#ರಾಜು_ನವಟೂರು_ಮೊದಲೇ_ಪೋನ್_ಮಾಡಿ_ತಿಳಿಸಿದರೆ_ಮಾವಿನ_ಮಿಡಿ_ಒದಗಿಸುತ್ತಾರೆ.
#ನಾನು_ಎರೆಡು_ಸಾರಿ_ಖರೀದಿಸಿದೆ.
ಕಳೆದ ಎರೆಡು ವರ್ಷ ಮಾವಿನ ಮಿಡಿ ಸಿಗಲೇ ಇಲ್ಲ, ಸಿಕ್ಕಿದರೂ ಇನ್ನೂ ಚೆನಾಗಿದ್ದು ನಾಳೆ ಮಾರಾಟಕ್ಕೆ ಬರಬಹುದು ಅಂತ ಮತ್ತು ಇನ್ನೂ ಕಡಿಮೆಗೆ ಸಿಗಬಹುದಂತ ಕಾಯುತ್ತಾ ಇದ್ದಾಗ ಮಾವಿನ ಹಣ್ಣಿನ ಸೀಸನ್ ಬಂದಿತ್ತು.
ನಮ್ಮ ಸುತ್ತ ಮುತ್ತಲಿನ ಮಾವಿನ ಮಿಡಿ ಮಾರಾಟಗಾರರು ಸ್ಥಳಿಯವಾಗಿ ಮಾರಾಟಕ್ಕೆ ಆಸಕ್ತಿವಹಿಸುವುದಿಲ್ಲ ಕಾರಣ ಸ್ಥಳಿಯರು ಅನೇಕ ಪರೀಕ್ಷೆ - ವಿಮರ್ಷೆ - ಚೌಕಾಸಿ ಅಮೇಲೆ ನಿರಾಕರಣೆ ಮಾಡುತ್ತಾರೆ.
ಅದೇ ಉಪ್ಪಿನಕಾಯಿ ಮಾವಿನ ಮಿಡಿ ಕೇಂದ್ರವಾಗಿರುವ ರಿಪ್ಪನ್ ಪೇಟೆಯಲ್ಲಿ ಹೆಬ್ಬಾರ್, ರಮೇಶ್, ಉಪ್ಪಿನಕಾಯಿ ಪ್ಯಾಕ್ಟರಿ ಮತ್ತು ಅನೇಕ ಹೋಟೆಲ್ ಅಂಗಡಿ ಮಾಲಿಕರು ತಕ್ಷಣ ಒ0ದು ಬೆಲೆ ನಿಗದಿ ಮಾಡಿ ಖರೀದಿಸಿ ಹಣ ನೀಡಿ ಕಳಿಸುತ್ತಾರೆ (ನಂತರ ಹೆಚ್ಚು ಬೆಲೆಗೆ ಅವರು ಮಾರುತ್ತಾರೆ).
ಹೀಗಾಗಿ ನಮಗೆ ಮಿಡಿ ಮಾವಿನಕಾಯಿ ಸಿಗುವುದಿಲ್ಲ ಆದ್ದರಿಂದ ಈ ಸಾರಿ ಹೇಗೆ? ಅಂತ ಯೋಚಿಸುವಾಗಲೇ ಗೆಳೆಯ #ಶೇಖ್_ಆಹಮದ್ ಸಾಹೇಬರು ಈ ರಿಪ್ಪನ್ ಪೇಟೆ ಸಮೀಪದ ರಾಜುನ ಮಿಡಿ ಜೊತೆಗೆ ನನ್ನ ಹತ್ತಿರ ಕಳಿಸಿದ್ದರು ನಾನು ಯಾವುದೇ ಪ್ರಶ್ನೆ ಚೌಕಾಸಿ ಮಾಡದೆ ಲೆಖ್ಖ ಮಾಡಿ ಪ್ರತಿ ಮಿಡಿಗೆ ಅವರು ಹೇಳಿದಂತೆ ರೂ 1.50 ಪೈಸೆ ಪಾವತಿ ಮಾಡಲು ಮನೆಯಲ್ಲಿ ತಿಳಿಸಿದ್ದೆ.
