ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡ ತ್ರಿ ಮಲ್ಲಪಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.
ಮಲ್ಲಪ್ಪ ಗೌಡರು ದೂರದೃಷ್ಟಿ ಇದ್ದ೦ತಹ ವ್ಯಕ್ತಿ ಆದ್ದರಿಂದ ಹೊಸಗುಂದಕ್ಕೆ ಬಂದವರೆ ಸಾವ೯ಜನಿಕರಿಗಾಗಿ ಕುಡಿಯುವ ನೀರಿನ ಬಾವಿ ಮತ್ತು ಶಾಲೆ ಒಂದನ್ನ ನಿಮಿ೯ಸಿ ಅದರ ಉದ್ಘಾಟನೆಯನ್ನ ಆ ಕಾಲದ ಜನಪ್ರಿಯ ಮುಖ್ಯ ಮಂತ್ರಿ ನಿಜಲಿಂಗಪ್ಪರನ್ನ ಕರೆಸಿ ಮಾಡಿಸಿದ್ದರೆಂದರೆ ಅವರ ಘನತೆ ಅಥ೯ವಾದೀತು.
ಅವರ ನಂತರ ಅವರ ಮಗ ಹೆಡ ತ್ರಿ ನಾಗರಾಜ ಗೌಡರು ಅವರ೦ತೆ ಜನ ಬಳಕೆ, ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸಿದರು, ಅವರು ಹೇಳುವಂತೆ ಮುಳುಗಡೆಯಿ೦ದ ಬ೦ದ ಕೆಲ ವಷ೯ ಹೊಸಗುಂದದ ಕಾಡಲ್ಲಿದ್ದ ದೇವಸ್ಥಾನ ಅವರ ಕುಟು೦ಬಕೆ ಗೊತ್ತೆ ಇರಲಿಲ್ಲ, ಆ ದೇವಸ್ಥಾನ ದಟ್ಟ ಅರಣ್ಯದ ನಡುವೆ ಮಾನವ ನಿಮಿ೯ತ ಮಣ್ಣಿನ ದಿಬ್ಬದ ನಡುವೆ ನಿಮಿ೯ಸಿದ ಸುಂದರ ಕಲ್ಲಿನ ದೇವಾಲಯ ಆಗಿತ್ತು.
ನಂತರ ಈ ಬಗ್ಗೆ ಪ್ರಾಚಯ ವಸ್ತು ಸ೦ಶೋದನ ಇಲಾಖೆಯಲ್ಲಿ ಪಡೆದ ಮಾಹಿತಿಯಿಂದ ಇದು ಕಲ್ಲೇಶ್ವರ ದೇವಸ್ಥಾನ, ಇದಕ್ಕೆ ತಾಗಿ ಬೆಳೆಯುತ್ತಿರುವ ನೀರಟ್ಟಿ ಮರ ತೆಗೆಯದಿದ್ದರೆ ಮುಂದೆ ಇಡಿ ದೇವಸ್ಥಾನ ನಾಶವಾಗುತ್ತೆ ಅಂತ ಆಗಿನ? ಸಂಬಂಧಪಟ್ಟ ಇಲಾಖೆಯ ಸಹಾಯಕ ನಿದೆ೯ಶಕ ನಾಗರಾಜ್ ರಾವ್ ಎಂಬುವವರು ಗೆಜೆಟಿಯರ್ನಲ್ಲಿ ಪ್ರಕಟಿಸಿರುವುದನ್ನ ನೋಡಬಹುದು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಎದುರಿನಲ್ಲಿ ಸಂಶೋದಕರಾದ ಶ್ರೀ ಶಾಸ್ತ್ರೀಯವರ ಮನೆ ಇದೆ ಅವರು ಮುರುಘಾಮಠದಲ್ಲಿ ಸದಾ ಸೇವೆ ಸಲ್ಲಿಸುತ್ತಾರೆ ಕೆಳದಿ ಇತಿಹಾಸದ ಬಗ್ಗೆ ಸಂಶೋದನ ಗ್ರಂಥ ತರಲು ಅವರು ಕಾರಣಕತ೯ರು, ಅವರು ನಾನು ಜಿಲ್ಲಾ ಪಂಚಾಯತ್ ಕಚೇರಿಗೆ ಹೋದಾಗೆಲ್ಲ ಬಂದು ಹೊಸಗುಂದ ದೇವಸ್ಥಾನ ಉಳಿಸಲು ನೀನು ಪ್ರಯತ್ನ ಮಾಡು ಅಂತ ಹುರಿದುಂಬಿಸುತ್ತಿದ್ದರು ಹಾಗಾಗಿ ನಾನು ಹೆಡ್ ತ್ರಿ ನಾಗರಾಜಗೌಡರೊಂದಿಗೆ ಈ ದೇವಸ್ಥಾನ ನೋಡಲು ಹೋಗಿದ್ದೆ.
