#ಹದಿನೈದನೆ_ಶತಮಾನದಲ್ಲಿ_ಉಲ್ಲೇಖ
#ಪೋರ್ಚುಗೀಸರಿಂದ_ಕೇರಳಕ್ಕೆ_ಬಂತೆ?
#ಅಸ್ಸಾಂನಲ್ಲಿ_ಇಂತದ್ದೆ_ಸಂಗಪಿತ_ಇದೆ.
#ಒಂದು_ಕಾಲದಲ್ಲಿ_ದೇಸಿ_ಪುಟ್ಟು_ತಯಾರಿಸುವ_ಬೊಂಬು_ಸಾದನವಿತ್ತು.
ಕೇರಳದವರ ಪೆವರಿಟ್ ಉಪಹಾರ ಪುಟ್ಟೂ ಬೇರೆ ಭಾಗದವರಿಗೂ ಬಲು ಇಷ್ಟ ಆದರೆ ಇದು ತಯಾರಿಸಲು ಕಷ್ಟ ಎಂಬ ನಂಬಿಕೆಯಿಂದ ಪ್ರಯತ್ನವೇ ಮಾಡುವುದಿಲ್ಲ.
ಕೇರಳ ಹೋದಾಗೆಲ್ಲ ಪುಟ್ಟು ಹಸಿಕಡಲೆ ಪಲ್ಯ ಮತ್ತು ಬೇಯಿಸಿದ ನೇಂದ್ರ ಬಾಳೆ ತಿನ್ನದೇ ಬರಲಾಗುವುದಿಲ್ಲ.
ಹಾಗಾಗಿ ಮನೇನಲ್ಲಿ ಪುಟ್ಟೂ ತಯಾರಿಸುವ ಪಾತ್ರೆ ಒಂದು ಕೆಲ ವರ್ಷದ ಹಿಂದೆ ತಂದಿದ್ದೆ, ಎರೆಡು ವರ್ಷದ ಹಿಂದೆ ನಮ್ಮಣ್ಣ ತಂದು ಕೊಟ್ಟಿದ್ದ ಈ ಪುಟ್ಟೂ ಪಾತ್ರೆ ಮರೆತು ಹೋಗಿತ್ತು ಬಳಸಿರಲಿಲ್ಲ.
ಇವತ್ತು ಹೊಸ ಪಾತ್ರೆಯಲ್ಲಿ ಪುಟ್ಟೂ ತಯಾರಿಸಿ ಕಡಲೆ ಪಲ್ಯದೊಡನೆ ಉಪಹಾರವೂ ಆಯಿತು.
ಪುಟ್ಟು ಮಾಡುವುದು ತುಂಬಾ ಸರಳ,4 ಗಂಟೆ ಅಕ್ಕಿ ನೆನಸಿಡುವುದು ನಂತರ ನೀರು ತೆಗೆದು ಮಿಕ್ಸಿಯಲ್ಲಿ ರವೆಯಂತೆ ಪುಡಿ ಮಾಡಿ ಅದನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು, ನಂತರ ತಣ್ಣಗಾದಾಗ ರುಚಿಗೆ ಬೇಕಾಗುವಷ್ಟು ಉಪ್ಪು ನೀರಲ್ಲಿ ಕರಗಿಸಿ ಕೈಯಿಂದ ಕಲಸಿ, ತೆಂಗಿನ ತುರಿ ಸೇರಿಸಿ, ಸ್ವಲ್ಪ ಸ್ವಲ್ಪ ಬಿಸಿ ನೀರು ಬೆರಸಿ ಹದವರಿತು ಪುಟ್ಟು ಹಿಟ್ಟು ಕಲಸಿಕೊಳ್ಳಬೇಕು (ಹೆಚ್ಚು ಹಸಿ ಆಗಬಾರದು ಮತ್ತು ಹೆಚ್ಚು ಒಣ ಪುಡಿಯೂ ಆಗದಂತೆ) ಪುಟ್ಟು ಮಾಡುವ ಪಾತ್ರೆಗೆ ನೀರು ಹಾಕಿ ಬಿಸಿಗೆ ಇಟ್ಟು, ಪುಟ್ಟು ಕೊಳವೆಗೆ ಸ್ವಲ್ಪ ಕಾಯಿತುರಿ ನಂತರ ಈ ಹಿಟ್ಟು ನಂತರ ಕಾಯಿ ತುರಿ ನಂತರ ಹಿಟ್ಟು