ಅದೊಂದು ಅಕಸ್ಮಿಕವಾದ ಅವಕಾಶ, ಈಗ ಯೋಚಿಸಿದರೆ ಹೀಗೂ ಆಯಿತಾ ಅನ್ನಿಸುತ್ತೆ.
ತಿಳಿದವರು ಇದಕ್ಕಾಗಿ ಹೇಳುತ್ತಾರೆ ಜನ್ಮಾoತರವಾದ ಯಾವುದೊ ಸಂಪಕ೯ ಕಾರಣ ಹಾಗೂ ತಂದೆ, ತಾಯಿ ಆಶ್ರೀ ವಾದ ಕಾರಣ ಅಂತ ಇದು ಸರಿ ಅಂತ ಬಾವಿಸುತ್ತೇನೆ, ಹಣ, ಆಸ್ತಿ ಅಧಿಕಾರಕ್ಕಾಗಿ ಹೋರಾಡುವ ಮನಸ್ಸಿನ ಶಾಶ್ವತ ಗುಣಗಳನ್ನ ಮೆಟ್ಟಿ ಊರಿಗಾಗಿ, ಪಾರಮಾಥಿ೯ಕ ನೆಮ್ಮದಿಗಾಗಿ ಹಣ ವಿನಿಯೋಗಿಸುವ ಮನಸ್ಸು ನನಗೆ ಬಂದಿದ್ದಾರು ಹೇಗೆ? ಇದೆ ಅಲ್ಲವೆ ಆಗೋಚರ ಶಕ್ತಿಯ ಕಾರಣ? ಇದನ್ನೆ ದೇವರು ಅನ್ನಲೆ?
ಒಮ್ಮೆ ಯಡೇಹಳ್ಳಿಯ ಶಾಂತಿ ನಗರದ ಲಾರಿ ಡ್ರೈವರ್ ಸೋಮ ಶೇಖರ್ (ಈಗ 2 ಲಾರಿ ಮಾಲಿಕರು ಹಾಗು ನಮ್ಮ ದೇವಾಲಯದ ಪ್ರಧಾನ ಪಾರುಪತ್ತೆದಾರರು) ಬಂದು ನಮ್ಮ ಊರಲ್ಲಿ ಹಿಂದು ದಮ೯ದವರಿಗೆ ಪ್ರಾಥ೯ನೆಗೆ ದೇವಾಲಯವಿಲ್ಲ, ಮುಸ್ಲಿ೦ ಜನಾ೦ಗದವರು ಮಸೀದಿ ಕಟ್ಟಿದ್ದಾರೆ, ಕ್ರಿಶ್ಚಿಯನ್ನರು 2 ಚಚ್೯ ಕಟ್ಟಿದ್ದಾರೆ ಹಾಗಾಗಿ ನಾವೆಲ್ಲ ಸೇರಿ ಒಂದು ಗಣಪತಿ ದೇವಸ್ಥಾನ ಕಟ್ಟಿಸ ಬೇಕೆಂದು ತೀಮಾ೯ನಿಸಿದ್ದೇವೆ, ನೀವು ದಾರಾಳವಾಗಿ ಸಹಾಯ ಮಾಡಬೇಕಾಗಿ ಕೇಳಿದರು.
ಆಗ ನನ್ನ ಪರಿಸ್ಥಿತಿ ಆಥಿ೯ಕವಾಗಿ ಹೀನಾಯ ಸ್ಥಿತಿಗೆ ಬಂದಿತ್ತು.ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದಾಗ (1995) ಇದ್ದ ಕಾರು, ಬೈಕ್ 2000ನೆ ಇಸವಿಗೆ ಇರಲಿಲ್ಲ, ಇದ್ದ ರೈಸ್ ಮಿಲ್ ಸಾಲ ಪಾವತಿ ಮಾಡಲಾಗದೆ ಕೆ.ಎಸ್.ಎಫ್.ಸಿ ಗೆ ಹರಾಜಿಗೆ ಬಂದಿತ್ತು.
