ನಾಡಿಗೆ ವಿದ್ಯುತ್ ನೀಡುವ ಶರಾವತಿ ನದಿ ಈ ವಷ೯ ಕೂಡ ಮಳೆ ಇಲ್ಲದೆ ನೀರು ಸುOಗ್ರಹ ಕಡಿಮೆ ಆಗಿ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ಜೊತೆಗೆ ಆಣೆಕಟ್ಟು ಕಟ್ಟಿ 50 ವಷ೯ ಆಗಿದೆ ಹೂಳು ತುಂಬಿದೆ.ಈ ಹೂಳಿನಲ್ಲಿ ಅಪಾರ ಪ್ರಮಾಣದ ಮರಳಿದೆ, ಈ ಮರಳು ಮಾರಾಟ ಮತ್ತು ಹೂಳು ತೆಗೆಯುವ ಕೆಲಸ ಮಾಡಿದರೆ ಸಕಾ೯ರಕ್ಕೆ ಯಾವುದೇ ಖಚಿ೯ಲ್ಲದೆ ಕೊಟ್ಯಾಂತರ ರೂಪಾಯಿ ಉಳಿತಾಯ, ಲಾಭ ಮತ್ತು ರಾಜ್ಯದ ಮರಳಿನ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಜಿಲ್ಲೆಯ ಪ್ರಮುಖ ಪತ್ರಿಕೆಯಾದ ಜನ ಹೋರಾಟದಲ್ಲಿ ನನ್ನ ಲೇಖನ ಕಳೆದ ವಷ೯ ಬರೆದಿದ್ದೆ. ಇದನ್ನ ಸ್ಥಳಿಯ ಜನಪ್ರತಿನಿಧಿಯಿ೦ದ ಹಿಡಿದು ರಾಜ್ಯದ ಮುಖ್ಯಮಂತ್ರಿವರೆಗೆ ಕಳಿಸಿದ್ದೆ.
ವಿಶೇಷವೆಂದರೆ ಈ ಒಂದು ವಷ೯ದಲ್ಲಿ ಯಾರೂ ಪ್ರತಿಕ್ರಿಯೆ ನೀಡಿಲ್ಲ!?
Comments
Post a Comment