ತೇಜಸ್ವಿಯವರನ್ನ ಬೇಟಿ ಆಗಬೇಕೆಂಬ ನನ್ನ ಅಭಿಲಾಷೆ ಅಕಸ್ಮಿಕವಾಗಿ ಮತ್ತು ಅವಿಸ್ಮರಣಿಯವಾಗಿ ಆಗುತ್ತೆ ಅಂತ ಗೊತ್ತಿರಲಿಲ್ಲ, ಅದು ಹೇಗೆ ಆಯಿತು ಅಂದರೆ 2000ನೆ ಇಸವಿಯಲ್ಲಿ ಕುಪ್ಪಳ್ಳಿಯ ಕವಿಶೈಲ ರಾಷ್ಟ್ರಕ್ಕೆ ಅಪಿ೯ಸುವ ಕಾಯ೯ಕ್ರಮ ನಿಗದಿ ಆಗಿತ್ತು. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಾವೆಲ್ಲ ವಿಶೇಷ ಆಮಂತ್ರಿತರು ಆದರೆ
ಸಾಹಿತ್ಯ ಆಸಕ್ತಿ ಯಾವತ್ತೂ ಕಡಿಮೆ ಇರುವ ನನ್ನ ಜೊತೆಯ ರಾಜಕಾರಣಿ ಸದಸ್ಯರು ಈ ಕಾಯ೯ಕ್ರಮಕ್ಕೆ ಬರಲಿಲ್ಲ.
ಹಿಂದಿನ ದಿನ ಸಾಹಿತಿಗಳಾದ ಕೊಣ0 ದೂರು ವೆಂಕಪ್ಪ ಗೌಡರು ಬೆಂಗಳೂರಿಂದ ಬಂದವರು ಕುವೆ೦ಪು ಮನೆ ಲೋಕಾಪ೯ಣೆ ಕಾಯ೯ಕ್ರಮ ನೋಡಲು ಬಂದೆ, ಕರಕೊಂಡು ಹೋಗಯ್ಯ ಅಂದರು. ಸರಿ ಗೌಡರೆ ಗಣಪತ ಪನವರನ್ನು ಕರಕೊಂಡು ಹೋಗೋಣ ಅಂದೆ.
ಮರುದಿನ ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್.ಗಣಪತಿಯಪ್ಪಾ, ಕೋಣಂದೂರು ವೆಂಕಪ್ಪ ಗೌಡರೊಂದಿಗೆ ಕುಪ್ಪಳ್ಳಿಗೆ ಹೋಗಿ ಸಭಾಂಗಣ ಪ್ರದೇಶಕ್ಕೆ ಹೋದೆವು, ಮುಂದಿನ ಸಾಲಿನಲ್ಲಿ ಈ ಇಬ್ಬರು ಹಿರಿಯರನ್ನ ಕುಳ್ಳಿರಿಸಿ ಹಿಂದಿನ ಸಾಲಿನಲ್ಲಿ ಕುಳಿತು ಸಭೆ ನೋಡೋಣ ಅಂತ ಹೊರಟೆ.
ಹಿಂದಿನ ಸಾಲಿನ ಕುಚಿ೯ಯಲ್ಲಿ ಕುಳಿತು ವೇದಿಕೆ ಕಡೆ ನೋಡುತ್ತಾ ಪಕ್ಕದಲ್ಲಿ ಕುಳಿತವರ ಕಡೆ ನೋಡಿದೆ, ಅದೇನು ಆಶ್ಚಯ೯ ಅಂತಿರಿ ಎರೆಡು ಕೈ ತಲೆ ಹಿಂದೆ ಕಟ್ಟಿಕೊಂಡು ಇಡೀ ದೇಹ ಕುಚಿ೯ಯಲ್ಲಿ ತೇಲಿಸಿಕೊಂಡು ಕಾಲು ನೀಡಿ ಕುಳಿತ ಗಡ್ಡದಾರಿ ?!!
ಅಷ್ಟು ದಿನ ಯಾರನ್ನ ಬೇಟಿ ಮಾಡಬೇಕೆಂತ ಇದ್ದಿನೋ ಅವರೇ ಅನಾಯಾಸವಾಗಿ ಪಕ್ಕದಲ್ಲೇ ಹೀಗೆ ಸಿಗುತ್ತಾರೆಂದು ತಿಳಿದಿರಲಿಲ್ಲ, ಆದರೂ ಗಂಭೀರವಾಗಿ ಎಲೆ ಅಡಿಕೆ ಜಗಿಯುತ್ತಾ ತನ್ನ ತಂದೆ ಹುಟ್ಟಿ ಬೆಳೆದ ಮನೆ ಲೋಕಾಪ೯ಣೆಯ ಅಪೂವ೯ ಸಮಯ ಸವಿಯುತ್ತಿದ್ದವರನ್ನ ಹೇಗೆ ಮಾತಿಗೆ ಎಳೆಯ ಬೇಕಂತ ಆಲೋಚಿಸಿ ಮಾತಿಗೆಳೆದೆ.
