ಆನಂದಪುರಂ ಇತಿಹಾಸ - 67, ಆನಂದಪುರಂ ಗೆ ಸ್ವತಃ ಬೇಟಿ ನೀಡಿ 36 ಶಿಲಾಶಾಸನ ಮತ್ತು 2 ತಾಮ್ರ ಶಾಸನ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಇಂಗ್ಲೀಷ್ ಗೆ ಅನುವಾದಿಸಿ ಪ್ರಕಟಿಸಿದ ಮೈಸೂರು ಆರ್ಕಾಲಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಬೆಂಜಮಿನ್ ಲೆವಿಸ್ ರೈಸ್.
#ಬೆಂಜಮಿನ್_ಲೆವಿಸ್_ರೈಸ್_ಎಪಿಗ್ರಾಫಿ_ಕನಾ೯ಟಕ_1902_ರಲ್ಲಿ_ಪ್ರಕಟ.
#ಇದರಲ್ಲಿ_ಆನಂದಪುರಂ_ಸುತ್ತಲಿನ_36_ಶಿಲಾಶಾಸನ_2_ತಾಮ್ರ_ಶಾಸನ_ದಾಖಲಾಗಿದೆ.
#ಬೆಂಜಮಿನ್_ಲೆವಿಸ್_ರೈಸ್_ಶಾಸನ_ಅಧ್ಯಯನದ_ಅಶ್ವಿನಿದೇವತೆಗಳು_ಎಂಬ_ಬಿರುದಿದೆ.
#ರೈಸ್_20_ಡಿಸೆಂಬರ್_1868ರಲ್ಲಿ_ಆನಂದಪುರಂಗೆ_ಬಂದಿದ್ದರು.
#ಆಗಿನ_ಆನಂದಪುರಂ_ರಸ್ತೆ_ಕೋಟೆಯ_ಬಗ್ಗೆ_ತಮ್ಮ_ಈಸ್ಟರ್ನ್_ಎಕ್ಸ್ಪೆರಿಯನ್ಸ್_ಪುಸ್ತಕದಲ್ಲಿ_ಬರೆದಿದ್ದಾರೆ.
12 ಸಂಪುಟಗಳ ಎಪಿಗ್ರಾಫಿ ಕರ್ನಾಟಕ (Epigraphia Carnatica) 1894-1905 ರವರೆಗೆ ಮೈಸೂರು ಅರ್ಕಾಲಾ ಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಆಗಿದ್ದ ಬೆಂಜಮಿನ್ ಲೆವಿಸ್ ರೈಸ್ ಪ್ರಕಟಿಸಿದ್ದರು, ಇದರಲ್ಲಿ 8869 ಶಾಸನಗಳನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ.
ಸುಮಾರು ಇಪ್ಪತ್ತು ಸಾವಿರ ಶಾಸನದಲ್ಲಿ ಅರ್ಧದಷ್ಟು ಪ್ರಕಟವಾಗಿದೆ.
ಬೆಂಜಮಿನ್ ಲೇವಿಸ್ ರೈಸ್ ಹುಟ್ಟಿದ್ದು ಬೆಂಗಳೂರಿನಲ್ಲಿ 17- ಜುಲೈ - 1837 ಇವರ ತಂದೆ ಚರ್ಚ್ ನ ಮುಖ್ಯಸ್ಥರಾಗಿದ್ದರು, ವಿವರ ವಿದ್ಯಾಬ್ಯಾಸ ಲಂಡನ್ ನಲ್ಲಿ ಆಯಿತು, ಸೇನೆಯ ಮೇಜರ್ ಒಬ್ಬರು ಶಿಲಾ ಶಾಸನಗಳ ಚಿತ್ರ ನೀಡಿ ವಿವರಿಸಲು ಕೋರಿದ್ದೇ ಅವರಿಗೆ ರಾಜ್ಯದಾದ್ಯಂತ 3 ನೇ ಶತಮಾನದಿಂದ 19 ನೇ ಶತಮಾನದವರೆಗಿನ ಎಲ್ಲೇಲ್ಲೋ ಅವಸಾನದ ಅಂಚಿನಲ್ಲಿದ್ದ ಶಿಲಾ ಶಾಸನ ಸಂಶೋದನೆಗೆ ಕಾರಣ ಆಯಿತು.
