Skip to main content

ಭಾಗ -1.ಪಿ.ಪುಟ್ಟಯ್ಯ ಪ್ರಕೃತಿ ಮುದ್ರಣಾಲಯದ ಪುಟ್ಟಯ್ಯ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಮಾಜವಾದಿ ಮಾಜಿ ಲೋಕದಳದ ರಾಜ್ಯ ಅಧ್ಯಕ್ಷರಾಗಿದ್ದ ಪೆರ್ಡೂರು ಪುಟ್ಟಯ್ಯ ಮಲ್ನಾಡಳ್ಳಿಯ ರಾಘವೇಂದ್ರ ಸ್ವಾಮಿಗಳ ಆಪ್ತರಾಗಿದ್ದವರು, ಕಿರಿಯ ಸ್ವಾಮಿಗಳಾಗಲು ಅವರ ಆಹ್ವಾನ ನಯವಾಗಿ ನಿರಾಕರಿಸಿದವರು.

#ಪಿ_ಪುಟ್ಟಯ್ಯ

#ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು.

#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು.

#ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು

#ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು.

#ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು.

   
                          #ಭಾಗ_1
    ಪಿ. ಪುಟ್ಟಯ್ಯನವರು ಅಂದರೆ ಪೆರ್ಡೂರು ಪುಟ್ಟಯ್ಯ ಇವರು ಶಾಂತವೇರಿ ಗೋಪಾಲಗೌಡರಿಂದ ಇವತ್ತಿನ ಕಿಮ್ಮನೆ - ಸ್ವಾಮಿ ರಾವ್ ತನಕ ರಾಜಕಾರಣಿಗಳಿಗೆ ಮತ್ತು ಶಿವಮೊಗ್ಗ ಜಿಲ್ಲಾ ಇತಿಹಾಸಕ್ತರಾದ ಪತ್ರಕರ್ತರು ಮತ್ತು ಸಾಹಿತಿಗಳಿಗೆ ಚಿರಪರಿಚಿತರು.
  ಪ್ರದಾನಿಗಳಾಗಿದ್ದ ಚೌದುರಿ ಚರಣ್ ಸಿಂಗ್ ರ ಲೋಕದಳ ಪಕ್ಷದ  ಕರ್ನಾಟಕ ರಾಜ್ಯದ  ರಾಜ್ಯಾದ್ಯಕ್ಷರು ಆಗಿದ್ದರು.
  ಈಗಿನ ತಲೆಮಾರಿನವರಿಗೆ ಇವರ ಪರಿಚಯ ಕಡಿಮೆ ಯಾಕೆಂದರೆ ಪುಟ್ಟಯ್ಯನವರು ನಿವೃತ್ತ ಮತ್ತು ಒಂದು ರೀತಿಯ ವಾನಪ್ರಸ್ಥ ಆಶ್ರಮದಲ್ಲಿದ್ದಾರೆ.
  ಈಗ ಇವರಿಗೆ 84 ವರ್ಷದ ವಯೋಮಾನ.
 ಒಂದು ಕಾಲದಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ತಿರುವಿನ ಪ್ರಕೃತಿ ಮುದ್ರಣಾಲಯ ಎಂದರೆ ಜಿಲ್ಲೆಯ ಹೋರಾಟಗಾರರು, ವಿಚಾರವಂತರು, ಸಾಹಿತಿಗಳು, ಶಾಸಕರು ಮತ್ತು ಸಂಸದರು ಸೇರುತ್ತಿದ್ದ ಅನುಭವ ಮಂಟಪ ಇದರ ಮಾಲಿಕರು ಬ್ರಹ್ಮಚಾರಿ ಪುಟ್ಟಯ್ಯನವರು.
  ಯಾರಿಂದಲೂ ಒಂದು ಪೈಸೆಯ ಋಣದಲ್ಲಿ ಇರದ ತಮ್ಮದೇ ದುಡಿಮೆಯ ಸ್ವಂತ ಜೇಬಿನ ಹಣದಿಂದ ದಾನ-ಧರ್ಮ ಮಾಡುತ್ತಾ ಬಂದವರಿಗೆ ಚಹಾ-ಕಾಫಿ-ಊಟ ಉಣಿಸುತ್ತಾ, ಪುಸ್ತಕಗಳ ಖರೀದಿಸಿ ಉಚಿತವಾಗಿ ಹಂಚುತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ, ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಸಾರ್ಥಕ ಜೀವನ ಸವೆಸಿದವರು.
