ಕವಲಗೋಡು ವೆಂಕಟೇಶ್ ಸದಾ ಕ್ರಿಯಾಶೀಲರು ಇವರದ್ದೆ ಗೆಳೆಯರ ಬಳಗ ಹುಟ್ಟು ಹಾಕಿರುವ ವಿಜ್ಞಾನ ಕೇಂದ್ರದ ಮೂಲಕ ಅನೇಕ ಪುಸ್ತಕ ತಂದಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿನ ವಿಶೇಷ ವ್ಯಕ್ತಿಗಳನ್ನು ಸಾಗರಕ್ಕೆ ಕರೆ ತಂದು ಇಲ್ಲಿಯವರೊಂದಿಗೆ ಸಭೆ ಸಂವಹನ ಏಪಾ೯ಡಿಸುತ್ತಾರೆ.
ಇವರು ಸಾಗರದ ಅತ್ಯಂತ ಬುದ್ದಿಶಾಲಿ ಉದ್ದಿಮಿ ಛಾಯಾ ಹೋಟೆಲ್ ಬೀಮಣ್ಣರ ಪುತ್ರ, ಸಾಗರದ ಪ್ರಸಿದ್ಧ ವರದಾಶ್ರೀ ಲಾಡ್ಜ್ ಮಾಲಿಕರು.
ನನ್ನ ಕಾದಂಬರಿ ಬಗ್ಗೆ ಓದಿ ವಿಮಷೆ೯ ಮಾಡಿದ್ದಾರೆ, ಬೆನ್ನುತಟ್ಟಿದ್ದಾರೆ ಮತ್ತು ಸಲಹೆ ಕೂಡ ನೀಡಿದ್ದಾರೆ ಇವರ ಪ್ರೋತ್ಸಾಹ ಸಲಹೆಗೆ ಅಭಾರಿ.
ಚಂಪಕ ಸರಸ್ಸು ಒಂದು ಪ್ರವಾಸಿ ಕೇಂದ್ರ ಆಗಲಿ ಎಂದು ಹಾರೈಸಿದ್ದಾರೆ ಅದರ ಬಗ್ಗೆ ಕವಲಗೋಡು ವೆಂಕಟೇಶರ ಹೆಚ್ಚಿನ ಶ್ರಮ ಅವಶ್ಯವಿದೆ ಎಂದು ಅವರನ್ನ ನೆನಪಿಸುತ್ತೇನೆ.
ಕೆಳದಿ ರಾಜರ ಇತಹಾಸ ಬೆಳಕು ಚೆಲ್ಲವ ಈ ಕಾದಂಬರಿ ಮಲೆನಾಡನ್ನು ಆಳಿಹೋದ ರಾಜಮನೆತನದ ಒಂದು ಐತಿಹಾಸಿಕ ಘಟನೆಯ ಸುತ್ತ ಗಮನ ಸೆಳೆದಿದೆ. ಈವರೆಗೆ ಇತಿಹಾಸಗಾರರು ಗಮನಿಸದ ವಿಷಯವೊಂದನ್ನು ಕುರಿತು ಮಲೆನಾಡಿನ ಮತ್ತು ಅನಂತಪುರಂ ಸುತ್ತಮುತ್ತ ಇದ್ದ ತಪ್ಪುಗ್ರಹಿಕೆ ಹೋಗಲಾಡಿಸುವ ಪ್ರಯತ್ನ ಇದಾಗಿದೆ. ರಾಜಾ ವೆಂಕಟಪ್ಪ ನಾಯಕ ನಿತ್ಯ ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದು ತಮ್ಮ ಪರಿವಾರದ ಮಂತ್ರಿಗಳು, ಸೇನಾಧಿಕಾರಿಗಳೊಂದಿಗೆ ರಾಜಬೀದಿ ಮುಖಾಂತರ ಆನಂದಪುರದ ಕೋಟೆಂದ ಕವಲೇದುರ್ಗಕ್ಕೆ ಹೋಗುವಾಗ ರಾಜಾಶ್ವಗಳ ಪುಟಿದೇಳುವ ಶಬ್ದ, ಸಾಗಿಬರುವ ರಾಜಪರಿವಾರ, ಗಂಗಾಮಠದ ಆವರಣದಲ್ಲಿನ ಗುತ್ಯಮ್ಮ ತಾಯಿಗೆ ಬೆಳಗಿನ ಪ್ರಣಾಮವನ್ನು ರಾಜ ತನ್ನ ಕುದುರೆಯ ಮೇಲೆ ಸಲ್ಲಿಸಿ, ಒಂದು ಕ್ಷಣ ಇಡೀ ರಾಜಪರಿವಾರ ಕ್ಷಣಮಾತ್ರ ನಿಂತು ಹೊರಡುತ್ತಿರುವುದು. ಅಂತಹ ಶಿಸ್ತು ರಾಜನ ಪರಿವಾರದ ಸೈನಿಕರು, ಮಂತ್ರಿಮಹೋದಯರಿಗೆ ಹಿಡಿದು ಆನೆ, ಕುದುರೆಗಳಿಗೆ ಅಂದಿನ ಕಾಲದಲ್ಲಿ ಇತ್ತು.