ನಮಸ್ಕಾರ ಸಾರ್ ಅಂದೆ, ಅತ್ಯಂತ ನಿಲ೯ ಕ್ಷದ ಪ್ರತಿನಮಸ್ಕಾರ ಗಂಬೀರವಾಗಿ ತಲೆ ಆಡಿಸಿ ಕನಿಷ್ಟವಾಗಿ ತಿರುಗಿ ಬಂತು. ಬಿಡದೆ ನಾನು ಅರುಣ್ ಪ್ರಸಾದ್ ಅಂತ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ಅಂದಾಗ ಪ್ರತಿಕ್ರಿಯೆ ಇನ್ನೂ ಕಡಿಮೆ ಆಯಿತು,,,
ಸಾರ್ ಕೆನೆತ್ ಅಂಡರ್ ಸನ್ ಬೆಳOದೂರಿನ ನರಭಕ್ಷಕ ಕೊಲ್ಲುತ್ತಾರಲ್ಲ ಆ ಊರು ನನ್ನ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿದೆ ಅಂದ ಕೂಡಲೆ ತೇಜಸ್ವಿ ಅವರ ಗಾಂಭೀಯ೯ ಸಡಿಲವಾಯಿತು, ಆಗಲೇ ನಾನು ಇನ್ನೊಂದು ವಿಷಯ ಒಗೆದೆ, ಆ ಊರಿನ ಗುಡ್ಡದ ಮೇಲೆ ಒಂದು ಕಲ್ಲಿನ ಹುಲಿ ವಿಗ್ರಹವಿದೆ ಅದನ್ನ ತಿರುಗುಣಿಯ ಕಲ್ಲಿನ ಮೇಲೆ ಕೂರಿಸಿದ್ದಾರೆ ಅಂದೆ ಮುಂದೆ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಲಿಕಾಪಟರ್ ಬರೋ ತನಕ ನಡೆದ ಸಂಬಾಷಣೆ ಅವಿಸ್ಮರಣಿಯ .........
ಹೆಂಗೆ ಇದೇರಿ ಆ ವಿಗ್ರಹ ಅಂದರು ಕಪ್ಪು ಕಲ್ಲಿನಲ್ಲಿ ನನ್ನ ಸೊಂಟದೆತ್ತರವಿದೆ ಆ ವಿಗ್ರಹ ಯಾವ ದಿಕ್ಕಿಗೆ ನೋಡುತ್ತೆ ಆ ದಿಕ್ಕಿನ ಊರಿಗೆ ಬಂಪರ್ ಬೆಳೆ ಆಗುತ್ತೆ ಅನ್ನೋ ನಂಬಿಕೆ ಇದೆ ಹಾಗಾಗಿ ಆಸೆಬುರುಕ ಕೆಲ ರೈತರು ಆ ವಿಗ್ರಹ ಅವರವರ ಊರಿನ ದಿಕ್ಕಿಗೆ ತಿರುಗಿಸುತ್ತಾ ಇರುತ್ತಾರೆ ಅಂದೆ.
