Skip to main content

Blog number 887, ಶ್ರೀಕಂಠ ಕೂಡಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೂಡಿಗೆ ಎಂಬ ಹಳ್ಳಿಯವರು, ಮನುಷ್ಯ ಜೀವಿತಾವಾದಿಯಲ್ಲಿ ಏನೇಲ್ಲ ಸಾಧನೆ ಮಾಡಬಹುದೆಂಬುದಕ್ಕೆ ಇವರೇ ಸಾಕ್ಷಿ, ಇವರ ಜೀವನ ಸಾದನೆಯೇ ಅದ್ಬುತ ಆದರೆ ನಮ್ಮ ವ್ಯವಸ್ಥೆ ಇವರನ್ನು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಆಗದಂತೆ ಮಾಡಿದ್ದು ವಿಪಯಾ೯ಸ.

#ಚ೦ಪಕಸರಸ್ಸು_ವೀಕ್ಷಣೆಗೆ_ಬಂದ_ಡಾಕ್ಟರ್_ಶ್ರೀಕಂಠಕೂಡಿಗೆ .

#ಶಿವಮೊಗ್ಗಜಿಲ್ಲೆಯ_ತೀರ್ಥಹಳ್ಳಿಯ_ಕೂಡಿಗೆ_ಎಂಬ_ಹಳ್ಳಿಯವರು.

#ಒಬ್ಬ_ಮನುಷ್ಯ_ಇಷ್ಟೆಲ್ಲಾ_ಕ್ಷೇತ್ರದಲ್ಲಿ_ಕೆಲಸ_ಮಾಡಬಹುದಾ_ಎಂಬ_ಅಚ್ಚರಿ_ಪಡಬೇಕಾದ_ಅಸಾದಾರಣ_ವ್ಯಕ್ತಿತ್ವ.

#ಹಿರಿಯಸಮಾಜವಾದಿ_ಪುಟ್ಟಯ್ಯ_ಮತ್ತು_ಕರ್ನಾಟಕಸಂಘದ_ಅಧ್ಯಕ್ಷ_ ಎಂ.ಎನ್. ಸಂದರರಾಜ್_ಜೊತೆ_ಮೊನ್ನೆ_ಬಂದಿದ್ದರು.

  80 ರ ದಶಕದಲ್ಲಿ  ಶ್ರೀಕಂಠ ಕೂಡಿಗೆಯವರ ಸಣ್ಣ ಕಥೆಗಳು ವಾರಪತ್ರಿಕೆ/ಸಾಪ್ತಾಹಿಕ/ವಿಶೇಷಾಂಕಗಳಲ್ಲಿ ಓದುತ್ತಿದ್ದ ನಾನು ಇವರ ಅಭಿಮಾನಿ ಇವತ್ತಿಗೂ ಕೂಡ, ನಂತರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದ ಅನೇಕ ಕಾಯ೯ಕ್ರಮಗಳನ್ನು ನಾನು ತಪ್ಪಿಸುತ್ತಿರಲಿಲ್ಲ ಯಾಕೆಂದರೆ ಅವರ ಭಾಷಣ ಅಷ್ಟು ಸ್ವಾರಸ್ಯ ಮತ್ತು ಹಾಸ್ಯವು ಸೇರಿ ರಸವತ್ತಾಗಿರುತ್ತಿತ್ತು.
  ಪೋನಿನಲ್ಲಿ ಮಾತಾಡಿದ್ದರೂ ಮುಖತಃ ಎದುರಾ ಬದುರಾ ಆಗಿರಲಿಲ್ಲ, ಮೊನ್ನೆ ಹಿರಿಯ ಸಮಾಜವಾದಿ ಪುಟ್ಟಯ್ಯನವರು ಶ್ರೀಕಂಠ ಕೂಡಿಗೆ ಮತ್ತು ಎಂ.ಎನ್.  ಸುಂದರರಾಜ್ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಸುಮಾರು ನಾಲ್ಕುನೂರು ವರ್ಷದ ಸ್ಮಾರಕ ನೋಡಲು ಬರುತ್ತಿರುವುದಾಗಿ ತಿಳಿಸಿದಾಗ ಸಂತೋಷವಾಗಿತ್ತು.
