Blog number 888,ಜಾತಿ ಧರ್ಮ ಮೀರಿದ ಮನುಷ್ಯತ್ವದ ಇಂತಹ ಯುವಕರು ಪ್ರತಿ ಹಳ್ಳಿಯಲ್ಲಿರಬೇಕು, ಜಾತ್ಯಾತೀತ ನಾಯಕರಾಗಿದ್ದ ದಿವಂಗತ ಹಾಜಿ ಗನ್ನಿ ಸಾಬರ ಕಿರಿಯ ಪುತ್ರ ಜಿಯಾವುಲ್ಲಾ ನಮ್ಮ ಊರಿನ ಸರ್ವ ಜನಾಂಗದ ಸರ್ವಪ್ರಿಯ ಯುವ ಮುಂದಾಳು
#ನಮ್ಮ_ಊರ_ಜಾತ್ಯಾತೀತ_ಯುವ_ಮುಂದಾಳು.
#ಹಿಂದೂ_ಮುಸ್ಲಿಂ_ಸೌಹಾರ್ದತೆಗೆ_ಮುಂದುವರಿದ_ಕುಟುಂಬ_ಸದಸ್ಯ.
#ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರು.
ಜಿಯಾ ಉಲ್ಲಾ ನಮ್ಮ ಆತ್ಮೀಯರಾಗಿದ್ದ ದಿವಂಗತ ಹಾಜಿ ಗನ್ನಿ ಸಾಹೇಬರ ಕಿರಿಯ ಪುತ್ರ, ಇಪ್ಪತ್ತು ವಷ೯ದ ಹಿಂದೆ ಸಾಗರ ತಾಲ್ಲೂಕಿನಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳಾದಾಗ ಅದು ಸಾಗರ ಪಟ್ಟಣದಿಂದ ಶುರುವಾಗಿ ತಾಲ್ಲೂಕಿನ ತಾಳಗುಪ್ಪ ಮತ್ತು ತ್ಯಾಗರ್ತಿ ಅಂತ ಊರುಗಳಿಗೆ ಹಬ್ಬಿತ್ತು ಆದರೆ ಆ ಕಾಲದಲ್ಲಿ ಆರು ಮಸೀದಿಗಳಿರುವ ಆನಂದಪುರಂ ಹೋಬಳಿಯಲ್ಲಿ ಇಂತಹ ಘಟನೆ ಉದ್ಭವಿಸದಿರಲು ಗನ್ನಿಸಾಹೇಬರಂತವರ ಯೋಗ್ಯ ನಾಯಕತ್ವ.
ಮರುದಿನ ಅಂತಹ ಗಲಾಟೆಯ ಕಿಡಿ ಹತ್ತುವ ಸೂಚನೆ ಗೊತ್ತಾಗಿ ತಡ ರಾತ್ರಿಯಲ್ಲಿ ಎರೆಡೂ ಗುಂಪಿನ ಯುವಕರನ್ನು ಒಂದು ಗೂಡಿಸಿ ಅವರಿಗೆ ಗನ್ನಿಸಾಹೇಬರು ಹೇಳಿದ ಬುದ್ದಿ ಮಾತು ಮರುದಿನ ಇಡೀ ಹೋಬಳಿ ಶಾಂತಿ ಕಾಪಾಡಿತು, ಯುವಕರ ಹಿಂದಿದ್ದ ಕಿಡಿಗೇಡಿಗಳಿಗೆ ನಿರಾಶೆ ಆಗಿತ್ತು.
S.S. L.C ನಂತರ ಅವರ ದಮ೯ದ ಪಾಠ ಕಲಿತು ಕೆಲ ಕಾಲ ಮಸೀದಿ ಹಜರತ್ ಆಗಿ ನಂತರ ವಿದೇಶದಲ್ಲಿ ಕೆಲಸ ಮಾಡಿ ಊರಿಗೆ ಬಂದು ಕೆಲ ಕಾಲ ಹೋಟೆಲ್ ನಡೆಸಿ ಕೊರಾನ ಕಾಲದಲ್ಲಿ ಅದನ್ನು ನಿಲ್ಲಿಸಿ ನಮ್ಮ ಊರಲ್ಲಿ ಹೋಲ್ ಸೇಲ್ ದಿನಸಿ ಅಂಗಡಿ ಪ್ರಾರಂಬಿಸಿದ್ದಾರೆ, ಇದು ನಮ್ಮ ಊರಿನ ಮೊದಲ ಸುಸಜ್ಜಿತ ದಿನಸಿ ಅಂಗಡಿ ನಾನು ನಮ್ಮ ಮನೆ ಬಳಕೆಗೆ, ಹೋಟೆಲ್ ಗೆ ಇವರ ಅಂಗಡಿಯಿಂದನೇ ದಿನಸಿ ಖರೀದಿಸುತ್ತೇನೆ.
