Skip to main content

ಕೊಡಚಾದ್ರಿಯ ಮೂಲ ಮೂಕಾಂಬಿಕ ಸನ್ನಿದಾನದಲ್ಲಿ ನೆರವೇರಿಸುವ ಶಕ್ತಿ ಪೂಜೆಗೆ ಮಹತ್ವ ಇದೆ

#ಕೊಡಚಾದ್ರಿಯ_ಮೂಲಮೂಕಾಂಬಿಕ_ಸನ್ನಿದಾನದಲ್ಲಿನ_ಶಕ್ತಿಪೂಜೆ
 
  ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.
  ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.
   ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಅಳಿಯ ರಾಮ ಜೋಗಿ ಮತ್ತು ಮಗಳು ಸುಶೀಲಮ್ಮ ದಂಪತಿ ಅವರ ಮಗ ನಾಗೇಂದ್ರ ಜೋಗಿ ತನಕ ಜನ ಗುರುತಿಸುತ್ತಾರೆ ಅದಕ್ಕೂ ಹಿಂದಿನ ಅಚ೯ಕ ಕುಟುಂಬ ಸ್ಥಳಿಯರಿಗೆ ನೆನಪಿನಲ್ಲಿ ಉಳಿದಿಲ್ಲ. ಪ್ರತಿ 12 ವರ್ಷಕ್ಕೊಮ್ಮೆ ಬಾರಾಪಂತ ಯಾತ್ರೆ ನಾಸಿಕ್ ನಿಂದ ಕೊಡಚಾದ್ರಿಗೆ ಬರುತ್ತಿತ್ತು ಕಾರಣ ಮೂಲ ಸಿದ್ದ ಪೀಠ ಇಲ್ಲಿಯೇ ಇತ್ತು ಕಾಲ ಕ್ರಮೇಣ ಸಿದ್ಧಪೀಠ ಕೊಡಚಾದ್ರಿಯ ಬುಡದ ಕಮಲಶಿಲೆ ಸಮೀಪದ ಹಲವಾರಿ ಮಠಕ್ಕೆ ಸ್ಥಳಾಂತರ ಆಗಿರಬೇಕು.
  ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ, ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ಇಲ್ಲಿ ತಂಗಿ ಮೂಲ ಮೂಕಾಂಬಿಕ ತಾಯಿ ಪೂಜಿಸಿದ ಇತಿಹಾಸ ದಾಖಲೆ ಇದೆ. ಈಗ ಆಗು೦ಬೆಯಲ್ಲಿ ವರ್ಷಕ್ಕೊಮ್ಮೆ ಕಾಣುವ ಕಾಡಾನೆ ಒ0ದು ದಿನ ಸಂಜೆ ಮೂಲ ಮೂಕಾಂಬಿಕ ದೇವಾಲಯದ ಎದುರು ಬಂದು ಘೀಳಿಟ್ಟಾಗ ನೆರೆದ ಭಕ್ತರು ಪ್ರವಾಸಿಗಳು ತುಂಬಾ ಭಯ ಪಟ್ಟಿದ್ದರಂತೆ ನಂತರ ಹಾಗೇ ವಾಪಾಸು ಹೋಗಿದ್ದು ಇಲ್ಲಿಯವರು ನೆನಪಿಸುತ್ತಾರೆ.
   ಇಲ್ಲಿ ನಡೆಯುವ ಶಕ್ತಿ ಪೂಜೆಗೆ ವಿಶೇಷ ಶಕ್ತಿ ಇದೆ ಎಂಬ ಪ್ರತೀತಿ ಇದೆ, ಶಕ್ತಿ ಪೂಜೆಗೆ ಹೆಚ್ಚು ಜನ ಕೇರಳದಿಂದ ಬರುತ್ತಾರೆ.
  ಈ ಶಕ್ತಿ ಪೂಜೆ ನಡೆದು ಬಂದದ್ದು ಈಗಿಂದಲ್ಲ ಸಾವಿರಾರು ವರ್ಷದಿಂದ.
   ಈ ಪೂಜೆಗೆ ಸುಮಾರು 3 ಸಾವಿರದಿಂದ 4 ಸಾವಿರ ಖಚಾ೯ಗುತ್ತದೆ (ಬಲಿ ಪೂಜೆ ಸೇರಿ) ನಾನು ಇಲ್ಲಿನ ಶಕ್ತಿ ಪೂಜೆಯಲ್ಲಿ  ಸಂಪೂಣ೯ ಭಾಗವಹಿಸಿದ್ದೆ 8 ವರ್ಷದ ಹಿಂದೆ.
   ಅನೇಕರು ಸಾವಿರಾರು ವರ್ಷದ ಈ ಶಕ್ತಿ ಪೂಜೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದ ಉಧಾಹರಣೆ ಇದೆ.
  ರಾಜ್ಯ ಸಕಾ೯ರ ಇದನ್ನೆಲ್ಲ ಸಮಪ೯ಕ ವಾಗಿ ಬಳಸಿ ಇದನ್ನು ಪ್ರಮುಖ ಪೂಜಾ ಪ್ರವಾಸಿ ಕೇಂದ್ರ ಮಾಡಬಹುದು.