ಆದರೂ ಒಂದು ಭರವಸೆ ನೀಡಿದೆ 25000 ರೂಪಾಯಿ ಕಂತಿನ ಮೇಲೆ ಕೊಡುತ್ತೇನೆ ದೇವಸ್ಥಾನ ಮಾಡಿ ಅಂದೆ.
2005ರಲ್ಲಿ ನನಗೆ ಪದೇ ಪದೇ ಕನಸು ಬೀಳಲು ಶುರುವಾಗಿತ್ತು ಒಂದು ಪಾಳು ಬಿದ್ದ ಕಲ್ಲಿನ ದೇವಾಲಯ ಅಲ್ಲಿ ದೀಪ ಮಾತ್ರ ಉರಿಯುತ್ತಿತ್ತು.,,,,,, ಇನ್ನೊಂದು ಕನಸು ಬಿಳಿ ಆನೆಗಳು, ಅನೇಕರಲ್ಲಿ ಈ ಬಗ್ಗೆ ಚಚಿ೯ಸಿದಾಗ ಒಳ್ಳೆ ಕನಸು ಅನ್ನುತ್ತಿದ್ದರು.
ಒಮ್ಮೆ ಬೆಂಗಳೂರಿನ ವಿಜಯ ನಗರದಲ್ಲಿನ ಪ್ರಖ್ಯಾತ ಜೋತಿಷಿ ಡಾ. N. S. ವಿಶ್ವಪತಿ ಶಾಸ್ತ್ರೀಗಳ ಮನೇಗೆ ಹೋಗಿದ್ದೆ,
ಅವರು ದೇವೇಗೌಡರ ಜಾತಕ ನೋಡಿ ನಿಮಗೆ ಪ್ರದಾನ ಮಂತ್ರಿ ಅಥವ ರಾಷ್ಟ್ರಪತಿ ಆಗುವ ಯೋಗ ಇದೆ ಅಂತ ಭವಿಷ್ಯ ಹೇಳಿದವರು ಆಗ ದೇವೆಗೌಡರೇ ನಂಬಿರಲಿಲ್ಲ ಮುಂದೆ ಪ್ರದಾನ ಮಂತ್ರಿ ಆದರು, ಅವರಲ್ಲಿ ನನ್ನ ಕನಸಿನ ಅಥ೯ ಕೇಳಿದಾಗ ಅವರು ಜೋತಿಷ್ಯ ಶಾಸ್ತ್ರ ಪ್ರಕಾರ ನನ್ನ ಪ್ರಶ್ನೆಗೆ ಉತ್ತರ ಏನೆಂದರೆಂದರೆ ನೀವು ಯಾವುದಾದರೂ ದೇವಸ್ಥಾನ ಕಟ್ಟಿಸ ಬೇಕೆಂದಿದ್ದರ? ಅಂದರು ಇಲ್ಲ ಅಂದೆ, ದೇವಸ್ಥಾನ ಕಟ್ಟಲು ಸಹಾಯ ಮಾಡುವ ಭರವಸೆ ನೀಡಿದ್ದಿರಾ? ಅಂದರು ಯೋಚನೆ ಮಾಡಿದೆ ಯಾವುದೂ ಆ ಸಂದಭ೯ದಲ್ಲಿ ನೆನಪಾಗಲಿಲ್ಲ ಇಲ್ಲ ಅಂದೆ. ಇನ್ನೂ ಯೋಚಿಸಿ ಅಂತ ಕಾರಣ ಇದ್ದರೆ ಗಣಪತಿ ದೇವಸ್ಥಾನದ ಬಗ್ಗೆ ಏನಾದರು ಅಶ್ವಾಸನೆ ನೀಡಿದ್ದಲ್ಲಿ ಇಂತ ಕನಸು ಬೀಳುತ್ತೆ ಅಂದರು, ಆಗ ನನಗೆ ನೆನಪಾಯಿತು ನನ್ನೂರ ಗಣಪತಿ ದೇವಸ್ಥಾನಕ್ಕೆ 25 ಸಾವಿರ ಕೊಡುತ್ತೇನೆ ಎಂದ ಅಶ್ವಾಸನೆ.