ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಖ್ಯಾತ ಕೆ.ವಿ. ಸುಬ್ಬಣ್ಣ ರಂಗಮಂದಿರ.
ಸಾಗರ ತಾಲ್ಲೂಕಿನ ಖ್ಯಾತ ರಂಗ ಕಮಿ೯, ಬರಹಗಾರ, ಚಿಂತಕ, ವಿಚಾರವಾದಿ, ಪರಿಸರವಾದಿ, ಸಮಾಜವಾದಿ ಮತ್ತು ಅಂತರಾಷ್ಟ್ರ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹೆಗೋಡಿನ ಕೆ.ವಿ. ಸುಬ್ಬಣ್ಣ ತಮ್ಮ ಊರಲ್ಲಿ ಪ್ರಖ್ಯಾತ ಸಾಹಿತಿ, ಪರಿಸರವಾದಿ, ಯಕ್ಷಗಾನ ತಜ್ಞ ಡಾಕ್ಟರ್ ಶಿವರಾಮ ಕಾರಂತರ ಹೆಸರಲ್ಲಿ ರಂಗ ಮಂದಿರ ಕಟ್ಟಿದ್ದಾರೆ, ನೀನಾಸಂ ಹೆಸರಲ್ಲಿ ಇದು ದೇಶ ಅಂತರ್ ದೇಶದಲ್ಲಿ ಹೆಸರುವಾಸಿ ಆಗಿದೆ.
ಹೆಗೋಡಿನಲ್ಲಿ ಅವರು ನಿಮಿ೯ಸಿದ ರಂಗಮಂದಿರಕ್ಕೆ ಶಿವರಾಮ ಕಾರಂತರ ಹೆಸರಿಡಲು ಆವರು ನಡೆಸಿದ ಪತ್ರ ಸಂವಾದ ಸುಬ್ಬಣ್ಣರ ಪುಸ್ತಕದಲ್ಲಿ ನಮೂದಿಸಿದ್ದಾರೆ, ಇವರು ಶಿವರಾಮ ಕಾರ೦ತರ ಹೆಸರಿಡಲು ತೀಮಾ೯ನಿಸಿ ಅವರ ಒಪ್ಪಿಗೆ ಗಾಗಿ ಪತ್ರಿಸುತ್ತಾರೆ ಅದಕ್ಕೆ ಕಾರಂತರ ಉತ್ತರ ಪ್ರತ್ಯುತ್ತರ ಆ ಪುಸ್ತಕದಲ್ಲಿದೆ.
ಜಿಲ್ಲಾ ಪಂಚಾಯತ ಸದಸ್ಯನಾದ ನಂತರ ಅವರ ಒಡನಾಟ ಕಾಗೋಡು ಹೋರಾಟದ ನೇತಾರ ಗಣಪತಿಯಪರಿಂದ ಹೆಚ್ಚಾಯಿತು ಅದಕ್ಕೂ ಮೊದಲು ಸುಬ್ಬಣ್ಣರ ಬಗ್ಗೆ ಓದಿ ತಿಳಿದಿದ್ದೆ, ಕೇಳಿ ಅರಿತಿದ್ದೆ ಹಾಗೂ ದೂರದಿಂದ ನೋಡಿ ಬಲ್ಲಿದ್ದೆ.
