Skip to main content

ಭಾಗ - 58, ಆನಂದಪುರಂ ಇತಿಹಾಸ, ಸುಮಾರು ಐದು ನೂರು ವರ್ಷ ಪುರಾತನವಾದ ಆನಂದಪುರಂ ಕೋಟೆ ಆಂಜನೇಯ ಗುಡಿ, ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗಕ್ಕಾಗಿ ಐತಿಹಾಸಿಕ ಆನಂದಪುರಂ ಕೋಟೆ ಇಬ್ಬಾಗ ಮಾಡಿದ ಬ್ರಿಟೀಷ್ ಸರಕಾರ

#ಭಾಗ_58.
#ಆನ೦ದಪುರಂ_ಇತಿಹಾಸ.

#ಸುಮಾರು_500_ವರ್ಷ_ಪುರಾತನ_ಅನಂದಪುರಂ_ಕೋಟೆ_ಆಂಜನೇಯ.

#ಶಿವಮೊಗ್ಗ_ತಾಳಗುಪ್ಪ_ರೈಲು_ಮಾಗ೯_ಆನಂದಪುರಂ_ಕೋಟೆ_ಸೀಳಿ_ನಿರ್ಮಿಸಿದ_ಬ್ರಿಟಿಷರು .

#ಕೋಟೆಯಲ್ಲಿ_ನಿದಿ_ಸಿಕ್ಕಿದ_ಜನಪದ_ಕಥೆಯೂ_ಇದೆ.

#ಅಯ್ಯಂಗಾರರ_ಕುಟುಂಬ_ಪೂಜೆ_ನೈವೇದ್ಯ_ಸಾಮೂಹಿಕ_ಬೋಜನ_ಏರ್ಪಡಿಸುತ್ತಿದ್ದರು.

#ಯಡೇಹಳ್ಳಿ_ಕೋಟೆ_ಹೆಸರಿನ_ಈ_ಪ್ರದೇಶ_ಕಿರಾತಕರ_ಆಳ್ವಿಕೆಯಲ್ಲಿದ್ದದ್ದನ್ನು_ರಾಜವೆಂಕಟಪ್ಪ_ನಾಯಕ_ವಶ_ಪಡೆಯುತ್ತಾರೆ.

#ರಾಮಕ್ಷತ್ರಿಯ_ಕೋಟೆಗಾರರಿಂದ_ಪುನರ್_ನಿರ್ಮಾಣವಾದ_ಆನಂದಪುರ೦_ಕೋಟೆ.

#ಉಗಾಂಡದಲ್ಲಿ_ಸಕ್ಕರೆ_ಕಾರ್ಖಾನೆ_ಉದ್ಯೋಗಿ_1950ರ_ದಶಕದಲ್ಲಿ_ಕೋಟೆ_ಆಂಜನೇಯ_ಗುಡಿ_ಮತ್ತು_ಪಗಾರ_ನಿರ್ಮಿಸಿದ್ದರು

