Blog number 899. ದೇವರ ಮಗನಾದ ನಾರಾಯಣ ಅಕಸ್ಮಿಕವಾಗಿ ಅಪಾಯಕಾರಿ ಅಪಘಾತ ವಲಯದಲ್ಲಿ ನಮಗೆ ದೊರೆತ ಪ್ರೀತಿಯ ಸಹೋದರ, ನಮಗೂ ಮತ್ತು ನಮ್ಮ ಸಂಸ್ಥೆಯ ಎಲ್ಲರಿಗೂ ಪ್ರೀತಿ ಪಾತ್ರ ನಾರಾಯಣ್ ಪ್ರದಾನ್
#ಅಕಸ್ಮಿಕವಾಗಿ_ರಸ್ತೆಯಲ್ಲಿ_ಯಾವುದೇ_ಕ್ಷಣದಲ್ಲಿ_ಅಪಘಾತದಿಂದ_ಜೀವ_ಕಳೆದುಕೊಳ್ಳುವ_ಸಂದರ್ಭದಲ್ಲಿ_ಸಿಕ್ಕಿದವ
#ಹಿಂದಿನ_ಜನ್ಮದಲ್ಲಿ_ನಾನು_ಇವನ_ಬಾಕಿದಾರನಿರಬಹುದು.
#ಹನ್ನೆರೆಡು_ವರ್ಷದಿಂದ_ನನ್ನ_ಕಿರಿಯ_ಸಹೋದರನಾಗಿ_ಇದ್ದಾನೆ.
#ದೃಷ್ಟಿ_ಸಾಮರ್ಥ್ಯ_ಶೇಕಡಾ_2ಕ್ಕಿಂತ_ಕಡಿಮೆ_ಇದ್ದರೂ_ಬುದ್ದಿವಂತ.
#ಇವನು_ದೇವರ_ಮಗ_ನಮಗೂ_ನಮ್ಮ_ಸಂಸ್ಥೆಯ_ಎಲ್ಲರಿಗೂ_ಇವನು_ಪ್ರೀತಿಯ_ನಾರಾಯಣ.
ಹನ್ನೆರಡು ವರ್ಷದ ಹಿಂದೆ ಇದೇ ದಿನ ಶಿವಮೊಗ್ಗದಿಂದ ನಮ್ಮ ಊರಿಗೆ ನಾನು ಮತ್ತು ನನ್ನ ಗೆಳೆಯರಾದ ಅಮೀರ್ ವಾಪಸ್ಸಾಗುತ್ತಿದ್ದಾಗ ಶಿವಮೊಗ್ಗದ ಸಿಂಹದಾಮದ ಎದರು ರಾಷ್ಟ್ರೀಯ ಹೆದ್ದಾರಿ ನವೀಕರಣಕ್ಕಾಗಿ ಎಡ ಭಾಗದ ರಸ್ತೆ ಅರ್ದ ಭಾಗ ಒಂದಾಳು ಆಳ ತೆಗೆದಿದ್ದರು, ಎಲ್ಲಾ ವಾಹನಗಳು ಬಲ ಬಾಗದ ಅರ್ಧ ರಸ್ತೆಯಲ್ಲಿ ಕಷ್ಟದಿಂದ ಚಲಿಸುತ್ತಿದ್ದವು, ಮೈ ಮರೆತು ಎಡಕ್ಕೆ ಹೊರಳಿದರೆ ಆಳೆತ್ತರದ ರಸ್ತೆ ಕಂದಕಕ್ಕೆ ಬೀಳಬೇಕು ಜನರು ಆಕಡೆ ಚಲಿಸದಂತೆ ರೆಡಿಯಂ ಟೇಪ್ ಕಟ್ಟಿದ್ದರು.
ಆಗ ಮೈನ್ಸ್ ಲಾರಿಗಳ ಒಡಾಟದ ಅಭ೯ಟ ಆದ್ದರಿಂದ ಶಿವಮೊಗ್ಗ ಸಾಗರ ಮಾರ್ಗ ಡೆಂಜರ್ ಮಾರ್ಗವೆ ಆಗಿತ್ತು.