ಒಮ್ಮೆ ಸಾಗರದಿಂದ ಆನಂದಪುರಕ್ಕೆ ರಾತ್ರಿ ಹೋಗುವಾಗ ಆ ಬಸ್ಸಲ್ಲಿ ಸುಬ್ಬಣ್ಣ ಇದ್ದರು ಎದರು ಸೀಟಿನಲ್ಲಿ ಒಬ್ಬ ಪ್ರಯಾಣಿಕ ಸಿಗರೇಟು ಸೇದಿ ಹೋಗೆ ಬಿಡುತ್ತಿದ್ದ ಈ ಘಟನೆ 1985 ರಲ್ಲಿ ನಡೆದಿದ್ದು ಬಸ್ ಲ್ಲಿ ಇದ್ದವರು ಅವನನ್ನ ತಡೆಯಲು ಪ್ರಯತ್ನಿಸಿ ವಿಫಲರಾದರು ಆದರೆ ಸುಬ್ಬಣ್ಣ ಅವನನ್ನ ತರಾಟೆಗೆ ತೆಗೆದು ಕೊಂಡರು ಆತ ಡ್ರೈವರ್ ಕಡೆ ಕೈ ತೋರಿಸಿ ಹಾಸ್ಯ ಮಾಡಿದ ಅಲ್ಲಿ ಬಸ್ ಚಾಲಕ ಕೂಡ ಸಿಗರೇಟು ಸೇಯುತ್ತಾ ಬಸ್ ಚಾಲನೆ ಮಾಡುತ್ತಿದ್ದ!! ಆಗೆಲ್ಲ ಸಾವ೯ಜನಿಕ ಸ್ಥಳದಲ್ಲಿ ದೂಮಪಾನ ನಿಷೇದ ಬಹುಮತದ ಆಧಾರದಲ್ಲಿತ್ತು, ಅಂತ್ಯ ದಲ್ಲಿ ಸುಬ್ಬಣ್ಣ ಇಬ್ಬರೂ ಸಿಗರೇಟು ಸೇದದಂತೆ ಮಾಡಿದರು.
1983ರಲ್ಲಿ ನಮ್ಮ ಊರಿಂದ ನಾವೆಲ್ಲ ಗೆಳೆಯರು ಸೈಕಲ್ ಮೇಲೆ ಹೆಗೋಡಿಗೆ ಹೋಗಿ ಅಲ್ಲಿ ಮಸಣದ ಬಟ್ಟೆ ಎಂಬ ನಾಟಕ ನೋಡಿದ ನೆನಪು, ಸಾಗರದಲ್ಲಿ ಚಿನ್ನದ ಗಣಿ ವಿರೋದಿ ಹೋರಾಟದಲ್ಲಿ ಅವರ ಭಾಷಣ, ಗುಟ್ಕರದ್ದು ಮಾಡುವ ವಿಚಾರದಲ್ಲಿ ಅವರ ಅಚಲ ನಿದಾ೯ರ ಕ್ಯಾನ್ಸರ್ಗೆ ಕಾರಣವಾದ ಗುಟ್ಕ ರದ್ದತಿಗೆ ಸ್ವತಃ ಅಡಿಕೆ ಬೆಳೆಗಾರರಾದರೂ ಸಾವ೯ಜನಿಕರ ಆರೋಗ್ಯದ ಪರ ವಾದ ಹೀಗೆ ಹತ್ತಾರು ವಿಚಾರ ನನಗೆ ಸುಬ್ಬಣ್ಣರ ಬಗ್ಗೆ ಅಭಿಮಾನಕ್ಕೆ ಕಾರಣವಾಯಿತು.
ಹಾಗಾಗಿ ನನಗೆ ಅವರ ಹೆಸರಲ್ಲಿ ರಂಗ ಮಂದಿರ ನಿಮಿ೯ಸಲು ಯೋಚಿಸಿದ್ದೆ, ಆನಂದಪುರಂ ಸಮೀಪದ ಮುರುಘಾಮಠದ ಸಕಾ೯ರಿ ಶಾಲಾವರಣದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ರಂಗ ಮಂದಿರ ನಿಮಿ೯ಸಿದೆವು, ಆನಂದಪುರದ JCB ಚಂದ್ರಶೇಖರ್ ಅಂಬಲಿಗೋಳ ಹಣ ಮಂಜೂರಾಗದಿದ್ದರೂ ನಮ್ಮ ಒಳ್ಳೆಯ ಉದ್ದೇಶ ಅರಿತು ಕಾಮಗಾರಿ ಮುಗಿಸಿದರು.