ಇವರ ಈ ಆಸಕ್ತಿಗೆ ಮೈಸೂರು ಅರ್ಕಾಲಾಜಿಕಲ್ ಡಿಪಾಟ್೯ ಮೆಂಟ್ ನಿರ್ದೇಶಕ ಸ್ಥಾನ ಲಭಿಸಿತು.
1894 ರಿಂದ 1905 ರ ಅವಧಿಯಲ್ಲಿ ಇಡೀ ರಾಜ್ಯ ಸುತ್ತಿ ಈ ದಾಖಲೆ ನಮೂದಿಸಿದ ಇವರ 12 ಸಂಪುಟಗಳು ಇತಿಹಾಸದ ಮಾಹಿತಿಯ ಕಣಜವಾಗಿದೆ ಇದಕ್ಕೆ ಇವರ ಶ್ರಮ ದೊಡ್ಡದು ಆದ್ದರಿಂದ ಇವರನ್ನು ಶಾಸನ ಅಧ್ಯಯನದ ಅಶ್ವಿನಿ ದೇವತೆಗಳು ಎಂಬ ಬಿರುದು ಇವರಿಗಿತ್ತು.
ಇವರು ಆನಂದಪುರಂ ಸುತ್ತಲಿನ ಶಾಸನ ಅಧ್ಯಯನಕ್ಕೆ ಸ್ವತಃ ಬಂದಿದ್ದರೆಂಬುದು ಒಂದು ದಾಖಲೆ ಆಗಿದೆ.
ಇವರು 1902 ರಲ್ಲಿ ಪ್ರಕಟಿಸಿದ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಆನಂದಪುರಂ ಸುತ್ತ ಮುತ್ತಲಿನ 36 ಶಿಲಾ ಶಾಸನ ಮತ್ತು 2 ತಾಮ್ರ ಶಾಸನದಲ್ಲಿ ಬರೆದದದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. 10 ಜುಲೈ 1927 ರಲ್ಲಿ ಮರಣಿಸಿದ ಇವರು ತಮ್ಮ ಈಸ್ಟರ್ನ್ ಎಕ್ಸ್ ಪಿರಿಯನ್ಸ್ ಪುಸ್ತಕದಲ್ಲಿ ಪತ್ರ ಮುಖೇನ ದಿನಾಂಕ 20- ಡಿಸೆಂಬರ್- 1868ರಲ್ಲಿ ಆನಂದಪುರಂ ನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಬಗ್ಗೆ ಸಂಜೆ ಹೊತ್ತಿನಲ್ಲಿ ಆನಂದಪುರಂ ಕೋಟೆಯಲ್ಲಿನ ಪಿರಂಗಿ ವೀಕ್ಷಿಸಲು ಹೋದಾಗ ಆಸ್ಪಾದಿಸಿದ ಪ್ರಕೃತಿ ಸೌಂದರ್ಯ ಮತ್ತು ಆನಂದಪುರಂಗೆ ಸಂಪರ್ಕಿಸುವ ರಸ್ತೆಯ ಇಕ್ಕೆಲದಲ್ಲಿ ದೂಪದ ಸಾಲು ಮರದ ಸುಂದರ ದೃಶ್ಯದ ಬಗ್ಗೆ ಬರೆದಿದ್ದಾರೆ.
(ಆನಂದಪುರಂ ಶಿಲಾ ಶಾಸನಗಳ ಮಾಹಿತಿ ಮುಂದಿನ ಭಾಗ 68ರಲ್ಲಿ )
Comments
Post a Comment