ಪಟಮಕ್ಕಿ ರತ್ನಕರ್ ಸಣ್ಣ ವಯಸ್ಸಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆದು ತೀಥ೯ಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಅವರೊಂದಿಗೆ ನನ್ನ ಒಡನಾಟ ಇರಲಿಲ್ಲ.
ಶಿವಮೊಗ್ ಜಿಲ್ಲಾ ಪಂಚಾಯತ್ ಲ್ಲಿ ಸದಸ್ಯನಾದಾಗ ಒಮ್ಮೆ ಅಧ್ಯಕ್ಷನಾಗುವಂತ ಅವಕಾಶ ಉಂಟಾಗಿತ್ತು ಆಗ ಸಂಸದರಾದ ಮಾಜಿ ಮುಖ್ಯಮಂತ್ರಿ ಬಂಗಾರಪನವರು ನನಗೆ ಈ ಬಗ್ಗೆ ಮು೦ದುವರಿಯಲು ಹೇಳಿದ್ದರು ಆಗ ಮಾಜಿ ಶಾಸಕರಾಗಿದ್ದ ಸ್ವಾಮಿ ರಾವ್, ಕರಿಯಣ್ಣ ಮತ್ತು ಪಟ ಮಕ್ಕಿಯವರ ಒಂದು ಸಮಿತಿ ಮಾಡಿ ಬೇರೆ ಪಕ್ಷ ಮತ್ತು ನಾಯಕರ ಜೊತೆ ಮಾತುಕತೆ ಮಾಡಲು ಜವಾಬ್ದಾರಿ ನೀಡಿದ್ದರು.
ಹಾಗಾಗಿ ನನಗೆ ಈ ಮೂವರು ಮಾಜಿ ಶಾಸಕರ ಒಡನಾಟ ಹೆಚ್ಚಾಗಿ ಆಯಿತು ಸುಮಾರು ಒಂದು ತಿಂಗಳು ತಿರುಗಾಟದಲ್ಲಿ ಅವರ ಅನುಭವಗಳು ನನಗೆ ತಿಳಿಯಲು ಸಾಧ್ಯವಾಯಿತು.ಮೂವರೂ ಸಜ್ಜನರು, ಮಧ್ಯಪಾನ ಮಾಡುವವರಲ್ಲ ಅದರಲ್ಲಿ ಕರಿಯಣ್ಣ ಮತ್ತು ಸ್ವಾಮಿ ರಾಯರು ಮಾಂಸಹಾರ ಪ್ರಿಯರು ಆದರೆ ಪಟಮಕ್ಕಿ ಮಾತ್ರ ಶುದ್ದ ಸಸ್ಯಹಾರಿ ಮತ್ತು ದೇವರು ಧ್ಯಾನ ಮತ್ತು ನಿರ೦ತರ ಓದು ಅವರ ಹವ್ಯಾಸವಾಗಿತ್ತು.
ಕೆಲವು ಹಿತ ಶತೃಗಳು, ಪಟ್ಟ ಬದ್ರ ಹಿತಾಸಕ್ತಿಗಳು ಕೊನೆಯ ದಿನದಲ್ಲಿ ನನಗೆ ಅಧ್ಯಕ್ಷನಾಗಿ ಮಾಡಿದರೆ ತಮ್ಮ ಘನತೆಗೆ ದಕ್ಕೆ ಎಂದು ಯಾವ ಕಾರಣಕ್ಕೂ ಅಧ್ಯಕ್ಷ ಸ್ಥಾನ ಸಿಗಬಾರದೆಂದು ಸಂಸದ ಬಂಗಾರಪ್ಪರನ್ನು ದಾರಿ ತಪ್ಪಿಸಿದರು ಅವರೆಲ್ಲ ಬಂಗಾರಪ್ಪರ ವಿರುದ್ಧವಾಗಿದ್ದಾಗ ನಾನು ಬಂಗಾರಪ್ಪರ ಪರವಿದ್ದುದು ಇವರಿಗೆಲ್ಲ ಸಿಟ್ಟು ಬಂದಿತ್ತು ಆ ಸಿಟ್ಟು ಬಂಗಾರಪರಿಂದನೆ ನನ್ನ ಮೇಲೆ ತೀರಿಸಿಕೊಂಡರು.
