ಊಟ ಮಾಡಿ ಕಳಿಸಲು ಶ್ರೀದರ ಸ್ವಾಮಿಗಳು ಚೀಟಿ ಕೊಡುತ್ತಾರೆ ಆದರೆ ಅಲ್ಲಿ ಊಟ ಮುಗಿದು ಖಾಲಿ ಪಾತ್ರೆ ತೊಳೆದಿಟ್ಟಿರುತ್ತಾರೆ ಆದರೆ ಆ ಪಾತ್ರೆಯಲ್ಲಿ ಅಣ್ಣಪ್ಪ ಆಚಾರರ ಊಟ ಇರುತ್ತದೆ!!
#ವರದಳ್ಳಿ_ಶ್ರೀಧರ_ಸ್ಟಾಮಿಗಳ_ಅನುಯಾಯಿ.
#ತಪಸ್ಸಾಚರಿಸುತ್ತಿದ್ದಾಗ_ಚಾವಣಿ_ದುರಸ್ತಿಗೆ_ಇವರನ್ನು_ಕರೆಸಿಕೊಂಡಿದ್ದರು.
#ತೊಳೆದು_ತಂದಿಟ್ಟ_ಮದ್ಯಾಹ್ನದ_ಖಾಲಿ_ಅಡುಗೆ_ಪಾತ್ರೆಯಲ್ಲಿತ್ತು_ಅಣ್ಣಪ್ಪಆಚಾರರ_ಊಟ
2007 ರಲ್ಲಿ ನನ್ನ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಸರಸಮ್ಮ (ಸರಸ್ವತಿ) ಇವರ ಸ್ಮರಣಾರ್ಥ ನಿಮಿ೯ಸುತ್ತಿದ್ದ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನ ಮುಖ್ಯದ್ವಾರದ ಹಲಸಿನ ಮರದ ಬಾಗಿಲು ಮತ್ತು ಶೌಚಾಲಯ - ಸ್ನಾನ ಗೃಹಕ್ಕೆ ಮಾತ್ರ ಮರ ಬಳಕೆ ಮಾಡಿದ್ದೆ.
ಈ ಮರದ ಕೆಲಸ ಯಡಜಿಗಳೆ ಮನೆಯ ನರಸಿಂಹ ವಹಿಸಿಕೊಂಡಿದ್ದರು ಅವರ ಜೊತೆ ಕೆಲಸಕ್ಕೆ ಬಂದವರೆ ವಯೋವೃದ್ದರಾದ ಅಣ್ಣಪ್ಪ ಆಚಾರರು.
ನರಸಿಂಹ ಅವರು ಈ ಹಿರಿಯರನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಿದ್ದರು ತಮ್ಮ ಗುರು ಅಂತಲೇ ಕರೆಯುತ್ತಿದ್ದರು.
ಅಣ್ಣಪ್ಪ ಆಚಾರರು ಮಾಡಿದ ಹೆಂಚಿನ ಮಾಡು ನೋಡಿದ ಸ್ಥಳಿಯ ಆಚಾರರೆಲ್ಲ ತಮ್ಮ ಶಹಬಾಷ್ ವ್ಯಕ್ತಪಡಿಸಿದ್ದರು ಯಾಕೆಂದರೆ ಆ ಕೆಲಸದ ಪರ್ಪೆಕ್ಷನ್ ಹಾಗಿದೆ.
ಆಗ ನಿತ್ಯ ಒಡನಾಟದಲ್ಲಿ ಅಣ್ಣಪ್ಪಾಚಾರ್ ಅನೇಕ ಅವರ ಜೀವನದ ಅನುಭವ ಹೇಳುತ್ತಿದ್ದರು ನನಗೆ ಅದೆಲ್ಲ ಕೇಳುವ ಆಸಕ್ತಿ.
ಆಗ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮ ಈಗಿನಂತೆ ಭವ್ಯ ಆಗಿರಲಿಲ್ಲ ಆದರೆ ಶ್ರೀಧರ ಸ್ವಾಮಿಗಳು ಜೀವಂತ ವಾಗಿದ್ದರಿಂದ ಅಲ್ಲಿನ ಪರಿಸರವೇ ಬೇರೆ ರೀತಿ ಕಾಣುತ್ತಿತ್ತಂತೆ ಅಷ್ಟು ಭಕ್ತಿಯ ಲಯ ಅಲ್ಲಿತ್ತು ಅಂತಿದ್ದರು.
ಅಲ್ಲಿನ ಯಾವುದೇ ಸಣ್ಣ ಪುಟ್ಟ ಮರ ಕೆಲಸದ ದುರಸ್ತಿಗೆ ಅಣ್ಣಪ್ಪ ಆಚಾರರಿಗೆ ಶ್ರೀಧರ ಸ್ವಾಮಿಗಳು ಕರೆ ಕಳಿಸುತ್ತಿದ್ದರ೦ತೆ.