ಆಗ ನನ್ನ ಹೊಸ ಉದ್ದಿಮೆಯಲ್ಲಿ ಸಣ್ಣ ಲಾಭ ಪ್ರಾರ೦ಭವಾಗಿತ್ತು, ಅವತ್ತೆ ತೀಮಾ೯ನ ಮಾಡಿದೆ ನನ್ನ ಪಾಲಿನ ಹಣ ನೀಡುವುದು ಅಂತ, ಊರಿಗೆ ಹೋಗಿ ಸೋಮಶೇಖರ್ ಗೆ ಹೇಳಿದಾಗ ಅವರು ಈಗ ಯಾರು ದೇವಸ್ಥಾನ ನಿಮಿ೯ಸಲು ಮುಂದೆ ಬರುತ್ತಿಲ್ಲ ನೀವೆ ಮನಸ್ಸು ಮಾಡಿ ಅಂದರು, ಕೆಂಜಿಗಾಪುರದ ಶ್ರೀಧರ ಭಟ್ಟರು ಎಲ್ಲಾ ಸಹಕಾರ ನೀಡುತ್ತಾರೆ ಅಂದಿದ್ದಾರೆ ಅಂದರು.
ಶ್ರೀಧರ ಭಟ್ಟರೊಂದಿಗೆ ಮಾತಾಡಿದಾಗ 25 ಸಾವಿರ ದಲ್ಲಿ ಸಣ್ಣ ಗುಡಿ ಮಾಡಿ ಸಣ್ಣ ವಿಗ್ರಹ ಪ್ರತಿಷ್ಟಾಪನೆ ಮಾಡುವುದೆಂದು ತೀಮಾ೯ನವಾಯಿತು ಅವತ್ತೆ ವಿಗ್ರಹ ಮತ್ತು ಪ್ರತಿಷ್ಟಪನೆಗೆ 10 ಸಾವಿರ ಮುಂಗಡ ಕೊಟ್ಟಿ.
ಅದಾಗಿ ಸ್ವಲ್ಪ ದಿನದಲ್ಲಿ ವಿಶ್ವ ಪತಿ ಶಾಸ್ತಿ, ಗಳು ಆನಂದಪುರಕ್ಕೆ ಬರುವುವರಿದ್ದರು, ಬಂದಾಗ ದೇವಾಲಯ ನಿಮಿ೯ಸುವ ಜಾಗಕ್ಕೆ ಕರೆದೊಯ್ದಗ ಅವರ ಸಲಹೆ ಪಡೆದೆವು ಅವಾಗಲೆ ನಮಗೆ ಗೊತ್ತಾಗಿದ್ದು ದೇವಸ್ಥಾನ ನಿಮಿ೯ಸುವುದಕ್ಕೂ ಒಂದು ವಿಜ್ಞಾನವಿದೆ ಅಂತ.
ಅವರಿಗೆ ಈ ದೇವಾಲಯದ ನಿಮಾ೯ಣದ ನೇತೃತ್ವ ವಹಿಸಲು ವಿನoತಿಸಿದಾಗ ಅವರು ಹಳ್ಳಿಯಲ್ಲಿ ರಾಜಕೀಯ ಜಾಸ್ತಿ ಮಧ್ಯದಲ್ಲಿ ಯಾರು ಬಂದು ತಲೆ ಹರಟೆ ಮಾಡದಿದ್ದರೆ ಈ ದೇವಾಲಯ 100ಕ್ಕೆ 100 ವಾಸ್ತು ಮತ್ತು ಶಾಸ್ತ್ರ ಪ್ರಕಾರ ಮಾಡೋಣ ಅಂದರು.