    ಆನಂದಪುರಂನ ಐತಿಹಾಸಿಕ ಕೆಳದಿ ಅರಸರ ಕೋಟೆಯ ಕೋಟೆ ಆಂಜನೇಯ ದೇವಸ್ಥಾನ ಸುಮಾರು 500 ವಷ೯ದಷ್ಟು ಪುರಾತನ ಇರಬಹುದು.
  1938 ರಲ್ಲಿ ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುವಾಗ ಈ ಐತಿಹಾಸಿಕ ಕೋಟೆ ಸಂರಕ್ಷಿಸದೆ ಕೋಟೆ ಮದ್ಯ ಸೀಳಿಕೊಂಡು ರೈಲು ಮಾರ್ಗ ನಿರ್ಮಿಸಿದ ಉದ್ದೇಶ ದುರಂತವೇ.
   ಕೆಳದಿ ರಾಜ ವೆಂಕಟಪ್ಪ ನಾಯಕರು ಈ ಕೋಟೆ (ಆಗ ಯಡೇಹಳ್ಳಿ ಕೋಟೆ ಅಂತ ಈ ಪ್ರದೇಶದ ಮೂಲ ಹೆಸರು) ಮತ್ತು ಹರತಾಳು ಪ್ರದೇಶ ಕಿರಾತಕರಿಂದ (ಚಿತ್ರದುರ್ಗದ ನಾಯಕರು ಇರಬಹುದು) ವಶಪಡಿಸಿಕೊಂಡು ಅಭಿವೃದ್ದಿ ಮಾಡಿದ ಇತಿಹಾಸದ ದಾಖಲೆಗಳು ಲಭ್ಯವಿದೆ.
    ಕೆಳದಿ ರಾಜ ವೆಂಕಟಪ್ಪ ನಾಯಕರಲ್ಲಿ ಮಹಾರಾಷ್ಟ್ರದ ರತ್ನಗಿರಿ ಮತ್ತು ಗೋವಾದಿಂದ ಪೋಚು೯ಗಿಸರ ಮತಾಂತರ ಪ್ರಯತ್ನಕ್ಕೆ ವಿರೋದಿಸಿ ವಿಜಯನಗರ ಸಾಮ್ರಾಜ್ಯದಲ್ಲಿ ಆಸರೆ ಕೇಳಿ ಬಂದ ಕೋಟೆಕಾರರು (ರಾಮಕ್ಷತ್ರಿಯರು) ವಿಜಯನಗರದಿಂದ ಕೆಳದಿ ಅರಸರಲ್ಲಿಗೆ ಬರುತ್ತಾರೆ.
   ಅವರ ಪ್ರಮುಖ ಕೆಲಸ ಕೋಟೆ ನಿರ್ಮಾಣ, ಟಂಕಸಾಲೆ ನಿರ್ವಹಣೆ, ದೇವಾಲಯ ನಿರ್ಮಿಸಿ ನಿರಂತರ ಪೂಜಾ ಕಾಯ೯ ವ್ಯವಸ್ಥೆ, ರಾಜರ ದರ್ಬಾರಿನ ಸುವ್ಯವಸ್ಥೆ, ಸೈನಿಕರ ತರಬೇತಿಯಲ್ಲಿ ಅವರು ಎತ್ತಿದ ಕೈ.
  ದೂರದ ಆಯೋಧ್ಯೆಯ ವಿರುದ್ದ ಮಹಾರಾಷ್ಟ್ರದ ವಿಜಯ ದುರ್ಗದ ಅರಸ ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಯುದ್ದ ಮಾಡಿ ಆಯೋಧ್ಯ ವಶಪಡಿಸಿಕೊಳ್ಳಲು ಹೋಗಿ ಭರತನಿಂದ ಸೋತಾಗ ಮಹಾರಾಷ್ಟ್ರದ ವಿಜಯ ದುಗ೯ದ ಕೋಟೆ ಆಯೋಧ್ಯ ಅರಸರ ವಶ ಆಗಿ ಅದನ್ನು ನಿರ್ವಹಿಸಲು ಆಯೋಧ್ಯದಿಂದ ಬಂದ ಸೈನ್ಯದ ತುಕಡಿಗೆ ಸ್ಥಳಿಯರು ರಾಮ ಕ್ಷತ್ರಿಯ ಎಂದು ಕರೆಯುತ್ತಾರೆ.