ಹೀಗೆ ಅವರು ಮೌನವೃತದಿಂದ ಮೇಲುಗಡೆ ತಪಸ್ಸು ಮಾಡುವಾಗ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸಣ್ಣ ಜೋಪಡಿಯ ಮೇಲ್ಚಾವಣೆ ಹಾಳಾಗಿ ಮಳೆ ಗಾಳಿ ಒಳಗೆ ಬರುತ್ತಿದ್ದರಿಂದ ಶ್ರೀಧರ ಸ್ವಾಮಿಗಳು ಒಂದು ಚೀಟಿ ಬರೆದು ಅವರ ಶಿಷ್ಯರಿಗೆ ಕೊಡುತ್ತಾರೆ ಅದರಲ್ಲಿ ಅಣ್ಣಪ್ಪ ಆಚಾರ್ ರಿಗೆ ಬರಲು ಹೇಳಿ ಚಾವಣಿ ದುರಸ್ತಿ ಮಾಡಿಸಲು ಹೇಳಿರುತ್ತಾರೆ.
ವಿಷಯ ತಿಳಿದ ಅಣ್ಣಪ್ಪ ಆಚಾರರು ಮರು ಬೆಳಿಗ್ಗೆಯೇ ಸ್ನಾನ ಮಾಡಿ ಮಡಿ ಉಟ್ಟು ಭಕ್ತಿಯಿಂದ ತಮ್ಮ ಹತ್ಯಾರಗಳನ್ನು ತೊಳೆದು ಹೋಗುತ್ತಾರೆ ಮೇಲೆ ಗುರುಗಳ ತಪಸ್ಸಿಗೆ ಭಂಗ ಬರದಂತೆ ನಮಿಸುತ್ತಾರೆ, ಗುರುಗಳು ಕಣ್ಣು ತೆರೆದು ಇವರನ್ನು ನೋಡಿ, ದುರಸ್ತಿ ಮಾಡಬೇಕಾದ ಚಾವಣೆ ತೊರಿಸಿ ಹೊರ ಬರುತ್ತಾರೆ.
ಇವರು ಸಂಪೂರ್ಣ ದುರಸ್ತಿ ಮಾಡಿ, ತಪಸ್ಸಿನ ಮನೆಯ ಚಾವಣಿಯಿಂದ ಇಳಿದು ಪುನಃ ಚಾವಣಿಗೆ ಕೈ ಮುಗಿದು ಗುರುಗಳ ತಪಸ್ಸಿನ ಮನೆ ಅನಿವಾರ್ಯವಾಗಿ ಹತ್ತಿ ದುರಸ್ತಿಗಾಗಿ ತುಳಿದ ಬಗ್ಗೆ ಕ್ಷಮೆ ಕೇಳಿಕೊಳ್ಳುತ್ತಾರೆ ಆಗ ಅಲ್ಲಿಗೆ ಬಂದ ಶ್ರೀಧರ ಸ್ವಾಮಿಗಳಿಗೂ ನಮಿಸಿ ಈ ಬಗ್ಗೆ ಹೇಳುತ್ತಾರೆ ಮೌನ ವೃತದ ಶ್ರೀಧರ ಸ್ವಾಮಿಗಳು ಹಸನ್ಮುಖರಿಗೆ ಆಶ್ರೀವಾದ ಮಾಡುತ್ತಾರೆ.
ತಮ್ಮ ಎಲ್ಲಾ ಹತ್ಯಾರಗಳನ್ನು ತೆಗೆದು ಕೊಂಡು ಹೊರಟ ಅಣ್ಣಪ್ಪ ಆಚಾರ್ರ ಕೈಗೆ ಸಣ್ಣ ಚೀಟಿ ಒಂದನ್ನು ಕೊಟ್ಟು ಅದನ್ನು ಆಶ್ರಮದ ಅಡುಗೆ ಮನೇಲಿ ಕೊಟ್ಟು ಊಟ ಮಾಡಿ ಹೋಗುವಂತೆ ಕೈ ಸನ್ನೆಯಲ್ಲಿ ತಿಳಿಸುತ್ತಾರೆ.