ಅವರ ಜೋತಿಷ್ಯ ಪ್ರಕಾರ ಈ ಜಾಗದಲ್ಲಿ ಪುರಾತನ ಗಣಪತಿ ದೇವಸ್ಥಾನ ಇತ್ತು ಕಾಲಾಂತರದಲ್ಲಿ ಇಲ್ಲವಾಗಿದೆ, ಈ ದೇವಾಲಯ ನಿಮಾ೯ಣದ ನಂತರ ಊರ ಸುತ್ತಮುತ್ತಲಿನ ಎಲ್ಲಾ ದೇವಾಲಯಗಳು ಅಭಿವೃದ್ದಿ ಹೊಂದಲಿದೆ ಅಂದರು ಮತ್ತು ಸಮೀಪದ ಗಣಪತಿ ದೇವಸ್ಥಾನ ಎಲ್ಲಿದೆ ಅಂದಾಗಲೇ ನಮಗೆ ಗೊತ್ತಾಗಿದ್ದು ಇಡೀ ಆನಂದಪುರO ಹೋಬಳಿಯಲ್ಲಿ ಒಂದೇ ಒಂದು ಗಣಪತಿ ದೇವಸ್ಥಾನ ಇಲ್ಲ ಅಂತ.
ಕೋಲಾರ ಜಿಲ್ಲೆಯ ಶಿವಾರಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಕೃಷ್ಣಶಿಲೆಯ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಮೂಡಿ ಬಂದ, ತಮಿಳುನಾಡಿನ ಮದುರೈಯ ಸ್ಥಪತಿಯಿಂದ ಗೋಪುರ, ಸ್ಥಳಿಯ ಶಿವಾನಂದ ಗೇರುಬೀಸು ಮತ್ತು ದೇವರಾಜ ಮೇಸನ್ ಗಳಿಂದ ಉಳಿದ ಕಟ್ಟಡ ಕಾಮಗಾರಿ ಪೂರೈಸಿ 2006ರ ಪೆಬ್ರವರಿ 2,3, ಮತ್ತು 4ನೆ ತಾರೀಖು ವಿನಾಯಕ ಜಯಂತಿ ಎಂಬ ವಿನಾಯಕ ಸ್ವಾಮಿಯ ಹುಟ್ಟಿದ ದಿನವೇ ಕೆಂಜಿಗಾಪುರದ ಪುರೋಹಿತರಾದ ಕುಂಬಾರ ಗುಂಡಿ ಶ್ರೀ ಶ್ರೀದರ ಶಮಾ೯ ತಂಡದವರಿಂದ ಪ್ರತಿಷ್ಟಾಪನೆ ನಡೆಯಿತು, ಗೋಪುರದ ಕಲಶ ಪ್ರತಿಷ್ಟಾಪನೆ ಮಾಡಿ ಸಾಗರದ ಕಾಗೋಡು ಹೋರಾಟದ ರೂವಾರಿ ಗಣಪತಿಯಪ ದಂಪತಿ, ಹಿರಿಯರಾದ ಗನ್ನಿ ಸಾಹೇಬರು, ವಿಶ್ವಪತಿಶಾಸ್ತ್ರ ದಂಪತಿ ಮತ್ತು ನಾವೆಲ್ಲ ಕಲಶಕ್ಕೆ ಅಭಿಶೇಕ ಮಾಡಿದೆವು, ಅನೇಕ ಗೆಳೆಯರು ಸಹಕರಿಸಿದರು.
ನಂತರ ದೇವಾಲಯಕ್ಕೆ ಬರುವವರಿಗೆ ದೊಡ್ಡ ಹಾಲ್ ಒಂದು ಅವಶ್ಯವಿತ್ತು. ಆವಾಗಲೆ ನನ್ನ ಮನಸ್ಸಲ್ಲಿ ತೀಮಾ೯ನ ಮಾಡಿದ ಇನ್ನೊಂದು ಯೋಜನೆ ನನ್ನ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟಲು ಮುಂದಾದೆ, ಅದಕ್ಕಿಂತ ಮೊದಲು ದೇವಾಲಯದ ಎದುರು ದೊಡ್ಡ ಹಾಲ್ ನಿಮಾ೯ಣ ಮಾಡಿಸಿದೆ.
