Skip to main content

ಹಾಲು ಮಡ್ಡಿ ಮೌಲ್ಯವರ್ಧನೆ ಮಾಡಿ ವಿಶ್ವ ವಿಖ್ಯಾತ ಅಗರ್ ಬತ್ತಿ ತಯಾರಿಕೆ ನಮ್ಮ ಸಾಗರ ತಾಲ್ಲೂಕಿನ ಪ್ರಖ್ಯಾತ ಉದ್ಯಮಿ ಪುತ್ತೂರಾಯರ ಕುಟುಂಬದಿಂದ.

#ಹಾಲುಮಡ್ಡಿ_ಮೌಲ್ಯವರ್ಧನೆ_ಮಾಡಿದ_ಮಹಿಳಾ_ಉದ್ಯಮಿ.

#ಶಿವಮೊಗ್ಗ_ಜಿಲ್ಲೆ_ಸಾಗರದ_ಈ_ಅಗರಬತ್ತಿಗೆ_ಸಾಟಿಇಲ್ಲ.

#ಹಾಲುಮಡ್ಡಿಯಿಂದ_ತಯಾರಿಸುವ_ಅಗರಬತ್ತಿ 

#ಈ_ವಿಶೇಷ_ಆಗರಬತ್ತಿ_ಕಿಲೋಗೆ_ರೂ_3200.

#ಸಾಗರದ_ಪ್ರಸಿದ್ದ_ಉದ್ಯಮಿ_ಎನ್_ಜಿ_ಪೈ_ಕುಟುಂಬದಿಂದ.

#ಶ್ರೀಗಜಾನನ_ಪಪ್ಯೂ೯ಮರಿ_ಇಂಡಸ್ಟ್ರೀಸ್ 

#ಪ್ರಸಿದ್ಧವಾಗಿರುವ_ಸ್ಯಾಂಡಲ್_ಪ್ಲೋರಾ_ಹರಿಲೀಲಾ_ವೈಷ್ಣವಿ_ಪ್ಲೋರಾ.