   ಮೊನ್ನೆ ಪುಟ್ಟಯ್ಯನವರು ಡಿ.ಎಸ್.ನಾಗಭೂಷಣರು ಬರೆದ #ಗಾಂಧಿ_ಕಥನ ಪುಸ್ತಕ ಕಳಿಸಿದವರು ಅದು ತಲುಪಿದೆಯಾ ಎಂದು ಕೇಳಲು ನಿನ್ನೆ ರಾತ್ರಿ ಪೋನ್ ಮಾಡಿದ್ದರು ಹಾಗೆ ಸುಮಾರು ಒಂದು ಗಂಟೆ ಪೋನಿನಲ್ಲಿ ಮಾತಾಡುತ್ತಾ ಹೋದಾಗ 1946 ರ ನಂತರ 1960 ರ ವರೆಗೆ ಸಾಗರ ಪಟ್ಟಣದ ಒ0ದು ಚಿತ್ರಣ ಸಿಕ್ಕಿತು.
  ಸುಮಾರು 70 ವರ್ಷದಲ್ಲಿ ಎಂತಹ ಬದಲಾವಣೆ, ಪರಿಸರ ನಾಶ, ಕುಲಷಿತ ನೀರು, ವೇಗ ಪಡೆದ ಸಾರಿಗೆ,ಆದಾಯ, ಜನವಸತಿ ಬಗ್ಗೆ ಮಾಹಿತಿ ತಿಳಿಯಿತು ಅದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.
   ಪುಟ್ಟಯ್ಯರ ತಂದೆ ತಿಮ್ಮಪ್ಪ ತಾಯಿ ಸತ್ಯವತಿ (ಸತ್ಯಮ್ಮ) ದಂಪತಿಗಳಿಗೆ ಹನ್ನೊಂದು ಮಕ್ಕಳು ಅದರಲ್ಲಿ ಬದುಕುಳಿದವರು ರಾಮಣ್ಣ, ಶೀನಣ್ಣ, ಮಂಜಣ್ಣ, ಗೋವಿಂದಣ್ಣ, ಕೃಷ್ಣಮೂರ್ತಿ ಮತ್ತು ಪುಟ್ಟಯ್ಯ ಕಿರಿಯವರು.
  ಮಣಿಪಾಲಿಗೆ ಹೋಗುವಾಗ ಪೆರ್ಡೂರು ದಾಟಿದ ಮೇಲೆ ಪುತ್ತಿಗೆ ಹೊಳೆಯ ಸೇತುವೆ ಎಡ ಬಾಗದಲ್ಲಿ ಮುಸ್ಲಿಂ ಭೂ ಮಾಲಿಕರ ಮೂಲಗೇಣಿದಾರರಾಗಿ ಜಮೀನು ತೋಟ ಮಾಡಿಕೊಂಡಿದ್ದ ಪ್ರಾಮಾಣಿಕ ರೈತರಾಗಿದ್ದ ಪುಟ್ಟಯ್ಯರ ತಂದೆ ತಿಮ್ಮಪ್ಪ ಜಮೀನು ಮಾಲಿಕರು ತಮ್ಮ ಜಮೀನ ಬಿಟ್ಟುಕೊಡಲು ವಿನಂತಿಸಿದಾಗ ಯಾವುದೇ ಪ್ರತಿರೋದ ನೀಡದೆ ಮನೆ ತೋಟ ಜಮೀನು ಬಿಟ್ಟು ಹೊರಡುತ್ತಾರೆ.
  ಇದರಿಂದ ಆ ಸಂಪನ್ನ ಮುಸ್ಲಿಂ ಭೂ ಮಾಲಿಕರು ತಿಮ್ಮಪ್ಪರ ಸಣ್ಣ ಮಕ್ಕಳ ಸಂಸಾರ ಮತ್ತು ಜಾನುವಾರುಗಳನ್ನು ನೋಡಿ ಪೆಡೂ೯ರಿನಲ್ಲಿ ಬದಲಿ ಗೇಣಿ ಜಮೀನು ವ್ಯವಸ್ಥೆ ಮಾಡಿಕೊಡುತ್ತಾರೆ.
