ಹೆರಿಟೇಜ್ ನೈಸರ್ಗಿಕ ಕಲ್ಲಿನ ಕಾಲು ಸಂಕ ಸಂರಕ್ಷಣೆ ಹೆಸರಲ್ಲಿ 25 ಲಕ್ಷ ಹಣದಿಂದ ವಿರೊಪಗೊಳಿಸಿದ ಸರ್ಕಾರದ ಕಾಮಗಾರಿ !? ಜೋಗ್ ಫಾಲ್ಸ್ ಸಮೀಪದ ಮಸವಳ್ಳಿ (ಅಡುಗೋಡಿ ಅಂಚೆ, ಸಿದ್ಧಾಪುರ ತಾ. ಉತ್ತರ ಕನ್ನಡ ಜಿಲ್ಲೆ)
#ಸಾಗರ_ಸಿದ್ದಾಪುರ_ಗಡಿಯ_ಮಸವಳ್ಳಿಯ_ಈ_ಕಾಲು_ಸಂಕ.
#ಹೆರಿಟೇಜ್_ನೈಸರ್ಗಿಕ_ಕಲ್ಲಿನ_ಕಾಲು_ಸಂಕ_ಈಗ_ಕಾಂಕ್ರಿಟ್_ಸಂಕವಾಗಿದೆ.
#ವಿರೂಪಗೊಳಿಸಿದ್ದು_ಸರ್ಕಾರದ_ಇಂಜಿನಿಯರ್_ಇಲಾಖೆ_ಇದಕ್ಕೆ_25_ಲಕ್ಷ_ಹಣವೂ_ಖಾಲಿ.
#ನಮ್ಮ_ದೇಶದಲ್ಲಿ_ತಿರುಮಲ_ಬೆಟ್ಟದಲ್ಲಿ_ವಿಶಾಖಪಟ್ಟಣದಲ್ಲಿ_ಇಂತಹ_ನೈಸರ್ಗಿಕ_ಸಂಕಗಳಿದೆ.
ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಸಿದ್ಧಾಪುರ ತಾಲ್ಲೂಕಿನ ಆಡುಕಟ್ಟಾ ಅಂಚೆ ವ್ಯಾಪ್ತಿಯ ಮಸವಳ್ಳಿಯಲ್ಲಿ ನೈಸರ್ಗಿಕ ಕಲ್ಲಿನ ಕಾಲು ಸಂಕವೊಂದು ವರದಾ ನದಿಗೆ ಸೇರುವ ಹಳ್ಳಕ್ಕೆ ಸಾವಿರಾರು ವರ್ಷಗಳಿಂದ ಇದೆ.
ಸುಮಾರು 60 ಅಡಿ ಉದ್ದ (20 Mtr) 4 ಅಡಿ ಅಗಲದ 2 ರಿಂದ 3 ಅಡಿ ದಪ್ಪದ ಕಾಲು ಸಂಕ ನೈಸರ್ಗಿಕವಾಗಿ ಪಿಲ್ಲರ್ ಗಳಿಲ್ಲದೆ ಇದೆ ಇದರ ಕೆಳಗೆ 10 ಅಡಿ ಆಳದಲ್ಲಿ ಹಳ್ಳದ ನೀರು ಮಳೆಗಾಲದಲ್ಲಿ ಹರಿಯುತ್ತದೆ.
ವಿಶ್ವದಾದ್ಯಂತ ಇಂತಹ ಶಿಲಾರಚನೆಯ ಕಮಾನುಗಳು ಹಿಮಗಳ, ಮಳೆ ಮತ್ತು ಗಾಳಿಯ ಸವಕಳಿಯಿಂದ ಲಕ್ಷಾಂತರ ವರ್ಷಗಳಲ್ಲಿ ರೂಪುಗೊಂಡಿರುವ ಕಾರಣದಿಂದ ಇಂತವುಗಳನ್ನು ಸಂರಕ್ಷಿಸುತ್ತಾರೆ ಈ ಬಗ್ಗೆ ಅಧ್ಯಯನ ಮಾಡುವವರು ಇದನ್ನೆಲ್ಲ ಸಂದರ್ಶಿಸುತ್ತಾರೆ.