ನಾವು ಈ ಸ್ಥಳಕ್ಕೆ ಬರುವಾಗ ಕತ್ತಲಾಗುತ್ತಿತ್ತು ಸುಮಾರು 7 ಗಂಟೆ, ಜಿಟಿ ಜಿಟಿ ಮುಂಗಾರು ಮಳೆ, ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಒಟ್ಟಾರೆ ಎಂತಹ ಚಾಲಕರು ಭಯ ಪಡುವ ರಸ್ತೆಯ ಮದ್ಯದಲ್ಲಿ ಕೆಂಪು ಟೀ ಶಟ್೯ ಕಪ್ಪು ಪ್ಯಾಂಟ್ ಇನ್ ಮಾಡಿದ ಕಪ್ಪು ಶೂ ಮತ್ತು ಬೆನ್ನು ಚೀಲದ ಯುವಕ ತಡರು ಕಾಲು ಹಾಕುತ್ತಾ ಕಷ್ಟ ಪಟ್ಟು ನಡೆಯುತ್ತಾ ಇರುವುದು ನೋಡಿದ ಮಿತ್ರರು "ಅಣ್ಣಾ ಯಾವುದೋ ಶಾಲೆ ಹುಡುಗ ಬಸ್ಸು ತಪ್ಪಿಸಿಕೊಂಡು , ಈ ಮಳೆಯಲ್ಲಿ ಚತ್ರಿ ಕೂಡ ಇಲ್ಲದೆ ನಡೆದುಕೊಂಡು ಹೋಗುತ್ತಾನೆ" ಅಂದರು ಅಷ್ಟರಲ್ಲಿ ಎದುರಿನಿಂದ ಪ್ರಖರ ಬೆಳಕು ಬೀರುತ್ತಾ ಲಾರಿ ಬಂದಿದ್ದರಿಂದ ನನಗೆ ಯಾರೂ ಕಾಣಲಿಲ್ಲ, ಲಾರಿ ಪಾಸಾದ ಮೇಲೆ ನಿಲ್ಲಿಸಿದ ನಮ್ಮ ಕಾರಿನ ಎದರು ನಡೆದು ಹೋಗುವ ಹುಡುಗ ಕಂಡ.
ಎಡಕ್ಕೆ ಒಂದು ಹೆಜ್ಜೆ ಇಟ್ಟರೆ ರಸ್ತೆಯ ದುರಸ್ತಿಯ ಕಂದಕಕ್ಕೆ, ಬಲಕ್ಕೆ ಸರಿದರೆ ಯಾವುದೇ ವಾಹನದ ಚಕ್ರಕ್ಕೆ ಸಿಕ್ಕಿಬೀಳುವ ಡೇಂಜರ್ ಜೋನ್ ನಲ್ಲಿ ನಡೆಯುತ್ತಿದ್ದ.
ಗೆಳೆಯರ ಅವನ ಪಕ್ಕದಲ್ಲಿ ನಿಲ್ಲಿಸಿ ಯಾವ ಊರಿಗೆ ಹೋಗಬೇಕಪ್ಪ ಅಂದರು ಅವನ ಉತ್ತರ ಚೆನೈ ಅಂದಾಗಲೇ ನಮಗೆ ಗೊತ್ತಾಗಿದ್ದು ಈತ ಸ್ಥಳಿಯ ವಿದ್ಯಾರ್ಥಿ ಅಲ್ಲ ಅಂತ ಮತ್ತು ದಾರಿ ತಪ್ಪಿ ಬಂದವ ಅಂತ.
