#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್.
ಇವತ್ತು ಅವರು FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು.
ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು.
ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು.
ಮಂತ್ರಿಗಳ ಅಧಿಕಾರ ಅವರ ಹಿಂಬಾಲಕರು ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ ಅದಕ್ಕೆ ಅಧಿಕಾರಿಗಳೂ ಒಲೈಸುವ ಲಾಭ ಪಡೆಯಲು ಅವರವರಲ್ಲೇ ಪೈಪೋಟಿ ಉಂಟಾಗಿ ನನ್ನ ಮತ್ತು ನನ್ನ ಸಂಗಡಿಗರ ಮೇಲೆ ವಿವಿದ 22 ಕೇಸ್ ಸಾಗರದಲ್ಲಿ, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ 4 ಕೇಸ್ ಗಳು,ರೌಡಿ ಶೀಟರ್ ದಾಖಲೆ, ವ್ಯವಹಾರಗಳಲ್ಲಿ ತೊಂದರೆ ಇದರಿಂದ ನನ್ನ ವ್ಯವಹಾರ ನೆಲ ಕಚ್ಚಿತ್ತು.
ರೈಸ್ ಮಿಲ್ ಕೆ.ಎಸ್.ಪ್ ಸಿ ಹರಾಜಿಗೆ ತಂದಿತ್ತು ಅಲ್ಲಿ ವ್ಯವಸ್ಥಾಪಕ ಆದವರು ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕ ಆದರೆ ಆತನನ್ನು ವಿರೋದಿಗಳು ಬಳಸಿಕೊಂಡಿದ್ದರಿಂದ ಇಲ್ಲದ ತೊಂದರೆ ಅವಮಾನ ಆತ ಸತತವಾಗಿ ನೀಡಿದ ಇದಕ್ಕಾಗಿ ಸಕಾ೯ರದ ಜೀಪನ್ನು ಬಳಸುತ್ತಿದ್ದರು.
ಮನೆ ಸಾಗರದ SBI ಜಪ್ತಿಗೆ ಮತ್ತು ಜಮೀನುಗಳು ಬೀಮನ ಕೋಣೆಯ ಪಿ.ಎಲ್.ಡಿ ಬ್ಯಾಂಕ್ ಗೆ ಅಡಮಾನ ಆಗಿ ಬಿಟ್ಟಿತ್ತು.
ಜಿಲ್ಲಾ ಪಂಚಾಯತ್ ಸದಸ್ಯನಾಗುವ ಮುನ್ನ ಇದ್ದ ಕಾರು ಬೈಕ್ ಗಳು ಕಳೆದುಕೊಂಡು ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದೆ.
ಜಿಲ್ಲಾ ಪಂಚಾಯತ್ ಅಧಿಕಾರ ಮುಗಿದ ತಕ್ಷಣ ಗೆಳೆಯರೂ ದೂರ ಆದರು ಅಧಿಕಾರ ಹಣ ಎರೆಡೂ ಇಲ್ಲದ ಮತ್ತು ಸಕಾ೯ರದ ಮಂತ್ರಿಗಳ ದ್ವೇಷಕ್ಕೆ ತುತ್ತಾದ ಉಪಯೋಗಕ್ಕೆ ಭಾರದ ಗೆಳೆಯನ ಸಮೀಪ ಇದ್ದರೆ ಆಗುವ ನಷ್ಟದ ಪರಿಜ್ಞಾನ ಅವರಿಗಿತ್ತು.
ಆಗಲೆ ಸಾಗರದ SBI ಬ್ಯಾಂಕ್ ಗೆ ವಗ೯ವಾಗಿ ಬಂದ ಉಮೇಶ್ ಹೆಗ್ಗಡೆ (ಈಗ ರವಿ ಬೆಳೆಗೆರೆ ಹಾಯ್ ಬೆಂಗಳೂರು ಮತ್ತು ಅವರ ಶಿಕ್ಷಣ ಸಂಸ್ಥೆಯ CEO), ಕೆ.ಎಸ್.ಎಫ್.ಸಿ ಯಲ್ಲಿದ್ದ ಶಾಲಾ ಸಹಪಾಟಿ ನಮ್ಮ ಊರಿನ ದಾಸ ಕೊಪ್ಪದ ನಾಗರಾಜ್, ಪಿ.ಎಲ್.ಡಿ. ಬ್ಯಾಂಕಿನ ವ್ಯವಸ್ಥಾಪಕರಾಗಿದ್ದ ಹಂದಿಗೋಳ್ ಸಾಹೇಬರು (ನಂತರ ಜಿಲ್ಲಾ ವ್ಯವಸ್ಥಾಪಕರಾಗಿ ನಂತರ ರಾಜ್ಯ ಮಟ್ಟದ ಹುದ್ದೆ ನಿರ್ವಹಿಸಿ ಈಗ ಶಿವಮೊಗ್ಗ ಸಮೀಪದಲ್ಲಿ ಪೆಟ್ರೋಲ್ ಬಂಕ್ ಮಾಲಿಕರಾಗಿದ್ದಾರೆ) ಇವರೆಲ್ಲ ನನಗೆ ದೈಯ೯ ನೀಡಿದ್ದರಿಂದ ಮತ್ತು ತೊಂದರೆ ನಿವಾರಿಸಿದ್ದರಿಂದ ಸಾಲ ತೀರುವಳಿ ಮಾಡಿ ಆಸ್ತಿ ಉಳಿಸಿಕೊಂಡೆ.
ಆಗ ಮದು ಲಾಯರ್ ನನ್ನ ಪರಿಸ್ಥಿತಿ ಅರಿತು ಅವತ್ತು ಹೇಳಿದ್ದು "ಅರುಣ್ ಪ್ರಸಾದ್ ನಿಮ್ಮ ಕೇಸ್ ಗಳನ್ನ ಉಚಿತವಾಗಿ ನಡೆಸಿ ಗೆದ್ದು ಕೊಡುತ್ತೇನೆ, ನೀವು ಕೋಟ್೯ಗೆ ತಪ್ಪದೇ ಬರಬೇಕು" ಅಂತ ಹೇಳಿ ಶಿವಮೊಗ್ಗದ ಕೋಟ್೯ ಪಕ್ಕದ ಡಿಸಿಸಿ ಬ್ಯಾಂಕ್ ಅವರಣದ ಕ್ಯಾಂಟೀನ್ ನಲ್ಲಿ ಕಾಫಿ ಕುಡಿಸಿದ್ದರು ಮತ್ತು ಅದರಂತೆ ನಡೆದರು.
ಮದು ಲಾಯರ್ ಮಾಡಿದ ಉಪಕಾರ ಯಾವತ್ತೂ ಮರೆಯಲುಂಟಾ? ಇವತ್ತು ಮದುಲಾಯರ್ ದಂಪತಿ ಪೋಟೋ ಪೇಸ್ ಬುಕ್ ನಲ್ಲಿ ಪೋಸ್ಟ್ ಆಗಿದ್ದು ನೋಡಿ ನೆನಪಾಯಿತು.
ಇವತ್ತಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮದು ಲಾಯರ್ ಸುಪ್ರಸಿದ್ದರು.
Comments
Post a Comment