ನಾನು ನೋಡಿದ ಕನ್ನಡ ಅಕ್ಷರ ಸುಂದರವಾಗಿ ಬರೆಯುವವರು ಹಾಯ್ ಬೆಂಗಳೂರು ರವಿ ಬೆಳೆಗೆರೆ, ಕಾಗೋಡು ತಿಮ್ಮಪ್ಪರ ಅಣ್ಣನ ಮಗ ದಿವಂಗತ ಕಾಗೋಡು ಅಣ್ಣಪ್ಪ ಮತ್ತೊಬ್ಬರು ಖ್ಯಾತ ಸಾಹಿತಿ ಡಾ.ರಹಮತ್ ತರೀಕೆರೆ ಅವರ ಸಹೋದರ ಡಾ. ಕಲೀಮುಲ್ಲಾ ಆದರೆ ಶ್ರೀಕಂಠ ಕೂಡಿಗೆ ಅವರ ಅಕ್ಷರ ಇವರೆಲ್ಲರನ್ನೂ ಮೀರಿಸಿದ್ದು.
  ಇವರಿಗೆ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾಕ್ಟರ್ ಗಣಪತಿ ಜೊತೆಯಾಗಿದ್ದರು, ಇವರು ಈ ಹೊಸ ವಿಶ್ವವಿದ್ಯಾಲಯ ಪ್ರಾರಂಭದ ಕೃಷಿ ತೋಟಗಾರಿಕೆಯ ಸಂಶೋದನೆ ಮತ್ತು ಪ್ರಾತ್ಯಕ್ಷಿಕೆ ಕೆಲಸ ಪ್ರಾರಂಬಿಸಿದವರು ಇದೇ ರೀತಿ ಶ್ರೀಕಂಠ ಕೂಡಿಗೆ ಬಿ ಆರ್ ಪಿಯ ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭದಲ್ಲಿ ಹಾ ಮಾ ನಾರವರ ಮಾರ್ಗದರ್ಶನದಲ್ಲಿ ಪ್ರಾರಂಬಿಕ ಕೆಲಸ ಪ್ರಾರಂಬಿಸಿದವರು.
  ಚಂಪಕ ಸರಸ್ಸು ತೋರಿಸಲು ಸ್ಥಳಿಯ ಸಾಹಿತ್ಯ ಪರಿಷತ್ ಅಧ್ಯಕ್ಷ, ಪತ್ರಕರ್ತ ಮತ್ತು ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಬಿ.ಡಿ. ರವಿ ಕರೆದೊಯ್ದರು ನಂತರ ಅಲ್ಲಿಂದ ಇರುವಕ್ಕಿಯ ಕೃಷಿ ವಿಶ್ವ ವಿದ್ಯಾಲಯ ನೋಡಿ ಬಂದರು.
  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಕೂಡಿಗೆ ಎಂಬ ಹಳ್ಳಿಯ ದೈಹಿಕವಾಗಿ ವಾಮನ ರಂತಿರುವ ಇವರ ಎಲ್ಲಾ ಹಿನ್ನೆಲೆ ನೋಡಿದರೆ ಇವರ ವಿಶ್ವ ದರ್ಶನವಾಗುತ್ತೆ.
  ಕುವೆಂಪು ವಿವಿಯ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಂಗದ ನಿದೇ೯ಶಕರಾಗಿ, ಸೆನೆಟ್ - ಸಿಂಡಿಕೇಟ್ - ಶಿಕ್ಷಣ ಮಂಡಳಿ ಸದಸ್ಯರಾಗಿ, ಡೀನ್ ಆಗಿ ಪರಿಕ್ಷಾಂಗದ ಕುಲ ಸಚಿವರಾಗಿದ್ದರು.