ಅವತ್ತು ರಾತ್ರಿ ಎಸ್.ಟಿ.ಡಿ. ಬೂತ್ ಒಂದರಿಂದ ಸ್ವಾಮಿ ರಾವ್ ದೆಹಲಿಯಲ್ಲಿದ್ದ ಬಂಗಾರಪರಿಗೆ ಫೋನ್ ಮಾಡಿದಾಗ ನಾನು ಇನ್ನೊಂದು ಪೋನ್ನಲ್ಲಿ ಕೇಳುತ್ತಿದ್ದಾಗ ಬಂಗಾರಪ್ಪ ಅವರ ವಿರೋದಿಗಳಿಗೆ ಮಣೆ ಹಾಕಿದ್ದು ಗೊತ್ತಾಯಿತು, ಅಲ್ಲಿಂದ ಅಯನೂರು ಮಂಜುನಾಥರ ಮನೆಗೆ ಸ್ವಾಮಿ ರಾವ್ ಜೊತೆ ಹೋಗಿದ್ದೆ ಆರಾತ್ರಿಯಲ್ಲಿ ನಮಗೆ ಟೀ ಕೊಟ್ಟು ಉಪಚರಿಸಿದ ಮಂಜುನಾಥರು ಸ್ವಾಮಿ ರಾವ್ರನ್ನ ಸೋಲಿಸಿ ಶಾಸಕರಾಗಿದ್ದರು, ಅವತ್ತಿನವರೆಗೆ ಅವರಿಬ್ಬರು ಪರಸ್ಪರ ಎದುರಾಗಿರರಿಲ್ಲ ನನಗೊಸ್ಕರ ಅವರಿಬ್ಬರ ಮಧ್ಯರಾತ್ರಿ ಬೇಟಿ ಆಗಿತ್ತು.
ಅಲ್ಲಿಂದ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾದ ಅರುಣ್ ಮನೆಗೆ ಹೋದೆವು ಅದು ಮದ್ಯರಾತ್ರಿ ಅವರು ನಾನು ಅಧ್ಯಕ್ಷ ನಾಗಬೇಕೆಂದು ಬಯಸಿ ತೆರೆಮರೆಯಲ್ಲಿ ಬೆಂಬಲಿಸಿದ್ದರು ಅವರಿಗೆ ವೈಯಕ್ತಿಕ ದನ್ಯವಾದ ಹೇಳಿ ನಮ್ಮ ಅದಿಕಾರ ಪಡೆಯುವ ಹೋರಾಟದಲ್ಲಿನ ವಿಫಲತೆ ಬಗ್ಗೆ ತಿಳಿಸಿದಾಗ ಜೊತೆಯಲ್ಲಿದ್ದ ಪಟಮಕ್ಕಿಯವರು ತಮ್ಮ ಸ್ವಂತ ಅನುಭವ ಒಂದನ್ನ ಅರುಣ್ ರ ಮನೆ ಎದುರಿನ ಮರದ ಕೆಳಗೆ ಚಂದ್ರನ ಬೆಳಕಿನ ನೆರಳಲ್ಲಿ ನೀರವ ಮದ್ಯರಾತ್ರಿಯಲ್ಲಿ ಹೇಳಿದ್ದು ಕೇಳಿ ನಾವೆಲ್ಲ ಕೈಗೆ ಸಿಕ್ಕಲಿದ್ದ ಅಧಿಕಾರ ಕಳೆದು ಕೊಂಡ ಬೇಸರದಲ್ಲಿದ್ದವರು ಅದೆಲ್ಲ ಮರೆತು ನಗುತ್ತಾ ಉಳಿದ ರಾತ್ರಿ ಕಳೆಯಲು ಲಾಡ್ಜೆಗೆ ಹಿಂದುರುಗಿದೆವು.
ಅವರು ಹೇಳಿದ್ದು ಏನೆಂದರೆ ಒಂದು ಅವದಿ ಶಾಸಕರಾಗಿದ್ದ ಅವರಿಗೆ ವಿದಾನಸಭಾ ಚುನಾವಣೆಗೆ ಎರಡನೆ ಅವಧಿಗೆ ಬಿ ಪಾರಂ ಸಿಕ್ಕಿತ್ತು, ಇದು ಸಂಜೆ ಪತ್ರಿಕೆಯಲ್ಲಿ ಓದಿದ ಮೈಸೂರಿನ ಮಿತ್ರ ಬೆಳಿಗ್ಗೆ ಮೈಸೂರಿಗೆ ಬಂದು ಅವರು ಖರೀದಿ ಮಾಡಿದ್ದ ಹೊಸ ಕಾರು ತೀಥ್೯ಳ್ಳಿಗೆ ಚುನಾವಣ ಪ್ರಚಾರಕ್ಕೆ ಒಯುವಂತೆ ಪೋನ್ ನಲ್ಲಿ ತಿಳಿಸಿದಾಗ ಇವರು ತಕ್ಷಣ ಒಪ್ಪಿದರಂತೆ ಯಾಕೆಂದರೆ ಆಗೆಲ್ಲ ಒಂದು ಕಾರು ಪ್ರಚಾರಕ್ಕೆ ಸಿಗುತ್ತೆ೦ದರೆ ದೊಡ್ಡ ಉಪಕಾರ.