  ಇವರೇ ಕೆಳದಿ ಸಂಸ್ಥಾನದ ಎಲ್ಲಾ ಕೋಟೆಗಳನ್ನು ನವೀಕರಿಸುತ್ತಾರೆ, ಹೊಸ ಕೋಟೆಗಳನ್ನು ಸ್ಥಳಿಯವಾಗಿ ಸಿಗುವ ಜಂಬಿಟ್ಟಿಗೆ ಕಲ್ಲಿನಿಂದ ಸುಂದರವಾಗಿ ನಿರ್ಮಿಸುತ್ತಾರೆ.
  ಕೋಟೆ ಸುತ್ತಾ ಆಳದ ನೀರಿನ ಕಂದಕ, ಬಲವಾದ ಮುಖ್ಯದ್ವಾರ ದಾಟಿದಾಗಲೇ ಕೋಟೆಯ ರಕ್ಷಣೆಗಾಗಿ ಆಂಜನೇಯನ ವಿಗ್ರಹದ ಗುಡಿ ನಿರ್ಮಿಸುತ್ತಿದ್ದರು.
  ರೈಲು ಮಾರ್ಗ ಆನಂದಪುರಂ ಕೋಟೆ ಸೀಳಿ ನಿಮಿ೯ಸಿದ್ದರಿಂದ ಪುರಾತನ ಕೋಟೆ ಆಂಜನೇಯ ದೇವಾಲಯಕ್ಕೆ ದಾರಿಯೂ ಇಲ್ಲ, ರೈಲು ಹಳಿ ದಾಟಿ ಈ ದೇವಾಲಯಕ್ಕೆ ಹೋಗಬೇಕು.
  ಆನಂದಪುರಂ ಕೋಟೆ ಒಳಗೆ ಕೆಳದಿ ರಾಜರು ತಾಂಡವೇಶ್ವರ ದೇವಾಲಯ ಕೂಡ ನಿರ್ಮಿಸಿರುತ್ತಾರೆ ಆದರೆ ಅದರ ಕುರುಹು ಇಲ್ಲಿಲ್ಲ.
  ಅಯ್ಯಂಗಾರರ ಮೂಲ ಕುಟುಂಬದ ಮುಖ್ಯಸ್ಥರು ಪಶು ಸಂಗೋಪನೆ ಮಾಡಿಕೊಂಡಿದ್ದಾಗ ನಿಧಿ ಸಿಕ್ಕಿತ್ತು ಎಂಬ ವದಂತಿಗಳಿತ್ತು, ಕೋಟೆ ಆಂಜನೇಯ ಅಯ್ಯಂಗಾರರ ಪೂರ್ವಿಕರ ಹತ್ತಿರ ನೇರ ಸಂಭಾಷಿಸುತ್ತಿದ್ದ ಎಂಬ ದಾಮಿ೯ಕ ನಂಬಿಕೆಯ ಕಥೆಯೂ ಇದೆ ಇದಕ್ಕೆ ಪೂರಕ ಎನ್ನುವಂತೆ ಆನಂದಪುರಂನ ಭೂ ಮಾಲಿಕರು, ಇನಾಂದಾರರು, ಕೊಡುಗೈ ದಾನಿಗಳು, ಆನಂದಪುರಂನಲ್ಲಿ ಆಸ್ಪತ್ರೆ, ಪಶು ವೈದ್ಯ ಚಿಕಿತ್ಸಾಲಯ, ಶಾಲೆ ಇತ್ಯಾದಿ ನಿರ್ಮಿಸಿದ ರಾಮಕೃಷ್ಣ ಅಯ್ಯಂಗಾರರು ಕೋಟೆ ಆಂಜನೇಯನ ನಿತ್ಯ ಪೂಜೆ, ಆಂಜನೇಯ ಜಯಂತಿ ಮತ್ತು ನವರಾತ್ರಿಯಲ್ಲಿ 9 ದಿನ ಈ ಕುಟು೦ಬದವರು ಉಪವಾಸದಿಂದ ಸುಂದರ ಕಾ೦ಡ. ರಾಮಾಯಣ ಪರಾಯಣ ಮಾಡಿಸಿ ಕೋಟೆ ಆಂಜನೇಯ ದೇವರಿಗೆ ನೈವೇದ್ಯ ಮಾಡಿಸಿ ಊರವರಿಗೆ ಅನ್ನ ಸಂತರ್ಪಣೆಯನ್ನು