ಆ ಕಾಲದಲ್ಲಿ ಜನ ಅನಕ್ಷರಸ್ಥರು ಆದರೆ ಆ ಬೂತ ಮನೆಯ ಬಾಗಿಲ ಮೇಲೆ ಬರೆದ ನಾಳೆ - ಬಾ ಎಂಬ ವಾಕ್ಯ ನೋಡ ವಾಪಾಸ್ ಹೋಗುತ್ತಿದ್ದ ಅಕ್ಷರಸ್ಥ ಮುರ್ಖಬೂತ ಗ್ರಾಮೀಣ ಭಾಗದ ಜನರ ನೆಮ್ಮದಿ ಕೆಡಿಸಿತ್ತು.
#ಆಗ_ಎಲ್ಲರ_ಮನೆ_ಗೋಡೆ_ಬಾಗಿಲ_ಮೇಲೆ_ನಾಳೆ_ಬಾ_ಎಂಬ_ಬರಹ.
#ಮಲೆನಾಡ_ಹಳ್ಳಿಗಳಲ್ಲಿ_ಆತಂಕದ_ರಾತ್ರಿಗಳು
#ಅರವತ್ತರ_ದಶಕದಲ್ಲಿಯೂ_ಇದು_ಪ್ರಚಲಿತವಾಗಿತ್ತು
#ಎಪ್ಪತ್ತರ_ದಶಕದ_ನಂತರ_ತೊಂಬತ್ತರ_ದಶಕದಲ್ಲಿ_ಬೆಂಗಳೂರು_ಸುತ್ತಮುತ್ತ.
#ದೂರದ_ಮಲೇಷಿಯಾದಲ್ಲೂ_ಇಂತಹ_ಪ್ರಕರಣ.
ಕಾಲ ಬದಲಾದಂತೆ ಆಚಾರ-ವಿಚಾರಗಳೂ ಬದಲಾಗುತ್ತದೆ ಆದರೆ ಮೂಡ ನಂಬಿಕೆಗಳು ಪುನಾರವರ್ತನೆಯಾಗುತ್ತಿರುವುದು ಮಾತ್ರ ವಿಚಿತ್ರ.
1990 ರಲ್ಲಿ ಬೆಂಗಳೂರು ಸುತ್ತಮುತ್ತ ಇದು ಸಾಮೂಹಿಕ ಸನ್ನಿಯಂತೆ ಎಲ್ಲರೂ ಅವರವರ ಮನೆ ಬಾಗಿಲು ಗೋಡೆ ಮೇಲೆ #ನಾಳೆ_ಬಾ ಅಂತ ಅವರವರ ಮಾತೃ ಬಾಷೆಯಲ್ಲಿ ಬರೆಯುತ್ತಿದ್ದರು ಇದಕ್ಕೆ ಕಾರಣ ಮಧ್ಯರಾತ್ರಿ ಬೂತ ಒಂದು ಬಂದು ಕುಟುಂಬದ ಅಥವ ಪರಿಚಿತರ ಧ್ವನಿಯಲ್ಲಿ ಕರೆಯುತ್ತದೆ ಬಾಗಿಲು ತೆಗೆದರೆ ಬಾಗಿಲು ತೆಗೆದವ ಮಟಾಷ್! ಅಂತೆ ಇದಕ್ಕೆ ಪರಿಹಾರ ಮಾತ್ರ ಒಂದೇ ಒಂದು ಬಾಗಿಲ ಮೇಲೆ #ನಾಳೆ_ಬಾ ಅಂತ ಬರೆಯುವ ಸುಲಭ ಉಪಾಯ.
ಇದು ವಿಶ್ವದಲ್ಲಿ ಮೊದಲು ಗಮನಕ್ಕೆ ಬಂದದ್ದು ಮಲೇಷಿಯಾದಲ್ಲಿ.
1960 ರಲ್ಲಿ ನಮ್ಮ ಭಾಗದಲ್ಲಿ ಕಂಡು ಬಂದಿದ್ದು 1972-73ರಲ್ಲಿ ನಮ್ಮ ಊರುಗಳಲ್ಲಿ ಜನ ಭಯ ಪಡುವಂತೆ ಪಸರಿತ್ತು, ಆಗೆಲ್ಲ ಇದ್ದಿಲಲ್ಲಿ ಬಾಗಿಲ ಮೇಲೆ ಬರೆಯುತ್ತಿದ್ದರು ಆದರೆ ಬೂತದ ಪರಿಣಿತಿ ಹೊಂದಿದ ಯಾರೋ ಕತ್ತಲಲ್ಲಿ ಕಪ್ಪು ಇದ್ದಿಲಲ್ಲಿ ಬರೆದದ್ದು ಬೂತಕ್ಕೆ ಕಾಣುವುದಾದರೂ ಹೇಗೆ? ಎಂಬ ತಕ೯ ತೆಗೆದಿದ್ದರಿಂದ ಇದ್ದಿಲಲ್ಲಿ ಬರೆದದ್ದು ಒರೆಸಿ ಸುಣ್ಣದಲ್ಲಿ, ಚಾಕ್ ಪೀಸ್ ಲ್ಲಿ ಬರೆಯುತ್ತಿದ್ದರು.
ನಿನ್ನೆ ನಮ್ಮ ಮನೆ ಬಾಗಿಲು ಮಧ್ಯರಾತ್ರಿಯಲ್ಲಿ ಬಡಿಯಿತು, ದೂರದ ಊರಲ್ಲಿ ಇರುವ ನಮ್ಮ ದೊಡ್ಡಮ್ಮನ ಧ್ವನಿಯಲ್ಲಿ ನನ್ನ ಹೆಸರು ಕರೆದು ಭಾಗಿಲು ತೆಗೆ ಅಂದಿತು! ಅನ್ನುವ ಅನೇಕರು ಭಯ ನೂರ್ಮುಡಿಗೊಳಿಸಿದ್ದರು ಇದರಿಂದ ಆ ಕಾಲದಲ್ಲಿ ರಾತ್ರಿ ಜಲ ಬಾದೆಗಾಗಿ ಮನೆಯ ಹೊರ ಹೋಗಲೂ ಹೆದರುವ ಕಾಲವಾಗಿತ್ತು.
Comments
Post a Comment