ವೆಂಕಟಪ್ಪ ನಾಯಕ ತನ್ನ ಬಲಬದಿಯ ಗುತ್ಯಮ್ಮ ತಾಯಿಗೆ ಕೈ ಮುಗಿಯುವಾಗ ಎಡಕ್ಕೆ ಬೆಳ್ಳಂಬೆಳಿಗೆ ಶುಭ ಮಹೂರ್ತಕ್ಕೆ ಸರಿಯಾಗಿ ಮನೆಯೊಂದರ ಎದರು ದೊಡ್ಡದಾದ, ಸುಂದರ ಆಕರ್ಷಕವಾದ ರಂಗೋಲಿ, ರಂಗೋಲಿ ನೋಡಿದರೆ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗಿ, ಉತ್ಸಾಹ, ಪ್ರೇರಣೆ ಕ್ಷಣಮಾತ್ರ ನೋಡುವುದರಲ್ಲಿ ಪ್ರೇರೇಪಿಸುತ್ತಿತ್ತು.
ಈ ರಂಗೋಲಿಂದ ರಾಜ ವೆಂಕಟಪ್ಪ ನಾಯಕ ಆರ್ಕಷಿಸಿತನಾಗಿದ್ದ. ಚಂಪಕಾಳನ್ನು ಮದುವೆ ಆಗುವ ಬಗ್ಗೆ ಬಯಸಿದ್ದ. ಈ ಮದುವೆಗೆ ಸಖಿ ನೀಲಮ್ಮನ ಸಹಾಯದಿಂದ ಯಶಸ್ವಿಯಾದ. ಇದರಿಂದ ಮಹಾರಾಣಿ ಅಸಮಾಧಾನಗೊಂಡಿದ್ದು ಯಾವುದೇ ಔಷಧಿಗಳು ಕೆಲಸ ಮಾಡದೆ ರಾಣಿ ಮೃತರಾಗಿದ್ದು, ರಾಜ ರಾಜ್ಯಬಿಟ್ಟು ಸನ್ಯಾಸ ಸ್ವೀಕರಿಸಲು ಹೊರಟಿದ್ದು, ಇದರಲ್ಲಿ ಅಡಕವಾಗಿದೆ.
ವೆಂಕಟಪ್ಪ ನಾಯ್ಕರ ದೂರದಷ್ತಿ ಕೋಟೆಗಳ ದುರಸ್ತಿ, ಕಡಲುಗಳ್ಳರು, ಪೋರ್ಚುಗೀಸರು, ಅರಬರು ಸಮುದ್ರದಿಂದ ವಿಜಯನಗರ ಅರಸರಿಗೆ ಕೊಡುತ್ತಿರುವ ದಾಳಿ, ಅದನ್ನು ಹಿಮ್ಮೆಟ್ಟಿಸಿ ವಿಜಯನಗರದ ದೊರೆಗಳಿಗೆ ಪ್ರೀತಿಪಾತ್ರನಾಗಿದ್ದ, ಕೊಲ್ಲೂರು ಮೂಕಾಂಬಿಕೆ ದೇವಿಯ ಭಕ್ತ, ದೇವಸ್ಥಾನಗಳಿಗೆ ನಿತ್ಯ ಪೂಜೆ ಕಾಣಿಕೆ, ಖಾಯಂ ಆಗಿ ನಡೆಯಲು ಕೆಲವು ಗ್ರಾಮಗಳ ಉಂಬಳಿ ನೀಡಿದ್ದ. ಕೆಳದಿ ರಾಜ್ಯದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಚಿತ್ರಣ ಬರವಣಿಗೆಯಲ್ಲಿ ಮೂಡಿ ಬಂದಿದೆ.
