Skip to main content

ಹೊನ್ನೆ ಮರಡು ಸ್ವಾಮಿಯವರ GO GHAT ಸೈಕಲ್ನಲ್ಲಿ ಒಂದು ಸಾವಿರ ಜನರ ಪಶ್ಚಿಮ ಘಟ್ಟ ಪ್ರವಾಸ

ಹೊನ್ನೆ ಮರಡು ಸಾಗರ ತಾಲ್ಲಕಿನ ಶರಾವತಿ ನದಿಯ ಹಿನೀರಿನ ಸಣ್ಣ ಪ್ರದೇಶ ಆದರೆ ಅದೀಗ ವಿಶ್ವಮಾನ್ಯ ಪಡೆದಿದೆ, ಅಲ್ಲಿ ನೀರಿನ ಸಾಹಸ ಕ್ರೀಡೆಯ ತರಬೇತಿ, ಚಾರಣ, ಪರಿಸರ ಸಂರಕ್ಷಣೆಯ ನಿರಂತರ ಕಾಯ೯ಕ್ರಮ 25 ವಷ೯ದಿಂದ ನಿರಂತರ ನಡೆಯುತ್ತಿದೆ.
ಸ್ವಾಮಿ ಮತ್ತು ನಿಮಿಟೋ ದ೦ಪತಿಗಳು ವಿಶ್ವಮಟ್ಟದಲ್ಲಿ ವಿದೇಶಗಳಲ್ಲಿ ಇಂತಹ ಸಾಹಸ ಕಾಯ೯ಕ್ರಮದಲ್ಲಿ ಭಾಗವಹಿಸಿದ ಅನುಭವ ವಿಧ್ಯ ಪಡೆದವರು ಸನ್ಮಾನ್ಯ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಕಾ೯ರದ Explore India ಕಾಯ೯ಕ್ರಮದ ಉತ್ತೇಜನ ದಲ್ಲಿ ಹೊನ್ನೆ ಮರಡುವಿಗೆ ಬಂದವರು.
25 ವಷ೯ದಲ್ಲಿ ಇಲ್ಲಿನ ಪರಿಸರ ಕೊಂಚವು ಹಾಳಾಗದ೦ತೆ ಕಾಪಾಡಿದ್ದಾರೆ, ಶರಾವತಿ ನದಿಯ ಲಿಂಗನಮಕ್ಕಿಯಿಂದ ಶರಾವತಿ ನದಿ ಮೂಲದವರೆಗೆ ಸಣ್ಣ ದೋಣಿಗಳಲ್ಲಿ ನಡೆಸಿದ ಅಭಿಯಾನ, ಮಲೆನಾಡಿನ ದಟ್ಟ ಅರಣ್ಯದಲ್ಲಿ ನಡೆಸುವ ಚಾರಣಗಳು ಸಾವಿರಾರು ಯುವ ಉತ್ಸಾಹಿಗಳಿಗೆ ಪ್ರೇರಣೆಯಾಗಿದೆ.
ಇವರು ಈಗ ವಿಶ್ವಮಟ್ಟದ ಒಂದು ಕಾಯ೯ಕ್ರಮ ಹಮ್ಮಿಕೊಂಡಿದಾರೆ ಅದೇನೆಂದರೆ ಒಂದು ಸಾವಿರ ಜನ ಸೈಕಲ್ ನಲ್ಲಿ ಬೆಳಗಾಂನಿಂದ ಬೆಂಗಳೂರುವರೆಗೆ 22 ದಿನ ಪಶ್ಚಿಮ ಘಟ್ಟದಲ್ಲಿ ಯಾರೂ ನೋಡದ ಪ್ರದೇಶಗಳ ಸಂದಶಿ೯ಸುವ ದೊಡ್ಡ ಕಾಯ೯ಕ್ರಮ ಹಮ್ಮಿ ಕೊಂಡಿದ್ದಾರೆ ಕನಾ೯ಟಕ ರಾಜ್ಯದ ಅನೇಕ ಇಲಾಖೆಗಳು ಸಹಕಾರ ನೀಡಿದೆ.
ಮುಂದಿನ ವಷ೯ಗಳಲ್ಲಿ ಇದು ಅಂತರಾಷ್ಟ್ರ ಮಟ್ಟದ ದೊಡ್ಡ ಸಾಹಸ ಕಾಯ೯ಕ್ರಮ ಆಗಲಿದೆ.

Comments