Blog number 901. ಉಡುಪಿ ಗುಳ್ಳ ಬದನೆಕಾಯಿಯ ಮಿನಿಯೇಚರ್ ಎಂದು ಕರೆಯಬಹುದಾದ ಸುಂಡಿ ಕಾಯಿ, ಉಸ್ತಿ ಕಾಯಿ, ಕುದನೆ ಕಾಯಿ ಎಂಬ Turkish berry ಎಂಬ ಬದನೆ ಪ್ರಬೇದ.
#ಇದರ_ಗರಿಷ್ಟ_ಗಾತ್ರ_5_ಸೆ೦ಟಿಮೀಟರ್_ಮಾತ್ರ
#ತಮಿಳುನಾಡಿನಲ್ಲಿ_ಸುಂಡೆಕಾಯಿ_ಮಂಗಳೂರು_ಕಡೆ_ಕುದನೆಕಾಯಿ_ಎಂದು_ಕರೆಯುತ್ತಾರೆ
#ಉಸ್ತೀ_ಕಾಯಿ_ಎಂದೂ_ಕರೆಯುತ್ತಾರೆ
#Turkeyberry_ಇಂಗ್ಲೀಷಲ್ಲಿ.
ತಮಿಳುನಾಡಿನ ಕೆಲ ಭಾಗದ ರೈತರು ಇದನ್ನು ಕೃಷಿ ಮಾಡುತ್ತಾರೆ ಇದರ ಸಂಡಿಗೆ ತುಂಬಾ ಪ್ರಸಿದ್ದ ಒಮ್ಮೆ ಬೆಂಗಳೂರಿಂದ ತಂದಿದ್ದೆ ಈ ಸುಂಡೆ ಕಾಯಿ ಸಂಡಿಗೆ .
ಕನ್ನಡದ ಪ್ರಸಿದ್ಧ ಅಡಿಗೆ ಬ್ಲಾಗ್ Bhat & Bhat ಲ್ಲಿ ಸುದರ್ಶನ ಭಟ್ಟ ಬೇದರಾಡಿ ಈ ಕುದನೆ ಕಾಯಿ ಗೊಜ್ಜು ಮಾ ಡಿ ತೋರಿಸಿದ್ದರು.https://youtu.be/EgSftkM6-S0 (ಇದರ ಅಡುಗೆ ರೆಸಿಪಿಗೆ ಇಲ್ಲಿ ಲಿಂಕ್ ನಲ್ಲಿ ಕ್ಲಿಕ್ ಮಾಡಿ ನೋಡಿ)
ಇದು ದೇಹದಲ್ಲಿ ಕೆಂಪು ರಕ್ತ ಕಣದ ಉತ್ಪಾದನೆ ಹೆಚ್ಚಿಸುತ್ತದೆ, ಪಶ್ಚಿಮ ಘಟ್ಟದ ಕುರುಚಲು ಕಾಡಿನಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ, ಈ ಭಾಗದ ರೈತರು ಇದನ್ನು ಕೃಷಿಯಾಗಿ ಬೆಳೆಯುವುದಿಲ್ಲ, ರೈತರ ಕೃಷಿ ಭೂಮಿ ಅಂಚಿನ ಬೇಲಿಯಲ್ಲಿ ತನ್ನಿಂದ ತಾನೆ ಬೆಳೆಯುತ್ತದಾದರೂ ಆಹಾರಕ್ಕಾಗಿ ಬಳಸುವವರು ಸೀಮಿತಿ ಜನ ಮಾತ್ರ.
ಅಮೆಜಾನ್ ನಲ್ಲಿ ಒಣಗಿದ ಈ ಟರ್ಕಿ ಬೆರ್ರಿ ಎಂಬ ಬದನೆಕಾಯಿ ಮಿನಿಯೇಚರ್ ಲಭ್ಯ ಇದೆ ಇದನ್ನು ತೂಕ ಹೆಚ್ಚಿಸಿಕೊಳ್ಳುವವರು ಬಳಸುತ್ತಾರೆ.
ಉಡುಪಿ ಗುಳ್ಳ 6 ರಿಂದ 8 ಇಂಚು ವ್ಯಾಸ ಇದ್ದರೆ ಉಡುಪಿ ಗುಳ್ಳದ ಮಿನಿಯೇಚರ್ ಎಂಬಂತಿರುವ ಈ ಚಿಟ್ ಬದನೆ ಗಾತ್ರ 5 ರಿಂದ 8 ಸೆಂಟಿ ಮೀಟರ್ ಮಾತ್ರ!
ಇದರಲ್ಲಿ ಗೊಜ್ಜು, ಚಟ್ನಿ, ಪಲ್ಯ, ಹುಳಿ ಮತ್ತು ಸಂಡಿಗೆ ಮಾಡುತ್ತಾರೆ ಇದರ ರುಚಿ ಮತ್ತು ಪರಿಮಳ ಕೂಡ ಬಿನ್ನ.
Comments
Post a Comment