Skip to main content

ವಿಮಾನ ನಿಲ್ದಾಣಗಳ ರನ್ ವೇ ಬಣ್ಣ ತಯಾರಿಸುವ ಪೂನಾದ ಅಂತರಾಷ್ಟ್ರೀಯ ಶ್ರೀಮಂತ ಉದ್ಯಮಿಯ ನಡೆದು ಹೋಗುವ ಹವ್ಯಾಸ, ಒಂದು ರಾತ್ರಿ ನನ್ನ ಅತಿಥಿ ಮುಂದಿನದ್ದು ಓದಿ

#ಹೀಗೂ_ಉ೦ಟೆ!?

#ಇದು_2018ರ_ಘಟನೆ_ಸದಾ_ನೆನಪಾಗುವುದರಿಂದ_ಇನ್ನೂ_ಒಮ್ಮೆ_ಪೋಸ್ಟ್_ಮಾಡಿದೆ

#ರವೀ೦ದ್ರದತ್ತಾತ್ರೇಯಬುಚಾಕೆ_ದೇಶ_ವಿದೇಶಗಳಲ್ಲಿ #ಪಾದಯಾತ್ರೆ_ಮಾಡುವ_ಶ್ರೀಮಂತ_ಕೈಗಾರಿಕೋದ್ಯಮಿ 

#ಪ್ರತ್ಯಕ್ಷ_ಕಂಡರು_ಪರಾಂಬರಿಸಿ_ನೋಡು_ಗಾದೆ_ಸುಳ್ಳಲ್ಲ

  ನಿನ್ನೆ ಇವರು ಪತ್ನಿ ಮತ್ತು ಮಗನೊಂದಿಗೆ ಬಂದು ನನಗೆ ಕಾಯುತ್ತಿದ್ದರು, ಸಪ್೯ರೈಸ್ ವಿಸಿಟ್ ಮಾಡಿದ ಇವರ ಹೆಸರು ರವೀಂದ್ರ ದತ್ತಾತ್ರೆಯ ಬುಚಾಕೆ.
   ನನಗೆ ಸಿಹಿ ತಿಂಡಿ, ಬೆಳ್ಳಿಯ ದೀಪದೊoದಿಗೆ ನೆನಪಿನ ಕಾಣಿಕೆ ನೀಡಿದರು, ನಾನು ಹೇಳಿದೆ " ನಾನು ನೀಡಿದ ಆತಿಥ್ಯಕ್ಕಿಂತ ಇದು ಕೆಲವು ಪಟ್ಟು ದುಬಾರಿ ಆಯಿತು ಅಂದೆ, ಅದಕ್ಕೆ ಅವರು ನಿಮ್ಮ ಪ್ರೀತಿಯ ಆತಿಥ್ಯಕ್ಕೆ ಬೆಲೆ ಕಟ್ಟಲು ಬಾರದು ಅಂದರು.
  ವಾಸ್ತವ ಏನೆಂದರೆ ಕಳೆದ ವಷ೯ ಇವರು ಪೂನಾದಿಂದ ಶೃಂಗೇರಿಗೆ ಏಕಾ೦ಗಿ ಆಗಿ ನಡೆದು ಹೋಗುವಾಗ ನಮ್ಮ ಲಾಡ್ಜ್ ನಲ್ಲಿ ರೂಮು ಖಾಲಿ ಇರಲಿಲ್ಲ ಹಾಲ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಿದ್ದೆ,ಒಂದು ರಾತ್ರಿ ತಂಗಿದ್ದರು, ಅವರ ಹಿನ್ನೆಲೆ ನಾನು ಕೇಳಲಿಲ್ಲ ಅವರು ಹೇಳಲಿಲ್ಲ ಆದರೆ ಅವರ 69ನೇ ಇಳಿವಯಸ್ಸಿನಲ್ಲಿ ಪೂನಾದಿಂದ ಶೃ೦ಗೇರಿಗೆ ಏಕಾ೦ಗಿಯಾಗಿ 780 ಕಿ.ಮಿ ನಡೆದು ಹೋಗುವ ಅವರ ಸಾಹಸಕ್ಕೆ ಅಭಿನಂದಿಸಿ ವಸತಿ, ಊಟ ಮತ್ತು ಉಪಹಾರ ಹಣ ಪಡೆಯದೆ ನೀಡಿದ್ದೆ ಮತ್ತು ಮುಂದಿನ ಪ್ರಯಾಣಕ್ಕೆ ಅಲ್ಪ ಕಾಣಿಕೆ ನೀಡಲು ಮುಂದಾದಾಗ ನಯವಾಗಿ ನಿರಾಕರಿಸಿದ್ದರು.
  ನಿನ್ನೆ ಅವರ ಹಿನ್ನೆಲೆ ತಿಳಿಯಿತು ಈ ಹಿಂದೆ ಇವರು ಪ್ರಾನ್ಸ್ ದೇಶದ ಬೋಡಾ೯ದಿಂದ ಸಾಂಟಿಯೋಗದವರೆಗೆ 1480 ಕಿ.ಮಿ ಏಕಾಂಗಿ ಆಗಿ 2 ತಿಂಗಳಲ್ಲಿ ನಡೆದಿದ್ದಾರೆ, ಇವರ ಮಗ ಕೂಡ ಇವರOತೆ ಏಕಾಂಗಿ ಆಗಿ ಪ್ರಾನ್ಸ್ ನಲ್ಲಿ ಪಾದಯಾತ್ರೆ ಮಾಡಿದ್ದಾರೆ.
  ಇವರು ವಿಮಾನ ನಿಲ್ದಾಣಗಳ ರನ್ ವೇ ಗಳಿಗೆ ಬಳಿಯುವ ಬಣ್ಣಗಳ ಉತ್ಪಾದಿಸುವ ಕೈಗಾರಿಕೋದ್ಯಮಿ.
  ಇವರ ಪತ್ನಿಗೆ ಕೇಳಿದೆ ಈ ವಯಸ್ಸಲ್ಲಿ ಇವರನ್ನ ಒಬ್ಬOಟಿಯಾಗಿ ಇಂತ ಸಾಹಸಕ್ಕೆ ಕಳಿಸಲು ನಿಮಗೆ ದೈಯ೯ ಬರುತ್ತಾ? ಅ೦ದೆ ಅವರ ಉತ್ತರ "ನನ್ನ ಪತಿ ಸಾಹಸ ಪ್ರಿಯರು, ಅವರು ಮೆ೦ಟಲಿ ಸ್ಟ್ರಾ೦ಗ್ ಇದ್ದಾರೆ, ಈ ರೀತಿ ನಡಿಗೆಯಿಂದ ಅವರಿಗೆ ಜೀವನೋತ್ಸಾಹ ವಯಸ್ಸನ್ನ ಮೀರಿ ಇಮ್ಮಡಿ ಆಗುತ್ತದೆ ಹಾಗಾಗಿ ನಾನು ಬೆಂಬಲಿಸುತ್ತೇನೆ" ಅಂದರು.
  ಪೂನಾಕ್ಕೆ ಯಾವತ್ತೆ ಬಂದರೂ ಅಥವ ಆ ಮಾಗ೯ದಲ್ಲಿ ಪ್ರಯಾಣ ಮಾಡಿದರೂ ಅವರ ಅತಿಥಿ ಆಗ ಬೇಕೆಂದು ಆಮ೦ತ್ರಣ ನೀಡಿ ಈ ಸಾಹಸಿ ಶ್ರೀಮಂತ ಕುಟುಂಬ ತೆರಳಿತು.
 ಒಂದು ದಿನದ ಆತಿಥ್ಯ ನೆನಪು ಮಾಡಿ ಬಂದ ಇವರು ನನ್ನ ನೆನಪಲ್ಲಿ ಚಿರಸ್ತಾಯಿ ಆದರು.
  
