ಬಿಲಾಲಿ ಬಿಲ್ಲಿ ಅಭ್ಯಂಜನ ಕಥಾ ಸಂಕಲನ ಬಿಡುಗಡೆಯ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಪ್ರಕಾಶ್ ಕುಗ್ವೆ ನಮ್ಮೊಡನೆ ಭಾಗವಹಿಸಿದ ನೆನಪು
#ಪ್ರಜಾವಾಣಿ_ಸಂಸ್ಥೆಯಲ್ಲಿ_ಅನೇಕ_ಜಿಲ್ಲಾ_ವರದಿಗಾರರಾಗಿದ್ದರು.
#ಮ೦ಗಳೂರಿನ_ಪ್ರಜಾವಾಣಿ_ನ್ಯೂಸ್_ಬ್ಯೂರೋ_ಚೀಪ್_ಆಗಿದ್ದರು.
#ಈಗ_ಸಾಗರದಲ್ಲಿ_ಸ್ಯಾನಿಟರಿ_ಮತ್ತು_ಬಾತ್_ವೇರ್_ಶೋರೂಂ_ಮಾಡಿದ್ದಾರೆ
#ಸಾಗರದ_ಕುಗ್ವೆಯ_ಪ್ರಗತಿಪರ_ರೈತರರಾದ_ಈಶ್ವರ_ನಾಯಕರ_ಪುತ್ರ.
ಪ್ರತಿಷ್ಟಿತ ಪ್ರಜಾವಾಣಿ ಸಂಸ್ಥೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಪತ್ರಿಕೆಯ ಕೆಲಸ ಮಾಡಿದ ಸಾಗರದ ಪ್ರಕಾಶ್ ಕುಗ್ವೆ ಹಮ್ಮು ಬಿಮ್ಮುಗಳಿಲ್ಲದ ಸರಳ ಸಾಚಾತನದ ಸಜ್ಜನ ಯುವಕರು.
ಸ್ವಂತ ಉದ್ಯೋಗ ಮಾಡ ಬೇಕು ಹುಟ್ಟಿದ ಊರಲ್ಲಿ ತಂದೆ ತಾಯಿಯ ವೃದ್ಧಾಪ್ಯದಲ್ಲಿ ಅವರೊಡನೆ ಇರಬೇಕೆಂಬ ಯೋಚನೆಯಿಂದ ಮಂಗಳೂರು ಪ್ರಜಾವಾಣಿ ನ್ಯೂಸ್ ಬ್ಯೂರೋ ಚೀಪ್ ಹುದ್ದೆ ನಂತರ ಅದನ್ನು ಬಿಟ್ಟು ಈಗ ಸಾಗರದ ವೀರಶೈವ ಕಲ್ಯಾಣ ಮಂಟಪದ ಎದರು #ಯಶು_ಏಜೆನ್ಸಿಸ್ ಎಂಬ ಅತ್ಯುತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆಕಷ೯ಕ ದರದಲ್ಲಿ ಸ್ಯಾನಿಟರಿ ಮತ್ತು ಬಾತ್ ವೇರ್ ಶೋ ರೂಂ ತೆರೆದಿದ್ದಾರೆ.
ಇವರ ತಂದೆ ಕುಗ್ವೆ ಈಶ್ವರ ನಾಯಕರು ವಿದ್ಯಾವಂತರು, ಸಾಗರದ ಕುಗ್ವೆಯ ಲಾಲ್ ಬಹದ್ದೂರ್ ಕಾಲೇಜ್ ಎದುರು ನಿವಾಸಿ, ಕಾಗೋಡು ತಿಮ್ಮಪ್ಪರ ಆತ್ಮೀಯ ಗೆಳೆಯರು, ಕೃಷಿ ಮತ್ತು ನಿರಂತರ ಓದು ಇವರ ಹವ್ಯಾಸ, ನಾವೆಲ್ಲ ಸಾಗರದ ಯುವ ಕಾಂಗ್ರೇಸ್ ಸಂಘಟನೆ ಸಂದರ್ಭದಲ್ಲಿ ಇವರ ಮನೆಗೆ ಹೋಗುವಾಗ ಪ್ರಕಾಶ್ ಕುಗ್ವೆ ಸಣ್ಣ ಬಾಲಕ.