ಇವರು ಆ ಚೀಟಿ ಆಶ್ರಮದ ಅಡುಗೆ ಮನೆಗೆ ಕೊಟ್ಟಾಗ ಅಲ್ಲಿದ್ದ ಶಿಷ್ಯರು "ಈಗ ಊಟ ಎಲ್ಲಿದೆ? ಆಗಲೇ ಊಟದ ಸಮಯ ಮೀರಿದೆ ಪಾತ್ರೆಗಳು ಎಲ್ಲಾ ತೊಳೆದು ತಂದಿಟ್ಟಾಗಿದೆ" ಎನ್ನುತ್ತಾರೆ ಆಗ ಆಚಾರರಿಗೆ ಯಾವತ್ತೂ ಇಲ್ಲದ ಹಸಿವು ಕಾರಣ ಬೆಳಿಗ್ಗೆ ಉಪವಾಸದಿಂದಲೇ ಹೋಗಿರುತ್ತಾರೆ ಆದರೇನು ಮಾಡುವುದು ಊಟ ಇಲ್ಲ ಎಂದ ಮೇಲೆ ಎಂದು ಮನೆಗೆ ಹೊರಡುತ್ತಾರೆ.
ಅಷ್ಟರಲ್ಲಿ ಆಶ್ರಮದ ಶಿಷ್ಯರು ಕೂಗಿ ಕರೆಯುತ್ತಾರೆ ಆಚಾರರು ವಾಪಾಸು ಹೋಗುತ್ತಾರೆ.
ಶ್ರೀಧರ ಸ್ವಾಮಿಗಳ ಚೀಟಿ ನೋಡಿದ ಹಿರಿಯ ಶಿಷ್ಯರೊಬ್ಬರು ತೊಳೆದು ತಂದಿಟ್ಟ ಖಾಲಿ ಪಾತ್ರೆಯ ಮುಚ್ಚುಳ ತೆಗೆದು ನೋಡಿದರೆ ಒ0ದು ಪಾತ್ರೆಯಲ್ಲಿ ಅವತ್ತು ಅಡುಗೆ ಮಾಡಿದ ಎಲ್ಲಾ ಭಕ್ಷ್ಯಗಳು ಒಬ್ಬರಿಗೆ ಹೊಟ್ಟೆ ತುಂಬುವಷ್ಟು ಇದೆ!! ಅದನ್ನು ಅಣ್ಣಪ್ಪ ಆಚಾರರಿಗೆ ಬಡಿಸುತ್ತಾರೆ, ಆಚಾರರಿಗೆ ತಮ್ಮ ಜೀವಮಾನದಲ್ಲೇ ಅಂತಹ ಊಟ ಮಾಡಿರಲಿಲ್ಲ ಅನ್ನಿಸುತ್ತೆ.
ಇಂತಹ ಪವಾಡಗಳು ಒಂದೆರೆಡಲ್ಲ ಅಂತ ಅಣ್ಣಪ್ಪ ಆಚಾರರು ಹೇಳುತ್ತಿದ್ದರು, ಅವರನ್ನು ನೋಡದೆ ಅನೇಕ ವರ್ಷವೇ ಆಗಿತ್ತು ಮೊನ್ನೆ ಅಚಾನಕ್ ಆಗಿ ನರಸಿಂಹ 15 ವರ್ಷದ ನಂತರ ಸಿಕ್ಕಾಗ ಅಣ್ಣಪ್ಪ ಆಚಾರರ ಬಗ್ಗೆ ಕೇಳಿದೆ, 5-6 ತಿಂಗಳ ಹಿಂದೆ ಅವರು ದೇಹಾಂತ್ಯದ ಸುದ್ದಿ ಕೇಳಿ ಬೇಸರ ಆಯಿತು ಅವರ ಪತ್ನಿ ಶಾರದಮ್ಮ, ಮಗ ಹರೀಶ, ಹೆಣ್ಣು ಮಕ್ಕಳಾದ ಉಷಾ ಮತ್ತು ಉಮಾ ಊರಲ್ಲಿದ್ದಾರೆ ಅಂದರು.
ಶ್ರೀದರ ಸ್ವಾಮಿಗಳ ಸೇವೆ ಮಾಡಿದ ಅವರ ಆಶ್ರೀವಾದ ಪಡೆದ ಸಜ್ಜನ ಕರ್ಮಯೋಗಿ ಯಡಜಿಗಳೆ ಮನೆ ಅಣ್ಣಪ್ಪ ಆಚಾರ್ ಸದಾ ನೆನಪಾಗುತ್ತಾರೆ.
ಜನಸಾಮಾನ್ಯರು ಶ್ರೀಧರ ಸ್ವಾಮಿಗಳ ಇಂತಹ ಅನೇಕ ಪವಾಡಗಳನ್ನು ನೋಡಿದ್ದಾರೆ ಆದರೆ ಅದನ್ನು ಯಾರು ದಾಖಲೆ ಮಾಡಿದ ಹಾಗೆ ಇಲ್ಲ.
Comments
Post a Comment