ಆಗಿನ ಅವರ ರಾಮಕೃಷ್ಣಯ್ಯಂಗಾರ್ ಅಕ್ಕಿ ಗಿರಣಿ (ಈಗಿನ ಸಂತೋಷ್ ರೈಸ್ ಮಿಲ್ ) ಒಳಗಿನ ಅವರ ಮನೆಯಲ್ಲಿ ವ್ಯವಸ್ಥೆ ಮಾಡುತ್ತಿದ್ದರು ಇದು ಅವರ ಪುತ್ರ ವೆಂಕಟಾಚಲಯ್ಯಂಗಾರ್ ಕಾಲದವರೆಗೆ ಮುಂದುವರಿದಿತ್ತು.
   ಈ ಕೋಟೆಯ ನಿಧಿಯ ಇನ್ನೊಂದು ಕಥೆ ಕೂಡ ಜನರ ಬಾಯಲ್ಲಿ ಅನೇಕ ವರ್ಷ ಹರಿದಾಡಿತ್ತು ಸತ್ಯವೋ ಮಿತ್ಯವೋ ಗೊತ್ತಿಲ್ಲ ಅದೇನೆಂದರೆ ಈ ರೈಲು ಮಾರ್ಗದ ಕಾಮಗಾರಿ ಕೋಟೆ ಭಾಗದಲ್ಲಿ ಶೆಟ್ಟರೊಬ್ಬರು ವಹಿಸಿಕೊಂಡಿದ್ದರು ಕೋಟೆ ರೈಲು ಮಾರ್ಗ ಇಬ್ಬಾಗ ಮಾಡುವಾಗ ದೊಡ್ಡ ನಿದಿ ಸಿಕ್ಕಿತು ನಂತರ ಅವರ ನಿರ್ಮಾಣ ಸಂಸ್ಥೆ ದೇಶದಲ್ಲೇ ದೊಡ್ಡ ಸಂಸ್ಥೆ ಆಯಿತು ಅಂತ.
   1950-60 ರ ಅವಧಿಯಲ್ಲಿ ಶಿವಮೊಗ್ಗದ ಸಕ್ಕರೆ ಕಾರ್ಖಾನೆಯಲ್ಲಿ ದೊಡ್ಡ ಉದ್ಯೋಗಿ ಆಗಿ ನಂತರ ಉಗಾಂಡದ ಸಕ್ಕರೆ ಕಾರ್ಖಾನೆಯಲ್ಲಿ (ಹಿಂದಿ ಚಲನ ಚಿತ್ರ ನಟಿ ಮಮ್ತಾಜ್ ಪತಿಯದ್ದು) ಅನೇಕ ವರ್ಷ ಕೆಲಸ ನಿರ್ವಹಿಸಿದವರು ಕೋಟೆ ಆಂಜನೇಯ ದೇವಸ್ಥಾನ ನವೀಕರಣ ಮತ್ತು ಸುತ್ತಲೂ ಪಗಾರ ನಿಮಾ೯ಣ ಮಾಡಿದ್ದರು ಹಾಲಿ ರೈಲ್ವೆ ಇಲಾಖೆಯ ನಿವೃತ್ತರಾದ ರೈಲ್ವೇ ಚಂದ್ರಣ್ಣರ ಸಂಬಂದಿಗಳು.
   ಈಗ ಸದರಿ ಕೋಟೆ ಆಂಜನೇಯ ದೇವಾಲಯದ ಬಹು ಭಾಗ  ಬ್ರಾಡ್ ಗೇಜ್ ಕಾಮಗಾರಿಯಿಂದ ಒತ್ತುವರಿ ಆಗಿದೆ, ಉಗಾಂಡದ ಭಕ್ತರು ನಿಮಿ೯ಸಿದ ಪಗಾರ ಪೂರ್ಣ ರೈಲು ಮಾರ್ಗದ ಕಾಮಗಾರಿಗಾಗಿ ತೆಗೆದಿದ್ದಾರೆ, ಗರ್ಭಗುಡಿ ಕೂಡ ಶಿಥಿಲವಾಗಿದ್ದರಿಂದ ಸ್ಥಳಿಯ ಈ ದೇವಾಲಯದ ಭಕ್ತರು ಕೋಟೆ ಆಂಜನೇಯ ದೇವರ ಪರಮ ಭಕ್ತ ಮತ್ತು ಈ ದೇವರ ಹೆಸರಿನಲ್ಲೇ ಮಾರುತಿ ಇಂಡಸ್ಟ್ರೀಸ್ ಪ್ಯಾಕ್ಟರಿ ನಡೆಸುತ್ತಿರುವ ಪೂವಪ್ಪರ ಅಧ್ಯಕ್ಷತೆಯಲ್ಲಿ 17 ಜನರ ಟ್ರಸ್ಟ್ ಒಂದನ್ನು ರಚಿಸಿ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