ಇವರ ಮನೇನಲ್ಲಿ ಕಾಗೋಡು ತಿಮ್ಮಪ್ಪ ಇವರ ಜಮೀನಲ್ಲಿ ನೇಗಿಲ ಬೇಸಾಯದ ಪೋಟೋ ಇತ್ತು ಈ ಬಗ್ಗೆ ಇವರ ತಂದೆ ಈಶ್ವರ ನಾಯ್ಕರನ್ನು ಕೇಳಿದಾಗ ಅವರು ಹೇಳಿದ್ದು "ಕಾಗೋಡು ತಿಮ್ಮಪ್ಪರು ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿ ಬೆಂಗಳೂರಿನ ವಿದಾನ ಸೌದಕ್ಕೆ ಹೋಗಿ ಸಾಗರಕ್ಕೆ ಬಂದವರು ಈಶ್ವರ ನಾಯ್ಕರ ಮನೆಗೆ ಬಂದಾಗ ಈಶ್ವರ ನಾಯ್ಕರು ಮನೇಲಿ ಇರುವುದಿಲ್ಲ,ತಮ್ಮ ಕೃಷಿ ಭೂಮಿಯಲ್ಲಿ ಹೂಟಿ ಮಾಡುವುದು ತಿಳಿದು ಅಲ್ಲಿಗೆ ಹೋಗಿ ತಮ್ಮ ಗೆಲುವಿಗಾಗಿ ಧನ್ಯವಾದ ಹೇಳುತ್ತಾರೆ ಹಾಗೆಯೇ ಉತ್ಸಾಹದಿಂದ ಈಶ್ವರ ನಾಯಕರ ಜೋಡೆತ್ತಿನ ನೇಗಿಲ ಬೇಸಾಯದಿಂದ ಒಂದೆರೆಡು ಸುತ್ತು ಹೂಟಿಯೂ ಮಾಡಿದರು ಅದರ ನೆನಪಿನ ಕಪ್ಪು ಬಿಳುಪು ಪೋಟೊ" ಅಂದಿದ್ದರು.
"ಭಟ್ಟರ ಬೊಂಡಾ ಬಾಂಡಲಿಯಲ್ಲಿ"
#ಬಿಲಾಲಿ_ಬಿಲ್ಲಿ_ಅಭ್ಯಂಜನ
ಸಣ್ಣ ಸಂಕ್ಷಿಪ್ತವಾದ ಆತ್ಮೀಯ ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಶಿವಾನಂದ ಕಲವೆ, ಪತ್ತಕರ್ತ ಶೃಂಗೇಶರ ಜೊತೆ ನನ್ನ ಕಥಾ ಸಂಕಲನ ಬಿಡುಗಡೆ ಮಾಡಿ ಸಾಕ್ಷಿ ಆದರು,ನನ್ನ ಹೋರಾಟ ರಾಜಕಾರಣ ಸಣ್ಣಿಂದ ನೋಡಿದ ಬಗ್ಗೆ ಮತ್ತು ಅದೆಲ್ಲದರಿಂದ ನಾನು ಡಿವೀಯೇಷನ್ ಆದ ಬಗ್ಗೆ ಅವರಾಡಿದ ಮಾತುಗಳ ಈ ವಿಡಿಯೋ ಸ್ಥಳಿಯ ಪತ್ರಕರ್ತ ಬಿ.ಡಿ. ರವಿಯವರು ಲೈವ್ ಮಾಡಿದ್ದು ಇಲ್ಲಿ ಮತ್ತೊಮ್ಮೆ ನಿಮಗಾಗಿ.
Comments
Post a Comment