ಕೆಳದಿ, ಬಿದನೂರು, ಇಕ್ಕೇರಿ ಬಳಸಿ ಆನಂದಪುರ ತಲುಪುವ ಮಾರ್ಗದಲ್ಲಿ ಇರುವ ಕೋಟೆ ಕೊತ್ತಗಳ ಬಗ್ಗೆ ಈ ನೈಸರ್ಗಿಕ ಸೌಂದರ್ಯ, ಪ್ರಕೃತಿ ಆರಾಧನೆ ಬಗ್ಗೆ ತಿಳಿಸಿದ್ದಾರೆ.
ರಾಮಕ್ಷತ್ರಿಯರ ಹೋರಾಟ, ಪೋರ್ಚುಗೀಸರಿಗೆ ಸೋಲಿನ ರುಚಿ ತೋರಿಸಿದ ಬಗ್ಗೆ ವಿವರಣೆ ನೀಡಲಾಗಿದೆ. ಪಶ್ಚಿಮಘಟ್ಟದಲ್ಲಿ ಕಾಳುಮೆಣಸು ಸಂಗ್ರಹಿಸಿ ದಾಸ್ತಾನು ಮಾಡಿ ಬೆಲೆ ಬಂದಾಗ ಮಾರಾಟ ಮಾಡುವ ಪರಿ, ಜಂಬಿಟ್ಟಿಗೆ ಕಲ್ಲಿನಿಂದ ನಿಮಿಸಲಾಗುವ ಕೋಟೆ, ಮನೆಗಳ ವಿವರಣೆ ಇದರಲ್ಲಿ ಅಡಕವಾಗಿದೆ. ಗಂಗಾಮಠದಲ್ಲಿ ನಡೆಯುವ ಲಕ್ಷದೀಪೋತ್ಸವದ ಬಗ್ಗೆ ವಿವರಣೆ, ರಕ್ಷಣಾ ಕಾರ್ಯಗಳ ಬಗ್ಗೆ ತಿಳಿಸಲಾಗಿದೆ. ಚಂಪಕಾ ಮೊಟ್ಟಮೊದಲು ರಂಗೋಲಿಯಲ್ಲಿ ರಾಜ್ಯಲಾಂಛನ ಗಂಡಬೇರುಂಡ ಬಿಡಿಸಿ ನಂತರ ಅವಮಾನವಾದರೆ ರಾಜದಂಡನೆಗೆ ಹೆದರಿ ಅಳಿಸಿದ್ದು, ಚಂಪಕಾ ಪ್ರಾಣ ಗೆಳತಿ ಕಾಂತಿ ರಹಸ್ಯ ತಿಳಿಸಿದ್ದು, ರಾಜ ವೆಂಕಟಪ್ಪ ನಾಯಕ ಬೊಕ್ಕಸದಲ್ಲಿ ಇರುವ ಸಂಪತ್ತಿನ ಹೆಚ್ಚಿನ ಭಾಗ ರಾಜ್ಯದ ಕಲ್ಯಾಣಕ್ಕೆ ಮಿಸಲಿಟ್ಟಿದ್ದು, ಪ್ರಜೆಗಳಿಗೆ ಸಕಲ ಸೌಲಭ್ಯ ನೀಡಿದ್ದು ಕಂಡು ಬಂದಿದೆ.