ಮರು ವಷ೯ ಮೊದಲ ವಾಷಿ೯ಕೊತ್ಸವ ಬಂತು, ರಥ ಉತ್ಸವ ಮಾಡುವ ಪ್ರೇರಣೆ ಆಯಿತು ಆದರೆ ರಥ ಇಲ್ಲ ವಲ್ಲ?, ರಥ ಇರುವ ದೇವಾಲಯಗಳಿಗೆ ಮನವಿ ಪತ್ರ ಕಳಿಸಿದೆವು, ಹೊಸಕೊಪ್ಪದ ಮಾರಿಕಾಂಬ ದೇವಾಲಯದವರು ಅವರ ಅಸಹಾಯಕತೆಯ ಪ್ರತಿ ಉತ್ತರ ನೀಡಿದರು, ಕೆಂಜಿಗಾಪುರದ ಶ್ರೀ ವೀರಭದ್ರ ದೇವಾಲಯದ ಅವತ್ತಿನ ಅಧ್ಯಕ್ಷರು ಸಾಧ್ಯವಿಲ್ಲ ಅಂದರು, ಆನಂದ ಪುರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ನ ಅಚ೯ಕರಿಗೆ ಒಪ್ಪಿಗೆ ಇದ್ದರು ಸಮಿತಿಯವರಿಗೆ ಒಪ್ಪಿಗೆ ಇಲ್ಲವ೦ತಾಯಿತು ಆಷ್ಟರಲ್ಲಿ ಶ್ರೀದರ ಭಟ್ಟರು ರಥ ನೀಡುವ ತೀಮಾ೯ನ ಮಾಡಿದರು ಅದಕ್ಕೆ ಕಾರಣ ಅವರ ತಾಯಿ ಕೆಂಜಿಗಾಪುರ ವೀರಭದ್ರ ದೇವಾಲಯಕ್ಕೆ ರಥ ನೀಡುವ ಹಂಬಲವಿತ್ತOತೆ ಆದರೆ ಅದು ಈಡೇರಲಿಲ್ಲ ಅಂತ ಅವರು ಅವರ ಸಹೋದರಿ ಜಯಮ್ಮ ಹೇಳಿದರು, ಹಾಗಂತ ಅವರ ಕಿರಿಯ ಸಹೋದರಿ ರೂಪಾ ನನ್ನ ಪತ್ನಿ ಕೂಡ ಹೇಳಿದಳು ಅದರಂತೆ ರಥ ನಿಮಿ೯ಸಿ ನೀಡಿದರು, ಮೊದಲ ವಾಷಿ೯ಕ ಉತ್ಸವ ಹೊಸ ರಥದೊಂದಿಗೆ ಪ್ರಾರಂಭವಾಯಿತು.
ಹೊಸ ರಥದ ಉದ್ಘಾಟನೆ ಸಾಗರದ ಹೋರಾಟಗಾರ ತೀ.ನಾ.ಶ್ರೀನಿವಾಸರಿಂದ ಮಾಡಿಸಲಾಯಿತು ಈಗ ಅವರು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾರೆ.
ಇದರ ಮಧ್ಯೆ ಒಂದು ಪವಾಡವೇ ನಡೆಯಿತು ನಮ್ಮ ದೇವಾಲಯದ ರಥ ಉತ್ಸವದ ನಂತರ ರಥ ಸಪ್ತಮಿಯ೦ದು ರಂಗನಾಥ ಸ್ವಾಮಿ ದೇವರ ರಥ ಉತ್ಸವ ಆದರೆ ಅವರ ರಥದ ಚಕ್ರದ ಹಾರೆ ನಾದುರಸ್ತ ಆಗಿ ರಥ ಉಪಯೋಗಿಸದಂತೆ ಆಗಿ ಆ ದೇವಾಲಯದವರು ಮನವಿ ಪತ್ರದೊಂದಿಗೆ ಯಡೇಹಳ್ಳಿಯ ಶ್ರೀ ವರಸಿದ್ಧಿವಿನಾಯಕ ಸ್ವಾಮಿಗೆ ಫಲ ಪುಷ್ಪ ಅಪಿ೯ಸಿದರು ಅವಾಗಲೇ ನನ್ನ ಮನಸ್ಸಲ್ಲಿ ಒಂದು ಯೋಚನೆ ಬಂತು, ರಂಗನಾಥ ಬೇರೆ ಅಲ್ಲ ವಿನಾಯಕ ಬೇರೆ ಅಲ್ಲ ನನ್ನನ್ನ ದೇವರು ಪರೀಕ್ಷೆ ಮಾಡುತ್ತಿದ್ದಾನೆ ಅನ್ನಿಸಿತು.