  ಪ್ರಸಿದ್ಧ ಸ್ವಾಮಿ ಒಬ್ಬರು ಇಲ್ಲಿನ ಶಕ್ತಿ ಪೂಜೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದ ಕಥೆ ಇಲ್ಲಿನ ಅಚ೯ಕರ ಪತ್ನಿ ಸುಶೀಲಮ್ಮ ರಾಮ ಜೋಗಿ (ಈಗ ಇಲ್ಲ) ಅವರು ನನಗೆ ವಿವರಿಸಿದ್ದರು.
  ಹಿಂದಿನ ದಿನವೇ ಬೆಟ್ಟಕ್ಕೆ ಬಂದು ಪರಮೇಶ್ವರ ಭಟ್ಟರ ಅಥಿತಿ ಆಗಿ ತಂಗಿದ್ದ ಸ್ವಾಮಿ ಬೆಳಿಗ್ಗೆ ಮೂಲ ಮೂಕಾಂಬಿಕ ದಶ೯ನಕ್ಕೆ ಬಂದವರು ಒ0ದು ಹುಕುಂ ಮಾಡುತ್ತಾರೆ " ಇವತ್ತಿಂದ ಇಲ್ಲಿ ಶಕ್ತಿ ಪೂಜೆಯ ಬಲಿ ನಡೆಸಬಾರದು" ಅಂತ ಆಗ ಸುಶೀಲಮ್ಮ ಗುರುಗಳೇ ನೀವೇ ದೇವಿಯ ಪೂಜೆ ಮಾಡಿ ಆರತಿ ಬೆಳಗಿ ಈ ರೀತಿ ಆದೇಶ ನೀಡಿ, ನಾವು ಪಾಲಿಸುತ್ತೇವೆ ಏಕೆಂದರೆ ಈ ವರೆಗೆ ಅನೇಕ ಅಧಿಕಾರಿಗಳು ಈ ರೀತಿ ಆದೇಶ ಮಾಡಿ ಹೋದವರೇ ಪುನಃ ಬಂದು ಪ್ರಾರಂಬಿಸಿ ಅಂದ ಉದಾಹರಣೆ ಇದೆ " ಅಂದಾಗ ಕಣ್ಣು ಮುಚ್ಚಿ ಪ್ರಾಥಿ೯ಸಿದ ಆ ಸ್ವಾಮಿಗಳು ನಂತರ "ಈಗ ಹೇಗೆ ನಡೆಯುತ್ತಿದೆ ಹಾಗೆ ಮುಂದುವರಿಯಲಿ " ಎಂದರಂತೆ.
  ಬಲಿ ಪೂಜೆ ನಿಲ್ಲಿಸಿದರೆ ಆಗಮ ಪೂಜೆಗಾಗಿ ಅಚ೯ಕರ ನೇಮಿಸಿ ತಲತಲಾಂತರದಿಂದ ನೂರಾರು ವಷ೯ದಿಂದ ಕೊಡಚಾದ್ರಿಯ ಬೀಕರ ಮಳೆ ಗಾಳಿ ಚಳಿಯಲ್ಲಿ ಪೂಜೆ ನಡೆಸಿದ ಬಳೆಗಾರ ಅರ್ಚಕರನ್ನ ಬದಲಿಸ ಬೇಕೆಂಬ ಸಣ್ಣತನದ ಅನೇಕರ ಬಯಕೆ ಈಡೇರಲಿಲ್ಲ.
  ನೂರಾರು ವರ್ಷದಿಂದ ಹೊಟ್ಟಿ ಬಟ್ಟೆ ಕಟ್ಟಿ ಮೂಲ ಮೂಕಾಂಬಿಕ ದೇವಿಯ ಸೇವೆ ಮಾಡಿದ ಈ ಬಳೆಗಾರ ಕುಟುಂಬದ ನಾಗೇಂದ್ರ ಜೋಗಿ ಈಗ ವ್ಯವಹಾರ ಕೃಷಿ ಮತ್ತು ರಾಜಕೀಯದಲ್ಲಿ ಸಕ್ರಿಯ ಆಗಿರುವುದು ಅನೇಕರ ಹೊಟ್ಟೆ ಕಿಚ್ಚಿಗೆ ಕಾರಣ ಆಗಿದ್ದು ಸುಳ್ಳಲ್ಲ.
  ಈಗ ಸಂಜೆ 6 ರ ಒಳಗೆ ಬೆಟ್ಟಕ್ಕೆ ಹೋದವರು ಕಡ್ಡಾಯವಾಗಿ ವಾಪಾಸ್ ಬರಲೇ ಬೇಕಾದ ವನ್ಯಜೀವಿ ಅರಣ್ಯದ ಕಾನೂನು ಬೇರೆ ಇದೆ ಹಾಗಾಗಿ ಇಲ್ಲಿ ಶಕ್ತಿ ಪೂಜೆ ಕಷ್ಟಸಾಧ್ಯವಾಗಿದೆ.
  ಇಲ್ಲಿ ಶಕ್ತಿ ಪೂಜೆ ಮಾಡಿದರೆ ಶತ್ರು ನಾಶ ಎಂಬ ಪ್ರತೀತಿ ಇದೆ ಇಲ್ಲಿ ಶಕ್ತಿ ಪೂಜೆ ಮಾಡಿಸಬೇಕೆಂಬ ಅಪೇಕ್ಷೆ ಇದ್ದವರು ಮಾಹಿತಿಗಾಗಿ ಇಲ್ಲಿನ ಪರಂಪರಾ ಅಚ೯ಕ ಕುಟುಂಬದ ನಾಗೇಂದ್ರ ಜೋಗಿ (ಮಾಜಿ ಗ್ರಾ.ಪಂ ಅಧ್ಯಕ್ಷರು ನಿಟ್ಟೂರು ) ಇವರನ್ನ ಸಂಪಕಿ೯ಸ ಬಹುದು ಇವರ ಸಂಪರ್ಕ ಸೆಲ್ ನಂಬರ್ 9449500806

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...