ಈ ಮರ ತೆಗೆಯಲು ಹೋದರೆ ದೇವಸ್ಥಾನ ಉಳಿಯುವ ಸಂಭವ ಶೇಕಡಾ 1 ಸಾಧ್ಯವಿರಲಿಲ್ಲ ಅಂತಹ ರೀತಿಯಲ್ಲಿ ಮರ ಬೃಹದಾಕಾರವಾಗಿ ದೇವಾಲಯದ ಗಭ೯ಗುಡಿಯ ಶಿಲೆಯ ಗೋಡೆಯನ್ನ ಆವರಿಸಿ ಬೆಳೆದು ಅತ್ಯಂತ ಎತ್ತರವಾಗಿದ್ದು ಶೇಕಡಾ 65 ಬಾಗ ದೇವಾಲಯದ ಮೇಲೆ ಬಾಗಿಕೊಂಡಿತ್ತು.
ಸುಂದರವಾ ಶಿಲ್ಪಕಲೆಯ ದೇವಾಲಯ ಈಗಿನ ಬನವಾಸಿ ದೇವಾಲಯದಂತೆ ಇತ್ತು, ಅತಿ ದೊಡ್ಡದಾದ ಈಶ್ವರಲಿಂಗವನ್ನ ನಿಧಿ ಶೋಧಕರು ತೆಗೆಯಲು ಪ್ರಯತ್ನಿಸಿ ತೆಗೆಯಲಾಗದೆ ಹೋದ ಕುರುಹುಗಳನ್ನ ಗೌಡರು ತೋರಿಸಿದರು, ಒಂದು ರೀತಿ ಈ ದೇವಸ್ಥಾನ ಕಟ್ಟಿಸಿದವರು ಯಾವುದೋ ಉದ್ದೇಶದಿಂದ ಈ ದೇವಾಲಯ ಜನರಿಗೆ ಕಾಣದಂತೆ ಸುತ್ತಲೂ ಮಣ್ಣಿನ ದಿಬ್ಬ ಹಾಕಿ ಕಾಣದ೦ತೆ ಮಾಡಿದ್ದರು, ಇಲ್ಲಿ ನಿಧಿ ಸಂರಕ್ಷಿಸಲಾಗಿದೆ ಹಾಗಾಗಿ ಇದನ್ನ ಗುಪ್ತವಾಗಿ ಕಾಣದOತೆ ಮಾಡಿದ್ದಾರೆ ಅಂತ ಗೌಡರು ತಿಳಿಸಿದರು.
ನನಗೆ ಹಿಡಿದ ಕೆಲಸ ಮಾಡಲೇ ಬೇಕೆಂಬ ತವಕ ಹಾಗಾಗಿ ಅದೇ ಸಂದಭ೯ದಲ್ಲಿ ನಮ್ಮ ಭಾಗಕ್ಕೆ ವಗ೯ವಾಗಿ ಬಂದ ಪಾರೆಸ್ಟರ್ ಪುರುಶೊತ್ತಮರಿಗೆ ಈ ಬಗ್ಗೆ ತಿಳಿಸಿ ಆ ಮರ ತೆಗೆಸಲು ಸಾಧ್ಯವೆ? ಪರಿಶೀಲಿಸಿ ಎಂದಿದ್ದೆ ಕಾರಣ ಈ ಪುರುಶೋತ್ತಮ ಅತ್ಯ೦ತ ಸಾಹಸಿ ಮತ್ತು ತೀಕ್ಷಣಮತಿ ಕೂಡ.
