#ಗ೦ಗೋದಕ_ಕುಡಿಯುವ_ನೀರಿನ_ಉದ್ದಿಮೆದಾರರು_ಶಿವಮೊಗ್ಗದ_ಐಟಿ_ಪಾಕ೯ನ_ಉದ್ದಿಮೆದಾರ_ನವೀನ್.
ನನ್ನ ತೂಕ ಇಳಿಸುವ ಪ್ರಯತ್ನಕ್ಕೆ ಸಹಕರಿಸಲು ಮೊನ್ನೆ ನವಣೆ, ಸಜ್ಜೆ , ಸಾಮೆ, ಬರಗು, ಊದಲ, ಅಕ೯ ಮತ್ತು ಕೊರಲೆ ಎಂಬ ಸಿರಿಧಾನ್ಯ ಎಂಬ ಶಿಲಾಯುಗದ ಕಿರಿದಾನ್ಯ ಉಡುಗೊರೆಯಾಗಿ ನೀಡಿ ಹೋಗಿದ್ದರು.
ನನಗೆ ಇದರ ದೊಸೆಗಿಂತ ರೊಟ್ಟಿ ತುಂಬಾ ಹಿಡಿಸಿದೆ ಇವತ್ತು ಇದರದ್ದೇ ನನ್ನ ಉಪಹಾರ ಆಯಿತು. ರೋಮನ್ನರು ಈ ಕಿರಿ ಧಾನ್ಯದ ರೊಟ್ಟಿ ತಿನ್ನುತ್ತಿದ್ದರಂತೆ, ಶಿಲಾಯುಗದಲ್ಲಿ ಈ ಕಿರಿದಾನ್ಯದ ಬಳಕೆ ಇತ್ತಂತೆ.
60ಕ್ಕಿಂತ ಹೆಚ್ಚಿನ ಕಿರಿದಾನ್ಯದ ಪ್ರಬೇದದಲ್ಲಿ ಕೆಲವು ಮಾತ್ರ ಈಗ ದೊರೆಯುತ್ತಿದೆ.
ಅತ್ಯುತ್ತಮ ಪ್ರೋಟಿನ್ ಯುಕ್ತ, ಹೃದಯದ ಆರೋಗ್ಯಕ್ಕೆ ಸಹಕಾರಿ ಮತ್ತು ತೂಕ ಇಳಿಸಲು ಸಹಕಾರಿ ಆದ ಕಿರಿಧಾನ್ಯ ಉರುಪ್ ಸಿರಿಧಾನ್ಯ ಬೊಜ್ಜು ನಿವಾರಣೆ ಮತ್ತು ಡಯಾಬಿಟಿಕ್ ನಿಯ೦ತ್ರಣಕ್ಕೂ ಸಹಕಾರಿ ಅಂತ ಹೇಳುತ್ತಾರೆ ಇದನ್ನು ಸ್ಟತಃ ಬಳಸಿ ಸುಮಾರು 40 kg ತೂಕ ಇಳಿಸಿಕೊಂಡಿರುವ ಐಟಿ ಮಿತ್ರ ನವೀನ್ ನಮ್ಮೆದುರು ಇದ್ದಾರೆ.
Comments
Post a Comment