   ಆದರೆ ದುರಾದೃಷ್ಟದಿಂದ ಆ ಕಾಲದಲ್ಲಿ ಗುಣವಾಗದ ಕಾಯಿಲೆ ಟೀಬಿ ಯಿಂದ ತಿಮ್ಮಪ್ಪ ಮೃತರಾಗುತ್ತಾರೆ, ಹಿರಿಯ ಅಣ್ಣ ಮದುವೆ ಆಗಿ ಮ೦ಗಳೂರಲ್ಲಿ ನೆಲೆಸಿರುತ್ತಾರೆ, ಎರಡನೆ ಅಣ್ಣ ಶೀನಣ್ಣ ಆಗಷ್ಟೆ ಪ್ರಾರಂಭ ಆಗಿದ್ದ ಸಾಗರದ ಗಜಾನನ ಬಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು ಆಗ ಕೇವಲ ಎರೆಡು ಬಸ್ ಗಜಾನನ ಕಂಪನಿಯಲ್ಲಿತ್ತು ಒಂದು ಬಾಳೆಬರೆ ಮಾರ್ಗ ಇನ್ನೊಂದು ಸಿರ್ಸಿ ಮಾರ್ಗದ ಚಾರ್ ಕೋಲ್ ಇಂದನದ ಟಾರ್ಪಲ್ ಬಸ್ಸುಗಳಿದ್ದವು.
  ಪೆರ್ಡೂರಿನಿಂದ ಕೃಷಿಯಲ್ಲಿ ಜೀವನ ಸಾಗಿಸಲಾಗದ ಇವರ ಕುಟುಂಬವನ್ನು ಶೀನಣ್ಣ ಸಾಗರಕ್ಕೆ ಕರೆ ತರುತ್ತಾರೆ, ಸಾಗರದ ಸಣ್ಣಮನೆ ಸೇತುವೆ ಹತ್ತಿರದ ಹೆಂಚಿನ ಮನೆ ಬಾಡಿಗೆ ಪಡೆಯುತ್ತಾರೆ.
 ಮೂರನೇ ಅಣ್ಣ ಮಂಜಪ್ಪಣ್ಣ ಶಿವಮೊಗ್ಗದಲ್ಲಿ ಪ್ರಾರಂಭವಾದ ಗಜಾನನ ಕಂಪನಿಯಲ್ಲಿ ಉದ್ಯೋಗ ಮಾಡುತ್ತಾರೆ.
  ಪುಟ್ಟಯ್ಯನವರ ಪ್ರಾಥಮಿಕ ಶಿಕ್ಷಣದಿಂದ ಪ್ರೌಡ ಶಾಲೆವರೆಗಿನ ಶಿಕ್ಷಣ ಸಾಗರದಲ್ಲಿ ನಡೆಯುತ್ತದೆ, ಇವರೆಲ್ಲರ ಮಾತೃ ಭಾಷೆ ತುಳು, ಕನ್ನಡ ಕಲಿತದ್ದೇ ಸಾಗರದಲ್ಲಿ ಆಗ ಸಾಗರ ಪಟ್ಟಣದ ಏಕೈಕ ಕನ್ನಡ ಪ್ರಾಥಮಿಕ ಶಾಲೆ ಈಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಎದುರಿನ ಉರ್ದು ಶಾಲೆ ಪಕ್ಕದಲ್ಲಿತ್ತು ಇದು ಮೈಸೂರು ಮಹಾರಾಜರ ಪ್ರಾಥಮಿಕಶಾಲೆ ಆಗಿತ್ತು.
  ಸಾಗರದಲ್ಲಿ ಪ್ರಥಮ ಪ್ರೌಡ ಶಾಲೆ ಸಾಗರದ ಅಡಿಕೆ ಮಂಡಿ ಮಾಲಿಕರಾದ ಗೋವರ್ಧನ ಅಂಕೋಲೆಕರ್ ಅಡಿಕೆ ಮಂಡಿ ಪಕ್ಕದಲ್ಲಿತ್ತು ನಂತರ ಮುನ್ಸಿಪಲ್ ಹೈಸ್ಕೂಲ್ ಪ್ರಾರಂಭ ಆಯಿತು ಇದು ರಾಜ್ಯದ ಎರಡನೆ ಹೈಸ್ಕೂಲ್ ಎಂಬ ಹೆಗಳಿಕೆ.