ಹಿಂದಿನಿಂದ ಮತ್ತು ಮುಂದಿನಿಂದ ಸಾಲಾಗಿ ಬರುತ್ತಿದ್ದ ವಾಹನಗಳಿಂದ ಹೆಚ್ಚು ಹೊತ್ತು ಅಲ್ಲಿ ನಮ್ಮ ವಾಹನ ನಿಲ್ಲುವಂತಿಲ್ಲ ಆಗ ತಕ್ಷಣ ಗೆಳೆಯರು ಹಿಂದಿಯಲ್ಲಿ ನಾವೂ ಚೆನೈಗೆ ಹೋಗುತ್ತಿದ್ದೇವೆ ಕರೆದುಕೊಂಡು ಹೋಗುತ್ತೇವೆ ಅಂತ ಹೇಳಿ ಹಿಂದಿನ ಸೀಟಿಗೆ ಕುಳ್ಳಿರಿಸಿ ಈ ಅಪಘಾತದ ವಲಯ ದಾಟಿದ ಮೇಲೆ ಈ ಆಗುಂತಕ ಚೆನೈ ಪ್ರಯಾಣಿಕನನ್ನ ವಿಚಾರಿಸಿದರೆ ಈತ ಕಲ್ಕತ್ತಾದಿಂದ ರೈಲಲ್ಲಿ ಬೆಂಗಳೂರು ಅಲ್ಲಿಂದ ಶಿವಮೊಗ್ಗ ನಿಲ್ದಾಣ ತಲುಪಿದ್ದಾನೆ ಅಲ್ಲಿ ಯಾರು ಯಾರಿಗೋ ಚೆನೈ ರಸ್ತೆ ಕೇಳಿರಬೇಕು ಅವರು ಶಿವಮೊಗ್ಗ ಬಸ್ ಸ್ಟಾಂಡ್ ದಾರಿ ತೋರಿದ್ದಾರೆ ಹಾಗೆ ನಡೆಯುತ್ತಾ ನಡೆಯುತ್ತಾ ಶಿವಮೊಗ್ಗ ಸಾಗರ ಮಾರ್ಗದಲ್ಲಿ ಸಿಂಹ ದಾಮದ ಎದರು ನಮಗೆ ಸಿಕ್ಕಿದ.
ಅವನಿಗೆ ಚಾಕಲೇಟು ಕೊಡುವಾಗಲೇ ಗೊತ್ತಾಗಿದ್ದು ಅವನಿಗೆ ದೃಷ್ಟಿ ದೋಷ ಅಂತ ಹೀಗೆ ನನ್ನ ಅತಿಥಿ ಆಗಿ ಬಂದ ನಾರಾಯಣ್ ನಮ್ಮ ಮನೆಯವನೇ ಆಗಿದ್ದಾನೆ, ಅವನಿಗೆ ಆಗಾಗ್ಗೆ ನೆನಪಾದಾಗ ಕೆಲ ವಿಚಾರಗಳು ಹೇಳುತ್ತಾನೆ ಕೆಲವೊಮ್ಮೆ ದಿನಗಟ್ಟಲೆ ಮೌನಿ.
ಅವನಿಂದ ಯಾವುದೇ ಕೆಲಸ ಮಾಡಲೂ ಸಾಧ್ಯವಿಲ್ಲ, ವೈದ್ಯರು ಪರೀಕ್ಷೆ ಮಾಡಿ ಹೇಳಿದ್ದು ಇವನು ಹುಟ್ಟುವಾಗಲೇ ಇವನ ದೃಷ್ಟಿಯಲ್ಲಿ ಕೆಲ ಬೆಳವಣಿಗೆಗಳು ಆಗಿಲ್ಲ ಅಂತ.
ಬೌದ್ದಿಕವಾಗಿಯೂ ಅತಿ ಸೂಕ್ಷ್ಮ ಆದ್ದರಿಂದ ಇವನನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕಾಯಿತು.
ಹುಟ್ಟಿನಿಂದ ಅನಾಥ ಯಾವ ಯಾವದೋ NGO ಗಳು ವಿಕಲ ಚೇತನ ಮಕ್ಕಳಿಗೆ ವಿದ್ಯಾಬ್ಯಾಸ ನೀಡುವ ಶಾಲೆಗಳಲ್ಲಿ ಇವನಿಗೆ ಇವನಿಗೆ 7 ನೇ ತರಗತಿ ತನಕ ವಿದ್ಯಾಬ್ಯಾಸ ಊಟ-ಉಪಚಾರ ನೀಡಿದೆ.