ಪತ್ರಕರ್ತರಾದ ಡಿ.ಪಿ. ಸತೀಶ್ (News 18 ದಕ್ಷಿಣ ಬಾರತ ಮತ್ತು ಶ್ರೀಲಂಕದ ಮುಖ್ಯಸ್ಥರು) ಮಾವಿನ ಮಿಡಿ ಬೇಕಂತ FB ಯಲ್ಲಿ ವಿನಂತಿಸಿದ್ದರಿಂದ ನಿನ್ನೆ ಅವರಿಗಾಗಿ ಖರೀದಿಸಿದೆ.
ಪಿಂಗರ್ ಪ್ರಿಂಟ್ ಮತ್ತು ಪೂಟ್ ಪ್ರಿಂಟ್ ಪ್ರಯೋಗದಲ್ಲಿ ಉದ್ಯೋಗದಲ್ಲಿರುವ ಸಮೀಪದ ಹೊಸಗುಂದದ ಹೆಡ್ತ್ರಿ ಸಂತೋಷ್ 1000 ಮಿಡಿ ಬೇಕು ಅಂದಿದ್ದರಿಂದ ಅವರಿಗೆ ಇವತ್ತು ವ್ಯವಸ್ಥೆ ಮಾಡಿದೆ.
ಬಹಳ ಜನ ಉಪ್ಪಿನಕಾಯಿ ಪ್ರಿಯರು ಮಾವಿನ ಮಿಡಿಗಾಗಿ ವಿಚಾರಿಸುತ್ತಿದ್ದಾರೆ ನಾನು ಊರಲ್ಲಿರುವುದಿಲ್ಲವಾದ್ದರಿಂದ ನವಟೂರು ರಾಜುಗೆ ಇವತ್ತು ಹೇಳಿದೆ ನಿನ್ನ ಪೋಟೋ ಪೋನ್ ನಂಬರ್ FB ಯಲ್ಲಿ ಪೋಸ್ಟ್ ಮಾಡುತ್ತೇನೆ ಕೇಳಿದವರಿಗೆ ಮಿಡಿ ಸರಬರಾಜು ಮಾಡು ಅಂತ, ರಾಜು ಒಪ್ಪಿದ್ದಾನೆ, ಸಾಗರದ LB ಕಾಲೇಜಿನ ಪದವೀದರ ಈತ.
ಆಸಕ್ತರು ರಾಜುಗೆ ಕರೆ ಮಾಡಿ ಮಾವಿನಮಿಡಿ ಖರೀದಿಸಬಹುದು, ಈ ವರ್ಷ ಮಾವಿನ ಮಿಡಿ ಎಲ್ಲಾ ಮರದಲ್ಲಿ ಬಂದಿದೆ ಆದರೆ ಬೆಳಿಗ್ಗೆ ಬೀಳುತ್ತಿರುವ ಇಬ್ಬನಿ ಏನು ಮಾಡುತ್ತೆ ಗೊತ್ತಿಲ್ಲ, ಅಷ್ಟರಲ್ಲಿ ಸ್ವಲ್ಪ ಮಿಡಿ ಖರೀದಿಸಿ ಅನ್ನುವುದು ನನ್ನ ಅಭಿಪ್ರಾಯ.
ಇವರ ಸೆಲ್ ನಂಬರ್ 74839 69481
ವಿ.ಸೂ. ಅಡ್ವಾನ್ಸ್ ಕೊಡಬೇಡಿ, ಎಣಿಸಿಕೊಳ್ಳದೆ ಹಣ ಪಾವತಿ ಮಾಡಬೇಡಿ.
Comments
Post a Comment