Skip to main content

Blog number 896. ಅಭಿನಂದನೆಗಳು. ನಮ್ಮ ಹಳ್ಳಿಯ ಪಕ್ಕದೂರಿನ ನಮ್ಮ ಗೆಳೆಯರಾದ ಕ್ರಷರ್ ರಾಜಶೇಖರ ಗೌಡರ ಪುತ್ರ ರಾಹುಲ್ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂನಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ, ನೂತನವಾಗಿ ಶಿವಮೊಗ್ಗದಲ್ಲಿ ATNCC ಸಂಜೆ ಕಾಲೇಜು ಪ್ರಾರಂಬಿಸಿದ ವರ್ಷದಲ್ಲಿಯೇ ರ್ಯಾಂಕ್ ಪಡೆದು ಸರ್ವಕಾಲಿಕ ದಾಖಲೆ ಮಾಡಿದ್ದಾರೆ.

#ಬಿಕಾಂನಲ್ಲಿ_ಆರನೇ_ರ್ಯಾ0ಕ್_ಗಳಿಸಿದ_ನಮ್ಮೂರ_ಪಕ್ಕದ_ಹುಡುಗ_ರಾಹುಲ್.

#ಶಿವಮೊಗ್ಗದ_ರಾಷ್ಟ್ರೀಯ_ಶಿಕ್ಷಣಸಂಸ್ಥೆಯ_ಸಂಜೆ_ಕಾಲೇಜಿಗೆ_ಹಿರಿಮೆ.

#ಬಟ್ಟೆಮಲ್ಲಪ್ಪದ_ಕ್ರಷರ್_ರಾಜಶೇಖರಗೌಡರ_ಪುತ್ರ

#ಹಳ್ಳಿಗಾಡಿನ_ಈ_ಪ್ರತಿಭಾವಂತ_ವಿದ್ಯಾರ್ಥಿ_ಸಾಧನೆ_ಗ್ರಾಮೀಣ_ವಿದ್ಯಾರ್ಥಿಗಳಿಗೆ_ಪ್ರೇರಣೆಯಾಗಲಿ.

#ಸಂಘ_ಸಂಸ್ಥೆಗಳು_ರಾಹುಲ್_ಸಾಧನೆ_ಗುರುತಿಸಿ_ಅಭಿನಂದಿಸಬೇಕು.

   ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರ ಗೌಡರೆಂದೆ ಜನ ಕರೆಯುವ ಜಿಲ್ಲೆಯಾದ್ಯಂತ ಚಿರಪರಿಚಿತರಾದ ಈಗ ಜನರ ಆರೋಗ್ಯಕ್ಕಾಗಿ ಹೈಡ್ರೋ ವಾಟರ್ ಕಪ್ (ಆಲ್ಕಲೇನ್ ವಾಟರ್) ಅಧಿಕೃತ ಮಾರಾಟಗಾರರು.
  ಇವರ ಆರೋಗ್ಯ ಸಂಪೂರ್ಣ ಹದಗೆಟ್ಟು ನೋಡಿದವರೂ ರಾಜಶೇಖರ ಗೌಡರು ಬದುಕಲಾರರು ಎಂದು ತೀರ್ಮಾನಿಸಿದಾಗಲೆ ಗೌಡರು ಚೇತರಿಸಿಕೊಂಡಿದ್ದು ನಿತ್ಯ ಈ ಆಲ್ಕಲೇನ್ ನೀರು ಸೇವಿಸಿದ್ದರಿಂದ !!.
  ಇವರು ಸಾಗರ ತಾಲ್ಲೂಕಿನ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತನ ಘಂಟಿನ ಕೊಪ್ಪದ ಊರಿನವರು, ನನ್ನ ಅಣ್ಣ ಕೆ ನಾಗರಾಜರ ಕ್ಲಾಸ್ ಮೇಟ್, ಇವರನ್ನು ಶಾಲಾ ದಿನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದವರು, ಶಿಕ್ಷಕರು ಇವರಿಗೆ ಆರ್ಕಮಿಡಿಸ್ ಎಂದೇ ಕರೆಯುವಂತ ಬುದ್ದಿವಂತರು.
  ಘಂಟಿನ ಕೊಪ್ಪದ ಆ ಕಡೆ ದಿಂಬ ಎಂದು ಜನ ಕರೆಯುವ ಪ್ರದೇಶದ ಬಹುತೇಕ ಮನೆಗಳು ರಾಜಶೇಖರಗೌಡರ ಖುಷ್ಕಿ ಜಮೀನನಲ್ಲಿದೆ ಇವತ್ತಿಗೂ ಊರ ಜನರಿಗೆ ತೊಂದರೆ ಕೊಡದವರು.
  ಇವರ ದ್ವಿತಿಯ ಪುತ್ರ ರಾಹುಲ್ ಶಿವಮೊಗ್ಗದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ATNCC ಇವನಿಂಗ್ ಕಾಲೇಜಿನಲ್ಲಿ ಬಿಕಾಂ ಗೆ ಆರನೆ ರ್ಯಾಂಕ್ ಬಂದಿದ್ದಾರೆ ಅಷ್ಟೆ ಅಲ್ಲ ಈ ಹೊಸ ಕಾಲೇಜಿನ ಮೊದಲ ಬ್ಯಾಚಿನ ರ್ಯಾಂಕ್ ಪಡೆದ ವಿದ್ಯಾರ್ಥಿ ಎಂಬ ಸರ್ವಕಾಲಿಕ ದಾಖಲೆಯೂ ಇವರದ್ದು.
  ಯಾವುದೋ ಪತ್ರಿಕೆಯ ಸಣ್ಣ ಸುದ್ದಿ ತುಣುಕು ನೋಡಿ ರಾಹುಲ್ ರಾಜಶೇಖರಗೌಡರ ಪುತ್ರನಿರಬೇಕ೦ಬ ಅನುಮಾನದಲ್ಲಿ ರಾಜಶೇಖರ್ ಗೆ ಕೇಳಿದಾಗ ಹೌದು ಅಂದಾಗಲೇ ಖಾತ್ರಿ ಆಯಿತು,ಸ್ವ೦ತ ಖಾಸಾ ವಿಷಯಗಳನ್ನು ಅವರು ಯಾವತ್ತು ಹೇಳಿಕೊಳ್ಳುವುದಿಲ್ಲ ಆದ್ದರಿಂದ.
   ಚಾರ್ಟೆಡ್ ಅಕೌಂಟ್ ಆಗಬೇಕೆಂಬ ಅದಮ್ಯ ಉತ್ಸಾಹದಲ್ಲಿರುವ ರಾಹುಲ್ ಗೆ ದಿನ ಪೂರ್ತಿ ಬಿಕಾಂ ತರಗತಿಯಲ್ಲಿ ಕಳೆಯಲು ಕಷ್ಟ ಮತ್ತು ಇದರಿಂದ ತನ್ನ CA ಮಾಡಲು ಕಾಲಾವಕಾಶ ಸಿಗುವುದಿಲ್ಲ ಎಂಬ ಗೊಂದಲದಲ್ಲಿದ್ದಾಗಲೇ ಶಿವಮೊಗ್ಗದಲ್ಲಿ ನೂತನವಾಗಿ ಪ್ರಾರಂಭವಾದ #ಆಚಾಯ೯ತುಳಸಿ_ರಾಷ್ಟ್ರೀಯ_ಕಾಲೇಜಿನ ಸಂಜೆ ಕಾಲೇಜು ವರದಾನವಾಯಿತು.