  ಪುತ್ತೂರಾಯರು, ಸಾಹಿತಿ ವಿಲಿಯಂ, ಸಾಗರ ಟಾಕೀಸ್ ಮಾಲಿಕರಾದ ವಾಮನ ರಾಯರು, ಕೆ.ಜಿ. ಒಡೆಯರ್ ಪುತ್ರ ಸುರೇಂದ್ರನಾಥ ಒಡೆಯರ್, ಇಮಾಂ ಸಾಹೇಬರು, ಅಬ್ದುಲ್ ರೆಹಮಾನ್ ಖಾನ್ ಮುಂತಾದವರೆಲ್ಲ ಪುಟ್ಟಯ್ಯನವರ ಸಹಪಾಟಿಗಳು .
 ಪುಟ್ಟಯ್ಕನವರು ಮೈಸೂರಲ್ಲಿ ಪಿಯುಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ.ಮತ್ತು ಮೈಸೂರು ಗಂಗೋತ್ರಿಯಲ್ಲಿ ಎಂ.ಎ. ಓದುತ್ತಾರೆ.
  ಕೆಲ ಕಾಲ ಮೈಸೂರು ಖಾಸಾಗಿ ಕಾಲೇಜಿನಲ್ಲಿ ಉಪನ್ಯಾಸಕರಾಗುತ್ತಾರೆ ಆದರೆ ಅವರ ಗುರಿ ಬೇರೆ ಆಗಿರುತ್ತದೆ. ಬ್ರಹ್ಮಚಯ೯, ಸನ್ಯಾಸ ಜೀವನ, ಸಮಾಜ ಸೇವೆಗಾಗಿ ದೇಶ ಪಯ೯ಟನೆ ಮಾಡುತ್ತಾರೆ.
  ಕೆಲ ಕಾಲ ಕನ್ಯಾಕುಮಾರಿಯ ರಾಮಕೃಷ್ಣ ಆಶ್ರಮದಲ್ಲಿ, ಪಾಂಡಿಚೆರಿಯ ಅರಬಿಂದೋ ಆಶ್ರಮದಲ್ಲೂ ಸೇವೆ ಸಲ್ಲಿಸುತ್ತಾರೆ ನಂತರ ಅಂತಿಮವಾಗಿ ಮಲ್ನಾಡಳ್ಳಿಯ ರಾಘವೇಂದ್ರ ಸ್ವಾಮಿಗಳ ಜೊತೆ ಸೇರುತ್ತಾರೆ.
  ಮಲ್ನಾಡಳ್ಳಿಯ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗುತ್ತಾರೆ ನಂತರ ಸ್ವಾಮೀಜಿಗಳಿಗೆ ಶಿಕಾರಿಪುರದ ಅಮಟೆಕೊಪ್ಪದಲ್ಲಿ ಸ್ಥಳಿಯರು 30 ಎಕರೆ ಜಮೀನು ದಾನ ನೀಡಿ ಶಾಲೆ ಮಾಡಲು ವಿನಂತಿಸಿದಾಗ ಅಲ್ಲಿಗೆ ಪುಟ್ಟಯ್ಯನವರು ಹೋಗಿ ಜವಾಬ್ದಾರಿ ವಹಿಸಿ, ಗುರುಗಳ ಜೊತೆ ಜಿಲ್ಲೆಯಾದ್ಯಂತ ಬಿಕ್ಷೆ ಪಡೆದು ನಾಲ್ಕು ಶಾಲಾ ಕೊಠಡಿ ಮತ್ತು ನಾಲ್ಕು ಶಿಕ್ಷಕರ ವಸತಿ ನಿರ್ಮಿಸುತ್ತಾರೆ, ಇವರ ಶ್ರಮದಿಂದ ಎರೆಡೇ ವರ್ಷದಲ್ಲಿ ಈ ವಿದ್ಯಾಸಂಸ್ಥೆ ಗ್ರಾಂಟ್ ಇನ್ ಏಯಡ್ ಪಡೆಯುತ್ತದೆ.