ಚಂಪಕಾ ಬೆಸ್ತರ ಮಗಳಾಗಿದ್ದರಿಂದ ರಾಜರುಗಳಿಗೆ ಬೇರೆ ಜಾತಿಯ ಮದುವೆ ಆಗಲಿಕ್ಕೆ ಅಡ್ಡಿಲ್ಲವೆಂಬ ಬಗ್ಗೆ ಶಂತನ ಮತ್ತು ಗಂಗೆ ಮದುವೆ ವಿಚಾರ, ಸತ್ಯವತಿಗೆ ವಿವಾಹ ಪೂರ್ವದಲ್ಲಿ ಪರಾಶಕ ಮುನಿಗಳು ಮೋಹಿಸಿದ ವಿಚಾರಗಳ ಬಗ್ಗೆ ರಾಜನಿಗೆ ತಿಳಿಸಿ ಹೇಳುವ ಬಗ್ಗೆ ಬರಹದಲ್ಲಿ ವ್ಯಕ್ತವಾಗಿದೆ.
ಚಂಪಕಾಳ ಮದುವೆ ತಯಾರಿ, ಸ್ನಾನ ವಗೈರೆಗಳ ಬಗ್ಗೆ ವಿವರಣೆ, ಕೋಟೆಯಲ್ಲಿನ ಆಂಜನೇಯ ದೇವಾಲಯದಲ್ಲಿ ನೆರವೇರಿದ ಮದುವೆ ಸಂಸ್ಕಾರಗಳ ಬಗ್ಗೆ ವಿವರಿಸಲಾಗಿದೆ.
ಚಂಪಕಾ ಕೋಟೆ ಒಳಗಿನ ಅರಮನೆಯ ೩ನೇ ಅಂತಸ್ತಿನ ರಾಜರ ಖಾಸಗೀ ಅಂತಃಪುರದಲ್ಲಿ ಕಾಲ ಕಳೆದ ದಿನಗಳು, ಭದ್ರಮ್ಮಾಜಿಯವರು ತಂದ ಬೇಸರ, ಕಾಯಿಲೆ, ನಂತರ ಮರಣ ಹೊಂದಿದ್ದು, ರಾಜನಿಗೆ ಬೇಸರವಾಗಿದ್ದು, ರಾಜ್ಯದ ಕಡೆ ಆಸಕ್ತಿ ಕಡಿಮೆಯಾಗಿದ್ದು, ಚಂಪಕಾಳ ಮದುವೆಯಾಗಿದ್ದಕ್ಕಾಗಿ ರಾಜ್ಯಕ್ಕೆ ಈ ರೀತಿಯ ಸ್ಥಿತಿ ಬಂದಿದ್ದು ಎಲ್ಲಾ ಪ್ರಜೆಗಳು ಮಾತನಾಡುತ್ತಿರುವುದರ ಬಗ್ಗೆ ಚಂಪಕಾಳಿಗೆ ತಿಳಿದು, ನನ್ನ ವಿವಾಹದ ನಂತರ ಬಂದ ಈ ಸ್ಥಿತಿಗೆ ನಾನು ಕಾರಣಳಾದೆ ಎಂದು ಚಂಪಕ ದಿನ ದಿನವೂ ನೆನೆಸಿ ಸೊರಗಿಹೋಗಿದ್ದು, ರಾಜ ವೆಂಕಟಪ್ಪನಾಯಕನ ಸಾಧನೆಗಳನ್ನು ನೀಲಮ್ಮ ಚಂಪಕಾಳಿಗೆ ಹೇಳಿದ್ದು, ನಾಯಕನ ಶೌರ್‍ಯ, ಸಾಧನೆ, ರಾಜ್ಯ ವಿಸ್ತಾರ, ದೇವರ ಬಗೆಗಿನ ನಂಬಿಕೆ, ಜನರಲ್ಲಿ ಉತ್ಸಾಹ ತುಂಬಿದ ಬಗೆಗಳನ್ನು ತಿಳಿಸುತ್ತಾಳೆ.ಅದನ್ನು ಸಂದರವಾಗಿ ಬರೆಯಲಗಿದೆ.