  ಮೊನ್ನೆ 20-6-2022ರ ಸೋಮವಾರ ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ತನ್ನ ಅಮೃತ ಮಹೋತ್ಸವ ಕಾಯ೯ಕ್ರಮ ಕುವೆಂಪು ರಂಗಮಂದಿರದಲ್ಲಿ ಆಚರಿಸಿಕೊಂಡಿತು ಈ ಸಂದರ್ಭದಲ್ಲಿ ಬಿಕಾಂ.ನಲ್ಲಿ 6ನೆ Rank ಪಡೆದ ನಮ್ಮ ಊರಿನ ಪಕ್ಕದ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ಹಾಲಿ ವಾಸ ಇರುವ ರಾಹುಲ್ ಗೆ ಸ೦ಸ್ಥೆ ವತಿಯಿಂದ ಸನ್ಮಾನಿಸಲಾಯಿತು ಈ ಸಂದಭ೯ದಲ್ಲಿ ರಾಹುಲ್ ತಂದೆ, ತಾಯಿ, ಸಹೋದರಿ ಮತ್ತು ಚಿಕ್ಕಮ್ಮ ಕೂಡ ಸಾಕ್ಷಿಯಾದರು.
  ರಾಹುಲ್ ಸಹೋದರಿ ಇಂಜಿನಿಯರಿಂಗ್ ಮಾಡಿ ಇನ್ಪೋಸಿಸ್ ನಲ್ಲಿದ್ದಾರೆ, ಸಹೋದರ ಕೂಡ ಉನ್ನತ ವಿದ್ಯಾಬ್ಯಾಸ ಮಾಡಿ ಪಂಚಾಯತ್ ರಾಜ್ ಇಲಾಖೆಯಲ್ಲಿ  NREG ಯೋಜನೆಯ 5-6 ತಾಲ್ಲೂಕಿನ ತರಬೇತಿ ಜವಾಬ್ದಾರಿ ಹೊಂದಿದ್ದಾರೆ.
  ಕೆಲ ದಿನದ ಹಿಂದೆ ರಾಹುಲ್ ಅವರ ತಂದೆ ಜೊತೆಗೆ ಬಂದಾಗ ಅಭಿನಂದಿಸಿ ಚಹಾ ಕುಡಿಸಿದ್ದೆ ಈಗ ಸಂಸ್ಥೆಯ ಸನ್ಮಾನ ನೋಡಿ ತುಂಬಾ ಸಂತೋಷವಾಯಿತು, ಗ್ರಾಮೀಣಾ ಪ್ರದೇಶದ ವಿದ್ಯಾರ್ಥಿಗಳಿಗೆ ರಾಹುಲ್ ರ ಈ ಸಾಧನೆ ಪ್ರೇರಣೆ ಕೂಡ ಸ್ಥಳಿಯ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಅಭಿನಂದಿಸಲಿ.
  ರಾಹುಲ್ ಕನಸಾದ CA ಯಲ್ಲಿ ಕೂಡ ದೊಡ್ಡ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬಂದು ಇಡೀ ಕುಟುಂಬಕ್ಕೆ ಆಸರೆ ಆಗಲಿ ಎಂದು ಹಾರೈಸುತ್ತೇನೆ.
  ರಾಷ್ಟ್ರೀಯ ಶಿಕ್ಷಣ ಸಮಿತಿಯ ಸನ್ಮಾನದ ದಿನ ರಾಹುಲ್ ಹೇಳಿಕೊಂಡ ತಮ್ಮ ಮನದಾಳದ ಮಾತುಗಳ ವಿಡಿಯೋ ಇಲ್ಲಿ ಲಗತ್ತಿಸಿದೆ.
  ರಾಹುಲ್ ತಂದೆ ರಾಜಶೇಖರ ಗೌಡರ ಈ ಸೆಲ್ ನಂಬರ್ ಮೂಲಕ ರಾಹುಲ್ ಗೆ ಸಂಪರ್ಕಿಸಬಹುದು, ಅಭಿನಂದನೆ ತಿಳಿಸಬಹುದಾಗಿದೆ -99015 77575.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...