ಅವರು ನೀಡಿದ ಮಾಹಿತಿ ಪ್ರಕಾರ ಕಷ್ಟ ಆದರೆ ಸಾಧ್ಯವಿದೆ ಅಂತಹ ಅನುಭವಿಗಳನ್ನ ಹುಡುಕುತ್ತೇನೆ ಅಂತ ಬರವಸೆ ನೀಡಿದರು, ಈ ಬಗ್ಗೆ ನಾಗರಾಜಗೌಡರಿಗೆ ತಿಳಿಸಿದಾಗ ಅವರಿಗೆ ಅಂತಹ ನ೦ಬಿಕೆ ಬರಲಿಲ್ಲ, ಸ್ವಲ್ಪ ದಿನದಲ್ಲೇ ಪುರುಶೊತ್ತಮಪಾರೆಸ್ಟ್ರು ಸೊರಬದಿಂದ ಹುಸೇನ್ ಸಾಬ್ ತಂಡ ತಂದು ತೋರಿಸಿದರು, ಅವರು ತಾವು ಕೇಳಿದ ವ್ಯವಸ್ಥೆ ಮಾಡಿದರೆ ಯಾವುದೇ ತೊಂದರೆ ಆಗದ೦ತೆ ಮರ ತೆಗೆಯುವುದಾಗಿ ಬರವಸೆ ನೀಡಿದರು.
ನಂತರ ಮರ ತೆಗೆಯಲು ಅನುಮತಿ ಪಡೆಯುವುದು, ಅರಣ್ಯ ಇಲಾಖೆ ಅನುಮತಿ ನೀಡಲು ದೇವಸ್ಥಾನ ಪ್ರಾಚಯ ವಸ್ತು ಇಲಾಖೆ ಅನುಮತಿ ಬೇಕು ಆದರೆ 1940 ರಿಂದಲೂ ಮರ ಸಣ್ಣ ಗಾತ್ರದಲ್ಲಿ ಇದ್ದಾಗಿ೦ದಲೂ ಇದೇ ರೀತಿ ಇಲಾಖಾ ಜಿಜ್ಞಾಸೆಗಳ ಕಾರಣದಿಂದ ಅನುಮತಿ ಸಿಗದೆ ಈ ಮರ ಸುಮಾರು ಅದ೯ ಶತಮಾನದಿಂದ ಬೃಹತ್ ಗಾತ್ರಕ್ಕೆ ಬೆಳೆದು ದೇವಾಲಯದ ಮೇಲೆ ಮೈಚಾಚಿದೆ, ಇನ್ನು ಇಂತಹ ಅನುಮತಿಗೆ ಕಾದರೆ ಕೆಲಸ ಸಾಧ್ಯ ಆಗುವುದಿಲ್ಲ ಅಂದಾಗ ಗೌಡರು, ಪುರುಶೊತ್ತಮ ಪಾರೆಸ್ಟರು ಹೌದೆಂದರು.
ಲಿಖಿತ ಅನುಮತಿ ಪಡೆಯದೆ ನಮ್ಮಷ್ಟಕ್ಕೆ ನಾವೇ ಅನುಮತಿ ಪಡೆದಂತೆ ಮರ ತೆಗೆಯಲು ಕೆಲಸ ಪ್ರಾರಂಬಿಸಿದೆವು, ಹುಸೇನ್ ಸಾಬ್ ತಂಡ ಅಟ್ಟಣಿಕೆ ಹಾಕಲು ಪ್ರಾರಂಬಿಸಿದರು ಅವರಿಗೆ ಇಂತಿಷ್ಟು ಹಣ ಮತ್ತು ಊಟ ವಸತಿ ಗೌಡರು ನೋಡಿಕೊಂಡರು, ಒಂದೆರೆಡು ದಿನದ ತಯಾರಿ ನಂತರ ಮರ ಉರುಳಿಸುವ ದಿನ ಹುಸೇನ್ ಸಾಬ್ ನಿಗದಿ ಮಾಡಿದರು, ಆ ದಿನ ಉದ್ದದ ಉಕ್ಕಿನ ರೋಪ್ ನೊಂದಿಗೆ ಸಾಗರದ ವಿದ್ಯುತ್ ಇಲಾಖೆ ನೌಕರರ ತಂಡವನ್ನ ಗೌಡರು ಜೀಪಲ್ಲಿ ತಂದರು, ಪುರುಶೊತ್ತಮರ ಪೂಣ೯ ಸಿಬ್ಬ೦ದಿ ಸಹಾಯಕ್ಕೆ ಕೈ ಜೊಡಿಸಿತು.