ನೀವು ಯಾಕೆ ಆ ಗುಡ್ಡಕ್ಕೆ ಹೋಗಿದ್ದಿರಿ ಅಂದರು, ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ ಸ್ಥಳೀಯರನ್ನ ಕರೆದುಕೊಂಡು ಅವರ ಹಳ್ಳಿ ಅಭಿವೃದ್ದಿಗಾಗಿ ಸ್ಥಳ ಪರಿಶೀಲನೆಗೆ ಪಾದಯಾತ್ರೆ ಮಾಡ್ತಾ ಇದ್ದೆ, ಒಮ್ಮೆ ಇಡುವಳ್ಳಿ ಚಚಿ೯ನಿಂದ ಪ್ರಾರಂಭವಾದ ನಮ್ಮ ಪಾದಯಾತ್ರೆ ಬೆಳ0 ದೂರಿಗೆ ಹೋಗುವಾಗ ಆ ಗುಡ್ಡದ ಬುಡದಲ್ಲಿ ಹೋಗುತ್ತಿದ್ದೆವು ಆಗ ಜೊತೆಗಿದ್ದ ಮಲೆಯಾಳಿ ಬಾಲಕ ಜೇಕಬ್(ಈಗ ವಕೀಲರಾಗಿದ್ದಾರೆ) ಸಾರ್ ಆ ಗುಡ್ಡದಲ್ಲಿ ಹುಲಿ ವಿಗ್ರಹ ಇದೆ ಅಂದ ತ
ದಾರಿ ಮೇಲೆ ಕೆನೆತ ಅಂಡರ್ ಸನ್ ಬಗ್ಗೆ, ಅವರು ಬೆಳ0 ದೂರಿಗೆ ಬಂದ ಬಗ್ಗೆ, ನರಭಕ್ಷಕ ಹುಲಿ ಶಿಕಾರಿ ಮಾಡಿ ಜನರ ಜೀವ ಉಳಿಸಿದ್ದರು ಅಂತೆಲ್ಲ ತಿಳಿಸಿದೆ, ಈ ಬಗ್ಗೆ ಇಂಗ್ಲಿಷ್ನಲ್ಲಿ ಬಂದ ಪುಸ್ತಕ ಅದು ಈಗ ಕನ್ನಡದಲ್ಲಿ ಅನುವಾದ ಆಗಿರುವ ಬಗ್ಗೆ ತಿಳಿಸಿದರೆ ಅವರಾರು ಈ ಬಗ್ಗೆ ತಮಗೆ ಗೊತ್ತೆ ಇರಲಿಲ್ಲ ಅಂದರು, ನಾಳೆನೆ ಆ ಪುಸ್ತಕ ಕಳಿಸುತ್ತೇನೆ ಓದಿರಿ ಅಂದೆ. ನಂತರ 10 ಪುಸ್ತಕ ಖರೀದಿಸಿ ಆ ಊರಿಗೆ ಕಳಿಸಿದ್ದೆ.
" ಆ ಬಡ್ಡಿಮಗ ಪೂಜಾರಿದೆ ಈ ಕೆಲಸ ನೋಡಿ" ಅಂತ ತೇಜಸ್ವಿ ಮುಖದ ಗಂಟು ಮಾಯವಾಗಿ ಹಸನ್ಮುಖಿಗಳಾದರು, ಅಷ್ಟರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯ ಮನೆ ಲೋಕಾಪ ೯ಣೆಗೆ ಆಗಮಿಸಿದರು, ಕವಿಯ ಕುಲೋತ್ತಮ ಪುತ್ರನನ್ನ ಗಣ್ಯರು ಕರೆದೊಯಲು ಬಂದರು, ಆಗ ತೇಜಸ್ವಿ ನನ್ನನ್ನ ವಿದಾಯ ಹೇಳಲು ಕೈಚಾಚಿ ಕೈ ಕುಲುಕಿ "ಆ ಹುಲಿ ವಿಗ್ರಹದ ಚಿತ್ರ ಕಳಿಸಿ" ಅಂದರು ಖಂಡಿತಾ ಕಳಿಸಿಕೊಡುತ್ತೇನೆ ಅಂತ ಭರವಸೆ ನೀಡಿದೆ.
ಭರವಸೆ ಈಡೇರಲಿಲ್ಲ ತೇಜಸ್ವಿ ಲೋಕ ತ್ಯಾಗ ಮಾಡಿದರು.
ಈ ಪುಸ್ತಕ ತುಂಬಾ ಚೆನ್ನಾಗಿದೆ.
ReplyDeleteಈ ಪುಸ್ತಕ ತುಂಬಾ ಚೆನ್ನಾಗಿದೆ.
ReplyDeleteಈ ಕಥೆ ನಡೆಯುವ ಕಾಲಕ್ಕೆ ಅಲ್ಲಿ ಸಾಕಷ್ಟು ಹುಲಿಗಳಿದ್ದವು. ಬೆಳ್ಳಂದೂರಿನ ನರಭಕ್ಷಕ ಹೊಡೆಯುವ ರೋಚಕತೆ ಕೆನೆತ್ ಆಂಡರ್ಸನ್‌ರ ಕೃತಿಯ ಭಾವಾನುವಾದ ತೇಜಸ್ವಿಯವರ ಕೈಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.
ReplyDeleteಸೂಪರ್ ಆಗಿದೆ
ReplyDelete