ಎರೆಡು ವರ್ಷದ ಹಿಂದೆ ಆನಂದಪುರಂ ಮಾರಿ ಜಾತ್ರೆಯಂದು ಆನಂದಪುರಂ ರಾಷ್ಟ್ರೀಯ ಹೆದ್ದಾರಿ ವಾಹನ ದಟ್ಟಣೆಯಿಂದ ರೋಡ್ ಬ್ಲಾಕ್ ಆಗಿ ಕೆಲ ಕಿಲೋ ಮೀಟರ್ ದೂರದವರೆಗೆ ವಾಹನ ಸಂಜೆ 6.30 ರಿಂದ ರಾತ್ರಿ 10 ರ ತನಕ ಬಂದ್ ಆಗಿತ್ತು ಯಾರಿಗೂ ಏನೂ ಮಾಡಲು ತೋಚಲಿಲ್ಲ ಪೋಲಿಸರು ಕಡಿಮೆ ಸಂಖ್ಯೆಯಲ್ಲಿದ್ದರು ಈ ಸಮಯದಲ್ಲಿ ಜಿಯಾವುಲ್ಲಾ ತನ್ನದೇ ಕೆಲ ಗೆಳೆಯರ ಜೊತೆ ಮಾಡಿಕೊಂಡು ಸತತ ಒಂದೆರೆಡು ಗಂಟೆ ಶ್ರಮಪಟ್ಟು ತನ್ನದೇ ಬುದ್ದಿವಂತಿಕೆಯಿಂದ ಸಂಚಾರ ಸುಗಮ ಮಾಡಿದ್ದು ನಾನು ಸ್ವತಃ ನೋಡಿದ್ದೆ.
ಊರಲ್ಲಿ ಏನೇ ತೊಂದರೆ ಆದರೂ ಮುನ್ನುಗ್ಗಿ ಅದನ್ನು ಪರಿಹರಿಸಲು ಪ್ರಯತ್ನಿಸುವ ದೇಶದ ಕಾನೂನು ಸಂವಿದಾನ ಗೌರವಿಸುವ,ಎಲ್ಲಾ ದರ್ಮಿಯರನ್ನು ಅವರ ಆಚರಣೆ ಗೌರವಿಸುವ ಜೀಯಾವುಲ್ಲಾ ನಮ್ಮ ಊರಿನಲ್ಲಿ ಸರ್ವಜನಾ೦ಗದ ಸರ್ವಪ್ರಿಯ ವ್ಯಕ್ತಿ.
ಕೊರಾನ ಬಂದಾಗ ಆನಂದಪುರಂ ಜಾಮಿಯ ಮಸೀದಿ ಎದರು ಅವರ ಧರ್ಮದ ಗುರುಗಳು ಮತ್ತ ಮತ್ತು ಮುಖಂಡರನ್ನು ಸೇರಿಸಿ ಸರ್ಕಾರದ ಲಾಕ್ ಡೌನ್ ನಿಯಮದಂತೆ ಸಾರ್ವಜನಿಕ ಪ್ರಾರ್ಥನೆ ರದ್ದು ಮಾಡಿದ್ದನ್ನು ಪಾಲಿಸುವಂತೆ ಇವರು ಕನ್ನಡದಲ್ಲಿ ಮಾಡಿದ ವಿನಂತಿಯ ವಿಡಿಯೋ ವೈರಲ್ ಆಗಿ ಲಕ್ಷಾಂತರ ಜನ ವೀಕ್ಷಿಸಿದ್ದು ದಾಖಲೆ ಆಗಿತ್ತು.
ಇವರು ಸಾಮಾಜಿಕ ಜಾಲ ತಾಣದಲ್ಲಿ ಸರ್ವ ಧರ್ಮ ಸಹಿಷ್ಣುತೆ ಸಾರುವ ವಿಡಿಯೋಗಳು, ಮತಾಂದರ ಕೆಟ್ಟ ಬರಹಗಳಿಗೆ ತಿಳಿ ಹೇಳುವ, ಸ್ಟದರ್ಮಿಯರಿಗೆ ಯಾರದೇ ಪ್ರಚೋದನೆಗೆ ಒಳಗಾಗದಂತೆ, ದೇವರ ಮೇಲಿನ ಭಕ್ತಿ ಆಚರಣೆಗಳ ಅರ್ಥ, ದರ್ಮಗ್ರಂಥಗಳ ಸಾರಗಳನ್ನು ಮತ್ತು ಮೂಡನಂಬಿಕೆಗಳನ್ನು ನಂಬದಂತೆ ಆಚರಿಸದಂತೆ ಹಾಕುವ ಪೋಸ್ಟ್ ಗಳು ಸಾವಿರಾರು ಜನ ನೋಡುತ್ತಾರೆ.
ನನ್ನ ಎರಡನೆ ಪುಸ್ತಕ ಸಣ್ಣ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಪುಸ್ತಕದಲ್ಲಿ ಕೆಲವು ಕಥೆಗಳಲ್ಲಿ ನಮ್ಮ ಗನ್ನಿಸಾಹೇಬರ ಉಲ್ಲೇಖವಿದೆ ಈ ಕಥಾ ಸಂಕಲನ ಗನ್ನಿ ಸಾಹೇಬರ ಕಿರಿಯ ಪುತ್ರ ಓದುವ ಹವ್ಯಾಸ ಇರುವ ಜೀಯಾವುಲ್ಲಾಗೆ ಮೊನ್ನೆ ಅವರ ಅಣ್ಣನ ಮಗಳ ವಿವಾಹ ಆಹ್ವಾನ ಪತ್ರಿಕೆ ನೀಡಲು ಬಂದಾಗ ನೀಡಿದೆ, ಇಬ್ಬರೂ ಸೇರಿ ಅವರ ತಂದೆಯ ನೆನಪಿನಲ್ಲಿ ಕೆಲ ಘಟನೆ ನೆನಪಿಸಿಕೊಂಡೆವು.
Comments
Post a Comment