ಯುವರಾಜನ ಸರಣಿ ಆಘಾತ ರಾಜ ಮೌನಿಯಾದದ್ದುನ್ನು, ಚಂಪಕಾ, ಮೌನಕ್ಕೆ ಅಡ್ಡಿ ಪಡಿಸದೆ ಬೆಂಬಲ ನೀಡಿದ್ದು ರಾಜ್ಯದಲ್ಲಿ ಹರಡಿರುವ ಸುಳ್ಳು ವದಂತಿಗಳಿಗೆ ತಾನೇ ಕೇಂದ್ರಬಿಂದು ಎಂಬುದನ್ನು ಅರಿತಿದ್ದಳು. ಈ ಸುಳ್ಳು ಆಪಾದನೆಗಳಿಗೆ ನನ್ನಿಂದ ಏನಾಗಿದೆ, ನಾನೇನು ರಾಜರನ್ನ ಕಟ್ಟಿಹಾಕಿದ್ದೇನಾ ಎಂಬ ಪ್ರಶ್ನೆ ಸದಾ ಕಡುತ್ತಿರುವ ಬಗ್ಗೆ ತಿಳಿಸಲಾಗಿದೆ. ಒಟ್ಟಾರೆಯಾಗಿ ರಾಜರು, ಚಂಪಕಾ ರಾಜ್ಯದ ಪ್ರಜೆಗಳ ದ್ರಷ್ಟಿ ಯಲ್ಲಿ ಕೆಟ್ಟವರು ಆದ ಬಗ್ಗೆ ತಿಳಿಸಲಾಗಿದೆ. ಚಂಪಕಾ ವಿವಾಹದ ನಂತರ ಸಂತೋಷಕ್ಕಾಗಿ ರಾಜ ಆನಂದಪುರ ಎಂದು ಹೆಸರಿಟ್ಟಿದ್ದು ಉಲ್ಲೇಖಿಸಲಾಗಿದೆ.
ನಾಳೆ ಬಿದನೂರಿನಲ್ಲಿ ವಿಶೇಷ ದರ್ಬಾರು ಇದೆ, ಇಲ್ಲಿ ಕೆಳದಿ ಸಂಸ್ಥಾನದ ಸಮಸ್ತ ಕೋಟೆಗಳ ಉಸ್ತುವಾರಿಗಳು ವಿವೀಧ ಸೈನಿಕ ಮುಖಂಡರುಗಳು, ರಾಜತಾಂತ್ರಿಕರು, ಮಂತ್ರಿಮಂಡಳದವರು, ಪ್ರಮುಖ ದೇವಸ್ಥಾನದ ಮುಖ್ಯಸ್ಥರು, ಮಠಾಧೀಶರುಗಳು, ವಿಜಯನಗರದ ಚಕ್ರವರ್ತಿಗಳ ರಾಯಭಾರಿಗಳು ದೊಡ್ಡ ವ್ಯವಹಾರಸ್ಥರು ಹಾಗೂ ವಿಶೇಷ ಆಮಂತ್ರಣದ ದಾನಿಗಳು, ಕಲಾವಿದರು, ಭಾಗವಹಿಸುತ್ತಾರೆ. ರಾಜಾ ವೆಂಕಟಪ್ಪ ನಾಯಕ ದರ್ಬಾರಿಗೆ ತಲೆ ತಗ್ಗಿಸುವಂತಾದ ಸುದ್ದಿ ಚಮಪಕಾಳಿಗೂ ತಿಳಿದಿದ್ದು, ಅದಕ್ಕೆ ನಾನೇ ಕಾರಣ ಎಂದು ತಿಳಿದು ಹಿಂದಿನ ದಿನ ರಾತ್ರಿ ಹಾಲಿನಲ್ಲಿ ವಜ್ರ ಬೆರೆಸಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ.