  ನಂತರ ಇಡೀ ಸಂಸ್ಥೆ ಮಲ್ನಾಡಳ್ಳಿ ಸ್ಟಾಮಿಗಳು ಚಿತ್ರದುರ್ಗದ ಮಠಕ್ಕೆ ವಹಿಸಿಕೊಡುತ್ತಾರೆ, ಆಗ ಮಲ್ನಾಡಳ್ಳಿ ರಾಘವೇಂದ್ರ ಸ್ವಾಮಿಗಳು ಪುಟ್ಟಯ್ಯನವರಿಗೆ ತಮ್ಮ ಉತ್ತರಾಧಿಕಾರಿ ಆಗುವಂತೆ ಸೂಚಿಸುತ್ತಾರೆ, ಪುಟ್ಟಯ್ಯನವರೆ ಮಲ್ನಾಡಳ್ಳಿಯ ಮುಂದಿನ ಸ್ವಾಮಿಗಳು ಎಂಬಂತೆ ಜನರ ಬಾಯಲ್ಲಿ ಸುದ್ದಿ ಆಗುತ್ತೆ ಆದರೆ ಪುಟ್ಟಯ್ಯ ನಯವಾಗಿ ನಿರಾಕರಿಸಿ ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ಹೊರಬರುತ್ತಾರೆ ಅವರ PF ಎಲ್ಲಾ ಸಂಸ್ಥೆಗೆ ದಾನ ಮಾಡುತ್ತಾರೆ.
  ಶಿವಮೊಗ್ಗದಲ್ಲಿ ಪ್ರಕೃತಿ ಮುದ್ರಣಾಲಯ ಎ೦ಬ ಪ್ರಿಂಟಿಂಗ್ ಉದ್ಯಮ ಪ್ರಾರಂಬಿಸುತ್ತಾರೆ, ತೀರ್ಥಹಳ್ಳಿಯ ಪೆ. ದೇವಣ್ಣ ಎಂಬ ಪತ್ರಕರ್ತರು ಶಿವಮೊಗ್ಗದ ಉದಯವಾಣಿ ವಿತರಕರಾಗಿ ಕಾಯ೯ನಿರ್ವಹಿಸಲು ಕಾರಣರಾಗುತ್ತಾರೆ ಮುದ್ರಣದ ಜೊತೆ ಪುಟ್ಟಯ್ಯನವರು ಉದಯವಾಣಿ ದಿನಪತ್ರಿಕೆ ಮತ್ತು ತರಂಗ ವಾರಪತ್ರಿಕೆಯನ್ನು ಹೆಚ್ಚು ಪ್ರಸಾರ ಮಾಡಿ ಮಣಿಪಾಲಿನ ಪೈ ಗುಂಪಿನಲ್ಲಿ ವಿಶೇಷ ಗೌರವ ಪಡೆಯುತ್ತಾರೆ.
    ಆಗ ಸಾಗರದಲ್ಲಿದ್ದ ಪ್ರಸಿದ್ಧ ಹೋಟೆಲ್ ಕಲ್ಕೂರರ ಸಾಗರ್ ಹೋಟಿಲ್ ಅದು ಬಿಟ್ಟರೆ ಐತಪ್ಪ ಸರ್ಕಲ್ ನಲ್ಲಿದ್ದ S.S. ಕುಮಟಾರ ತಂದೆಯ ಗಜೇಂದ್ರ ವಿಲಾಸ್ ನಂತರ ರಾಮಚಂದ್ರ ಭವನ, ರಾಮಕೃಷ್ಣ ಭವನ ಎಂಬ ಲಾಡ್ಜ್ ರೆಸ್ಟೋರೆಂಟ್ ಬಂತು ಆಗ ರಾಜಕುಮಾರ್, ಉದಯ ಕುಮಾರ್, ಬಾಲಕೃಷ್ಣ ಇವರೆಲ್ಲರ ನಾಟಕ ಕಂಪನಿ ಸಾಗರಕ್ಕೆ ಬಂದಾಗ ಇಲ್ಲೇ ತಂಗುತ್ತಿತ್ತಂತೆ.
