ ನಿರ್ವಹಿಸಿದ್ದು ಆಶ್ಚಯ೯ವೆ.
ಇವರ ಕಾಲದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆನಂದಪುರಂ ವಿದ್ಯಾರ್ಥಿಗಳ ತಂಡ ತಂಡ ಪಲಕ ಮತ್ತು ಪಾರಿತೋಷಕ ಅಸಂಖ್ಯ.
ಈಗ ಶಿಕಾರಿಪುರದಲ್ಲಿ 84 ವರ್ಷದ ವೃದ್ಧಾಪ್ಯದ ನಿವೃತ್ತ ಜೀವನದಲ್ಲಿ ಸುಖವಾಗಿದ್ದಾರೆ.
ಇವರ ಬಗ್ಗೆ ಪ್ರಕಟವಾಗಿರುವ ಅಭಿನಂದನಾ ಗ್ರಂಥ #ಎಸ್ಸಾರ್ಕೆ_ಮೇಷ್ಟ್ರು ಪುಸ್ತಕಕ್ಕೆ ಈ ಅಭಿನಂದನಾ ಗ್ರಂಥದ ಸಂಪಾದಕರಾದ ಎಸ್.ಎಂ.ಗಣಪತಿ ಅವರ ಸೆಲ್ ನ೦ಬರ್ 9972794370, 7022709266 ಸಂಪರ್ಕಿಸಬಹುದಾಗಿದೆ.
ಒಬ್ಬ ಮಾದರಿ ಶಿಕ್ಷಕ ಒಂದು ಮಾದರಿ ಊರು ಮಾತ್ರವಲ್ಲ ಒಂದು ಮಾದರಿ ನಾಗರೀಕ ಸಮೂಹವನ್ನೂ ಸೃಷ್ಠಿಸಬಹುದೆಂಬುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿ ಆಗಿದ್ದಾರೆ ಆದರೆ ಇಂತವರು ಲಕ್ಷಕ್ಕೆ ಒಬ್ಬರು ಸಿಗುವುದು ಕಷ್ಟಸಾಧ್ಯ.
(ನಾಳೆ ಭಾಗ - 28)
Comments
Post a Comment