ಎಲ್ಲರಿಗೂ ಒಂದೇ ಭಯ ಏನಾದರೂ ಹೆಚ್ಚು ಕಡಿಮೆ ಆಗಿ ಪುರಾತನ ದೇವಾಲಯದ ಮೇಲೆ ಮರ ಬಿದ್ದು ದುರಂತ ಆದರೆ ಮುಂದೆ ಬರುವ ಗಂಡಾಂತರ, ಕಾನೂನು ಸಮಸ್ಯೆ, ಅಪವಾದ ಹೇಗೆ ಎದುರಿಸುವುದು ಅಂತ, ಆದರೆ ನಮಗೆಲ್ಲ ಒಂದೇ ಭರವಸೆ ಪುರುಶೊತ್ತಮ ಪಾರೆಸ್ಟ್ರು, ಅವರಿಗೆ ಭರವಸೆ ಹುಸೇನ್ ಸಾಬ್ ತಂಡ.ಉಳಿದವರಿಗೆಲ್ಲ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಭರವಸೆ, ಅಷ್ಟರಲ್ಲಿ ಗೌಡರ ಮನೆಯಿಂದ ಅವಲಕ್ಕಿ ಚಹಾ ಬಂತು, ಗೌಡರು ತರಾತುರಿಯಿ೦ದ ವಾಪಾಸು ಹೊರಟಾಗ ನಾವು ಯಾಕೆ ಇರಿ ಅ೦ದೆ ಅದಕ್ಕೆ ಅವರು ಪ್ರಾಚೀನ ದೇವಸ್ಥಾನ ಹೆಚ್ಚು ಕಡಿಮೆ ಈ ಮರ ತೆಗೆಯಲು ಹೋಗಿ ನಾಶವಾದರೆ ನನ್ನ ಕಣ್ಣಲ್ಲಿ ನೋಡಿ ಪಾಪ ಕಟ್ಟಿಕೊಳ್ಳಲಾರೆ ಅಂತ ಪಾಪಪ್ರಜ್ಞಾ ವ್ಯಕ್ತಪಡಿಸಿ ವಾಪಾಸ್ ಹೋದರು.
ನೇತೃತ್ವವಹಿಸಿದ ನಾನು ಪುರುಶೊತ್ತಮ ಮಾತ್ರ ಏನೇ ಆದರೂ ನೋಡಲೇಬೇಕಾಗಿತ್ತು, ಮುಂದಿನ ಪರಿಣಾಮದ ಬಗ್ಗೆ ನಾವು ಯೋಚಿಸಲೇ ಇಲ್ಲ, ನನ್ನ ಸಣ್ಣ ಕ್ಯಾಮೆರಾದಲ್ಲಿ ಅಲ್ಲಿನ ವಾಸ್ತವ ಚಿತ್ರ ತೆಗೆದುಕೊಂಡೆ, ಮರ ಬೀಳುವ ಕ್ಲಮಾಕ್ಸ್ ಚಿತ್ರ ಎಲ್ಲಿ ನಿಂತು ತೆಗೆಯಲಿ ಅಂತ ಯೋಚಿಸಿದಾಗ ಹುಸೇನ್ ಸಾಬ್ ದೇವಾಲಯದ ಹಿಂಬಾಗದಿಂದ ತೆಗೆರಿ ಅಂದಾಗ ನಾನು ಭಯ ಪಟ್ಟಿ ಯಾಕೆ೦ದರೆ ಮರ ದೇವಸ್ಥಾನದ ಮೇಲೆ ಏನಾದರು ನಮ್ಮೆಲ್ಲರ ಲೆಖ್ಯತಪ್ಪಿ ಬಿದ್ದರೆ, ಕಲ್ಲಿನ ದೇವಾಲಯ ಪುಡಿ ಆಗಿ ನಾವು ಜೀವಂತ ಸಾಮಾದಿ ಆಗುತ್ತೇವೆ ಆದರೆ ಹುಚ್ಚು ದೈಯ೯ದಿಂದ ಹಿಂಬಾಗಕ್ಕೆ ಕ್ಯಾಮೆರಾ ಜೊತೆಗೆ ಹೋದೆ, ಗಪೂರ್ ಎಂಬ ಒಬ್ಬ ಗೆಳೆಯರು ಮಾತ್ರ ಜೊತೆಗೆ ಬರುವ ದೈಯ೯ ಮಾಡಿದರು.
