# ನನ್ನ ಇವತ್ತಿನ ವಿಶೇಷ ಅತಿಥಿ ಮಾಜಿ ಕಾನೂನು ಸಚಿವ ಹಾಲಿ ರಾಜಾಜಿ ನಗರದ ಶಾಸಕರಾದ ಶ್ರೀ ಸುರೇಶ್ ಕುಮಾರ್#
ಕನಾ೯ಟಕ ರಾಜ್ಯದಲ್ಲಿ ಸಜ್ಜನ ರಾಜಕಾರಣಿ ಅಂತ ಎಲ್ಲಾ ಪಕ್ಷದವರಿಂದ ಕರೆಸಿಕೊಳ್ಳುವ S. ಸುರೇಶ್ ಕುಮಾರ್ ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ.
ನಾನು ಅವರ ಅಭಿಮಾನಿ, ಪೇಸ್ ಬುಕ್ ನಲ್ಲಿ ಅವರನ್ನ ಹಿಂಬಾಲಿಸುತ್ತೇನೆ, ಅವರ ಯಾವುದೇ ಹೇಳಿಕೆ ಇದ್ದರೂ ತಪ್ಪದೇ ಓದುತ್ತೇನೆ.
ಸರಳ ಜೀವನ, ಆಹಾರ ಉಡುಪುಗಳ ಸುರೇಶ್ ಕುಮಾರ್ ಕೊಡಗಿನ ಹಿಂದಿನ ಚುನಾವಣೆಯಲ್ಲಿ ಸಣ್ಣ ಪಾರಂ ಹೌಸ್ ನ ಕೊಟ್ಟಿಗೆಯಲ್ಲಿ ವಾಸ್ತವ್ಯ ಹೂಡಿದ್ದರು ಅದರ ನಿತ್ಯ posting ನೋಡುತ್ತಿದ್ದೆ, ಇವತ್ತಿನ ರಾಜಕಾರಣಿಗಳು ಕಾರು ಬಾರು, ವಿದೇಶ ಪ್ರಯಾಣ, ಪಂಚತಾರ ಸೇವೆ ಬಯಸುವಾಗ ಇವರು ಸರಳ ಮಾಗ೯ದಲ್ಲಿ ಜೀವನ ಮಾಡುವುದು ಇವತ್ತಿನ ಅಪರೂಪದಲ್ಲಿ ಅಪರೂಪ.
ಇವರಿಗೆ ಡಾಕ್ಟರೇಟ್ ಕೊಡುವುದಾಗಿ ಯಾರೋ ಸಂಪಕಿ೯ಸಿದರು, ಬೇರೆಯವರಾದರೆ ಹಿಂದೆ ಮುಂದೆ ನೋಡದೆ ಹೆಸರಿನ ಮುಂದೆ ಡಾಕ್ಟರ್ ಅಂತ ಹಾಕಿ ಕೊಳ್ಳಲು ಓಡುತ್ತಿದ್ದರು ಆದರೆ ಇವರು ಅದನ್ನ ನಿರಾಕರಿಸಿದ್ದಲ್ಲದೆ ನಕಲಿ ಡಾಕ್ಟರೇಟ್ ನೀಡುವ ಆ ಸಂಸ್ಥೆಯ ಅಸಲಿಯತ್ತು ಬಯಲಿಗೆಳೆದರು.
ಸದನದಲ್ಲಿ ಇವರ ಪಕ್ಷದವರೇ ಬ್ಲೂಪಿಲಂ ವೀಕ್ಷಿಸಿ ಸುದ್ದಿ ಆದಾಗ ಇವರ ಕೋಪ ನೋಡಬೇಕಿತ್ತು, ಅಯೋಗ್ಯ ಕೆಲಸ ಮಾಡಿದ ಮಂತ್ರಿಗಳನ್ನ ಲೆಪ್ಟ್ ರೈಟ್ ಮಾಡಿದ್ದರು, ಜೀವನದಲ್ಲಿ ನಡೆ ನುಡಿ ಮತ್ತು ಆಚರಣೆಯಲ್ಲಿ ಈ ರೀತಿ ಶಿಸ್ತು ಅಳವಡಿಸಿಕೊಂಡಿರುವ ಇಂತವರು ರಾಜಕೀಯ ಪಕ್ಷದಲ್ಲಿ ಇರುವುದೂ ಅಸಾಧ್ಯ ಆದರೆ ಇದ್ದರೂ ಅತ್ಯಂತ ಕಡಿಮೆ ಅದರಲ್ಲಿ ಇವರೊಬ್ಬರು ಮಾತ್ರ.
ಇಂತವರು ಮುಖ್ಯಮಂತ್ರಿ ಆಗ ಬೇಕು ಅಂತ ನಾವೆಲ್ಲ ಅನೇಕ ಬಾರಿ ಚಚಿ೯ಸಿದ್ದೆವು.
ಇವತ್ತು ಇವರು ನನ್ನ ಕಚೇರಿಗೆ ಬಂದಿದ್ದು ನನ್ನ ಆತಿಥ್ಯ ಸ್ವೀಕರಿಸಿದ್ದು ನನಗೆ ಅತ್ಯಂತ ಸಂತೋಷ ಆಯಿತು, ಕಾಫಿ, ಟೀ ಹಾಲು ಸೇರಿಸಿದ್ದು ಇವರಿಗೆ ಆಗಿ ಬರುವುದಿಲ್ಲ, ಲೆಮನ್ ಸೋಡ, ಬ್ಲಾಕ್ ಟೀ ಸೇವಿಸಿದರು.
ವಿಶೇಷ ಅಂದರೆ ಇವರ ಸೋಷಿಯಲ್ ಮೀಡೀಯಾದ ಪೇಸ್ ಬುಕ್, ವಾಟ್ಸ್ಪ್ ಇವರೇ ನಿವ೯ಹಿಸುತ್ತಾರೆ! ಇವತ್ತಿನ ದಿನದ ರಾಜಕಾರಣಿಗಳಲ್ಲಿ ಇಂತವರು ವಿರಳ.
ಇದೆಲ್ಲ ಹೇಳಿದ್ದಕ್ಕೆ ಅವರು ಹೇಳಿದ್ದು ನಾನು ಇನ್ನು ಎಷ್ಟು ದಿನ ರಾಜಕಾರಣ ಮಾಡಬಲ್ಲೆ? ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ ಅಂದರು.
ಸ್ವಚ್ಚ, ಸಜ್ಜನ ರಾಜಕಾರಣ ಮಾಡುವ ಇಂತವರು ರಾಜಕಾರಣದಲ್ಲಿ ಯಾವತ್ತೂ ಇರಲಿ, ಮುಂದಿನ ದಿನದಲ್ಲಿ ಕನ್ನಡ ನಾಡಿನ ಮುಖ್ಯಮಂತ್ರಿಯೂ ಆಗಲಿ ಅಂತ ಹಾರೈಸಿದೆ.
Comments
Post a Comment