 ಮುಂದಾಗಿದ್ದಾರೆ.  ವೆಂಕಟಾಚಲಯ್ಯಂಗಾರರ ಜೊತೆ 25 ವರ್ಷ ಸತತ ವಿಲೇಜ್ ಪಂಚಾಯಿತಿ ಸದಸ್ಯರಾಗಿದ್ದ ಜೋಗಿ ಹನುಮ೦ತಪ್ಪರ ಪುತ್ರ ನಾರಾಯಣ ಜೋಗಿ, ಈ ಭಾಗದಿಂದ ನಿರಂತರವಾಗಿ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆ ಆಗುತ್ತಿರುವ ಗುರುರಾಜ್, ಖ್ಯಾತ ವಿದ್ಯುತ್ ಗುತ್ತಿಗೆದಾರ ಶಿವಲಿಂಗಾಚಾರ್ ಸಹೋದರ ವಿಜೇಂದ್ರ, ಆನಂದಪುರಂನ ಹಿರಿಯ ಸಮಾಜ ಸುಧಾರಕಿಯವರಾದ ಶ್ರೀಮತಿ ಕೆರಿಯಮ್ಮರ ಪುತ್ರ ಲೋಕೇಶ್
   ಕನ್ನಡ ಸಂಘದ ರಾಜೇಂದ್ರ ಗೌಡರು, ಲಕ್ಷೀಷ್ ಹಾಗೂ ಸ್ಥಳಿಯ ಯುವಕರು ಮುಂದಾಗಿದ್ದಾರೆ.  ಸುಮಾರು ನಾನೂರು ವರ್ಷದ ಹಿಂದೆ ರಾಜ ವೆಂಕಟಪ್ಪ ನಾಯಕ ರಂಗೋಲಿ ಪ್ರವೀಣೆ ಸುಂದರಿ ಚಂಪಕಾಳೊಂದಿಗೆ ಮದುವೆ ಆಗಿ ಈ ಕೋಟೆಯಲ್ಲಿದ್ದದ್ದು ನಂತರ ಲೋಕನಿಂದೆಗಾಗಿ ಚಂಪಕ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಚಂಪಕಾಳ ಸ್ಮರಣಾಥ೯ ಚಂಪಕಾಸರಸ್ಸು (ಜನರ ಬಾಯಲ್ಲಿ ಮಹಂತನ ಮಠ) ನಿರ್ಮಿಸಿ ಈ ಪ್ರದೇಶದ ಹಳೇ ಹೆಸರು ಯಡೇಹಳ್ಳಿ ಕೋಟೆ ಎಂಬುದನ್ನು ಬದಲಿಸಿ ಆನಂದಪುರಂ ಎಂದು ಪುನರ್ ನಾಮಕರಣ ಮಾಡಿದ್ದರು.
  ಸುಂದರವಾದ ಸುಮಾರು 500 ವರ್ಷದ ಪುರಾತನ ಆನಂದಪುರಂ ಕೋಟೆ ಆಂಜನೇಯ ದೇವಾಲಯಕ್ಕೆ ಅಪಾರ ಭಕ್ತರಿದ್ದಾರೆ ಊರಿನ ಇತಿಹಾಸಕ್ಕಾಗಿಯೂ ಈ ದೇವಾಲಯ ಸಂರಕ್ಷಿಸುವ ಕೆಲಸ ಆಗಬೇಕಾಗಿದೆ.

(ನಾಳೆ ಭಾಗ - 59)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...