ನಂತರ ಚಂಪಕಳ ನೆನಪಿಗಾಗಿ ಸಮಾದಿ ,ಗೋಪುರ ಗುಡಿಯ ಎದುರು ಎರಡು ಸುಂದರ ಶಿಲಾಮಯ ಆನೆ, ಎದರು ಭಾಗದಲ್ಲಿ ವಿಶಾಲವಾದ ಕೊಳ (ಸರಸ್ಸು) ನಿಮಿ್ಸಿ ಜಂಬಿಟ್ಟಿಗೆ ಕಲ್ಲುಗಳಿಂದ ಸುಂದರವಾಗಿ ಕಟ್ಟಲಾದ ಬಗ್ಗೆ ವಿವರಣೆ, ಮಧ್ಯದಲ್ಲಿ ಚಂಪಕಾಳು ಆರಾಧಿಸುತ್ತಿರುವ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾದ ಕಲ್ಲಿನ ಸಂಕ ನಿರ್ಮಾಣ ಸುತ್ತಲೂ ಕಲ್ಲಿನ ಪಗಾರ ನಿಮಿಸಿ ವಿವೀಧ ಹಣ್ಣುಗಳ ಮರ ನೆಡಿಸಿದ ರಾಜ ವೆಂಕಟಪ್ಪ ನಾಯಕ ಜೀವನೋತ್ಸಾಹದ ಕುರುಹಾಗಿ ಅವನಿಗೆ ಆನಂದ ಉಂಟುಮಾಡಿದ ಚಂಪಕಾಳಿಗಾಗಿ ಆನಂದಪುರವೆಂಬ ಪ್ರಸಿದ್ಧಿ ಪಡೆದಿದ್ದು ಈಗ ಚಂಪಕಾ ಸರಸ್ಸು ಎಂದು ಕರೆಯುತ್ತಾರೆ.
ಈ ಪುಸ್ತಕವನ್ನು ಚೆನ್ನಾಗಿ ಬರೆದ ಕೆ. ಅರುಣ್‌ಪ್ರಸಾದ್‌ರವರು. ಇದು ಕೆಳದಿಯ ಖ್ಯಾತ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾಳ ನಡುವಿನ ದುಂರಂತ ಪ್ರೇಮ ಕಧೆಯಾಗಿದೆ. ೫೮ ಅಧ್ಯಾಯ, ೯೦ ಪುಟಗಳಲ್ಲಿ ರುವ ಕಥೆ ಓದಿಸಿಕೊಂಡು ಹೋಗುತ್ತದೆ. ನಮಗೆ ಈವರೆಗೂ ತಿಳಿಯದ ಈ ಐತಿಹಾಸಿಕ ದರುಂತ ಕಥೆ, ಮನದಲ್ಲಿ ಉಳಿಯುತ್ತದೆ. ಮುಂದಿನ ಜನರಿಗೆ ಉಪಯುಕ್ತ ಐತಿಹಾಸಿಕ ಸ್ಮರಣೆ, ಸಾಕ್ಷಿಯಾಗವುದರಲ್ಲಿ ಸಂದೇಹವಿಲ್ಲ. ಸರಕಾರ, ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಇದರ ಬಗ್ಗೆ ಒಂದು ಪಾಠವನ್ನು ಜೋಡಿಸಿದರೆ ಮಕ್ಕಳಿಗೂ ಗತಕಾಲದ ಬಗ್ಗೆ ತಿಳಿಸಿದಂತೆ ಆಗುತ್ತದೆ. ಇದರ ಬಗ್ಗೆ ಸಂಶೋಧಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ನಡೆಸಿ ದಾಖಲಿಸಿದರೆ ಒಳ್ಳೆಯದು. ನಮ್ಮ ಇತಿಹಾಸ ಪರಂಪರೆ ಉಳಿಸಲು ಸಹಕಾರಿಯಾಗುವುದರಲ್ಲಿ ಸಂದೇಹವಿಲ್ಲ.
ಜಿಲ್ಲಾಡಳಿತ ಪ್ರಸಿದ್ಧ ಕೆಳದಿ, ಇಕ್ಕೇರಿ,ವರದಾಮೂಲ, ಚಂಪಕಾಸರಸ್ಸು ಬಗ್ಗೆ ಹೆಚ್ಚಿನ ಅಭಿವ್ರದ್ಧಿ ಮೂಡಿಸಿ ಸ್ಮರಣೀಯ ಗೊಳಿಸಲು ಮುಂದಾಗಬೇಕಾಗಿದೆ.
