ಈಗಿನ ಸಾಗರದ ಮಧ್ಯ ಬಸ್ ಸ್ಟ್ಯಾಂಡ್ ನಲ್ಲಿ ಶೆಟ್ಟರ ನಾಟಿ ಕೋಳಿ ಹೋಟೆಲ್ ಕೆಲವು ದಶಕಗಳ ಕಾಲ ಸುಪ್ರಸಿದ್ಧ ಆಗಿತ್ತು.
ಈ ಶೆಟ್ಟರಿಗಾಗಿಯೇ ನಾಟಿ ಕೋಳಿ ಸಾಕುವವರು ಸಾಗರ ತಾಲ್ಲೂಕಿನ ಹೆಗ್ಗೋಡು ಆವಿನಳ್ಳಿಗಳಲ್ಲಿ ಇದ್ದರು.
ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮತ್ತು ಅನ್ನದ ಜೊತೆ ಸಾಗರ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಜನರಿಗೆ ಆಕಷ೯ಣೀಯ ಹೋಟೆಲ್ ಆಗಿತ್ತು.
12 ಅಡಿ ಅಗಲ 50 ಅಡಿ ಉದ್ದದ ಸಣ್ಣ ಜಾಗದಲ್ಲಿ ಇವರ ಹೋಟೆಲ್ ಸುಮಾರು 3 ದಶಕ ಪ್ರಖ್ಯಾತಿ ಪಡೆದಿತ್ತು.
1996 ರ ನಂತರ ಇವರ ವೃದ್ಧಾಪ್ಯದಿಂದ ಮತ್ತು ಸದರಿ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿಗಾಗಿ ಶೆಟ್ಟರು ಹೋಟೆಲ್ ತ್ಯಜಿಸಿದರಂತೆ, ಅವರ ಮೂಲ ಊರಾದ ಕರಾವಳಿಯ ಹಳ್ಳಿಯಲ್ಲಿ ಸುಸಜ್ಜಿತ ಮನೆ ಆಸ್ತಿ ಮಾಡಿದ್ದಾರೆ ಅಂತ ಜನ ಹೇಳುತ್ತಿದ್ದನ್ನ ಕೇಳಿದ್ದೆ.
ನಂತರ ಈ ರೀತಿಯ ಹೋಟೆಲ್ ಸಾಗರದಲ್ಲಿ ಯಾವುದೂ ಬರಲಿಲ್ಲ ಬೆಂಗಳೂರಿನಲ್ಲಿ ಇಂತಹ ಹೊಸರೀತಿಯ ಹೋಟೆಲ್ ಗಳು ಪ್ರಸಿದ್ಧವಾಗಿದೆ.
ಸ್ಥಳಿಯವಾಗಿ ಬೆಳೆಸುವ ನಾಟಿ ಕೋಳಿ ಮತ್ತು ಸ್ಥಳಿಯವಾಗಿ ಬೆಳೆಯುವ ಅಕ್ಕಿ ಇದನ್ನು ಬಳಸಿ ಸ್ವಯಂ ಉದ್ಯೋಗ ಮಾಡುವ ಸಾಧ್ಯತೆ ಕೆಲವು ದಶಕದ ಹಿಂದೆಯೇ ಶೆಟ್ಟರು ತೋರಿಸಿ ಕೊಟ್ಟಿದ್ದಾರೆ.
ಅವರು ನಡೆಯುವಾಗ ಸಣ್ಣದಾಗಿ ಕು೦ಟುತ್ತಿದ್ದರಿಂದ ಈ ಹೆಸರು ಅವರಿಗೆ ಬಂದಿತ್ತು ಅದನ್ನು ಶೆಟ್ಟರೂ ವಿರೋದಿಸಲಿಲ್ಲ ಹಾಗಾಗಿ ಅದೇ ಅವರ ಖಾಯಂ ಹೆಸರಾಗಿತ್ತು.
ಶೆಟ್ಟರ ನಾಟಿ ಕೋಳಿ ಸಾರು ಅಕ್ಕಿ ರೊಟ್ಟಿ ಒಂದು ಕಾಲದಲ್ಲಿ ಸಾಗರಕ್ಕೆ ಬರುವ ಮಂತ್ರಿ ಮಹೋದಯರಿಂದ ಚಲನಚಿತ್ರ ನಟ ನಟಿಯರವರೆಗೆ ಪ್ರಸಿದ್ದಿ ಪಡೆದಿತ್ತು ಈಗಲೂ ಗೊತ್ತಿರುವವರು ನೆನಪಿಸಿಕೊಳ್ಳುತ್ತಾರೆ.
Comments
Post a Comment