ನಂತರ ಒಂದು ಕುಟುಂಬ ಇವನನ್ನು ಸಾಕಲು ದತ್ತು ಪಡೆದಿರಬೇಕು ಅವರಿಗೆ ಗಂಡು ಮಕ್ಕಳಿಲ್ಲ ಒಂದು ಹೆಣ್ಣು ಮಗಳು, ಕುಟುಂಬದ ಯಜಮಾನ ಗ್ಯಾರೇಜ್ ಕಾರ್ಮಿಕ ದತ್ತು ಪಡೆದ 8-10 ವರ್ಷದಲ್ಲಿ ಯಜಮಾನ ಮೃತರಾಗಿದ್ದಾರೆ ,ಕೂಲಿ ಕಾರ್ಮಿಕ ಸಾಕು ತಾಯಿ ಜೀವನದ ಅನಿವಾಯ೯ದಿಂದ ನಾರಾಯಣನಿಗೆ ಕೂಲಿ ಕೆಲಸಕ್ಕೆ ಒತ್ತಾಯದಿಂದ ಕಳಿಸಿದ್ದಾಳೆ ಆದರೆ ನಾರಾಯಣನ ದೈಹಿಕ ಅಸಮರ್ಥತೆಯಿಂದ ಯಾರೂ ಕೆಲಸ ಕೊಡಲಿಲ್ಲ, ಇದರಿಂದ ಸಾಕು ತಾಯಿಗೆ ಇವನು ಹೊರೆ ಅನ್ನಿಸಿದೆ, ನಾರಾಯಣನೂ ಅಸಾಧ್ಯ ಸಿಟ್ಟು ಮತ್ತು ಜಗಳ ಮಾಡುವ ಸ್ವಭಾವದವನಾದ್ದರಿಂದ ಅವರೇ ಇವನಿಗೆ ರೈಲಲ್ಲಿ ಹತ್ತಿಸಿ ಹೊರೆ ಇಳಿಸಿಕೊಂಡಿರಬಹುದು ಅಥವ ನಾರಾಯಣನೇ ಅವರ ಸಂಬಂದಕ್ಕೆ ರೋಸಿ ಮನೆ ಬಿಟ್ಟಿರಬೇಕು.
ಪ್ರಾರಂಭದಲ್ಲಿ ನಮ್ಮಲ್ಲೂ ಅವನಿಂದ ಹೊಡೆತ ತಿನ್ನದವರೇ ಇಲ್ಲ, ಕ್ರಮೇಣ ನಾವೆ ಎಲ್ಲಾ ಅವನಿಗೇ ಹೊಂದಿಕೊಂಡು ಹೋಗಬೇಕಾಯಿತು ಆದರೆ ದೇವರಂತ ಹುಡುಗ.
12 ವರ್ಷದಲ್ಲಿ ನಾರಾಯಣನೇ ನಮಗೆ Boss ನಾವೆಲ್ಲ ಅವನ ಅಡಿಯಾಳು ಅಂತ ಗೆಳೆಯರು ತಮಾಷೆ ಮಾಡುತ್ತಾರೆ.
ನಮ್ಮ ತಂದೆ ಕೂಡ ಅನಾಥ ಮಗುವಾಗಿ ಎಲ್ಲೋ ದಾರಿ ಮಗ್ಗುಲಲ್ಲಿ ಬಿಸಾಡಿದ ಮಗುವಾಗಿದ್ದ ಕಥೆ ನಮಗೆ ಗೊತ್ತಿರುವುದರಿಂದ ನಾವು ನಾರಾಯಣನ ಜೀವನ ಪರ್ಯಂತ ಪಾಲಕರಾಗಿದ್ದೇವೆ, ಇತ್ತೀಚೆಗೆ ಹೊಸ ಸ್ಮಾರ್ಟ್ ಫೋನ್ ಅವನಿಗೆ ಕೊಡಿಸಿದ್ದೇನೆ ಅದರಲ್ಲಿ ಬೆಂಗಾಲಿ, ಹಿಂದಿ, ಓರಿಯಾ ಸಿನಿಮಾ ಇತ್ಯಾದಿ ಕಷ್ಟಪಟ್ಟು ನೋಡುತ್ತಾನೆ ಹಾಗಂತ ಅವನು ಈಗ ಕನ್ನಡವೂ ಕಲಿತಿದ್ದಾನೆ ಹಿಂದಿ-ಇಂಗ್ಲೀಷ್- ಬೆಂಗಾಲಿ - ಓರಿಯಾ - ಬೋಜ್ ಪುರಿ ಅವನಿಗೆ ಮೊದಲಿಂದ ಬರುತ್ತದೆ.
ಈಗ ನಾರಾಯಣನ ವಯಸ್ಸು 40 ಹತ್ತಿರ,ಮದುವೆ ಆಗ್ತೀಯ ಅಂದರೆ ಆಗುವುದಿಲ್ಲ ಅನ್ನುತ್ತಾನೆ ಯಾರನ್ನೂ ನಂಬುವುದಿಲ್ಲ.
Comments
Post a Comment