   ಆಗೆಲ್ಲ ಪ್ಲೇಗ್ ಬಂದು ಹೋಗಿದ್ದರಿಂದ  ಮಾರಿಜಾತ್ರೆ ಭಕ್ತಿಯಿಂದ ನಡೆಯುತ್ತಿತ್ತು, ಮಾರಿ ಗದ್ದುಗೆ ಚಪ್ಪಡಿ ಕಲ್ಲಿನ ಸಣ್ಣ ಗುಡಿ ಆಗಿತ್ತಂತೆ.
  ಚಿತ್ರ ನಟಿ ಪಂಡರಿಬಾಯಿಯ ಸಹೋದರ ಭಟ್ಕಳ ಮೂಲದ ವಿಮಲಾನಂದ ದಾಸರು ಆಗಾಗ್ಗೆ ಸಾಗರದ ಗಣಪತಿ ದೇವಸ್ಥಾನದಲ್ಲಿ 15 ರಿಂದ 20 ದಿನ ಹರಿಕಥಾ ಕಾಯ೯ಕ್ರಮ ಮಾಡುತ್ತಿದ್ದರಂತೆ ಸಂಜೆ 7ರಿಂದ ರಾತ್ರಿ 10 ರ ವರೆಗೆ ನಂತರ ಕೊಡುತ್ತಿದ್ದ ಕೋಸಂಬರಿ ಪ್ರಸಾದಕ್ಕಾಗಿ ಮಕ್ಕಳಾಗಿದ್ದ ಇವರೆಲ್ಲ ತಪ್ಪದೇ ಹೋಗುತ್ತಿದ್ದರಂತೆ, ಮಂಗಳಾರತಿ ತಟ್ಟೆ ಕಾಣಿಕೆ ಹರಿಕಥಾ ದಾಸರ ಸಂಭಾವನೆ ಆಗಿತ್ತಂತೆ.
  ಆಗ ಗಣಪತಿ ಕೆರೆ ಕುಲಷಿತ ಆಗಿರಲಿಲ್ಲ, ಗಣಪತಿ ಕೆರೆಯ ನೀರನ್ನು ಸಾಗರ ಹೋಟೆಲ್ ಗೆ ಎತ್ತಿನಗಾಡಿಯಲ್ಲಿ ಅಳವಡಿಸಿದ್ದ ಮರದ ಬಾಣಿಯಂತ ಡ್ರಂಗೆ ಬಿಸ್ಕಿಟ್ ಖಾಲಿ ಟಿನ್ ನಲ್ಲಿ ನೀರು ತಂದು ಹೊಯ್ದು ತುಂಬಿಸಿ ಒಯ್ಯುತ್ತಿದ್ದರಂತೆ.
  ವರದಾ ನದಿ ಕೂಡ ಸ್ವಚ್ಛವಾಗಿತ್ತು, ನಾವೆಲ್ಲ ಹಾನಂಬಿ ಹೊಳೆಯಲ್ಲಿ ಪ್ರತಿನಿತ್ಯ ಈಜುತ್ತಿದ್ದೆವು ಅಂತ ಪುಟ್ಟಯ್ಯನವರು ನೆನಪು ಮಾಡಿಕೊಂಡರು.
  ಆಗ ರೈಲ್ವೆ ಸ್ಟೇಷನ್ ಎದರು ಗುಡ್ಡದಲ್ಲಿ ಮುಳ್ಳು ಹಣ್ಣು ತರಲು ಹೋದಾಗೆಲ್ಲ ಹುಲಿ ನೋಡಿ ಭಯದಿಂದ ಓಡಿ ಬರುತ್ತಿದ್ದರಂತೆ. 
  ಆಗ ಶಿವಮೊಗ್ಗ ಹೊನ್ನಾವರ ರಸ್ತೆ ಅಗ್ರಹಾರದಿಂದ ಗಣಪತಿ ಕೆರೆ ದಂಡೆಯ ಮೇಲಿಂದ ಮಾರಿಗುಡಿ ಎದುರಿನಿಂದ ಸಾಗರ ಹೋಟೆಲ್ ಸರ್ಕಲ್, ಆಸ್ಪತ್ರೆ ಎದುರಿನಿಂದ ಹಾದು ಹೋಗಿತ್ತು.
