ಸಂತೋಷ್ ಸಸಿಹಿತ್ಲು ಮೂಲ ಕುಂದಾಪುರ ಅವರು ಈಗ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ನೆಲೆಸಿ ಪ್ರಸಿದ್ದ ಪತ್ರಿಕೆಗಳ ರೇಖಾ ಚಿತ್ರಗಾರರಾಗಿದ್ದಾರೆ, ಅವರು ಬರೆದ ನನ್ನ ಕಥಾ ಸಂಕಲನದ ಮುಖ ಪುಟ ತುಂಬಾ ಆಕಷ೯ಕ ಆಗಿದೆ ಎಂದು ಗೆಳೆಯರು ಮತ್ತು ಓದುಗರು ಪ್ರತಿಕ್ರಿಯಿಸುತ್ತಿದ್ದಾರೆ.
#ಕುಂದಾಪುರದ_ಸಂತೋಷ್_ಸಸಿಹಿತ್ಲು.
#ಉದಯೋನ್ಮುಖ_ಕಲಾವಿದರು,
#ಈಗಾಗಲೇ_ಅನೇಕ_ರೇಖಾಚಿತ್ರಕಲಾವಿದರ_ಸಮಾವೇಶ_ಮಾಡಿದ್ದಾರೆ.
#ಖ್ಯಾತ_ಚಿತ್ರಕಾರ_ಪಂಜುಗಂಗೂಲಿ_ಕೂಡ_ಭಾಗವಹಿಸಿದ್ದರು.
ನನ್ನ ಕಥಾ ಸಂಕಲನದಲ್ಲಿ 29 ಕಥೆಗಳಿದೆ, ಕಥಾ ಸಂಕಲನಕ್ಕೆ ಹೆಸರು ಏನು ಇಡುವುದು ಎಂಬುದು ಇನ್ನೂ ತೀರ್ಮಾನ ಆಗಿರಲಿಲ್ಲ ಇದೇ ಯೋಚನೆ ನನ್ನದು ಮತ್ತು ಮುದ್ರಕರಾದ #ಶೃಂಗೇಶ್ ರದ್ದು.
ಕಥಾ ಸಂಕಲನಕ್ಕೆ ಮುನ್ನುಡಿ ಬರೆದ ಖ್ಯಾತ ಅಂಕಣಕಾರ #ಅರವಿಂದ_ಚೊಕ್ಕಾಡಿ "ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯoಜನ" ಇಷ್ಟ ಪಟ್ಟ ಕಥೆ ಅಂತ ಗೊತ್ತಾದ ನಂತರ ಕಥಾ ಸಂಕಲನಕ್ಕೆ ಅದೇ ಹೆಸರು ನಿಕ್ಕಿ ಆಯಿತು.
ಮುಖ ಪುಟ ವಿನ್ಯಾಸ ಹೇಗಿರಬೇಕೆಂದು ಮುದ್ರಕರಿಗೆ ನನ್ನ ಭಾವನೆ ತಿಳಿಸಿದ್ದೆ ಅವರು ಸಂತೋಷ್ ಸಸಿಹಿತ್ಲು ಎಂಬ ಉದಯೋನ್ಮುಕ ಕಲಾವಿದರಿಗೆ ಇದರ ಜವಾಬ್ದಾರಿ ನೀಡಿದ್ದಾಗಿ ತಿಳಿಸಿದ್ದರು.
ಮೊದಲ ಪ್ರೂಪ್ ನ್ನೆ ನಾನು ಅನುಮೋದಿಸಿದೆ ಏಕೆಂದರೆ ಈ ಮುಖ ಪುಟ ನಾನು ಬಯಸಿದ ಚಿತ್ರವನ್ನೆ ಯಥಾವತ್ತಾಗಿ ಚಿತ್ರ ಕಲಾವಿದರು ಬರೆದಿದ್ದರು ಈ ಕಥೆ ನಿಜ ಕಥೆ ಆದರೂ ಅದನ್ನು ಹಾಸ್ಯ ಶೈಲಿಯಾಗಿ ಬರೆದಿದ್ದರಿಂದ ಈ ವ್ಯಂಗ್ಯ ಚಿತ್ರದಂತ ಮುಖ ಪುಟ ಸೂಕ್ತವಾಗಿತ್ತು.
ತಡವಾಗಿ ಮುಖಪುಟದ ಕಲಾವಿದರಾದ ಸಂತೋಷ್ ಸಸಿಹಿತ್ಲು ಇವರಿಗೆ ಕೃತಜ್ಞತೆ ಅರ್ಪಿಸುತ್ತಾ ಮುಂದಿನ ದಿನದಲ್ಲಿ ನಾಡಿನ ಪ್ರಖ್ಯಾತ ಕಲಾವಿದರಾಗಿ ಎಲ್ಲಾ ರೀತಿಯ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.
ಶಿವಮೊಗ್ಗದ ಡಯಾನ ಬುಕ್ ಹೌಸ್ ನಲ್ಲಿ ಸಾಗರದಲ್ಲಿ ಶ್ರೀ ಟ್ರೇಡರ್ಸ್ ಮತ್ತು ನಗರ ಸಭೆ ಎದುರಿನ ರವೀಂದ್ರ ಪುಸ್ತಕಾಲಯದಲ್ಲಿ ಪುಸ್ತಕ ಮಾರಾಟಕ್ಕೆ ಇದೆ.
ಬೆಂಗಳೂರಲ್ಲಿ ನನ್ನ ಪುಸ್ತಕ ಇನ್ನೂ ಮಾರಾಟಕ್ಕೆ ಇಟ್ಟಿಲ್ಲ ಆಸಕ್ತರು ತಮ್ಮ ವಿಳಾಸ 9449253788 ಗೆ ವಾಟ್ಸಪ್ ಮಾಡಿದರೆ ಅಂಚೆಯಲ್ಲಿ ಕಳಿಸಲಾಗುವುದು.
Comments
Post a Comment