ನಮ್ಮ ದೇವಾಲಯದ ರಥ ಉತ್ಸವಕ್ಕೆ ರಥ ಕೇಳಿದರೆ ಕೊಡಲಿಲ್ಲ ನಾವು ಯಾಕೆ ಅವರಿಗೆ ರಥ ಕೊಡಬೇಕೆಂಬ ಸಾವ೯ಜನಿಕರವಾದಕ್ಕೆ ಇದು ದೇವರ ಪರೀಕ್ಷೆ ನಿರಾಕರಿಸ ಬಾರದೆಂಬ ಸೂಚನೆಗೆ ಎಲ್ಲರೂ ಒಪ್ಪಿದರು ಆದರೆ ಪವಾಡದ0ತೆ ಹಾಳಾದ ರಥ ಕೊನೆಯ ಕ್ಷಣದಲ್ಲಿ ಸರಿಯಾಗಿ ಅದೇ ರಥದಲ್ಲಿ ಉತ್ಸವ ನಡೆಯಿತು.
ನೂರಾರು ದೇವಾಲಯ ನಿಮಿ೯ಸಿದ ಶಾಸ್ತಿ೯ಗಳಿಗೆ ಈ ದೇವಾಲಯದಲ್ಲಿ ಶಕ್ತಿ ಹೆಚ್ಚು ಅಂತ ಅಭಿಪ್ರಾಯ, ಅವರ ಜೋತಿಷ್ಯದ0ತೆ ಸುತ್ತ ಮುತ್ತಲ ಅನೇಕ ಹಳೆ ದೇವಸ್ಥಾನ ಪುನರ್ ಪ್ರತಿಷ್ಟಾಪನೆ ಆಯಿತು ಅನೇಕ ಹೊಸ ದೇವಾಲಯ ಸೃಷ್ಟಿ ಆಯಿತು, ಊರಿನಲ್ಲಿದ್ದ ಬಡತನ ಕಡಿಮೆ ಆಯಿತು ಒಟ್ಟಾರೆ God Shows Good ways ಎಂಬOತೆ ಶ್ರೀ ವರಸಿದ್ಧಿ ವಿನಾಯಕ ದೇವರ 11 ನೇ ಜಾತ್ರಾ ಮಹೋತ್ಸವ ದಿನಾ೦ಕ 31 ಜನವರಿ 2017ರ ಮಂಗಳವಾರ ಇದೆ.
25 ಸಾವಿರದಲ್ಲಿ ಕಟ್ಟಲು ತೀಮಾ೯ನ ಮಾಡಿದ್ದು ಲಕ್ಷಾಂತರ ರೂಪಾಯಿ ವಿನಿಯೋಗದಲ್ಲಿ ದೊಡ್ಡ ದೇವಾಲಯವಾಗಿದೆ.ಇಲ್ಲಿ ಪಂಚಾಯತಿ, ರಾಜಕೀಯ ಸಭೆಗೆ ಅವಕಾಶವಿಲ್ಲ, ಇಲ್ಲಿ ನಡೆಯುವ ದಾಮಿ೯ಕ , ಸಾಂಸ್ಕೃತಿಕ ಕಾಯ೯ಕ್ರಮದ ಅಧ್ಯಕ್ಷತೆ ಶ್ರೀ ವರಸಿದ್ಧಿ ವಿನಾಯಕ ದೇವರೇ ಆದ್ದರಿಂದ ಬೇರೆ ಯಾರನ್ನೂ ವೇದಿಕೆಯಲ್ಲಿ ಕೂರಿಸುವುದಿಲ್ಲ, ಎಲ್ಲೂ ಯಾವುದೇ ದಾನಿಗಳ ಹೆಸರು ಬರೆಸುವಂತಿಲ್ಲ, ಸರತಿ ಸಾಲಲ್ಲಿ ಪ್ರಸಾದ ವಿನಿಯೋಗ ಮತ್ತು ಇಲ್ಲಿ ಬಡವ, ಶ್ರೀಮಂತ, ಜಾತಿ ಆಚರಣೆ ಇಲ್ಲದಂತೆ ನಡೆಸಿಕೊಂಡು ಹೋಗಲಾಗುತ್ತಿದೆ.