ಆಂದ್ರ ಪ್ರದೇಶದ ಜಿಯೊ-ಹೆರಿಟೇಜ್ ಸಂಸ್ಥೆ ಅಡ್ವೆಸರ್ ಡಾ.ರಾಜಶೇಖರ್ ರೆಡ್ಡಿ ಇಂತಹ ಶಿಲಾರಚನೆಗಳು ಅಪರೂಪದ ಸ್ಮಾರಕಗಳು, ಅಲ್ಲಿ ಸೂಚನಾ ಫಲಕ ಅಳವಡಿಸಬೇಕು, ರಕ್ಷಣಾತ್ಮಕ ದೃಷ್ಟಿಯಿಂದ ಬ್ಯಾರಿಕೇಡ್ ನಿರ್ಮಿಸಿ ಸಂರಕ್ಷಿಸಬೇಕೆಂದು ಬರೆದಿದ್ದಾರೆ ಇವುಗಳೆಲ್ಲ ಐಸ್ ಏಜ್ ನ ಕಾಲದ್ದೆಂದು ಅವರು ಹೇಳುತ್ತಾರೆ.
1982 - 85 ರ ಕಾಲದಲ್ಲಿ ಸಾಗರದ ನಾವೊಂದಿಷ್ಟು ಯುವ ಗೆಳೆಯರು ವಾರದಲ್ಲಿ ಎರೆಡು ದಿನ ಜೋಗ ಜಲಪಾತದ ಎದುರಿನ ಈಜು ಕೊಳಕ್ಕೆ ಹೋಗುತ್ತಿದ್ದೆವು ಅಲ್ಲಿನ ಡೈವಿಂಗ್ ಬೋರ್ಡ್ ನಿಂದ ಚಿಮ್ಮಿ ತಲೆ ಕೆಳಗಾಗಿ ಡೈವ್ ಮಾಡುವುದು ನಮ್ಮ ಹವ್ಯಾಸ ಆಗಿತ್ತು, ತುತ್ತ ತುದಿಯ (ಎತ್ತರದ) ಡೈವಿಂಗ್ ಪ್ಲೇಟ್ನಿಂದ ಮಾತ್ರ ಡೈವ್ ಮಾಡದೆ ನೇರವಾಗಿ ಹಾರುತ್ತಿದ್ದೆವು ಆಗ ಅಲ್ಲಿನ ಈಜುಕೊಳದ ತರಬೇತಿದಾರರು ಈಗಿನ ಮಾಜಿ ಪುರಪಂಚಾಯಿತಿ ಸದಸ್ಯರಾದ #ರಾಜಕುಮಾರ್ ತಂದೆ ಇದ್ದರು, ಈ ರಾಜಕುಮಾರ್ ಕೂಡ ಒಳ್ಳೆ ಈಜುಗಾರ ಅಷ್ಟು ಸಣ್ಣ ಹುಡುಗ (ಆ ಕಾಲದಲ್ಲಿ) ಈಜು ಕೊಳದಲ್ಲಿ ಕಾಯಿನ್ಸ್ ಹಾಕಿದರೆ ಆಳದಿಂದ ತರುತ್ತಿದ್ದು ನೋಡುವುದೆ ನಮಗೆ ಖುಷಿ.
ಆಗೆಲ್ಲ ಜೋಗ ಜಲಪಾತ ನೋಡಲು ಅಧ್ಯಯನ ಪ್ರವಾಸವಾಗಿ ದೇಶದ ಬೇರೆ ಬೇರೆ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಒಮ್ಮೆ ಪೂನಾದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಲ್ಲಿ ಬಂದಿದ್ದರು ಆಗ ಅವರ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಜೋಗ ಜಲಪಾತ 40 ಲಕ್ಷ ವರ್ಷದ ಹಿಂದೆ ಸವಕಳಿಯಿಂದ ರಚನೆ ಆಯಿತು ಅಂತ ವಿವರಿಸುತ್ತಿದ್ದನ್ನು ಅವರೊಡನೆ ನಿಂತು ನಾವು ಕೇಳಿಸಿಕೊಂಡು ಆಶ್ಚಯ೯ಪಟ್ಟಿದ್ದೆವು.
