Skip to main content

ಶಿಶುನಾಳ ಶರೀಪರು ಮತ್ತು ಹರಿಕೋಡೆಯವರು

ಶಿಶುನಾಳ ಶರೀಪರ ಜೀವನ ಲೀಲಾಮೃತ ಎಂಬ ಡಾII ಮಲ್ಲಿಕಾಜು೯ನ ಸಿಂದಗಿಯುವರು ಬರೆದ ಪುಸ್ತಕ ಶ್ರೀ ಹರಿ ಕೋಡೆಯವರು 2003ರಲ್ಲಿ ನೀಡಿದ್ದರು, ನಂತರವೇ ನನಗೆ ಶಿಶುನಾಳಕ್ಕೆ ಭೇಟಿ ನೀಡಲು ಪ್ರೇರಣೆ ಆಗಿತ್ತು. ಶಿಶುನಾಳರನ್ನ ಲೋಕಪ್ರಸಿದ್ಧಿಗಾಗಿ ಪ್ರಚಾರ ,ಅವರ ಸಾಹಿತ್ಯ ಪುಸ್ತಕಕ್ಕೆ , ಸಿನಿಮಾಕ್ಕೆ, ಹಾಡಿನ ಕ್ಯಾಸೆಟ್ಗಳಿಗೆ ಅಪಾರ ಹಣ ವ್ಯಯಿಸಿದ್ದರು. ಸ್ವತಃ ಹರಿ ಕೋಡೆಯವರು ಶಿಶುನಾಳರಿಂದ ಪ್ರೇರಿತರಾಗಿದ್ದು ಪವಾಡವೆ.
ಅಪರೂಪದ ಕನ್ನಡಿಗ, ಕೋಮು ಸೌಹಾದ೯ದ ಪ್ರತೀಕ ಶಿಶುನಾಳರ ಸಾಹಿತ್ಯ, ಹಾಡು ಮತ್ತು ಅವರ ಸಮಾದಿ ಸ್ಥಳ ಜನಸಾಮಾನ್ಯರು ತಲುಪುವಂತೆ ಮಾಡಿದ ಹರಿಕೋಡೆಯವರು ಮಹಾನ್ ಸಾಧಕರು ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ದೇವರಲ್ಲಿ ಪ್ರಾಥಿ೯ ಸೋಣ

Comments