Blog number 893.. ಜಾರ್ಜ್ ಪನಾ೯೦ಡೀಸರು ತಮ್ಮ ತವರು ರಾಜ್ಯದಲ್ಲಿ ರಾಜಕೀಯ ಪಕ್ಷ ಕಟ್ಟುವ ಕನಸು ನನಸಾಗದಂತೆ ಮಾಡುವಲ್ಲಿ 2004 ರಲ್ಲಿ ಅನಂತ ಕುಮಾರರ ದೊಡ್ಡ ಪಾಲಿದೆ.
#ಜೊತೆಗೆ_ಜಾರ್ಜ್_ಪರ್ನಾಂಡೀಸರೂ
#ಜಾಜ್೯ರ_ಸಮತಾ_ಪಾರ್ಟಿಯ_ಶಾಸನಗಳು_ಮತ್ತು_ನಿಯಮಗಳನ್ನು_ಕನ್ನಡಕ್ಕೆ_ಅನುವಾದಿಸುವ_ಅವಕಾಶ_ನನ್ನದಾಗಿದ್ದು.
ಜಾರ್ಜ್ ಫರ್ನಾಂಡಿಸ್ ರು ವಾಜಪೇಯಿಯವರ ಎನ್. ಡಿ.ಎ. ಸರ್ಕಾರದಲ್ಲಿ ದೇಶದ ರಕ್ಷಣಾ ಸಚಿವರು, ಕರ್ನಾಟಕದ ಶ್ರೀನಿವಾಸ್ ಪ್ರಸಾದರು ಆಹಾರ ಮತ್ತು ನಾಗರೀಕ ಸೇವೆ ಖಾತೆಯ ಕೇಂದ್ರದ ರಾಜ್ಯ ಸಚಿವರು ಆಗಲೇ ಜಾರ್ಜ್ ರಿಗೆ ತಮ್ಮ ಹುಟ್ಟಿನ ಮೂಲದ ಕನಾ೯ಟಕ ರಾಜ್ಯದಲ್ಲಿ ತಮ್ಮ ಸಮತಾ ಪಾಟಿ೯ ಕಟ್ಟುವ ಆಕಾಂಕ್ಷೆ ಇರುತ್ತದೆ.
ಅದಕ್ಕಾಗಿ ಬೈಂದೂರಿನಿಂದ ಒಂದು ಅವದಿಗೆ ಬಿಜೆಪಿಯಿಂದ ಶಾಸಕರಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ (ಆಸ್ಕರ್ ಫರ್ನಾಂಡಿಸ್ ರನ್ನು ಸೋಲಿಸಿ) ಯಡೂರಪ್ಪರಿಗೆ ಆಪ್ತರಾಗಿದ್ದ ಐ.ಎಂ. ಜಯರಾಂ ಶೆಟ್ಟರನ್ನು ಸಮತಾ ಪಾರ್ಟಿಗೆ ಸೇರಿಸಿಕೊಂಡು ಕರ್ನಾಟಕ ರಾಜ್ಯದ ಅಧ್ಯಕ್ಷರನ್ನಾಗಿಸಿದ್ದರು.
ಐ.ಎಂ. ಜಯರಾಂ ಶೆಟ್ಟರು ಬಿಜೆಪಿ ಬಿಟ್ಟು ಬರಲು ಕಾರಣ ಈಗ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಉಡುಪಿ ಮೂಲದ ಅನಿಲ್ ಪ್ರಸಾದ್ ಹೆಗಡೆ ಮುಖ್ಯ ಕಾರಣ.
ಕರ್ನಾಟಕ ರಾಜ್ಯದಲ್ಲಿ ಜಾರ್ಜ್ ರ ಸಮತಾ ಪಾರ್ಟಿ ಮತ್ತು ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ NDA ಸರ್ಕಾರ ರಚಿಸುವ ಉದ್ದೇಶವೂ ಅವರದ್ದು ಆಗಿತ್ತು.