ನಮ್ಮ ತಾಲ್ಲೂಕಿನ ಅಂಚಿನ ಮಸವಳ್ಳಿಯ ಈ ನೈಸರ್ಗಿಕ ಕಾಲು ಸಂಕ ಕಾಲ ಕ್ರಮೇಣ ಅವಸಾನ ಹೊಂದುವ ಸಾಧ್ಯತೆ ಇರುವುದರಿಂದ ಈ ಪ್ರದೇಶದ ಶಾಸಕರೂ ಮತ್ತು ವಿದಾನ ಸೌದದ ಸ್ಪೀಕರ್ ಆಗಿರುವ #ಕಾಗೇರಿ_ವಿಶ್ವೇಶ್ವರ_ಹೆಗ್ಗಡೆ 25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು ಅಭಿನಂದನೀಯ ಆಗಿತ್ತು ಆದರೆ ಸಂಬಂದ ಪಟ್ಟ ಇಂಜಿನಿಯರ್ ಇಲಾಖೆ ಮಾತ್ರ ದೊಡ್ಡ ಪ್ರಮಾದ ಮಾಡಿದ್ದಾರೆ.
ಮಂಜುರಾದ 25 ಲಕ್ಷದಲ್ಲಿ ಈ ನೈಸರ್ಗಿಕ ಕಾಲು ಸಂಕ ಸಂರಕ್ಷಿಸಿಡಲು ಅವಶ್ಯ ಕಾಮಗಾರಿ ಮಾಡಬೇಕಿತ್ತು ಆದರೆ ಈ ನೈಸರ್ಗಿಕ ಕಾಲು ಸಂಕದ ಎರೆಡೂ ಕಡೆ ಕಾಂಕ್ರಿಟ್ ಗುಡ್ಡೆ ಹಾಕಿ ಅಲ್ಲಿ ಮಧ್ಯದಲ್ಲಿ ಕೆಲ ಅಡಿ ನೈಸರ್ಗಿಕ ಕಾಲು ಸಂಕದ ಕಲ್ಲು ಮಾತ್ರ ಕಾಣುವಂತೆ ಮಾಡಿದ್ದಾರೆ, ಬಹುಶಃ ಅವರ ತಲೆಯಲ್ಲಿ ಇದರ ಮೇಲೆ ವಾಹನ ಸಾಗಾಣಿಕೆ ಮಾಡುವ ಉದ್ದೇಶ ಇತ್ತೇನೊ?.
ಈ ಅಪರೂಪದ ನೈಸರ್ಗಿಕ ಕಾಲು ಸಂಕ ಸಂರಕ್ಷಿಸಿಕೊಳ್ಳುವ ಅವಶ್ಯಕತೆ ನಮ್ಮದೆಲ್ಲ ಆಗಿತ್ತು ಆದರೆ ದುರಾದೃಷ್ಟವಶಾತ್ ವಿದ್ಯಾವಂತ ಇಂಜಿನಿಯರ್ ಗಳು ಸರ್ಕಾರ ಸೇರಿ ಸರ್ಕಾರದ 25 ಲಕ್ಷ ಹಣವೂ ಬಳಸಿ ನೈಸರ್ಗಿಕ ರಚನೆಯ ಸಂಶೋದನಾ ಯೋಗ್ಯವಾದ ಕಲ್ಲಿನ ಕಾಲು ಸಂಕದ ಎರೆಡೂ ಬಾಗ ಕಾಂಕ್ರಿಟ್ ನಲ್ಲಿ ಮುಚ್ಚಿ ಅಪಚಾರ ಮಾಡಿದ್ದಾರೆ.
ಸಮೀಪದ #ಮಾವಿನಗುಂಡಿ_ಅಶೋಕ್_ಹೆಗ್ಗಡೆ ಇದನ್ನು ಸ್ಥಳಿಯ ಲ್ಯಾಟರೇಟ್ ಸ್ಟೋನ್ ಮತ್ತು ಗಂ ಬಳಸಿ ಈ ನೈಸರ್ಗಿಕ ಕಾಲು ಸಂಕವನ್ನು ಭದ್ರಪಡಿಸಬಹುದಾಗಿತ್ತು ಎಂದು ಅಭಿಪ್ರಾಯಿಸಿದ್ದಾರೆ.
Comments
Post a Comment