  ಕನಾ೯ಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯ ಜಾನಪದ ಯಕ್ಷಗಾನ ಅಕಾಡೆಮಿ ನಿದೇ೯ಶಕರಾಗಿ, ಹಂಪಿ ಕನ್ನಡ ವಿವಿಯ ಆಡಳಿತ ಮಂಡಳಿ ಸದಸ್ಯರಾಗಿದ್ದರು.
  UGC/NET ಪರೀಕ್ಷಾ ಮಂಡಳಿ ಸದಸ್ಯರಾಗಿ, ದೆಹಲಿ ನ್ಯಾಷನಲ್ ಬುಕ್ ಟ್ರಸ್ಟ್ ಸದಸ್ಯರಾಗಿ, UPSC ಕನ್ನಡ ಪಠ್ಯ ರಚನಾ ಮಂಡಳಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರೂ ಆಗಿದ್ದರು.
   ಕನ್ನಡ ಲಾವಣಿ ಮೇಲೆ ಪಿ .ಹೆಚ್.ಡಿ ಮಾಡಿದ್ದಾರೆ, 15 ಜನ ಎಂಪಿಲ್ ವಿದ್ಯಾರ್ಥಿಗಳಿಗೆ, 25 ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.
   ಇವರ ವಿದ್ಯಾರ್ಥಿಗಳು ಮತ್ತು ಶಿಷ್ಯರು ಸೇರಿ ಬೇರೆ ಬೇರೆ ಸಂದರ್ಭದಲ್ಲಿ ಇವರಿಗಾಗಿ ಎರೆಡು ಅಭಿನಂದನಾ ಗ್ರಂಥ ಇವರಿಗೆ ಸಮರ್ಪಿಸಿದ್ದಾರೆ (ಕೂಡಿಗೆ ಮತ್ತು ಆರು ಮುನಿಸು).
  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ ಜೊತೆ ಅಸಂಖ್ಯಾತ ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ಇವರಿಗೆ ನೀಡಿದ ಪ್ರಶಸ್ತಿಗಳ ದೊಡ್ಡ ಪಟ್ಟಿಯೇ ಇದೆ.
   ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ತೀರ್ಥಹಳ್ಳಿಯಲ್ಲಿ ನಡೆದ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಶಸ್ಸಿಗೆ ಕಾರಣರಾಗಿದ್ದರು.
  ಬೆಳಗಾವಿಯ VTU ಪ್ರಸಾರಾಂಗದ ಸಲಹಾ ಮಂಡಳಿ ಸದಸ್ಯರಾಗಿ, ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಮಂಡಳಿ ಅಧ್ಯಕ್ಷರೂ ಆಗಿದ್ದರು.
   ಕುವೆಂಪು ವಿಶ್ವವಿದ್ಯಾಲಯದ ಎಂಟು ಪದವಿ ಕನ್ನಡ ಪುಸ್ತಕಗಳಿಗೆ ಪ್ರದಾನ ಸಂಪಾದಕರೂ ಆಗಿದ್ದರು.
  ಇನ್ನೂ ಬರೆದರೆ ಇನ್ನೂ ಕೆಲವು ಪುಟಗಳಾಗುವ ಇವರ ಸಾದನೆ ಇಲ್ಲಿಗೆ ಸಂಕ್ಷಿಪ್ತಗೊಳಿಸಿದ್ದೇನೆ ಮತ್ತು ಇಷ್ಟೇಲ್ಲ ಸಾದನೆಯ ಶ್ರೀಕಂಠ ಕೊಡಿಗೆ ಶಿವಮೊಗ್ಗ ಜಿಲ್ಲೆಯವರೆಂಬುದು ನನಗೆ ಹೆಮ್ಮೆ ಕೂಡ.