ಜಾರ್ಜ್ ರವರು ತಿಂಗಳಿಗೆ 2-3 ಸಾರಿ ಬೆಂಗಳೂರಿಗೆ ಬರುತ್ತಿದ್ದರು ಆದರೆ ಅವರು ಬರುವುದು ಹೋಗುವುದು ಪತ್ರಿಕೆಯವರಿಗೂ ಮಾಹಿತಿ ಇರುತ್ತಿರಲಿಲ್ಲ.
ಪ್ರತಿ ಸಾರಿ ಬಂದಾಗಲೂ ಸಮತಾ ಪಾರ್ಟಿಯ constitution and rules ಪುಸ್ತಿಕೆ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿ ಎಲ್ಲಾ ಪದಾಧಿಕಾರಿಗಳು ಅದನ್ನು ಓದಬೇಕೆಂದು ಹೇಳಿ ಹೋಗುತ್ತಿದ್ದರು ಆದರೆ ಹೊಸದಾಗಿ ರಾಜ್ಯದಲ್ಲಿ ಬೇರೆ ಪಕ್ಷದಿಂದ ಸಮತಾ ಪಾರ್ಟಿಗೆ ಬಂದವರು ಜಾರ್ಜ್ ರ ಎದುರು ತಲೆ ಆಡಿಸಿ ಮರೆತು ಬಿಡುತ್ತಿದ್ದರು.
ಅವತ್ತು ಐ.ಎಂ. ಜಯರಾಂ ಶೆಟ್ಟರ ಮನೆಯ ಡೈನಿಂಗ್ ಟೇಬಲ್ ಮೇಲೆ ಕುಚುಲಕ್ಕಿ ಅನ್ನ ಮತ್ತು ಸಮುದ್ರದ ವಿವಿದ ಮೀನಿನ ಪದಾರ್ಥಗಳ ಎದರು ಕುಳಿತ ಜಾರ್ಜ್ ಸ್ವಲ್ಪ ಬೇಸರದಲ್ಲಿ ಪಕ್ಷದ ರೂಲ್ಸ್ ಪುಸ್ತಕ ಕನ್ನಡದಲ್ಲಿ ಅನುವಾದಿಸಿ ಅಚ್ಚುಹಾಕಲು ಸಾಧ್ಯವಿಲ್ಲವಾ? ಎಂದಾಗ ಇದನ್ನು ಮರೆತಿದ್ದ ಐ.ಎಂ. ಜಯರಾಂ ಶೆಟ್ಟರು ಜಾಜ್೯ರ ಎದರು ಈ ಜವಾಬ್ದಾರಿ ನನಗೆ ವಹಿಸಿ ಬಿಟ್ಟರು ಅಷ್ಟೆ ಅಲ್ಲ ಅದನ್ನು ಜಾರ್ಜ್ ಸ್ವತಃ ಬಂದು ಬಿಡುಗಡೆ ಮಾಡಬೇಕೆಂದು ವಿನಂತಿಸಿದರು ಇದಕ್ಕೆ ಜಾರ್ಜ್ ರೂ ಒಪ್ಪಿಕೊಂಡರು.
ಊಟದ ನಂತರ ಹೊರಡುವಾಗ ಜಾರ್ಜ್ ರು ತಮ್ಮ ಖಾದಿ ಜುಬ್ಬದ ಜೇಬಿನಿಂದ ಸಣ್ಣ ಕೈ ಪುಸ್ತಕ ತೆರೆದು ನೋಡಿ ಮುಂದಿನ ವಾರದ ಒಂದು ದಿನ ನಿಗದಿ ಮಾಡಿ ಗುರುತು ಮಾಡಿಕೊಂಡರು.
