ಮುರುಳಿವಾಲೆ ಹೌಸಲಾ ದೇಶದ ಹೆಸರಾಂತ ಹಾವು ಸಂರಕ್ಷಕರಲ್ಲಿ ದೊಡ್ಡ ಹೆಸರು, ಉಚಿತವಾಗಿ ಹಾವು ಹಿಡಿದು ಜನರಲ್ಲಿ ಹಾವಿನ ಬಗ್ಗೆ ಜನಜಾಗೃತಿ ಮಾಡುತ್ತಿರುವ ಇವರ ಯು ಟ್ಯೂಬ್ ವೀಕ್ಷಕರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು.
#ಬೆಸಿಗೆಯಿಂದ_ಪರಿಸರದಲ್ಲಿ_ಏರುತ್ತಿರುವ_ಉಷ್ಣಾಂಶ
#ಮನೆ_ಒಳಗೆ_ಬರುತ್ತಿರುವ_ಹಾವುಗಳು.
#ನಮ್ಮ_ದೇಶದ_ಹೆಸರಾಂತ_ಹಾವು_ಸಂರಕ್ಷಕ
#ಮುರುಳಿವಾಲೆ_ಹೌಸಲಾ.
#ಹಾವುಗಳ_ಬಗ್ಗೆ_ಜನಜಾಗೃತೆ_ಮಾಡುತ್ತಾರೆ.
ಮುರುಳಿವಾಲೆ ಹೌಸಲಾ ದೇಶದ ಹಾವು ಸಂರಕ್ಷಕರಲ್ಲಿ ದೊಡ್ಡ ಹೆಸರು ಇವರು ಉತ್ತರ ಪ್ರದೇಶದ ಜಾವನಪುರ ಇವರ ಊರು, ಇವರ ವಯಸ್ಸು 30 ವರ್ಷ.
ಇವರ ಯೂಟ್ಯೂಬ್ ವೀಕ್ಷಕರು ಹತ್ತು ಲಕ್ಷಕ್ಕೂ ಹೆಚ್ಚು, ಇವರು ಹಾವು ಹಿಡಿದರೆ ಹಣ ಪಡೆಯುವುದಿಲ್ಲ ಇವರಿಗೆ ಮುಖ್ಯ ಆದಾಯ ಈ ಹಾವು ಹಿಡಿಯುವ ವಿಡಿಯೋ ಪ್ರಸಾರದಿಂದ ಬರುವ ಜಾಹಿರಾತು, ಈ ಮೂಲಕ ಪ್ರತಿ ತಿಂಗಳ ಆದಾಯ ಇವರಿಗೆ ಲಕ್ಷಕ್ಕೂ ಹೆಚ್ಚು.
ಇವರ ಮುರುಳಿವಾಲೆ ಹೌಸಲಾ ಪೌಂಡೇಶನ್ ಅನೇಕ ಸಮಾಜ ಸೇವಾ ಕೆಲಸ ಮಾಡುತ್ತಿದೆ ಈ ಪೌಂಡೇಶನ್ ನೆ ಅನೇಕರು ದೇಣಿಗೆ ನೀಡುತ್ತಾರೆ.
ಹಾವುಗಳು ಹಾಲು ಕುಡಿಯುವುದಿಲ್ಲ, ಅವು ಮಾಂಸಹಾರಿಗಳು, ಇಲಿಗಳು ಇವುಗಳ ಇಷ್ಟದ ಆಹಾರ, ಮನೆ ಸುತ್ತಮುತ್ತಾ ಚೊಕ್ಕವಾಗಿ ಇಟ್ಟುಕೊಳ್ಳಿ, ಚಳಿಗಾಲದಲ್ಲಿ ಬೆಚ್ಚನೆ ಸ್ಥಳ ಅರಸಿ ಮನೆ ಒಳಗೆ ಬರುತ್ತೆ, ಬೇಸಿಗೆ ಕಾಲದಲ್ಲಿ ತಂಪು ಸ್ಥಳ ಅರಸಿ ಮನೆ ಒಳಗೆ ಬರುತ್ತೆ, ಹಾವು ಕಚ್ಟಿದ 24 ಗಂಟೆ ಒಳಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಹಾವಿನ ವಿಷದ ಪ್ರತಿರೋದಕ ಚುಚ್ಚುಮದ್ದು ತೆಗೆದುಕೊಂಡು ಜೀವ ಉಳಿಸಿಕೊಳ್ಳಿ, ಮಾಟ-ಮಂತ್ರ-ಗಿಡ ಮೂಲಿಕೆಗಳು ಹಾವಿನ ವಿಷಕ್ಕೆ ಪರಿಹಾರ ಅಲ್ಲ ಎಂಬ ಇವರ ಜನ ಜಾಗೃತಿ ಕೂಡ ಮೆಚ್ಚುವಂತದ್ದು.
ಪ್ರತಿ ದಿನ ಒಂದು ಪೋಸ್ಟ್ ಇದ್ದೇ ಇರುತ್ತದೆ, ನಾನು ಇದಕ್ಕಾಗಿ ಪ್ರತಿ ದಿನ ಕಾಯುತ್ತೇನೆ, ಈ ಕೆಳಕಂಡ ಲಿಂಕ್ ನಲ್ಲಿ ಇವರ ಪೇಸ್ ಬುಕ್ ಪೇಜ್ ನೋಡಬಹುದು
https://www.facebook.com/hauslamurliwale/
Comments
Post a Comment