ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.
ಇವರನ್ನ ಯಾಕೆ ಸ್ಮರಿಸುತ್ತೇನೆಂದರೆ ನನ್ನ ಬಾಲ್ಯದ ಅನೇಕ ನೆನಪು, ನನ್ನ ತಂದೆಯ ಆತ್ಮೀಯ ಗೆಳೆಯರು ಹಾಗೂ ನಮ್ಮ ಮನೆತನಕ್ಕೆ ಕೃಷಿ ಜಮೀನು ನೀಡಿದ ದಾನಿಗಳು.
ನಮ್ಮ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಶ್ರೀಮತಿ ಸರಸಮ್ಮ ಸ್ಮರಣಾಥ೯ ಆನಂದಪುರಂನಲ್ಲಿ ನಾನು ಮತ್ತು ನನ್ನ ಸಹೋದರ ಕೆ.ನಾಗರಾಜ್ ನಿಮಿ೯ಸಿರುವ "ಕೃಷ್ಣ ಸರಸ" ಕನ್ವೆನ್ಷನ್ ಹಾಲ್ ಉದ್ಘಾಟನೆ ಸಂದಭ೯ದಲ್ಲಿ ನಮ್ಮ ತಂದೆಯ ಗೆಳೆಯರಿಗೆಲ್ಲ ಮುರುಘಾಮಠದ ಶ್ರೀ ನಿರಂಜನ ಜಗದ್ಗುರು ಮಲ್ಲಿಕಾಜು೯ನ ಮಹಾಸ್ವಾಮಿಯಿ೦ದ ಸನ್ಮಾನ ಮಾಡಿಸಿದ್ದೆ, ಅವತ್ತು ಶ್ರೀಯೋಮ ಕೇಶಗೌಡರಿಗೂ ಸನ್ಮಾನ ವಿತ್ತು.
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಗೌಡರನ್ನ ದಾನ ಕೊಡ ಬೇಕಾದ ಅನಿವಾಯ೯ತೆಗೆ ರಿಪ್ಪನ್‌ಪೇಟೆ ಸಮೀಪದ ದೊಡ್ಡ ಶ್ರೀಮಂತ ಮನೆತನ ತಯಾರಾಗುತ್ತೆ (ಈಗೆಲ್ಲ ಇದು ಮೌಡ್ಯ, ನಮ್ಮ ವಿದ್ಯಾದೇವತೆಯೆ ಮೂಲ ನಕ್ಷತ್ರದಲ್ಲಿ ಹುಟ್ಟಿದ್ದು ಅಂತಾರೆ ) ಆಗ ಅವರಿಗೆ ಸರಿಸಮಾನ ಎನ್ನಿಸಿದ ಆನಂದಪುರ ಸಮೀಪದ ಬಸವನಕೊಪ್ಪದ ಶ್ರೀ ಚನ್ನವೀರಪಗೌಡರಿಗೆ ದಾನ ಕೊಡುತ್ತಾರೆ, ಅವರು ಇವರನ್ನ ಸಾಕಿ ಮಗಳನ್ನ ಕೊಟ್ಟು ಮದುವೆ ಮಾಡಿ ಹಿರಿಯರಕದ ಅವರ ಜಮೀನು ಕೊಡುತ್ತಾರೆ.
ಆ ಕಾಲದಲ್ಲಿ ಲಾರಿ ಖರೀದಿಸುವುದು ಸಣ್ಣ ವಿಷಯವಲ್ಲ ಗೌಡರು ಲಾರಿ ಇಡುತ್ತಾರೆ, ಓಡಾಡಲು ರಾಜ್ ದೂತ್ ಬೈಕ್, ಆತ್ಮರಕ್ಷಣೆಗೆ ಡಬಲ್ ಬ್ಯಾರೇಲ್ ತೋಟಾ ಬಂದೂಕ್, ರಿವಾಲಾವರ್, ಸದಾ ಸೇಯಲು ಗೋಲ್ಡ ಪ್ಲೇಕ್ ಸಿಗರೇಟು ಅಪರೂಪಕ್ಕೆ ಬಿಯರ್ ಕುಡಿಯುತ್ತಿದ್ದರು, ಇದೆಲ್ಲ ಇಲ್ಲಿ ಸಿಗುತ್ತಿರಲಿಲ್ಲ ಶಿವಮೊಗ್ಗದಿಂದ ತರಿಸಿಕೊಳ್ಳುತ್ತಿದ್ದರು.
