ಬೊನ್ಸಾಯ್ ಶ್ರೀನಿವಾಸರು ತಮ್ಮ ಜೀವಮಾನದ ಬೊನ್ಸಾಯ್ ಸಂಗ್ರಹವನ್ನು ತಮ್ಮ ತಂದೆ ತಾಯಿ ಹೆಸರಲ್ಲಿ ಬೆಂಗಳೂರಿನ ಲಾಲ್ ಬಾಗ್ ಗೆ ಅಪಿ೯ಸಿದ್ದಾರೆ ಅದರ ಮೌಲ್ಯ ಕೊಟ್ಯಾಂತರ ರೂಪಾಯಿ
ಬೊನ್ಸಾಯ್ ತಮ್ಮ ಹೆಸರಿನ ಮುಂದಿರುವ ಶ್ರೀನಿವಾಸರು ಕನ್ನಡಿಗರು ಇವರು ಜಪಾನ್ ನ ಕಲೆ ಕುಬ್ಜ ಸಸ್ಯಗಳನ್ನ ಬೆಳೆಸಿ ಸಂಗ್ರಹಿಸುವುದರಲ್ಲಿ ಪರಿಣಿತರು.
ಸುಮಾರು 50 ವರ್ಷದ ಟೇಬಲ್ ಮೇಲಿಡುವ ಅರಳಿ ಮರ ಒಂದು ಅಡಿಗಿಂತ ಕಡಿಮೆ ಇಂತಹ ನೂರಾರು ಸಂಗ್ರಹ ಅವರಲ್ಲಿದೆ.
ಇವರ ಬಗ್ಗೆ ಸಾಗರದ ಕವಲಗೋಡು ವಿಜ್ಞಾನ ಕೇಂದ್ರ ಪುಸ್ತಕ ಒಂದನ್ನು 2000 - 2003 ರಲ್ಲಿ ಪ್ರಕಟಿಸಿದ್ದರು ಮಿತ್ರ ಕವಲಗೋಡು ವೆಂಕಟೇಶ್ ಕಳಿಸಿದ್ದರು.
2004ರಲ್ಲಿ ನಾನು ಬೆಂಗಳೂರು ವಾಸಿ ಪ್ರತಿ ದಿನ ಲಾಲ್ ಬಾಗ್ ನಲ್ಲಿ ವಾಕಿಂಗ್ ಮತ್ತು ಅಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಯಾವುದೋ ಕೆಲಸಕ್ಕಾಗಿ ನಿತ್ಯ ಅಲೆದಾಟ ಆ ಸಂದಭ೯ದಲ್ಲಿ ಲಾಲ್ ಬಾಗ್ ನ ದಕ್ಷಿಣ ಭಾಗದ ಪ್ರವೇಶದ ಹೆಬ್ಬಾಗಿಲ ಬಲ ಭಾಗದಲ್ಲಿ ಬೊನ್ಸಾಯ್ ಪಾಕ್೯ ನಿಮಾ೯ಣ ಆಗುವುದು ನೋಡಿ ಅಲ್ಲಿ ವೀಕ್ಷಿಸುತ್ತಿದ್ದೆ.
ಅಲ್ಲಿ ಕೆಲಸ ನಿವ೯ಹಿಸುವವರಿಗೆ ಇದು ಯಾರು ಮಾಡಿದ್ದು ಅಂತೆಲ್ಲ ಕೇಳಿದರೆ ಅವರಿಗೆ ಗೊತ್ತಿಲ್ಲ, ಬೆಂಗಳೂರಿನ ಬೊನ್ಸಾಯಿ ಶ್ರೀನಿವಾಸ್ ಅಂತ ಒಬ್ಬರಿದ್ದಾರೆ ಅವರು ಇದರಲ್ಲಿ ಪೇಮಸ್ ಅಂತ ಜೊತೆಯಲ್ಲಿದ್ದ ಗೆಳೆಯರಿಗೆ ಹೇಳುತ್ತಿದ್ದಾಗ " ನಾನೇ ಬೊನ್ಸಾಯ್ ಶ್ರೀನಿವಾಸ್" ಅಂತ ಗಿಡದ ಮರೆಯಿಂದ ಎದ್ದು ಬಂದರು.
ಪರಸ್ಪರ ಪರಿಚಯ ಅವರ ಪುಸ್ತಕದ ಬಗ್ಗೆ ಎಲ್ಲಾ ಮಾತಾಡಿದರು, ಅವರ ತಂದೆ ತಾಯಿ ಹೆಸರಲ್ಲಿ ಲಾಲ್ ಬಾಗ್ ಗೆ ಅವರಲ್ಲಿರುವ ಎಲ್ಲಾ ಸಂಗ್ರಹ ದಾನ ಮಾಡಿದ್ದಾರೆ, ಮಾರಾಟ ಮಾಡುವುದಾದರೆ ಕೊಟ್ಯಾಂತರ ಹಣಕ್ಕೆ ಖರೀದಿಸುವವರಿದ್ದರು ತಿರಸ್ಕರಿಸಿದ್ದಾಗಿ ತಿಳಿಸಿದರು.
ಅವರ ಜೊತೆ ನೆನಪಿಗಾಗಿ ಲಾಲ್ ಬಾಗ್ ನಲ್ಲಿ ತೆಗೆದ ಪೋಟೋಗೆ 16 ವಷ೯ ಆಯಿತು, ಈ ಬಾರಿ ಬೆಂಗಳೂರಿಗೆ ಹೋದಾಗ ಲಾಲ್ ಬಾಗ್ ನವರು ಹೇಗೆ ಕಾಪಾಡಿದ್ದಾರೆ ಇವರು ದಾನವಾಗಿ ನೀಡಿದ ಬೊನ್ಸಾಯ್ ಪಾಕ್೯ ಅಂತ ನೋಡಬೇಕು.
Comments
Post a Comment