  ನ್ಯೂ ಬಿ ಹೆಚ್ ರಸ್ತೆ ಇರಲಿಲ್ಲ, ಸಣ್ಣ ಮಣ್ಣಿನ ರಸ್ತೆ ಇತ್ತು ನಂತರ ಹೆಚ್ಚಾದ ಸಾರಿಗೆ ಇಂದ ಸಾಗರಕ್ಕೆ ನಿರ್ಮಾಣವಾದ ರಿಂಗ್ ರಸ್ತೆಯೆ ಗಣಪತಿ ಕೆರೆಗೆ ಮಣ್ಣಿನ ದಂಡೆ ನಿರ್ಮಿಸಿ ಮಾಡಿದ ರಸ್ತೆ ನ್ಯೂ ಬಿ ಹೆಚ್ ರಸ್ತೆ ಇದು 1956ರಲ್ಲಿ ಕಾಮಗಾರಿ ಪ್ರಾರಂಭ ಆಗಿ 1960 ರಲ್ಲಿ ಪೂರ್ಣ ಆಯಿತಂತೆ.
 ಈ ರಸ್ತೆ ಆದ ಮೇಲೆ ಬಿ.ಹೆಚ್.ರಸ್ತೆ ಮೇಲ್ಬಾಗದಲ್ಲಿ ಜನವಸತಿ ಹೆಚ್ಚಾಯಿತಂತೆ, ಗಜಾನನ ರೈಸ್ ಮಿಲ್, ಮೀನು ಮಾರ್ಕೆಟ್, ಮಟನ್ ಸ್ಟಾಲ್ ನಂತರ ಸಂತೆ ಆ ನಂತರ ಊರಾಯಿತು ಅಲ್ಲೆಲ್ಲ ಕುರುಚಲು ಕಾಡಿನ ಗುಡ್ಡವಾಗಿತ್ತಂತೆ.
  ಸಾಗರದಲ್ಲಿ ಮಾರಿಗುಡಿ, ಗಣಪತಿ ದೇವಸ್ಥಾನ, ಆಂಜನೇಯ ದೇವಸ್ಥಾನ, ನಗರೇಶ್ವರ ದೇವಸ್ಥಾನ ಮತ್ತು ದುರ್ಗಮ್ಮ ದೇವಸ್ಥಾನ, ಮಸೀದಿ ಮತ್ತು ಚರ್ಚ ಇತ್ತು.
  ಪುತ್ತೂರಾಯರ ರೈಸ್ ಮಿಲ್ ಇತ್ತು, ಕೃಷ್ಣಾ ಟಾಕೀಸ್ ನಂತರ ಸಾಗರ್ ಟಾಕೀಸ್ ಅದರ ನಂತರ ಶ್ರೀ ಟಾಕೀಸ್ ಬಂತಂತೆ.
  ಹೆಂಚಿನ ಪ್ಯಾಕೃರಿ, ತಾಳಗುಪ್ಪ ಪ್ಲೇವುಡ್ ಪ್ಯಾಕೃರಿ ನಂತರ ಬಂದಿದ್ದು.
  ಶಿವಮೊಗ್ಗ ಸಾಗರ ರಸ್ತೆಯಲ್ಲಿ ಬ್ರಿಟಿಷರ ಕಾಲದ ಸೇತುವೆಗಳಿದ್ದರು ರಸ್ತೆ ಮಾತ್ರ ಮಣ್ಣಿನ ರಸ್ತೆ ಈ ಮಾರ್ಗದಲ್ಲಿ ಆಗಿನ ಬಸ್ಸುಗಳಿಗೆ 3 ರಿಂದ ನಾಲ್ಕು ಗಂಟೆ ಕಾಲ ಬೇಕಾಗಿತ್ತಂತೆ ಸಾಗರದಿಂದ ಶಿವಮೊಗ್ಗ ತಲುಪಲು.
  ಜನ ಹೆಚ್ಚು ರೈಲಿನ ಪ್ರಯಾಣ ಅವಲಂಬಿಸಿದ್ದ ಕಾಲ, ಆಗ ಸಾಗರದಿಂದ ಮೈಸೂರಿಗೆ ಮೂರು ರೂಪಾಯಿ ಟಿಕೇಟ್.
(ಮುಂದುವರಿಯುವುದು)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...