ಅವರ ಸ್ವಂತ ದುಡಿಮೆಯಲ್ಲಿ ಆಸ್ತಿ ಮಾಡಿದರು. ಏನೇ ಆದರೂ ಅವರಲ್ಲಿ ಮಾನವಿಯತೆ ಸದಾ ಇತ್ತು.ಈಗಲೂ ಅವರು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಹಾಯ ಮಾಡುತ್ತಾರೆ ಎಲ್ಲರಿಗೂ.
ನಮ್ಮ ತಂದೆ ವೈದ್ಯರಾಗಿ ಅವರಿಗೂ ಚಿಕಿತ್ಸೆ ನೀಡುತ್ತಿದ್ದರು ಆಗೆಲ್ಲ ಹತ್ತಾರು ಕಿಲೋಮೀಟರ್ ಸೈಕಲ್ಲಿನಲ್ಲೇ ಹೋಗಬೇಕಾಗಿತ್ತು; ಗೌಡರು ನಮ್ಮ ತಂದೆಗೆ ಆ ಕಾಲದಲ್ಲಿ ಹೊಸದಾಗಿ ಬಂದ ಸುವೇಗ ಮೊಪೆಡ್ ಖರೀದಿಸಲು ಸಹಾಯ ಮಾಡುತ್ತಾರೆ ಆಗ ಅದನ್ನ ಅವರು,ನಮ್ಮ ತಂದೆ ಮತ್ತು ನಾಯಕ್ ಎಂಬ ಬತ್ತದ ವ್ಯಾಪಾರಿಗಳು ಗೋವಾಕ್ಕೆ ಹೋಗಿ ತಂದಿದ್ದು ನಮ್ಮ ಊರಲ್ಲಿ ಹತ್ತಾರು ವರುಷ ದೊಡ್ಡ ಸುದ್ದಿ.
ನಮ್ಮ ಮನೆತನಕ್ಕೆ ಕೃಷಿ ಭೂಮಿ ಇರಲಿಲ್ಲ ನಮ್ಮ ಊರ ಸಮೀಪದಲ್ಲಿ ಗೌಡರ 3 ಎಕರೆ ಜಮೀನು ಇತ್ತು ಅದನ್ನ ನಮ್ಮ ತಂದೆಗೆ ಕಡಿಮೆ ದರದಲ್ಲಿ ಅಂದರೆ ಹೆಚ್ಚು ಕಡಿಮೆ ಉಚಿತವಾಗಿಯೇ ನೀಡಿದಂತೆ ನೀಡಿ ನಮಗೆ ಕೃಷಿ ಭೂಮಿ ಮಾಲಿಕತ್ವ ನೀಡಿದರು.
ನಂತರ ಆ ಜಮೀನು ನಮ್ಮ ಅಕ್ಕ ಅಂತರ್ ಜಾತಿ ವಿವಾಹವಾದಾಗ ಅವಳ ಜೀವನ ಭದ್ರತೆಗೆ ಇರಲಿ ಎಂದು ಅವಳಿಗೆ ನಮ್ಮ ತಂದೆ ನೀಡಿದರು.
ಈಗಲೂ ಸಂತೃಪ್ತ ಜೀವನ ಮಾಡುತ್ತಿರುವ ಗೌಡರು ಆಸ್ತಿಯ ನಿವ೯ಹಣೆ ಮಕ್ಕಳಿಗೆ ಸಮಾನವಾಗಿ ನೀಡಿ ನಿವೃತ್ತ ಜೀವನ ಮಾಡುತ್ತಿದ್ದಾರೆ.ಮಕ್ಕಳು ತಂದೆಯ ಗೌರಕ್ಕೆ ಚುತಿ ಬಾರದಂತೆ ಯೋಗ್ಯ ರೀತಿಯಲ್ಲಿ ಜೀವನ ನಡೆಸಿದ್ದಾರೆ.
ಆ ಕಾಲದಲ್ಲಿ ಅತ್ಯಂತ ದೈಯ೯ವಂತರೆಂಬ ಹೆಸರಿತ್ತು ಗೌಡರಿಗೆ, ಕಾನೂನು ಹೋರಾಟದಲ್ಲೂ ಅವರದ್ದು ಎತ್ತಿದ ಕೈ ಹಾಗೆ ದಾನ ದಮ೯ದಲ್ಲೂ.
ಇವರು ಇವರ ಕುಟುಂಬಕ್ಕೆ ದೇವರು ಸದಾ ನೆಮ್ಮದಿ ಮತ್ತು ಸಕಲ ಐಶ್ವಯ೯ ನೀಡಲಿ ಎಂದು ನಾವೆಲ್ಲ ಸದಾ ಹಾರೈಸುತ್ತೇವೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment