Blog number 892.ಆನಂದಪುರಂ ಇತಿಹಾಸ ಭಾಗ-74. ಆನಂದಪುರಂನ ಕೊಡುಗೈ ದಾನಿ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರ್ ತಮ್ಮ ತಂದೆ ಶ್ರೀನಿವಾಸ ಅಯ್ಯಂಗಾರ್ ಸ್ಮರಣಾರ್ಥ 1 - ಜನವರಿ - 1945 ರಲ್ಲಿ ನಿರ್ಮಿಸಿ ಊರಿಗೆ ಅಪಿ೯ಸಿದ್ದ ಮಿಡ್ಲ್ ಸ್ಕೂಲ್ ಬೃಹತ್ ಕಟ್ಟಡ ಸಂಬಂದ ಪಟ್ಟ ಇಲಾಖೆ ನಿರ್ಲಕ್ಷದಿಂದ ಶಿಥಿಲಾವಸ್ಥೆಗೆ ತಲುಪುತ್ತಿದೆ
#ಆನಂದಪುರಂನ_ಕೊಡುಗೈದಾನಿ_ರಾಮಕೃಷ್ಣ_ಆಯ್ಯ೦ಗಾರರು_ನಿರ್ಮಿಸಿದ್ದ_ಮಿಡ್ಲ್_ಸ್ಕೂಲ್
#ಅವರ_ತಂದೆ_ಶ್ರೀನಿವಾಸಯ್ಯಂಗಾರ್_ಸ್ಮಾರಕ
#ಸುಮಾರು_75_ವರ್ಷಕಾಲ_ಸ್ಥಳಿಯರಿಗೆ_5_ರಿಂದ_7ನೇ_ತರಗತಿವರೆಗೆ_ವಿದ್ಯಾಬ್ಯಾಸ_ನೀಡಿತ್ತು
#ಆನಂದಪುರಂ_ರೈಲ್ವೆಸ್ಟೇಷನ್_ಮಾರ್ಗದಲ್ಲಿದ್ದ_ಸುಸಜ್ಜಿತ_ಶಾಲೆ_ಈಗ_ಶಿಥಿಲಾವಸ್ಥೆಯಲ್ಲಿ.
ಆನಂದಪುರಂ ಎಂಬ ಹೆಸರು ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ಮತ್ತು ರಾಣಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ದುರಂತ ಪ್ರೇಮ ದಾಂಪತ್ಯದಿಂದ #ಚಂಪಕ_ಸರಸ್ಸು ಎಂಬ ಸ್ಮಾರಕ ನಿರ್ಮಿಸಿ ಈ ಪ್ರದೇಶಕ್ಕೆ ಈ ಹೆಸರು ಇಟ್ಟರು ಎಂದು ಗೆಜೆಟಿಯರ್ ನಲ್ಲಿ ಉಲ್ಲೇಖವಿದೆ.
ಕೆಳದಿ ಅರಸರ ನಂತರ ಆನಂದಪುರಂ ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತ್ತು ನಂತರ ದೇಶ ಸ್ವಾತಂತ್ರ ಪಡೆಯುವ ತನಕ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು.
ಅರಸರ ಆಡಳಿತ ಕಾಲದಲ್ಲಿ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾದ ಹಾಸನ ಜಿಲ್ಲೆಯ ಗೊರೂರಿನಿಂದ ಬಂದು ಇಲ್ಲಿ ನೆಲೆಸಿದ ರಾಮಕೃಷ್ಣ ಅಯ್ಯಂಗಾರರು ಆನಂದಪುರಂಗಾಗಿ ಶಾಲೆ, ಆಸ್ಟತ್ರೆ, ಪಶು ವೈದ್ಯ ಶಾಲೆ, ಕಾಲೇಜು, ದೇವಾಲಯ ಅಭಿವೃದ್ಧಿ ಹೀಗೆ ಅನೇಕ ಜನ ಉಪಯೋಗಿ ಕಾರ್ಯ ಮಾಡುತ್ತಾರೆ.
1952 ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀರ್ಥಹಳ್ಳಿ ಜಂಟಿ ಕ್ಷೇತ್ರದಿಂದ ಇವರ ಪುತ್ರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಖ್ಯಾತ ವಕೀಲರಾಗಿದ್ದ ಬದರೀನಾರಾಯಣ ಅಯ್ಯಂಗಾರರು ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಆದರೆ ಇವರು ಕಾಗೋಡು ಹೋರಾಟದ ನೇತೃತ್ವ ವಹಿಸಿ ಪ್ರಖ್ಯಾತರಾಗಿದ್ದ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ ಇದರಿಂದ ದಾನಿಗಳಾದ ರಾಮಕೃಷ್ಣ ಅಯ್ಯಂಗಾರ್ ಹೃದಯಾಘಾತದಿ೦ದ ಮೃತರಾಗುತ್ತಾರೆ.