ಉದ್ಘಾಟನೆಗಾಗಿ ಸುಬ್ಬಣ್ಣರ ಬೇಟಿ ಮಾಡಿದೆ, ತಮ್ಮ ಸ್ವ೦ತ ಹೆಸರಿನ ರಂಗಮಂದಿರ ಅ೦ದಾಗ ಸ್ವಲ್ಪ ಗಂಭೀರವಾದರು ಆಗ ಅವರ ಮತ್ತು ಶಿವರಾಮ ಕಾರಂತರ ಪತ್ರ ಸಂವಾದ ಅವರು ನಿಮಿ೯ಸಿದ ರಂಗಮಂದಿರದ ನಾಮ ಕರಣಕ್ಕಾಗಿ ನಡೆದಿದ್ದು ಓದಿದ ಬಗ್ಗೆ ನೆನಪಿಸಿದೆ ಆಗ ಅವರು ನನ್ನ ಓದಿನ ಹವ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಹಾಗೆಯ ಅವರ ಹೆಸರನ್ನ ನಮ್ಮ ಮುರುಘಾ ಮಠದ ರಂಗ ಮಂದಿರಕ್ಕೆ ಇಡಲು ಒಪ್ಪಿಕೊಂಡರು, ಲಿಖಿತ ಅನುಮತಿ ಪಡೆದೆ ಆದರೆ ಭಾಗವಹಿಸಲು ಇಷ್ಟಪಡಲಿಲ್ಲ.
ಅವತ್ತು ನಾವೆಲ್ಲ ಸೇರಿ ಉದ್ಘಾಟಿಸಿದ ಕೆ.ವಿ.ಸುಬ್ಬಣ್ಣ ರಂಗ ಮಂದಿರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಮುರುಘಾಮಠದ ಸಕಾ೯ರಿ ಆವರಣದಲ್ಲಿರುವುದು ನಾವೆಲ್ಲ ಆ ಮಹಾನ್ ಸಾದಕರಿಗೆ ನೀಡಿದ ಗೌರವ ಮಾತ್ರ, ಇವತ್ತು ಆನಂದಪುರಂನ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಅನಿತಾಕುಮಾರಿ ಕೆ.ವಿ.ಸುಬ್ಬಣ್ಣ ರಂಗ ಮಂದಿರದ ವೀಕ್ಷಣೆಯ ಪೋಟೋ ಪೇಸ್ ಬುಕ್ನನಲ್ಲಿ ಪೋಸ್ಟ್ ಮಾಡಿದ್ದು ನೋಡಿ ಇದೆಲ್ಲ ನೆನಪಾಯಿತು.
ಇದೇ ರೀತಿ ಆನಂದಪುರಂ ಪದವಿ ಪೂವ೯ ಕಾಲೇಜು ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ನಿಮಿ೯ಸಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯ ನಡೆಸಿದ್ದು, ಆನಂದಪುರO ನ ಕನ್ನಡ ಸಂಘದ ಆವರಣದಲ್ಲಿ ಸಾಹಿತಿ ನಾ .ಡಿಸೋಜರ ಹೆಸರಲ್ಲಿ ರಂಗಮಂದಿರ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು, ಯಡೇಹಳ್ಳಿಯ ಸಕಾ೯ರಿ ಶಾಲೆ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪರ ಹೆಸರಲ್ಲಿ ರಂಗಮಂದಿರ ನಿಮಿ೯ಸಿ ಸಾಹಿತಿ ಕೊಣಂದೂರು ವೆಂಕಪ್ಪ ಗೌಡರಿಂದ ಉದ್ಘಾಟಿಸಿದ್ದು ಎಲ್ಲಾ ಈ ಸಂದಭ೯ದಲ್ಲಿ ನೆನಪಾಯಿತು.
Comments
Post a Comment