#ರಾಜ್ಯದ_ಗೃಹ_ಮಂತ್ರಿ_ಆದದ್ದಕ್ಕೆ_ಅಭಿನಂದನೆಗಳು
1995ರಲ್ಲಿ ನಾನು ಜಿಲ್ಲಾ ಪಂಚಾಯತ ನ ಮೊದಲ ಸಭೆಗೆ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಭಾಗವಹಿಸಿದಾಗ ಅವತ್ತಿನ ಸಭಯಲ್ಲಿ ಆಗಿನ ಉಪ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು, ವಿರೋದ ಪಕ್ಷದ ನಾಯಕರಾಗಿದ್ದ ಯಡೂರಪ್ಪನವರು, ಮಂತ್ರಿಗಳಾಗಿದ್ದ ಬಸವಣ್ಯಪ್ಪರು, ಅಪ್ಪಾಜಿ ಗೌಡರು, ಅಯನೂರು ಮಂಜುನಾಥ,ಈಶ್ವರಪ್ಪನವರು, ಕುಮಾರ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಆರಗ ಜ್ಞಾನೇಂದ್ರರಿದ್ದರು.
ಆಗೆಲ್ಲ ಜಿಲ್ಲಾ ಪಂಚಾಯತ್ ಸಭೆ ಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯುತ್ತಿತ್ತು, ಜಿಲ್ಲಾ ಪಂಚಾಯತ್ ಗೆ ಸಭೆ ನಡೆಸುವಂತ ಸಭಾಂಗಣ ಇರಲಿಲ್ಲ.
ಮೊದಲ ಸಭೆಯಲ್ಲಿ ನಾನು ಮಾತಾಡಿದ್ದಕ್ಕೆ ಪಟೇಲರು ಯಡೂರಪ್ಪನವರು ಬೆನ್ನುತಟ್ಟಿದ್ದರು ಮರುದಿನ ಪತ್ರಿಕೆಗಳಲ್ಲಿ ಜಿಲ್ಲಾ ಪಂಚಾಯತ್ ಮೊದಲ ಸಭೆಯಲ್ಲಿ ಮಿಂಚಿದವರೆಂಬ ಹೆಗ್ಗಳಿಕೆಯ ವರದಿಗಳು ನನಗೆ ರಾಜಕಾರಣದಲ್ಲಿ ಆತ್ಮವಿಶ್ವಾಸ ಹೆಚ್ಚಾಯಿಸಿತು.
1995 ರಿಂದ 2000 ಇಸವಿವರೆಗೆ ಇವರೆಲ್ಲರ ಒಡನಾಟದಲ್ಲಿ ಹೆಚ್ಚು ಹತ್ತಿರ ಆದವರು ಆಯನೂರು ಮಂಜುನಾಥ್ ಮತ್ತು ಆರಗ ಜ್ಞಾನೆಂದ್ರ ,ಇಬ್ಬರದ್ದು ಸತತ ಹೋರಾಟದ ಜೀವನವೆ.
ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಯಾವಾಗಲೂ ನನಗೆ ಇವರಿಬ್ಬರ ಆನೆ ಬಲದ ಬೆಂಬಲ ಇರುತ್ತಿತ್ತು.
ಅನೇಕ ಜನಪರ ಹೋರಾಟದ ವಿಷಯ ಆರಗರಿಗೆ ತಿಳಿಸಿದಾಗ ಅವರು ವಿಧಾನಸಭಾದಲ್ಲಿ ಅದನ್ನು ಚರ್ಚಿಸುತ್ತಿದ್ದರು, ಆಗಿನ ಕರ್ನಾಟಕ ಪವರ್ ಕಾಪೋ೯ರೇಷನ್ ನಲ್ಲಿ ವರಾಹಿ ಮುಳುಗಡೆಯ ಕುಣುಬಿ ಜನಾಂಗದ ಕುಟುಂಬದ ಯುವಕನಿಗೆ ನನ್ನ ಒತ್ತಾಯದಿಂದ ಕೆಲಸ ಕೊಡಿಸಿದ್ದು ನಾನು ಮರೆಯಲಾರೆ.
ಈಗ ರಾಜ್ಯದ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರರಿಗೆ ಅಭಿನಂದಿಸುತ್ತೇನೆ ಜೊತೆಗೆ ಅವರಿಂದ ಆಗ ಬಹುದಾದ ಅವರ ಇಲಾಖೆಯ ಒಂದೆರೆಡು ಕೆಲಸ ಮಾಡಿ ಎಂದು ಒತ್ತಾಯಿಸುತ್ತೇನೆ.
ಮುಖ್ಯವಾಗಿ ಮಲೆನಾಡಿನ ಒಂಟಿ ಮನೆಗಳ ವಾಸಿಗಳ ರಕ್ಷಣೆಗಾಗಿ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಪೋಲಿಸ್ ಸಹಯೋಗದೊಂದಿಗೆ ಜನಜಾಗೃತಿ, ಆತ್ಮ ರಕ್ಷಣೆ ಬಂದೂಕು ಲ್ಯೆಸೆನ್ಸ್ ಸರಳವಾಗಿ ಶೀಘ್ರವಾಗಿ ಸಿಗುವಂತೆ, ಸಿಸಿ ಕ್ಯಾಮೆರಾ ಅಳವಡಿಕೆ, ಪ್ರತಿ ಮನೆಗಳಲ್ಲು ನಾಯಿ ಸಾಕುವಂತೆ ಸಲಹೆಗಳನ್ನು ಪೋಲಿಸ್ ಇಲಾಖೆ ಮುಖಾಂತರ ಜಾಹೀರು ಮಾಡುವ ಕೆಲಸ ಆಗಬೇಕು.
ಪ್ರತಿ ಗ್ರಾಮ/ಜನವಸತಿ ಕೇಂದ್ರದಿಂದ ಪೋಲಿಸರಿಗೆ ಗುಪ್ತ ಮಾಹಿತಿ ಪಡೆಯುವ ವ್ಯವಸ್ಥೆ ಆಗಬೇಕು.
ದ್ವೇಷ ರಾಜಕಾರಣದಿಂದ 10 - 15 ವರ್ಷದಿಂದ ರವಡಿ ಲಿಸ್ಟ್ ನಲ್ಲಿ ಇರುವವರನ್ನು ಕೈ ಬಿಡಬೇಕು.
ಈ ಮೇಲ್ಕಂಡ ವಿಚಾರ ಆರಗ ಜ್ಞಾನೇಂದ್ರರಿಗೆ ಗೊತ್ತಿಲ್ಲದದ್ದೇನಲ್ಲ ಆದರೂ ನೆನಪಿಸುತ್ತಿದ್ದೇನೆ ಪ್ರೀತಿಯಿಂದ.
Comments
Post a Comment