ಸಂಜೆ ಸಮಯ ಗುಡ್ಡದ ಮದ್ಯದಲ್ಲಿ ಬೇಗ ಕತ್ತಲಾಗುತ್ತದೆ, ಆಷ್ಟರಲ್ಲಿ ಹಕ್ಕಿ, ಪಕ್ಷಿಗಳು ಗೂಡು ಸೇರಲು ಪ್ರಾರಂಬಿಸಿದ್ದವು ಅಂತಿಮ ಕ್ಷಣದ ಕೆಲಸಗಳನ್ನ ಅಟ್ಟಣಿಗೆ ಮೇಲೆ ಹುಸೇನ್ ಸಾಹೇಬರು ಮಾಡುತ್ತಿದ್ದರು ಉಳಿದವರೆಲ್ಲ ಮರದ ತುದಿಗೆ ಕಟ್ಟದ ಉಕ್ಕಿನ ರೋಪಿನ ಇನ್ನೂOದು ತುದಿಗೆ ಮರ ದೇವಾಲಯದ ಮೇಲೆ ಬೀಳದಂತೆ ಎಳೆಯುವ ಭಾಗದಲ್ಲಿ ಸೇರಿದ್ದರು, ಒಂದು ರೀತಿಯ ನಿಶ್ಯಬ್ದ ನೀರವತೆ ಅಲ್ಲಿ ಭಯ ಉ೦ಟು ಮಾಡುತ್ತಿತ್ತು, ಮೇಲೆ ಹುಸೇನ್ ಸಾಬ್ ಕೊಡಲಿಯಿ೦ದ ಟಕ್ ಟಕ್ ಅಂತ ಅಂತಿಮ ಪ್ರಹಾರ ನೀಡುತ್ತಿದ್ದ ಶಬ್ದ ಮಾತ್ರ ಕೇಳುತ್ತಿತ್ತು ಆಷ್ಟರಲ್ಲಿ ಗಯಾ ರೇ ..... ಅಂತ ಅವರಲ್ಲೆ ಒಬ್ಬ ಕೂಗಿದ, ನಮಗೋ ಏನಾಯಿತು ಅ೦ತ ಗಾಭರಿ, ಅಷ್ಟರಲ್ಲೇ ಚಟ್... ಚಟ್..... ಟಸಿಲ್ ಅಂತ ಮರ ದೇವಸ್ಥಾನದ ವಿರುದ್ಧ ದಿಕ್ಕನಲ್ಲಿ ಬೀಳುವುದು ನೋಡಿ ಸಂತೋಷವಾಯಿತು ತಕ್ಷಣ ಪೋಟೊ ಕ್ಲಿಕ್ಕಿಸಲು ಪ್ರಾರಂಬಿಸಿದೆ, ಇದೆಲ್ಲ ಕೆಲ ಸೆಕೆಂಡಿನ ಕಾಲಾವಧಿ ಮಾತ್ರ, ಮರ ನೆಲಕ್ಕೆ ಬಿದ್ದ ರಭಸಕ್ಕೆ ಸುತ್ತ ಮುತ್ತದ ಸಣ್ಣ ಮರ ಗಿಡ ಅಡ್ಡ ಸಿಕ್ಕ ರಂಬೆ ಕೊಂಬೆಗಳು ಮುರಿದು ದೊಡ್ಡ ಶಬ್ದದೊಂದಿಗೆ ನೆಲದ ಮಣ್ಣು ಅವುಗಳ ಬಾರಕ್ಕೆ ದೂಳಾಗಿ ಸುತ್ತ ಮುತ್ತ ಎಲ್ಲಾ ಬಾಂಬು ಬಿದ್ದ೦ತೆ ಸಂಜೆಯ ಕೆಂದೂಳಿನೊಂದಿಗೆ ಪರಿಸರ ಕೆಂಪಾಯಿತು, ಅದರ ಹಿಂದೆಯೇ ದೂರದಿಂದ ಗೆಲುವಿನ ಕೇಕೆ ಕೇಳಿ ಬಂತು ಅದರ ಹಿಂದೆಯೆ ಗೂಡು ಸೇರಿದ್ದ ಹಕ್ಕಿ ಪಕ್ಷಿಗಳು ಗೂಡು ಬಿಟ್ಟು ಪುನಃ ಗಾಬರಿಯಿಂದ ದಿಕ್ಕಾಪಾಲಾಗಿ ಹಾರಿದವು.
