ಮಾಜಿ ಮಂತ್ರಿಗಳು ಹಾಲಿ ನಮ್ಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು ಅವರ ಪುತ್ರರ ವಿವಾಹ ಮಹೋತ್ಸವಕ್ಕೆ ಆಹ್ವಾನಿಸಿದ್ದಾರೆ.
#ನಾಳೆ_ಬೆಂಗಳೂರಲ್ಲಿ_ಮದುವೆ_26ರಂದು_ಸಾಗರದಲ್ಲಿ_ಆರತಕ್ಷತೆ
#ನೂತನ_ದಂಪತಿಗಳಿಗೆ_ವಿವಾಹ_ಮಹೋತ್ಸವದ_ಶುಭಹಾರೈಕೆಗಳು.
ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಹರತಾಳು ಹಾಲಪ್ಪನವರು ಪೋನಾಯಿಸಿ ಪುತ್ರನ ವಿವಾಹ ಮಹೋತ್ಸವಕ್ಕೆ ಆಹ್ವಾನ ನೀಡಿದರು, ಅವರ ಷಡಕರಾದ ನಾರಾಯಣಪ್ಪನವರು ಆಹ್ವಾನ ಪತ್ರಿಕೆ ತಲುಪಿಸುತ್ತಾರೆ ಅಂದರು.
ಜನಸಾಮಾನ್ಯರಾದ ನಮಗೆ ಇದರ ಕಷ್ಟ ಗೊತ್ತಿರುತ್ತದೆ ಅದರಲ್ಲೂ ಎರೆಡು ತಾಲ್ಲೂಕ್ ನ್ನು ಪ್ರತಿನಿದಿಸುವ ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪರಿಗೆ ಎಲ್ಲರನ್ನೂ ಆಹ್ವಾನಿಸುವ ಅನಿವಾಯ೯ತೆ ಮತ್ತು ಶ್ರಮ ನಮಗೆ ಅರ್ಥವಾಗುತ್ತದೆ.
2019 ರಲ್ಲಿ ನವೆಂಬರ್ ನಲ್ಲಿ ಆನಂದಪುರಂನ ನಮ್ಮದೇ ಕಲ್ಯಾಣ ಮಂಟಪದಲ್ಲಿ ನನ್ನ ಮಗಳ ಮದುವೆಗೆ ಹರತಾಳು ಹಾಲಪ್ಪನವರು ಭಾಗವಹಿಸಿದ್ದು ನನಗೆ, ಅವರ ನನ್ನ ಸ್ನೇಹಕ್ಕೆ ವಿಶೇಷ ಗೌರವ ಮತ್ತು ಅಭಾರಿ ಮನಸ್ಸಲ್ಲಿ ಉಂಟಾಗಿತ್ತು.
ನಮ್ಮ ವಿದಾನ ಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪರ ಪುತ್ರರ ವಿವಾಹ ಮಹೋತ್ಸವಕ್ಕೆ ಶುಭ ಹಾರೈಸುತ್ತಾ #ನೂತನ_ದಂಪತಿಗಳಿಗೆ ನಮ್ಮ ಗ್ರಾಮದ ಶ್ರೀ ವರಸಿದ್ದಿ ವಿನಾಯಕ ದೇವರು ಆಯುರಾರೋಗ್ಯ, ಆಯಸ್ಸು, ಯಶಸ್ಸು ಮತ್ತು ಐಶ್ವರ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
Comments
Post a Comment