1957 ರ ಎರಡನೆ ಚುನಾವಣೆಯಲ್ಲಿ ಬದರಿನಾರಾಯಣ ಅಯ್ಯಂಗಾರರು ಶಾಂತವೇರಿ ಗೋಪಾಲಗೌಡರನ್ನು ಸೋಲಿಸುತ್ತಾರೆ, 1972ರಲ್ಲಿ ದೇವರಾಜ ಅರಸರ ಸಂಪುಟದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಾಗಿ ಮೈಸೂರು ರಾಜ್ಯ #ಕನಾ೯ಟಕ_ರಾಜ್ಯ ಎಂದು ಮರು ನಾಮಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಈ ಅವದಿಯಲ್ಲಿ ಆನಂದಪುರಂಗೆ ಸಕಾ೯ರಿ ಪದವಿ ಪೂರ್ವ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ರಾಂಚ್ ಮುಂತಾದ ಅನೇಕ ಅಭಿವೃಧ್ಧಿ ಕೆಲಸ ಮಾಡಿಸುತ್ತಾರೆ.
ಇವರ ಅವದಿಯಲ್ಲಿ ಪ್ರದಾನ ಮಂತ್ರಿ ಜವಾಹರಲಾಲ್ ನೆಹರೂ ಮತ್ತವರ ಪುತ್ರಿ ಜೋಗ್ ಜಲಪಾತ ವೀಕ್ಷಣೆಗೆ ಹೋಗುವ ಮಾರ್ಗದಲ್ಲಿ ಆನಂದಪುರ೦ನ ಪ್ರೌಡ ಶಾಲೆ ಎದರು ವಿದ್ಯಾರ್ಥಿಗಳಿಂದ ಸ್ವಾಗತ ಸ್ವೀಕರಿಸಿ ನೆನಪಿಗಾಗಿ ಗಿಡ ನೆಡುತ್ತಾರೆ ಆಗ ಜಿಲ್ಲೆಯ ಮೊದಲ ಸಂಸದ ಕಾಗೋಡಿನ ಕೆ.ಜಿ. ಒಡೆಯರ್ ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿರುತ್ತಾರೆ.
ಭೂದಾನ ಚಳವಳಿಯ ನೇತಾರ ಆಚಾರ್ಯ ವಿನೋಬಾ ಭಾವೆಯವರನ್ನು ಆನಂದಪುರಂಗೆ ಕರೆಸಿ ಭೂದಾನದ ಕಾರ್ಯಕ್ರಮವನ್ನು ಎಣ್ಣೆ ಕೊಪ್ಪದ ಸರ್ದಾರ್ ಮಲ್ಲಿಕಾರ್ಜುನಗೌಡರ ನೇತೃತ್ವದಲ್ಲಿ ನಡೆಸುತ್ತಾರೆ.
ಹಾಗಾಗಿ ಆನಂದಪುರಂ ಚರಿತ್ರೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕ ಅವರ ಸ್ಥಳಿಯ ಬೆಸ್ತರ ರಾಣಿ ಚಂಪಕಾ ಮತ್ತು ರಾಮಕೃಷ್ಣ ಅಯ್ಯಂಗಾರರ ಕುಟುಂಬದ ನೆನಪು ಚಿರಸ್ಥಾಯಿಯಾಗಿ ಉಳಿಯುತ್ತದೆ.
1945ರಲ್ಲಿ ಆನಂದಪುರಂನಲ್ಲಿ ರಾಮಕೃಷ್ಣ ಅಯ್ಯ೦ಗಾರರು ತಮ್ಮ ತೀರ್ಥರೂಪ ತಂದೆಯವರಾದ ಶ್ರೀನಿವಾಸ ಆಯ್ಯ೦ಗಾರ್ ಸ್ಮರಣಾರ್ಥ ಮಿಡ್ಲಿಸ್ಕೂಲ್ (ಈಗ ಇದನ್ನು ಹಿರಿಯ ಪ್ರಾಥಮಿಕ ಶಾಲೆ ಎಂದು ಕರೆಯುತ್ತಾರೆ) ಆನಂದಪುರಂ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಿರ್ಮಿಸುತ್ತಾರೆ, ಇದರ ಹಿಂದಿನ ಬಯಲು ಆ ಕಾಲದ ಕ್ರೀಡಾಂಗಣ ಆಗಿತ್ತು.
#This_Building_of_Middleschool_AnandapuramDonated_by_Mr_Ramakrishnaiyangar
#In_Loving_Memory_of_His_Revered_Father_Sri_Srinivasaiyangar_Dated_1_1_1945.
ಇಂತಹ ಚಾರಿತ್ರಿಕ ಇತಿಹಾಸ ಉಳ್ಳ ದಾನಿಗಳಿಂದ ನಿರ್ಮಿಸಿದ ಶಾಲೆ ಇತ್ತೀಚೆಗೆ ಸರ್ಕಾರದ ಹೊಸ ಯೋಜನೆ ಮಾಡೆಲ್ ಎಜುಕೇಶನ್ ಯೋಜನೆಯಲ್ಲಿ 5ನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಕಡೆ ನಡೆಸಲು ಈ ಕಟ್ಟಡದಿಂದ ಶಾಲೆ ತೆರವು ಮಾಡಿ ಆನಂದಪುರಂನ ಇದೇ ಅಯ್ಯಂಗಾರರ ಕುಟುಂಬ ನಿರ್ಮಿಸಿದ ಪದವಿ ಪೂರ್ವ ಕಾಲೇಜು ಮತ್ತು ಪ್ರೌಡ ಶಾಲಾ ಕಟ್ಟಡ ಸಂಕೀರ್ಣಕ್ಕೆ ವರ್ಗಾಯಿಸಿದ್ದಾರೆ ಇದರಿಂದ 77 ವರ್ಷದ ಈ ಮಿಡ್ಲ್ ಸ್ಕೂಲ್ ಕಟ್ಟಡ ಬೇರಾವುದಾದರು ಸದುದ್ದೇಶಕ್ಕೆ ವಹಿಸಿಕೊಟ್ಟಿದ್ದರೆ ಈಗ ಇದು ಈಗಿನ ಶಿಥಿಲಾವಸ್ಥೆಗೆ ಹೋಗುತ್ತಿರಲಿಲ್ಲ.
ಈ ಶಾಲೆಯ ಆವರಣದಲ್ಲಿ ಆ ಕಾಲದ ಮುಖ್ಯೋಪಾಧ್ಯಯರಾಗಿದ್ದ #ಜೋ_ನೀಲಕಂಠಪ್ಪ ಮತ್ತು ದೈಹಿಕ ಶಿಕ್ಷಕರಾಗಿದ್ದ #ಕೊಟ್ರಪ್ಪ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸಿ ನಿರ್ಮಿಸಿದ #ಶಿವಪ್ಪನಾಯಕ_ರಂಗಮಂದಿರ ಕೂಡ ಹಾಳಾಗುತ್ತಿದೆ.
ಈ ಶಾಲೆಗೆ ಆಚಾರ್ಯ ವಿನೋಬಾ ಭಾವೆ ಬಂದಾಗ ಸಮೀಪದ ಇರುವಕ್ಕಿಯ ಕು೦ಬಾರ ಬಸಪ್ಪರ ತಂದೆ ತಮ್ಮ ಫಲ ಭರಿತ 5 ಎಕರೆ ನೀರಾವರಿ ಜಮೀನು ಭೂದಾನ ಮಾಡಿದ್ದರು.
ಇದನ್ನು ಸ್ಥಳಿಯ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಮತ್ತು ಸ್ಥಳಿಯ ಸಾಹಿತ್ಯ ಪರಿಷತ್ ತಮಗೆ ವಹಿಸಿಕೊಡಿ ಇದನ್ನು ಉಳಿಸಿ ಬಳಿಸಿ ಸಂರಕ್ಷಣೆ ಮಾಡುತ್ತೇವೆಂದು ಮಾಡಿದ ಮನವಿ ತಾಲ್ಲೂಕು ಆಡಳಿತದಲ್ಲಿ ಕಳೆದು ಹೋಗಿದೆ.
ಈಗ ಇದು ಗುಜರಿ ಆಯುವವರ ಗೊಡಾನ್ ಆಗಿದೆ, ಮಳೆ ಗಾಳಿಗೆ ಹೆಂಚುಗಳು ಹಾರಿ ಹೋಗಿದೆ, ಬೋರ್ಡ್ - ಹಿಂದಿನ ಪೋಟೋಗಳೆಲ್ಲ ಚೆಲ್ಲಾಪಿಲ್ಲಿ ಆಗಿದೆ.
1945ರಲ್ಲಿ ಊರಿಗಾಗಿ ತನ್ನ ತಂದೆಯ ನೆನಪಿಗಾಗಿ ಕಟ್ಟಿಸಿ ಕೊಟ್ಟ ಶಾಲೆ ಇವತ್ತು ಅವನತಿ ಅಂಚಿಗೆ ತಲುಪಿದ್ದು ವಿಷಾದನೀಯ, ಊರವರೆಲ್ಲ ಸೇರಿ ಸಮಿತಿ ರಚಿಸಿ ತಕ್ಷಣ ಈ ಶಿಥಿಲವಾಗಿರುವ ಉಪಯೋಗಿಸದ ಈ ಶಾಲೆ ಸ್ವಚ್ಚಗೊಳಿಸಿ ಊರಿನ ಉಪಯೋಗಕ್ಕೆ ಬಳಕೆ ಮಾಡಲು ಮುಂದಾಗಬೇಕು.
ಇದಕ್ಕೆ ಸ್ಥಳಿಯ ಗ್ರಾಮ ಪಂಚಾಯತ್ ಮತ್ತು ತಾಲುಕು ಆಡಳಿತ ಬೆಂಬಲಿಸುವಂತೆ ಶಾಸಕರು ಆದೇಶಿಸಬೇಕು ಇದು ಆನಂದಪುರಂನ ಇತಿಹಾಸ ಹೇಳುವ ಸ್ಮಾರಕ ಕೂಡ.
Comments
Post a Comment