ಬೆಳಿಗ್ಗೆ ಮೈಸೂರಿಗೆ ಹೋಗುವ ಮೊದಲು ಕೆ.ಪಿ.ಸಿ.ಸಿ ಕಚೇರಿಗೆ ಹೋಗಿ ಬಿ.ಪಾರಂ ನಲ್ಲಿ ಟೈಪಿOಗ್ನಲ್ಲಿ ಇವರ ಇನಿಷಿಯಲ್ ಸರಿ ಮಾಡಿಸಿಕೊಂಡು ಹೋಗಲು ಹೋದಾಗ ಸಿಬ್ಬ೦ದಿಗಳು ಬಂದಿರಲಿಲ್ಲವಾದ್ದರಿಂದ ಅಲ್ಲಿ ಇದ್ದ ಜವಾಬ್ದಾರಿ ವ್ಯಕ್ತಿ ಕೈಯಲ್ಲಿ ಬಿ.ಪಾರಂ ಕೊಟ್ಟು ಮೈಸೂರಿಗೆ ಹೋಗಿ ಸ೦ಜೆ ಬಂದು ತೆಗೆದು ಕೊಂಡು ಹೋಗುವುದಾಗಿ ತಿಳಿಸಿ ಮೈಸೂರಿಗೆ ಹೋಗಿ ಗೆಳೆಯರ ಮನೆಯಲ್ಲಿ ಮದ್ಯಾನ್ನ ಊಟ ಮಾಡಿ ಅವರ ಹೊಸ ಕಾರಿನೊಂದಿಗೆ ಬೆಂಗಳೂರಿನ ಕಾಂಗ್ರೇಸ್ ಕಚೇರಿಗೆ ಬಂದು ನೋಡುತ್ತಾರೆ ಅಲ್ಲಿ ಇವರು ಬೆಳಿಗ್ಗೆ ಇನಿಷಯಲ್ ಬದಲಿಸಲು ಕೊಟ್ಟ ಬಿ.ಪಾರಂ ಇವರ ಹೆಸರೇ ಬದಲಾಗಿ ಕಡಿದಾಳ ದಿವಾಕರಗೆ ನೀಡಲಾಗಿತ್ತ೦ತೆ. ಅವಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು ಅಂತ ಅರುಣ್ ಕೇಳಿದರು ನಾವೆಲ್ಲ ನಮ್ಮ ಅವತ್ತಿನ ರಾಜಕೀಯ ಅಧಿಕಾರ ಪಡೆಯುವ ಸಂದಭ೯ದಲ್ಲಿ ರಾಜಕೀಯ ಚದುರಂಗದಾಟಕ್ಕೆ ಬಲಿಯಾದ ನೋವು, ಹತಾಷೆ ಮತ್ತು ಸಿಟ್ಟು ಮರೆತು ಪಟಮಕ್ಕಿಯವರ ಬಿ.ಪಾರಂ ಕ್ಲಮಾಕ್ಸ್ ಬಗ್ಗೆ ತಿಳಿದುಕೊಳ್ಳಲು ಕಾತುರವಾಗಿದೆವು ಅವಾಗ ಪಟಮಕ್ಕಿಯವರು ಇನ್ನೇನು ಮಾಡಲಿ ಎದುರಿಗೆ ಬಂದ ದಿವಾಕರಗೆ ಬೆಸ್ಟ್ ಆಫ್ ಲಕ್ ಅಂದೆ ಅಂದಾಗ ಸಂಜೆಯಿ೦ದ ಮದ್ಯರಾತ್ರಿ ತನಕ ಮಡು ಕಟ್ಟಿದ ಹತಾಶೆ ಕ್ಷಣ ಮಾತ್ರದಲ್ಲಿ ಕಣ್ಮಮರೆ ಆಗಿ ಅಲ್ಲಿ ತೆಳುವಾದ ನಗೆ ಹರಡಿತ್ತು.
ಇವತ್ತು ಪಟಮಕ್ಕಿ ರತ್ನಕರ್ ಆರೋಗ್ಯ ಏರುಪಾರಾಗಿ ಮಣಿಪಾಲ್ ಸೇರಿಸಿದ್ದಾರೆ ಅಂತ ತೀಥ೯ಳ್ಳಿ ಪತ್ರಕತ೯ ಲೀ ಯೋ ಆರೋಜ ಫೋಸ್ಟ ನೋಡಿ ನೆನಪಾಯಿತು.
ಮಣಿಪಾಲನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಟ ಮಕ್ಕಿ ಮೃತರಾದರು ಅವರ ಅಂತ್ಯ ಸ೦ಸ್ಕಾರಕ್ಕೆ ಹಾಲಿ ಮತ್ತು ಮಾಜಿ ಶಾಸಕರು, ಮಂತ್ರಿಗಳು, ಅವರ ಒಡನಾಡಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Comments
Post a Comment