ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಂಟಿನಕೊಪ್ಪದಲ್ಲಿ ಮೊದಲ ಬಾರಿಗೆ ಕಾಣಿಸಿದ ಕಾಳಿಂಗ ಸರ್ಪ ಸಂರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.
#ಅರಣ್ಯ_ಇಲಾಖೆಯವರು_ಸಾಗರದಿಂದ_ಹಾವುಸಂರಕ್ಷಕ_ಸ್ನೇಕ್_ಇಮ್ರಾನ್_ಕರೆತಂದು_ರಕ್ಷಣೆ.
#ಈ_ಭಾಗದಲ್ಲಿ_ಇದೇ_ಮೊದಲ_ಕಾಳಿಂಗ_ದರ್ಶನ
ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಹೆಗ್ಗೋಡು ಭಾಗದಲ್ಲಿ ಕಾಳಿಂಗ ಸರ್ಪ ಇರುವುದು ಸಹಜ ಆದರೆ ಆನಂದಪುರಂ - ಯಡೇಹಳ್ಳಿ ಗ್ರಾಮ ಪಂಚಾಯತ್ ಭಾಗದಲ್ಲಿ ಈ ವರೆಗೆ ಕಾಳಿಂಗ ಸರ್ಪ ನೋಡಿದವರಿರಲಿಲ್ಲ.
ನಿನ್ನೆ ಮಧ್ಯಾಹ್ನ ಘಂಟಿನ ಕೊಪ್ಪದ ಉತ್ಸಾಹಿ ತರುಣ ಟ್ರಾಕ್ಟರ್ ಮಾಲಿಕ #ಗಜೇಂದ್ರ ಪೋನ್ ಮಾಡಿ ತಮ್ಮ ಊರಲ್ಲಿ ಕಾಳಿಂಗ ಸರ್ಪ ಬಂದಿದೆ ಅಂದಾಗ ಆಶ್ಚಯ೯ ಆಯಿತು.
ಊರವರ ಮನೆಯ ಹತ್ತಿರ ಬಂದದ್ದು ಜನರ ಗದ್ದಲದಿಂದ ಮರ ಹತ್ತುತ್ತಿದೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ ಅಂದರು.
ಆನಂದಪುರ೦ ಭಾಗದಲ್ಲಿ ಕಾಳಿಂಗ ಸರ್ಪ ಈವರೆಗೆ ಗೋಚರಿಸಿರಲಿಲ್ಲ ನಿಮ್ಮ ಊರಲ್ಲಿ ಇವತ್ತು ಬಂದಿದ್ದರೆ ಬಹುಶಃ ಇದು ಮೊದಲ ಕಾಳಿಂಗ ಸರ್ಪ ಅಂದೆ, ನನ್ನ ಖಾತ್ರಿ ಗಾಗಿ ಮರ ಏರಲು ಹವಣಿಸುವ ವಿಡಿಯೋ - ಪೋಟೋ ಕಳಿಸಿದ್ದರು.
ಸಂಜೆ ಅವರು ಕಳಿಸಿದ ಪೋಟೋ 13 ಅಡಿ ಉದ್ದದ ದೊಡ್ಡ ಕಾಳಿಂಗ ಸರ್ಪ ಇದನ್ನು ಸಾಗರದ ಸ್ನೇಕ್ ಇಮ್ರಾನ್ ಅವರು ಹಿಡಿದರೆಂದು ತಿಳಿಸಿದರು.
ಸ್ನೇಕ್ ಇಮ್ರಾನ್ ಈ ಕಾಳಿಂಗ ಸರ್ಪ ಹಿಡಿದ ವಿಡಿಯೋ ನೋಡಿದೆ, ಯಾವುದೇ ಸ್ಟಿಕ್ ಇತ್ಯಾದಿ ಬಳಸದೆ ಗೋಣಿ ಚೀಲ ಅಲುಗಾಡಿಸುತ್ತಾ ಅದರ ಗಮನ ಆಕಡೆ ಹರಿಸಿ ಈ ಬೃಹತ್ ಕಾಳಿಂಗ ಸರ್ಪ ನೇರವಾಗಿ ಅದರ ತಲೆ ಹಿಡಿದಿದ್ದಾರೆ ಇದು ವಿಶೇಷವೇ ಮತ್ತು ಅಪಾಯಕಾರಿಯೂ ಹೌದು ಅವರ ಸಾಹಸಕ್ಕೆ ಹಳ್ಳಿಯ ಜನ ಕೃತಜ್ಞತೆ ತಿಳಿಸಿದ್ದಾರೆ.
ಈ ಭಾಗದ ಒಂದು ಕಾಲದ ಬೃಹತ್ ಅರಣ್ಯ ಪ್ರದೇಶ ನೂರು ವರ್ಷದಲ್ಲಿ ನಿರ್ನಾಮವಾಗಿ ವನ್ಯ ಮೃಗಗಳೂ ಕಾಡು ಸೇರಿ ಅವಸಾನದ ಅಂಚು ಸಲುಪಿತ್ತು ಈಗ ವನ್ಯ ಪ್ರಾಣಿ ಸಂರಕ್ಷಣೆಯ ಕಠಿನ ಕಾನೂನುಗಳು ವನ್ಯ ಪ್ರಾಣಿ ಸಂತತಿ ವೃದ್ದಿಗೆ ಕಾರಣವಾಗಿ ಅವುಗಳ ಜನರ ವಾಸಸ್ಥಾನಗಳಲ್ಲಿ ಗೋಚರಿಸುತ್ತಿದೆ.
Comments
Post a Comment