ಚಂಪಕ ಸರಸ್ಸುನ್ನ ಚೆಂದಗಾಣಿಸಿ ಒಂದು ಪ್ರವಾಸಿ ತಾಣವಾಗಿ ರೂಪುಗೊಂಡರೆ ನಮಗೂ ಹೆಮ್ಮೆಯಾಗುತ್ತದೆ. ನಾಡಿನ ಉದ್ದ ಅಗಲಕ್ಕೂ ಪ್ರಚಾರವಾಗಿ ಚಂಪಕಳ ತ್ಯಾಗ, ರಾಜನ ಆಡಳಿತದ ಬಗೆ ಜನಸಾಮಾನ್ಯರಲ್ಲಿ ಉಳಿಯುತ್ತದೆ.
ಇದಕ್ಕೆ ಇನ್ನು ಹತ್ತು ಪುಟ ಸೇರಿಸಿ ರಾಜ ವೆಂಕಟಪ್ಪ ನಾಯಕರ ಆಡಳಿತ, ವ್ಯಾಪಾರ, ಕಲೆ, ಸಂಸ್ಕೃತಿ, ಶಿಸ್ತು, ಜನರ ಪಾಲ್ಗೊಳ್ಳುವಿಕೆ ವಿವರಿಸಿ ,ಪೋಟೊ ಸೆರಿಸಿದರೆ ಉತ್ತಮವಾದ ಮರೆಯಲಾಗದ ಪುಸ್ತಕವಾಗಿರುತ್ತಿತ್ತು.
ಪುಸ್ತಕವನ್ನು ಅಂದವಾಗಿ ಮುದ್ರಿಸಲಾಗಿದೆ. ಸಮಾನ್ಯ ಜನರೂ ಓದಿ ಅರ್ಥಮಾಡಿಕೊಳ್ಳಬಹುದು. ಮಕ್ಕಳಿಗೆ ಕಥೆ ಹೇಳಲು ಸಹಕಾರಿ, ಚಂಪಕ, ರಾಜ ವೆಂಕಟಪ್ಪ ನಾಯಕನ ಮದುವೆಯಾದ ರಾಣಿ, ವೇಶ್ಯೆಯಲ್ಲ , ಎಂಬುದೇ ಈ ಕಾದಂಬರಿಂದ ತಿಳಿದು ಬರುತ್ತದೆ.
ಲೇಖನ: ಕವಲಕೋಡು ವೆಂಕಟೇಶ,. ಕೆ. ಸಾಗರ
ಪುಸ್ತಕದ ಹೆಸರು:
ಬೆಸ್ತರ ರಾಣಿ ಚಂಪಕಾ
ಲೇ: ಕೆ. ಅರುಣ್‌ಪ್ರಸಾದ್,
ಆನಂದಪುರಂ ಅಂಚೆ, ಶಿವಮೊಗ್ಗ ಜಿಲ್ಲೆ,
E-Mail ; arunprasadasagara@gmail.com
Phone 9449253788
ಬೆಲೆ: ೧೦೦ ರೂ.
ಪುಟ: ೯೦+೧೦
ಸೈಜ್ : ೧/೮ ಡೆ",
ಪುಸ್ತಕ ತರಿಸಿಕೊಳ್ಳಲು ಈ ಕೆಳಕಂಡ ವಿಳಾಸಕ್ಕೆ ಸಂರ್ಪಗ ಮಾಡಿ.
ಪ್ರಕಾಶಕರು: ಪಶ್ಚಿಮಘಟ್ಟದ ಶಿವಮೊಗ್ಗ
ಓದುಗ- ವಿಮರ್ಶಕ ಬಳಗ,
ಹೊಂಬುಜ ರೆಸಿಡೆನ್ಸಿ, ಎನ್.ಹೆಚ್. ೨೦೬
ಯಡೆಹಳ್ಳಿ, ಆನಂದಪುರಂ ಅಂಚೆ
ಶಿವಮೊಗ್ಗ ಜಿಲ್ಲೆ- ೫೭೭೪೧೨
ಮೊ: ೯೪೪೯೨೫೩೭೮೮
ವಿನ್ಯಾಸ ಮತ್ತು ಮುದ್ರಣ:
ಜನಹೋರಾಟ ಪ್ರಿಂಟರ್‍ಸ್,
೨ನೇ ತಿರುವು, ನೆಹರು ರಸ್ತೆ, ಶಿವಮೊಗ್ಗ,
ದೊ: ೦೮೧೮೨-೨೭೩೭೫೩
Comments
Post a Comment