Blog number 881, ಸಂಬಾವಿತ ಯೋಗ್ಯ ಕಲಾವಿದ ವಿಜಯ್ ಮತ್ತು ಅವರ ಸಂಸ್ಥೆ ವಿಜಯ ಆರ್ಟ್ಸ್ ನ 30 ವರ್ಷದ ಹಳೆಯ ಗ್ರಾಹಕ ನಾನು,ಸ್ಥಳಿಯ ಕಲಾವಿದರಿಗೆ ಸ್ಥಳಿಯರಿಂದ ಬೆಂಬಲ ಪ್ರೋತ್ಸಾಹ ಸಿಗುವಂತಾಗಲಿ
#ವಿಜಯ_ಆರ್ಟ್ಸ್_ವಿಜಯ
#ನಾನು_ಕಳೆದ_ಮುವ್ವತ್ತು_ವರ್ಷದಿಂದ_ಇವರ_ಗ್ರಾಹಕ.
#ಸೌಮ್ಯ_ಸ್ವಬಾವದ_ಸಜ್ಜನ.
1992 ರಿಂದ ಅಂದರೆ ಕಳೆದ 30 ವರ್ಷದಿಂದ ನಾನು ವಿಜಯ ಆರ್ಟ್ಸ್ ನ ಗ್ರಾಹಕ ಅಂದರೆ ಆಗೆಲ್ಲ ಹೋರಾಟ, ಸಭೆ ಸಮಾರಂಭ ಅಂದರೆ ಬಿಳಿ ಬಟ್ಟೆಯ ಮೇಲೆ ಬ್ರಷ್ ನಿಂದ ನೀಲಿ-ಹಸಿರು -ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬ್ಯಾನರ್ ಬರೆಯುವ ಕಾಲ.
(ಇದು 21- ಜನವರಿ -2004 ರಲ್ಲಿ ನನ್ನ ಸಾಗರ ತಾಲ್ಲೂಕ್ ಪಾದಯಾತ್ರೆಗೆ ವಿಜಯ ಬರೆದ ಬ್ಯಾನರ್ ಇದೇ ಬಟ್ಟೆಬ್ಯಾನರ್ ನ ಕೊನೆಯದ್ದು ನಂತರ ಎಲ್ಲಾ ಪ್ಲೆಕ್ಸ್ ಕಾಲ)
ಆನಂದಪುರಂನ ದಾಸಕೊಪ್ಪದ ವಿಜಯ ಆನಂದಪುರಂನ ಮೊದಲ ಬ್ಯಾನರ್ ಆರ್ಟಿಸ್ಟ್ ಅದಕ್ಕೂ ಮೊದಲು ಸಾಗರದ ಪ್ರಖ್ಯಾತ ಕಲಾವಿದರಾದ ಮಚಾದೋ, ಶಾಂತಾ ಆರ್ಟ್ಸ್ ಹತ್ತಿರವೇ ಹೋಗಿ ಬ್ಯಾನರ್ ಬರೆಸಿಕೊಂಡು ಬರಬೇಕಾಗಿತ್ತು.
1992 ರಿಂದ 2002ರ ತನಕ ಕೈ ಬರಹದ ಬ್ಯಾನರ್ ಕಾಲ ಕಲಾವಿದರಿಗೆ ಕೈ ತುಂಬಾ ಕೆಲಸ, ಬೋರ್ಡ್ ಕೂಡ ಕೈ ಬರಹದಲ್ಲಿ ಬರೆಯುತ್ತಿದ್ದರು, ವಾಹನಗಳ ನಂಬರ್ ಪ್ಲೇಟ್ ಕೂಡ ಆದರೆ ಈಗ ಕಾಲ ಬದಲಾಗಿದೆ ಪ್ಲೆಕ್ಸ್, ಸ್ಟಿಕರ್ ಕಟಿಂಗ್ ಗಳು ಬಂದಿದೆ, ಕಲಾವಿದರ ಕೆಲಸವೆಲ್ಲ ಕಂಪ್ಯೂಟರ್ ಮುಂದೆ ಕುಳಿತು ಡಿಸೈನ್ ಮಾಡಿ ಯಂತ್ರದಲ್ಲಿ ಮುದ್ರಿಸುವ ಕೆಲಸ.