ಅವರನ್ನು ಜಯರಾಂ ಶೆಟ್ಟರು ಮತ್ತು ಪಕ್ಷದ ರಾಜ್ಯ ಪ್ರದಾನ ಕಾಯ೯ದರ್ಶಿಗಳಾಗಿದ್ದ ನಾವೆಲ್ಲ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವಾಗ ಐ.ಎಂ. ಜಯರಾಂ. ಶೆಟ್ಟರು "ಅರುಣ್ ಪ್ರಸಾದರೆ ಹೇಗಾದರೂ ಮಾಡಿ ಮುಂದಿನ ವಾರ ಆ ಪುಸ್ತಕ ಮಾತ್ರ ರೆಡಿ ಇಡಲೇ" ಬೇಕು ಅಂದರು ನನಗೆ ಅದನ್ನು ಅನುವಾದಿಸುವ ಕೆಲಸದ ಜೊತೆ ಅದನ್ನು ಡಿಟಿಪಿ ಮಾಡಿಸಿ ಪ್ರೂಪ್ ನೋಡಿ ಅಚ್ಚು ಹಾಕಿಸುವ ಕೆಲಸವೂ ಸೇರಿಕೊಂಡಿತು.
ಬೆಂಗಳೂರಿನ ರಾಜ್ ಕುಮಾರ್ ರಸ್ತೆಯ #ಈ_ಸಂಜೆ ವೆಂಕಟೇಶರನ್ನು ಬೇಟಿ ಮಾಡಿ ನಮ್ಮ ತುರ್ತು ಉದ್ದೇಶದ ಪುಸ್ತಕದ ಬಗ್ಗೆ ತಿಳಿಸಿದಾಗ ಅವರು ಅವರ ಸಹೋದರ ನಾಗರಾಜ್ ಗೆ ತಕ್ಷಣ ಮುದ್ರಿಸಿ ಕೊಡುವ ಜವಾಬ್ದಾರಿ ವಹಿಸಿದರು.
ಮರುದಿನ ಸಂಜೆ ಈ ಸಂಜೆ ಕಛೇರಿಗೆ #ಸಮತಾ_ಪಾರ್ಟಿ_ಶಾಸನಗಳು_ಮತ್ತು_ನಿಯಮಗಳು ಕೈಪಿಡಿಯ ಕನ್ನಡ ಅನುವಾದದ ಕರಡು ನೀಡಿದೆ ಮರುದಿನ ಬೆಳಿಗ್ಗೆ 10ಕ್ಕೆ ಇದರ ಒಂದೊಂದು ಪುಟ ಒಬ್ಬೊಬ್ಬ DTP ಆಪರೇಟರಿಗೆ ನೀಡಿದರು ಅರ್ಧ ಗಂಟೆಯಲ್ಲಿ ಎಲ್ಲಾ ಪುಟಗಳು ತಯಾರಾಯಿತು, ನನಗೆ ಅದನ್ನು ಇನ್ನೊಮ್ಮೆ ಓದಿ ತಿದ್ದಿ ಕೊಡುವ ಕೆಲಸ ನಂತರ ಅವರ ಅತ್ಯಾದುನಿಕ ಯಂತ್ರದಲ್ಲಿ ಪುಸ್ತಕ ಅಚ್ಚಾಯಿತು ಮುಖಪುಟ ಹಸಿರು ಬಣ್ಣದಲ್ಲಿ ಇನ್ನೊಂದು ಯಂತ್ರದಲ್ಲಿ ನಂತರ ಅವರ ಇನ್ನೊಂದು ಪಕ್ಕದ ಕಟ್ಟಡದಲ್ಲಿ ಬೈಂಡಿಂಗ್ ಆಗಿ ಪ್ಯಾಕ್ ಆಗಿ 2000 ಪ್ರತಿಗಳು ಬೆಂಗಳೂರಿನ ಬಸವೇಶ್ವರ ನಗರದ ಸಮತಾ ಪಾರ್ಟಿ ಕಛೇರಿಗೆ ರಾತ್ರಿ 8ಕ್ಕೆ ತಲುಪಿತು.
ರಾಜ್ಯ ಅಧ್ಯಕ್ಷರಾಗಿದ್ದ ಐ.ಎ೦.ಜಯರಾಂ ಶೆಟ್ಟರಿಗೆ ನನ್ನ ಈ ಕೆಲಸ ತುಂಬಾ ಹಿಡಿಸಿತು ಇದರಿಂದ ಮುಂದಿನ ಜವಾಬ್ದಾರಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಸಮಾವೇಶದ ಹೆಚ್ಚುವರಿ ಜವಾಬ್ದಾರಿಯು ನೀಡಿದರು.