ಈಗ ಹೊಸಗುಂದ ದೇವಾಲಯ ಪುನರ್ ನಿಮಾ೯ಣ ಆಗುತ್ತಿದೆ, ಹಿಂದಿನ ಜನ್ಮದಲ್ಲಿ ಇಲ್ಲಿ ರಾಜನಾಗಿ ಆಳಿದವರೆ ಈಗ ಜನ್ಮ ತಾಳಿ ಅಭಿವೃದ್ಧಿ ಮಾಡುತ್ತಿದ್ದಾರೆ ಅಂತಿದ್ದ ರಾಮಚಂದ್ರಾಪುರದ ಸ್ವಾಮಿಗಳು ಅವರ ಮೇಲೆ ಕೇಸು ಹಾಕಿದ್ದಾರೆ, ದೇವಾಲಯ ಅಭಿವೃದ್ದಿ ಸಮಿತಿಗೆ ರಾಮಚಂದ್ರಾಪುರದ ಮಠದ ಸ್ವಾಮಿಗಳ ಸ್ಥಾನಕ್ಕೆ ಶೃ೦ಗೇರಿ ಜಗದ್ಗುರು ಬಂದಿದ್ದಾರೆ, ಅಭಿವೃದ್ದಿ ಮಾಡುತ್ತಿದ್ದವರ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ, ಹೆಡ ತ್ರಿ ನಾಗರಾಜಗೌಡರು ಆತ್ಮಹತ್ಯ ಮಾಡಿಕೊ೦ಡಿದ್ದಾರೆ, ಇನ್ನೂ ಒಂದೆರೆಡು ಜನ ಜೀವ ಕಳೆದುಕೊಂಡರು ಇತ್ತಿಚಿಗೆ ಅಭಿವೃದ್ದಿ ಮಾಡುವವರ ಸಹೋದರ ಮಠಾದೀಶರ ವ್ಯಾಜ್ಯದಲ್ಲಿ ದೂರದ ಪುತ್ತೂರಿನಲ್ಲಿ ಬಂದೂಕಿನ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಂಡರು, ಕೇರಳದಿಂದ ಮಂತ್ರವಾದಿಗಳು ಬರುತ್ತಾರೆ, ಎಲ್ಲಾ ನಿದಿಯ ಮೇಲಿನ ವಿದಿ ಅಂತ ಸ್ಥಳೀಯರು ಹೇಳುತ್ತಾರೆ, ಸತ್ಯವೊ ಸುಳ್ಳಾ? ಅದೇನೆ ಆಗಲಿ.......
ಹೊಸಗು೦ದ ಹೊಸದಾಗಿ ನಿಮಾ೯ಣವಾಗಿದೆ ಚೆನ್ನಾಗಿ ಮಾಡಿದ್ದಾರೆ, ಕಲ್ಲೇಶ್ವರನ ಹೆಸರನ್ನ ಉಮಾ ಮಹೇಶ್ವರ ಅಂತ ಬದಲಿಸಿದ್ದಾರೆ. ಇತ್ತೀಚಿನ ಪೋಟೊಗಳು ಸುಂದರವಾಗಿ ಬಂದಿದೆ, ಆದರೆ ಈ ದೇವಾಲಯ 1995 ರಲ್ಲಿನ ಅಪರೂಪದ ಚಿತ್ರಗಳನ್ನ ಇಲ್ಲಿ ಪ್ರಕಟಿಸಿದ್ದೇನೆ ಜೊತೆಯಲ್ಲಿ ಅಗಾದವಾಗಿದ್ದ ಮರ ತೆಗೆದ ಸಾಹಸದ ನೆನಪಿನೊಂದಿಗೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
ಹೊಸಗುಂದದ ದೇವಸ್ಥಾನದ ಈಗ ಕಾಣುತ್ತೀರುವ ಅಬಿವೃದ್ದಿಗೆ ನಿಮ್ಮ ತಂಡ ಮೂಲ ಕಾರಣಿ ಕರ್ತರು.(ತಳಪಾಯ) ನಿಮ್ಮ ಈ ಕಾರ್ಯಕ್ಕೆ ಆನಂತ ಧನ್ಯವಾದಗಳು. ಈ ರೀತಿಯ ಕಾರ್ಯ ಮಹಂತನ ಮಠದ ಕಡೆಗೂ ನಡೆಯಲಿ ಎಂಬುದು ನಮ್ಮ ಆಶಯ.
ReplyDelete