ಆದ್ದರಿಂದ ಅನೇಕ ಕಲಾವಿದರು ಈ ಕ್ಷೇತ್ರವನ್ನೆ ಬಿಟ್ಟು ಬೇರೆ ಕೆಲಸಕ್ಕೆ ಬದಲಾದರು.
ಆನಂದಪುರಂನ ವಿಜಯ ಮಾತ್ರ ಮುವ್ವತ್ರು ವರ್ಷದಿಂದ ಇದೇ ವೃತ್ತಿಯಲ್ಲಿ ಯಶಸ್ವಿಯಾಗಿ ಮುಂದುವರಿದಿದ್ದಾರೆ ಸ್ಥಳಿಯ ಪ್ಲೆಕ್ಸ್ ಆರ್ಡರ್ ಪಡೆದು ಗ್ರಾಹಕರ ಅಪೇಕ್ಷೆಯಂತೆ ಕಂಪ್ಯೂಟರ್ ಡಿಸೈನ್ ಮಾಡಿ ಪ್ರೂಪ್ ಗ್ರಾಹಕರು ಅನುಮೋದಿಸಿದ ನಂತರ ಶಿವಮೊಗ್ಗದಿಂದ ಪ್ಲೆಕ್ಸ್ ಮಾಡಿಸಿ ತಂದು ಅಳವಡಿಸಿಕೊಡುತ್ತಾರೆ.
ಸೌಮ್ಯ ಸ್ವಬಾವದ ಹಣದ ಹಪಾಹಪಿ ಇಲ್ಲದ, ತನ್ನದೆಷ್ಟೇ ಜೀವನದ ನೋವಿದ್ದರು ಗ್ರಾಹಕರ ಹತ್ತಿರ ಹಸನ್ಮುಖರಾಗಿ ವ್ಯವಹರಿಸುತ್ತಾರೆ.
ಓದುವ ಹವ್ಯಾಸ, ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ವಿಷಯ ತಿಳಿದುಕೊಳ್ಳುವ ವಿಜಯ್ ಎಂದರೆ ನನಗೆ ಅಚ್ಚುಮೆಚ್ಚು,ನಮ್ಮ ಊರಿನ ವರಸಿದ್ಧಿವಿನಾಯಕ ದೇವರ ರಥೋತ್ಸವ - ಜಾತ್ರೆಯ ಪ್ರಚಾರಕ್ಕೆ ಪ್ರತಿ ವರ್ಷ ಪ್ಲೆಕ್ಸ್ ಮಾಡುವುದು ವಿಜಯರದ್ದೆ ಕೆಲಸ 16 ವರ್ಷದಿಂದ ಅವರೇ ಈ ಕೆಲಸ ನಿರಂತರ ಮಾಡುತ್ತಾ ಇದ್ದಾರೆ.
ಮೊನ್ನೆ ನಮ್ಮ #ಚಂಪಕಾ_ಪ್ಯಾರಡೈಸ್ ಪುನರಾಂಭಕ್ಕಾಗಿ ಹೊಸ ಬೋರ್ಡ್ ಗಳನ್ನು ವಿಜಯ್ ಸುಂದರವಾಗಿ ಮಾಡಿ ತಂದಿದ್ದಾರೆ, ಪ್ರತಿ ಊರವರೂ ಅವರವರ ಊರಿನ ಸ್ಥಳಿಯ ಕಲಾವಿದರಿಗೆ ಅವಕಾಶ ನೀಡಿ ಅವರ ಆರ್ಥಿಕ ಸದೃಡತೆಗೆ ಈ ಮೂಲಕ ಸಹಾಯ ಮಾಡಬಹುದು.
Comments
Post a Comment