ಹಾಕಿ ಮೇಲ್ಬಾಗದಲ್ಲಿ ಕಾಯಿ ತುರಿ ಒಂದೆರೆಡು ಚಮಚ ಸಕ್ಕರೆ ಹಾಕಿ ಪುಟ್ಟು ಕೊಳವೆ ಪುಟ್ಟು ನೀರಿನ ಪಾತ್ರೆಗೆ ಜೋಡಿಸಿ, ಪುಟ್ಟು ಕೊಳವೆಗೆ ಮುಚ್ಚುಳ ಹಾಕಿ, 10 ನಿಮಿಷದಲ್ಲಿ ಕೊಳವೆಯಿಂದ ಹಬೆ ಬಂದಾಗ ಬೆಂದಿರುತ್ತದೆ ಆಗ ಪುಟ್ಟು ಕೊಳವೆ ತೆಗೆದು ಹಿಂಬಾಗದಿಂದ ಪುಟ್ಟು ತೆಗೆಯಲು ಕಡ್ಡಿಯಿಂದ ದೂಡಿದರೆ ಪುಟ್ಟು ನಮ್ಮ ಉಪಹಾರದ ತಟ್ಟೆಗೆ ಬರುತ್ತದೆ.
ಪುಟ್ಟು ಬಗ್ಗೆ 15 ನೇ ಶತಮಾನದಲ್ಲಿ ತಮಿಳು ಕವಿ ಅರುಣಗಿರಿನಾಥನ್ ತಮ್ಮ "ತಿರುಪು ಗಾಜು" ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿರುವುದೆ ಒ0ದು ದಾಖಲೆ ಅದಕ್ಕೂ ಹಿಂದೆ ಪುಟ್ಟೂ ಬಗ್ಗೆ ದಾಖಲೆ ಇಲ್ಲ.
ಈಗ ಪುಟ್ಟು ಕೇರಳ, ತಮಿಳುನಾಡು ಮತ್ತು ನಮ್ಮ ರಾಜ್ಯದ ದ.ಕ.ಜಿಲ್ಲೆಗಳಲ್ಲಿ ಬಳಕೆ ಇದೆ.
ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ್, ಇಂಡೋನೇಷಿಯ ಮತ್ತು ಪಿಲಿಪೈನ್ಸ್ ನಲ್ಲೂ ಪುಟ್ಟೂ ಪ್ರಖ್ಯಾತಿ ಪಡೆದ ಉಪಹಾರ ಆಗಿದೆ.
ಅಸ್ಸಾಂನಲ್ಲಿ ಸುಂಗ - ಪಿತಾ ಎಂಬ ತಿಂಡಿ ಪುಟ್ಟೂ ರೀತಿಯೇ ಇದೆ.
ಪೋರ್ಚುಗೀಸರ ಸ್ಟೀಮ್ ರೈಸ್ ಕೇಕ್ ಕೂಡ ಪುಟ್ಟೂ ರೀತಿಯದ್ದೇ ಇದ್ದು ಪೋಚು೯ಗೀಸರಿಂದಲೇ ಪುಟ್ಟೂ ಬಂತು ಎಂಬ ವಾದವೂ ಇದೆ.
ಈಗೆಲ್ಲ ನವ ನವೀನ ಪುಟ್ಟೂ ಮೇಕರ್ ಮಾರುಕಟ್ಟೆಯಲ್ಲಿದೆ, ಸ್ಟೀಲ್ ಮತ್ತು ಅಲ್ಯೂಮಿನಿಯಮ್ ನದ್ದು.ಹಿಂದಿನ ಕಾಲದಲ್ಲಿ ಮಣ್ಣಿನ ಮಡಕೆ ಬಿದಿರು ಬೊಂಬು ಉಪಯೋಗಿಸುತ್ತಿದ್ದರು ನಂತರ ಕಂಚಿನ ಪಾತ್ರೆ ಬಳಕೆ ಆಯಿತು.
ಅಂತೂ ಇಂತು ಇವತ್ತು ಕೇರಳದ ಪುಟ್ಟೂ ನನ್ನ ಉಪಹಾರ ಆಯಿತು.
Comments
Post a Comment