   ಅಂದಾಜು 2008ರಲ್ಲಿ ಸಾಗರದ ಕೊಡುಗೈ ದಾನಿ, ಪ್ರಖ್ಯಾತ ಉದ್ದಿಮೆದಾರರಾದ ಎನ್.ಜಿ. ಪೈ (ಪುತ್ತೂರಾಯರು) ಮತ್ತು ತೀನಾ ಶ್ರೀನಿವಾಸರು (ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದವರು ಒಂದು ಸಂಜೆ ನನ್ನ ಬೇಟಿಯಲ್ಲಿ ನಮ್ಮಲ್ಲಿಗೆ ಬಂದಾಗ ಆಗಷ್ಟೆ ಸಂಜೆಯ ಅಗರ್ ಬತ್ತಿ ನಮ್ಮ ಕೆಲಸದವರು ಹಚ್ಚುತ್ತಿದ್ದಾಗ ಪೈ ಅವರು ತಮ್ಮ ಸೊಸೆ ಪ್ರಾರಂಬಿಸಿರುವ ಹೊಸ ಉದ್ಯಮದ ಅಗರ್ ಬತ್ತಿ ಒಮ್ಮೆ ಬಳಸಿ ನೋಡಿ ಅಂದಿದ್ದರು ಮತ್ತು ನಮ್ಮ ಊರ ಪಕ್ಕದ ತಾಲ್ಲೂಕಿನ ಹಾಲುಗುಡ್ಡೆ ಎಂಬಲ್ಲಿ ಅವರದ್ದೆ ಹಾಲು ಮಡ್ಡಿ ತೋಟ ಮಾಡಿದ್ದು ಅದರ ಹಾಲು ಮಡ್ಡಿ ಬಳಸುತ್ತೇವೆ ಅಂದಾಗ ಕುತೂಹಲ ಉಂಟಾಗಿತ್ತು.
   ನಂತರ ಇನ್ನೊಮ್ಮೆ ಸಾಗರದ ಮಾರ್ಕೆಟ್ ರಸ್ತೆಯಲ್ಲಿರುವ ಅವರ ಕಛೇರಿಗೆ (ಹಳೇ ರೈಸ್ ಮಿಲ್) ಪೈರನ್ನು ಬೇಟಿ ಮಾಡಲು ಹೋದಾಗ ಇವರ ಸ್ಯಾಂಡಲ್ ಪ್ಲೋರಾ ಮತ್ತು ವೈಷ್ಣವಿ ಪ್ಲೋರಾ ಅಗರಬತ್ತಿ ಖರೀದಿಸಿ ತಂದಿದ್ದೆ.
   ಇದರಲ್ಲಿ ನನಗೆ ಇವತ್ತಿನವರೆಗೆ ಅತ್ಯಂತ ಇಷ್ಟ ಆಗಿರುವುದು ಸ್ಯಾಂಡಲ್ ಪ್ಲೋರಾ ಮಾತ್ರ ಈಗ ಹರಿಲೀಲಾ ಎಂಬ ಹೊಸ ಬ್ರಾಂಡ್ ಕೂಡ ಪ್ರಾರಂಬಿಸಿದ್ದಾರೆ.
  ಹಾಲು ಮಡ್ಡಿ ಇದರ ವೈಜ್ಞಾನಿಕ ಹೆಸರು AILANTHUS MALABARICA ಇದು ಹೆಚ್ಚು ಮಳೆ ಪ್ರದೇಶದ  ನೂರು ಅಡಿ  ಎತ್ತರದ ತನಕ ಬೆಳೆಯುವ ಸುಮಾರು 50 ರಿಂದ 75 ವರ್ಷ ಆಯಸ್ಸು ಹೊಂದಿದ ಮರದ ಅಂಟು ಇದು ಅರಣ್ಯ ಬೆಳೆ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿದೆ.
  ಈ ಮರದ ಅಂಟು ತೆಗೆದು ಬಳಸಲು ಅರಣ್ಯ ಇಲಾಖೆ 1990 ರ ತನಕ ಅರಣ್ಯ ಉತ್ಪನ್ನ ಸಂಗ್ರಹಕಾರರಿಗೆ ಅನುಮತಿ ನೀಡಿತ್ತು ಆದರೆ ಅವೈಜ್ಞಾನಿಕ ಮಾದರಿಯಲ್ಲಿ ಅಂಟು ತೆಗೆಯುವ ದುರಾಸೆಯ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರ ಹಣದಾಸೆಯಿಂದ ಹಾಲು ಮಡ್ಡಿ ಮರಗಳು ನಾಶವಾಗುತ್ತಿರುವ ಕಾರಣದಿಂದ ಈಗ ಅರಣ್ಯದಲ್ಲಿ ಹಾಲು ಮಡ್ಡಿ ಸಂಗ್ರಹ ನಿಷೇದ ಮಾಡಿದೆ.
  ಹಾಲು ಮಡ್ಡಿ ಸ್ವಂತ ಕೃಷಿ ಮಾಡಲು ಅನುಮತಿ ಇದೆ ಆದ್ದರಿಂದಲೇ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರಾಗಿದ್ದ ಎನ್.ಜಿ. ಪೈ ತಮ್ಮ ಸ್ವಂತ ಹಾಲು ಮಡ್ಡಿ ಪ್ಲಾಂಟೇಶನ್ ಮಾಡಿದ್ದರು ಅವರಿಗೂ ಗೊತ್ತಿರಲಿಲ್ಲ ಈ ಹಾಲು ಮಡ್ಡಿ ಇವರ ಸ್ವಂತ ಕೈಗಾರಿಕೆಗೆ ಮೂಲ ವಸ್ತು ಆಗುತ್ತೆ ಅಂತ.
  ಇವರ ಸೊಸೆ ಇದರ ಮೌಲ್ಯವರ್ದನೆ ಮಾಡಿ ಈಗ ದೇಶ ವಿದೇಶದಲ್ಲಿ ಪ್ರಸಿದ್ದಿಗೊಳಿಸಿದ್ದಾರೆ.
  ಪ್ರತಿ ತಿಂಗಳೂ ಒಂದು ಕಿಲೋ ಅಗರಬತ್ತಿ ನನ್ನ ಸಂಸ್ಥೆಗೆ ಖರೀದಿಸುತ್ತೇನೆ ಈಗಿನ ಬೆಲೆ ಕಿಲೋಗೆ 3200 , ಇದರ ಸುವಾಸನೆಯೇ ವಿಶಿಷ್ಟ ಆದ್ದರಿಂದ ನಮ್ಮ ಗ್ರಾಹಕರು ಇದು ಎಲ್ಲಿ ಸಿಗುತ್ತದೆ? ಇದ್ಯಾವ ಅಗರಬತ್ತಿ ಅಂತೆಲ್ಲ ವಿಚಾರಿಸುತ್ತಾರೆ, ಕೆಲವರಿಗೆ ಉಡುಗೊರೆಯಾಗಿಯೂ ಕೊಡುತ್ತೇನೆ.
  ಪ್ರತಿ ಗೌರಿ ಗಣೇಶ ಹಬ್ಬದಲ್ಲಿ ಮುಂಬೈ ಶಹರದಲ್ಲಿ ಈ ಅಗರಬತ್ತಿ ಗ್ರಾಹಕರ ಬೇಡಿಕೆ ಪೂರೈಸಲು ಆಗುವುದಿಲ್ಲ ಅಂತ ಮುಂಬೈ ಶಹರದ ಗೆಳೆಯರೋರ್ವರು ತಿಳಿಸಿದ್ದರು, ಆನ್ ಲೈನ್ ನಲ್ಲೂ ಸಿಗುತ್ತಿದೆ, ಪ್ರಸಿದ್ಧ ಕಾಮತ್ ಹೋಟೆಲ್ ಸರಪಳಿಯಲ್ಲಿ ದೇಶದಾದ್ಯಂತ ಮಾರಾಟಕ್ಕೆ ಇಟ್ಟಿದ್ದಾರೆ.
  ಹಾಲು ಮಡ್ಡಿ ಮೌಲ್ಯವರ್ಧನೆ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಶ್ರೀ ಗಜಾನನ ಪಪ್ಯೂ೯ಮರಿ ಇಂಡಸ್ಟ್ರಿ ನಮ್ಮ ತಾಲ್ಲೂಕಿನ ಮಹಿಳಾ ಉದ್ಯಮಿ ಒಬ್ಬರದ್ದು ಅದು ನಮ್ಮೆಲ್ಲರ ಪ್ರೀತಿ ವಿಶ್ವಾಸದ ದಿವಂಗತ ಎನ್.ಜಿ. ಪೈ (ಪುತ್ತೂರಾಯರ) ಕುಟುಂಬದ್ದು ಎಂಬುದು ಒಂದು ಹೆಮ್ಮೆಯ ವಿಷಯ.
  ಒಮ್ಮೆ ಬಳಸಿ ನೋಡಿ ನಂತರ ನೀವೇ ಅದಕ್ಕೆ ಪಿದಾ ಅಗುತ್ತೀರ ಅಂತಹ ಉತ್ಕೃಷ್ಟ ಅಗರಬತ್ತಿ ಇದು.
  50 ಗ್ರಾಂ ಪ್ಯಾಕೆಟ್ ನಲ್ಲೂ ದೊರೆಯುತ್ತದೆ ಬೆಲೆ ರೂ 160.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...