ಶಿರಸಿ ಸೋoದಾ ಸ್ವಣ್೯ ವಲ್ಲಿ ಮಠದ ಸ್ವಾಮಿಯವರ ನೇತೃತ್ವದಲ್ಲಿ 1008 ನಾರಿಕೇಳ ಮಹಾಗಣಯಾಗ ನಡೆಸಲಾಗಿತ್ತು ಆಗ ಅವರು ಈ ಜಾಗದಲ್ಲಿ ವಿಶೇಷ ಶಕ್ತಿ ಇದೆ ಅದರ ಕಂಪನಗಳು ನನಗೆ ಅರಿವಾಗಿದೆ ಅಂದಿದ್ದರು.
ಯಾವುದೋ ಜನ್ಮದ ಪುಣ್ಯದಿಂದ ನನ್ನ ತಂದೆ ತಾಯಿಗಳ ಆಶ್ರೀ ವಾದದಿಂದ ಈ ದೇವಾಲಯ ನಿಮಿ೯ಸಿ ಊರಿಗೆ ಅಪಿ೯ಸುವ ಪವಿತ್ರ ಕೆಲಸದ ಅವಕಾಶ ನನ್ನದಾಯಿತು, ಮುಂದಿನ ವಷ೯ 12 ನೇ ವಷ೯ ಅಷ್ಟಬಂದ ಪುನರ್ ಪ್ರತಿಷ್ಟಾಪನೆ ಆದರೆ ಒಂದು ಆವತ೯ ಮುಗಿಯುತ್ತದೆ.
ಇದು ಶೂದ್ರನೊಬ್ಬ ದೇವಸ್ಥಾನ ನಿಮಿ೯ಸಿದ ಅನುಭವ ಅಚ೯ಕರ ಸಣ್ಣ ತನ, ಗ್ರಾಮದವರ ಅಸಹಕಾರ ಇದೆಲ್ಲದರ ನಡವೆ 11 ವಷ೯ ನಿರಂತರ ಪೂಜೆ ಜಾತ್ರೆ, ರಥ ಉತ್ಸವ ನಡೆಸಿದ್ದು ಒಂದು ಸಾದನೆ ಅನ್ನಿಸುತ್ತೆ, ಇವತ್ತಿನವರೆಗೆ ಸಕಾ೯ರದಿಂದ ರಾಜಕಾರಣಿಗಳಿಂದ ಒಂದು ಪೈಸೆಯ ಆಥಿ೯ಕ ಸಹಾಯ ಪಡೆದಿಲ್ಲ, ಕೊಡುತ್ತೇವೆ ಅಂತ ಹೇಳಿದವರಿಗೆ ಕೊಡಲು ಸಾಧ್ಯವಾಗಲಿಲ್ಲ. ಇದೇ ದೇವರ ಶಕ್ತಿ ಹಾಗಾಗಿ ಇಲ್ಲಿ ಮಾಡುವ ಪ್ರಾಥ೯ನೆ ಈಡೇರುತ್ತೆ ಅಂತ ನಂಬಿಕೆ ಇದೆ.
ಈ ವಷ೯ದ ಜಾತ್ರೆಗೆ ಬನ್ನಿ.
Comments
Post a Comment