#ನಿತ್ಯ_ವಾಕಿಂಗ್_ನನ್ನ_ಕ್ರಮ
#ಎರೆಡು_ವರ್ಷದ_ನಿರಂತರ_ಸ್ವಪ್ರಯೋಗ.
#ಇದು_ಉಪಯುಕ್ತ.
#ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು.
ನಿತ್ಯ ವಾಕಿಂಗ್ ಬಗ್ಗೆ ಅನೇಕರ ಅನೇಕ ರೀತಿಯ ಅಭ್ಯಾಸಗಳಿದೆ ಆದರೆ ನನಗೆ ಮನೆಯಿಂದ ಹೊರ ಹೋಗಿ ವಾಕಿಂಗ್ ಮಾಡಲು ಮೊದಲಿಂದಲೂ ಇಷ್ಟ ಇಲ್ಲ.
ವಾಕಿಂಗ್ ತಡೆಯುವಂತೆ ಕೆಲವರು ಸಮಸ್ಯೆ ಹೇಳುತ್ತಾ ಇರುತ್ತಾರೆ ಅನ್ನುವುದು ಒ0ದು ಕಾರಣ ಇನ್ನೊಂದು ಬೆಳಗಿನ ರಸ್ತೆಗಳು ಪಾದಚಾರಿಗಳಿಗೆ ಸುರಕ್ಷಿತವೂ ಅಲ್ಲ.
ಇದರಿಂದ ಮನೆ ಎದುರಿನ 10 ಹೆಜ್ಜೆ ಹಾಕುವ ಪಾರ್ಕಿಂಗ್ ಜಾಗದಲ್ಲೇ ವಾಕಿಂಗ್ ಮಾಡುತ್ತಿದೆ ಈಗ ಮನೆ ಹಿಂಬಾಗದಲ್ಲಿನ ಓಣಿಯಲ್ಲಿ ಪೇವಸ್೯ ಅಳವಡಿಸಿದ್ದರಿಂದ ಅಲ್ಲಿ 25 ಹೆಜ್ಜೆ ಹಾಕುವಷ್ಟು ಆಯಿತು ಅಲ್ಲಿ ಸಣ್ಣ ಸಣ್ಣ ಪಾಟ್ ಗಳಿಟ್ಟು ಸಣ್ಣ ಗಾರ್ಡನ್ ಮಾಡಿ ಅದರ ಮಧ್ಯ ಬೆಳಿಗ್ಗೆ 3500 ಹೆಜ್ಜೆ ಮತ್ತು ಸಂಜೆ 3500 ಹೆಜ್ಜೆ ವಾಕಿಂಗ್ ಮಾಡುತ್ತೇನೆ.
ಒಟ್ಟು ದಿನಕ್ಕೆ 7000 ಹೆಜ್ಜೆ ಅಂದರೆ 5 ರಿಂದ 6 ಕಿ.ಮಿ. ಆಗುತ್ತದೆ, 3000 ಹೆಜ್ಜೆಗೆ 30 ನಿಮಿಷ ಬೇಕು, 1300 ರಿಂದ 1500 ಹೆಜ್ಜೆಗೆ 1 ಕಿ.ಮಿ. ಆಗುತ್ತೆ ಆದ್ದರಿಂದ ವಾಕಿಂಗ್ ಮಾಡಲು ಉದ್ಯಾನವನ ಅಥವ ಹೆದ್ದಾರಿ ಹುಡುಕಿ ಹೋಗಬೇಕಾಗಿಲ್ಲ.
7000 ಹೆಜ್ಜೆಯ ವಾಕಿಂಗ್ ಅನುಕೂಲದ ಬಗ್ಗೆ ಸಂಶೋದನೆ ಮಾಡಿದ ಯುನಿವರ್ಸಿಟಿ ಆಫ್ ಮೆಸ್ಸಾಚ್ಯೂಟ್ಸ್ ಆಮ್ಸ್ಟೆ ಯ ಸಂಶೋದಕ ಆಮಾಂಡ್ ಪಲೂಚರ ಪ್ರಯೋಗಕ್ಕೆ ವಿಶ್ವದಾದ್ಯಂತ ಪ್ರಶಂಸೆಗಳಿದೆ.
ನಾನು ಇದನ್ನು ಅಳವಡಿಸಿ ಕೊಂಡು ಹತ್ತಿರ ಹತ್ತಿರ ಎರೆಡು ವರ್ಷ ಆಯಿತು ನನಗೆ ಇದರಿಂದ ಅನೇಕ ಅನುಕೂಲ ಆಗಿದೆ, ವಿಶೇಷವಾಗಿ ತೂಕ ಇಳಿದದ್ದು, ಶುಗರ್ ನಾರ್ಮಲ್ ಆಗಿದ್ದು ಜೊತೆಗೆ ಲವಲವಿಕೆ.
ಒಂದು ಹೊತ್ತು ಅಥವ ಕೆಲವೊಮ್ಮೆ ಒ0ದರೆಡು ದಿನ ವಾಕಿಂಗ್ ಮಾಡಲಾಗದಿದ್ದರೂ ತೊಂದರೆ ಇಲ್ಲ ಆದರೆ ವಾಕಿಂಗ್ ಸಂಪೂರ್ಣ ತ್ಯಜಿಸಬೇಡಿ.
ಇದು ಸ್ಥೂಲಕಾಯದ ಸ್ತ್ರಿಯರಿಗೂ ವರದಾನ ಆದ್ದರಿಂದ ನಮ್ಮ ಆರೋಗ್ಯಕ್ಕಾಗಿ ಕನಿಷ್ಟ ಇದನ್ನು ಅಳವಡಿಸಿಕೊಳ್ಳಬಹುದು.
Comments
Post a Comment