ಜಯರಾಂ ಶೆಟ್ಟರು ಅವರ ಬಸ್ರೂರು ಮನೆಯಲ್ಲಿ ನಡೆಯುವ ಕಂಬಳಕ್ಕೆ ರಕ್ಷಣಾ ಮಂತ್ರಿ ಜಾರ್ಜರನ್ನು ಕರೆಸಿ ದೊಡ್ಡ ಸಭೆಯೂ ನಡೆಸಿದ್ದರು, ಕೋಟೇಶ್ವರದ ಶಾಲಾ ಆವರಣದಲ್ಲಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು.
ನಂತರ ಜಾರ್ಜ್ ಮತ್ತು ನಿತೀಶ್ ರು ಸೇರಿ ಜನತಾ ದಳ ಸಂಯುಕ್ತ (JDU) ನಲ್ಲಿ ವಿಲೀನಗೊಳಿಸಿದರು ಆಗಲೂ ಐ.ಎಂ. ಜಯರಾಂ ಶೆಟ್ಟರನ್ನೆ ರಾಜ್ಯ ಅಧ್ಯಕ್ಷರನ್ನಾಗಿಸಿದರು ನಾನು JDU ರಾಜ್ಯ ಪ್ರದಾನ ಕಾರ್ಯದಶಿ೯ಯಾಗಿ ಮುಂದುವರಿದಿದ್ದೆ.
ಮುಂದೆ ವಿದಾನ ಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಅನಂತಕುಮಾರರು ಜಾರ್ಜರ ವಿನಂತಿ ನಿರ್ಲಕ್ಷಿಸಿದರು ಜಾರ್ಜ್ ರ JDU ಪಾರ್ಟಿಗಿಂತ ಅವರಿಗೆ ಆಗ ಬಿಜೆಪಿ ಸೇರಿದ್ದ ಬಂಗಾರಪ್ಪನವರು ಹಿತವಾದರು, ಅವರಿಗೆ ಬಂಗಾರಪ್ಪರ ಬಳಸಿ ಯಡೂರಪ್ಪರನ್ನು ಹಣಿಯುವ ಹಿಡನ್ ಅಜೆಂಡವೂ ಇತ್ತು.
ರಾಜ್ಯದಲ್ಲಿ ಬೈಂದೂರಿನಿಂದ ಐ.ಎ೦.ಜಯರಾಂ ಶೆಟ್ಟರು JDU ಪಾರ್ಟಿಯಿಂದ ಸ್ಪರ್ಧೆಗೆ ಒಪ್ಪಿ ಅಲ್ಲಿ ಬಿಜೆಪಿ ಅಭ್ಯರ್ಥಿ ಹಾಕುವುದಿಲ್ಲ ಎಂದಿದ್ದ ಅನಂತಕುಮಾರ್ ನಂತರ ಅವರ ಎದುರು ಬಿಜೆಪಿ ಅಭ್ಯರ್ಥಿ ಸ್ಪರ್ದೆಗೆ ಇಳಿಸಿ ಐ.ಎಂ.ಜಯರಾಂ ಶೆಟ್ಟರ ಮೇಲೆ ಸೇಡು ತೀರಿಸಿಕೊಂಡರು (ಬಿಜೆಪಿ ತೊರೆದು ಜಾರ್ಜ್ ಪಾರ್ಟಿ ಸೇರಿದ್ದು), ಯಡೂರಪ್ಪರ ವಿನಂತಿಯನ್ನೂ ಪರಿಗಣಿಸದಷ್ಟು ಕ್ರೂರ ವರ್ತನೆ ಅವರದ್ದಾಗಿತ್ತು ಇದರಿಂದ ಬೈಂದೂರಿನಲ್ಲಿ ಕಾಂಗ್ರೇಸ್ ನ ಗೋಪಾಲ ಪೂಜಾರರ ಗೆಲುವು ಸುಲಭ ಆಯಿತು.
Comments
Post a Comment