HE IS ONLY MAN BROUGHT RUBBER PLANTATION TO SHIMOGA DIST KARNATAKA STATE,INDIA.
Dr P.V.Joseph is great personality,I worked with him since 1992,His work on Rubber,Ginger and Venila,comunity cultivation,self help group,co education,dairy development like we can list countless,last meeting with him was 2004,after 12 years today he knocked my door,I am very excited and feeling happy.
ಇವರು ವಿದೇಶದಲ್ಲಿ ಓದಿ ಡಾಕ್ಟರೇಟ್ ಪಡೆದ ಕೇರಳ ಮೂಲದ ಪಾದ್ರಿಗಳು, ಶಿವಮೊಗ್ಗ ಜಿಲ್ಲೆಯ ಆನಂದಪುರಂ ಸಮೀಪದ ಮುಂಬಾಳು ಎಂಬಲ್ಲಿ ಗೋಕುಲಾ ಪಾರಂ ಎಂಬ ಸಂಸ್ಥೆ ಪ್ರಾರಂಬಿಸಿದರು 1990ರಲ್ಲಿ, ಇವರ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಅಭಿವೃದ್ಧಿ, ಕುಟುಂಬಗಳ ಆಥಿ೯ಕ ಸುರಕ್ಷೆಗಾಗಿ ಸ್ವಸಹಾಯ ಸಂಘಗಳು, ಆದುನಿಕ ಕೃಷಿ ಪಾಠ, ಗ್ರಾಮೀಣ ಶಾಲಾ ಶಿಕ್ಷಕರ ಕೊರತೆ ನಿವಾರಣೆ ಮತ್ತು ಶಿಕ್ಷಕರಿಗೆ ತರಬೇತಿ ಹೀಗೆ ಹತ್ತು ಹಲವಾರು ಯೋಜನೆ ರೂಪಿಸಿ ಸುಮಾರು 12 ವಷ೯ ಈ ಭಾಗದಲ್ಲಿ ಇವರು ನಡೆಸಿದ ಕಾಯ೯ಕ್ರಮ ಇವತ್ತಿಗೂ ಜನರ ಮನದಲ್ಲಿದೆ.
ಈ ಭಾಗದಲ್ಲಿ ರಬ್ಬರ್ ಕೃಷಿ ಬರಲು ಇವರೇ ಕಾರಣ, ಆಗ ರಬ್ಬರ್ ಮಂಡಳಿ ಇಲ್ಲಿ ರಬ್ಬರ್ ಬೆಳೆಗೆ ಸಹಕಾರ ನೀಡುತ್ತಿರಲಿಲ್ಲ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ಪ್ರಯೋಗ ಆಗಿರಲಿಲ್ಲ ಇದನ್ನ ಸವಾಲಾಗಿ ಸ್ವೀಕರಿಸಿದ ಜೋಸ್ ಪಾದರ್ ಮುಂಬಾಳು, ನಾಗವಳ್ಳಿ ಮತ್ತು ಇಡುವಳ್ಳಿ ಎಂಬಲ್ಲಿ ಪ್ರಾಯೋಗಿಕ ರಬ್ಬರ್ ಪ್ಲಾOಟೇಶನ್ ಮಾಡಿಸಿದರು, 2005ರಲ್ಲಿ ರಬ್ಬರ್ ಮಂಡಳಿ ಈ ಪ್ರಾಯೋಗಿಕ ಫ್ಲಾOಟೇಶನ್ಗಳ ಆಧಾರದಲ್ಲಿ ಶಿವಮೊಗ್ಗ ಜಿಲ್ಲೆ ರಬ್ಬರ್ ಬೆಳೆಯಲು ಯೋಗ್ಯ ಎಂದು ಅಧಿಕೃತಗೊಳಿಸಿ ಆದೇಶಿಸಿತು, ಅಲ್ಲದೆ ರಬ್ಬರ್ ಮಂಡಳಿ ಪಾ|| ಜೋಸೆಫ್ರ ಶ್ರಮಕ್ಕೆ ಅಭಿನಂದನೆ ತಿಳಿಸಿದೆ.
https://youtu.be/2UF_pIRBUtU
Comments
Post a Comment