  ಕೆಳದಿ ಅರಸರ ಈ ಪ್ರೇಮ ಸೌದ , ಇದಕ್ಕೆ ಕಾರಣಳಾದ ರಂಗೋಲಿ ಪವೀಣೆ ರಾಜ ವೆಂಕಟಪ್ಪ ನಾಯಕರ ರಾಣಿ ಚಂಪಕಾಳ ಮೇಲೆ ಮತ್ತು ದೀರ್ಘ ಕಾಲ ಕೆಳದಿ ರಾಜ್ಯ ಆಡಳಿತ-ವಿಸ್ತರಣೆ ಮಾಡಿದ, ಸಾಗರ ಪಟ್ಟಣ (ಸದಾಶಿವ ಸಾಗರ) ನಿರ್ಮಾಣ ಮಾಡಿದ ರಾಜ ವೆಂಕಟಪ್ಪ ನಾಯಕರನ್ನ ಇತಿಹಾಸದಿಂದ ಉದ್ದೇಶ ಪೂರ್ವಕವಾಗಿ ಮರೆ ಮಾಚಿರುವ ಬಗ್ಗೆ ಮುಂದಿನ ದಿನದಲ್ಲಿ ಇವರ ಪ್ರತಿಬಾವಂತ ಶಿಷ್ಯರು ಸಂಶೋದನೆ ಮಾಡುವ ಕಾಲ ಬಂದೀತೆಂದು ಆಶಿಸುತ್ತೇನೆ.
  ನಾನು ಕೆಳದಿ ರಾಜರ ಈ ದುರಂತ ಪ್ರೇಮ ಕಥೆ ಸ್ಥಳಿಯ ಜನಪದ, ಇಟಲಿ ಪ್ರವಾಸಿ ಡಲ್ಲೋವಲ್ಲೆ ಪತ್ರಗಳು, ಹೆಚ್.ಎಲ್.ನಾಗೇಗೌಡರ ಪ್ರವಾಸಿ ಕಂಡ ಇಂಡಿಯಾ ಸಂಪುಟಗಳ ಮತ್ತು ಗೆಜೆಟಿಯರ್ ಗಳ ದಾಖಲೆ ಉಲ್ಲೇಖಿಸಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕಾ ಎಂಬ ಕಾಲ್ಪನಿಕ ಕಾದಂಬರಿ ಎರೆಡು ವರ್ಷದ ಹಿಂದೆ ಪ್ರಕಟಿಸಿದಾಗ ಅದು ಇಷ್ಟು ಪರಿಣಾಮ ಬೀರಬಹುದು ಎಂಬ ಕಲ್ಪನೆ ಇರಲಿಲ್ಲ.
  ಇದರಲ್ಲಿ ಒಂದು ಅಂಶ ಪ್ರಾರಂಭದಲ್ಲಿಯೇ ಅಚ್ಚಿಸಿದ್ದೆ ಅದೇನೆಂದರೆ "ಈ ಕಾದಂಬರಿ ಮೇಲಿನ ಚರ್ಚೆಯಿಂದ ಇತಿಹಾಸದ ವಿಮರ್ಷೆ ಮತ್ತು ಸಂಶೋದನೆಗಳಾಗಿ ನನ್ನ ಹುಟ್ಟೂರಿನ ಇತಿಹಾಸವೂ ತಜ್ಞರ ಗಮನ ಸೆಳೆದರೆ ನನ್ನ ಉದ್ದೇಶ ಸಾರ್ಥಕವಾದಂತೆ" ಅಂತ , ಈಗ ಆ ಕೆಲಸಗಳು ನಡೆಯುತ್ತಿದೆ ಅದೇ ಸಂತೋಷ.
  ಒಂದು ಪುಸ್ತಕ ಇಷ್ಟೆಲ್ಲಾ ಘಟನೆಗಳಿಗೆ ಸಾಕ್ಷಿಯಾಗಿ ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಟ KGF 2 ಯಶ್ ರ ಯಶೋ ಮಾರ್ಗದಿಂದ ಪ್ರಾರಂಭದ ಅಭಿವೃದ್ದಿ ಕೆಲಸವೂ ಆಗಿರುವುದು ಇನ್ನೊಂದು ಸಂತೋಷದ ವಿಷಯ ಇದರ ಮಧ್ಯದಲ್ಲಿ ಶ್ರೀಕಂಠ ಕೊಡಿಗೆ, ಎಂ.ಎನ್. ಸುಂದರರಾಜ್, ಪುಟ್ಟಯ್ಯನವರು ಬ೦ದಿರುವುದು ಸೇರಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...