Yesterday, Ravindra Dattatreya Buchake, an industrialist hailing from Pune, made a surprise visit to our lodge along with his family. I was delighted by this pleasant surprise.
 He gave the sweets he got for me, and gave a pair of silver diyas as a memento for his visit. I was greatly amazed by his generous gesture and told him that this was something expensive than my hospitality. But shrugging it off, he said " your loving hospitality is priceless."
 The story goes back to last year. Mr Buchake was stayed for a night in our lodge on his way to Sringeri. He was going on a foot pilgrimage, alone. At the age of 69, he was taking this challenging journey of walking to Sringeri from Pune, covering a vast distance of 780 kilometres. Impressed by his adventurous journey and his love for life, we didn't charge for his stay and breakfast was complimentary. I felt this is a little we can do for a person who is on such a journey. The small contribution offered to him for his journey was politely declined by him. Ofcourse, I didn't enquire him about his background, nor did he shed light on that.
 It was only yesterday after our talks I got to know that previously he had covered the distance of 1480 kms from Bordeaux - France to Santiago by walk. I was delighted to know that his son also did go on such journeys in France.
 Mr. Ravindra Buchake is an industrialist who manufacturers Airport Runway marking paints.
 I asked his wife how she gets the immense courage to allow him to take on such adventurous journeys on his own. For that she said, " _My husband loves such adventures. He has a strong will power. . Moreover such adventures increases his love for life. I support him for that_ ."   
 Extending a warm invitation to receive their hospitality if I ever visit Pune or passing by the city, thr adventurous family departed. This pleasant visit, their lovely gesture is unforgettable.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