Blog number 949. ಹಬ್ಬಗಳಲ್ಲಿ ಆಚರಿಸುವ ದೇಹ ದಂಡನೆಯ ಉಪವಾಸ ಇತ್ಯಾದಿ ಭಕ್ತಿ ಮಾರ್ಗದಲ್ಲಿ ದೇಹದ ಶುದ್ಧಿ ಕೂಡ ಅಡಗಿದೆ, ಶ್ರಾವಣ ಮಾಸದಲ್ಲಿ ಟೀ-ಕಾಫಿ ಕೂಡ ತ್ಯಜಿಸುವ ನಾನು ಮತ್ತು ಇಡೀ ಮಾಸ ಕೇವಲ ಹಾಲು - ಹಣ್ಣು ಮಾತ್ರ ಸೇವಿಸುವ ನನ್ನ ಮ್ಯಾನೇಜರ್ ಅನಿಲ್ ಮುಂದೆ ನನ್ನ ಆಚರಣೆ ಏನೇನೂ ಅಲ್ಲ.
#ಪ್ರತಿ_ಶ್ರಾವಣದಲ್ಲಿ_ಒಂದು_ತಿಂಗಳು_ನಾನು_ಕಾಫಿ_ಟೀ_ಕೂಡ_ಕುಡಿಯುವುದಿಲ್ಲ
#ಆದರೆ_ನಮ್ಮ_ಮ್ಯಾನೇಜರ್_ಕೇವಲ_ಹಾಲು_ಹಣ್ಣಿನಲ್ಲೆ_ಶ್ರಾವಣ_ಆಚರಿಸುತ್ತಾರೆ.
ದೇಹ ದಂಡನೆಯ ಮೂಲಕ ದೇವರ ಆರಾದನೆ ಎಲ್ಲಾ ದರ್ಮಿಯರಲ್ಲೂ ಇದೆ ಇದು ಭಕ್ತಿ ಮಾರ್ಗವೂ ಹೌದು ಇನ್ನೊಂದು ಇದರಿಂದ ದೇಹದ ಆರೋಗ್ಯ ಕೂಡ ಉತ್ತಮಗೊಳಿಸುವ ವ್ಯವಸ್ಥೆ.
ನಾನು ನಮ್ಮ ಹಬ್ಬದ ದಿನಗಳನ್ನೆ ನನ್ನ ಆರೋಗ್ಯಕ್ಕಾಗಿ ನಿಗದಿ ಮಾಡುತ್ತೇನೆ ಇದರಿಂದ ದಿನಗಳು ಲೆಖ್ಖ ಮಾಡಲು ಸುಲಭ ಮತ್ತು ಹಬ್ಬ ನನ್ನ ಆಚರಣೆಗೆ ಮಹತ್ವ ನೀಡುವುದರಿಂದ ಆಯ್ಕೆ ಮಾಡಿಕೊಳ್ಳುತ್ತೇನೆ ಉದಾಹರಣೆಗೆ 2020 ರ ಶಿವರಾತ್ರಿಯಂದು ನಾನು ನನ್ನ ರಾತ್ರಿ ಊಟ ತ್ಯಜಿಸಿದೆ ಮುಂದಿನ 2023ರ ಶಿವರಾತ್ರಿಗೆ ಮೂರು ವರ್ಷ.
ಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಾನು ಬೇರೆಲ್ಲ ಆಹಾರ ನಿಯಮದ ಜೊತೆ ಕಾಫಿ ಮತ್ತು ಟೀ ಕೂಡ ತ್ಯಜಿಸುತ್ತೇನೆ ಇದರಿಂದ ಸ್ವಯ೦ ನಿಯಂತ್ರಣ ಸಾಬೀತು ಮತ್ತು ದೇಹಕ್ಕೆ ಆಡಿಕ್ಟ್ ಆದ ಕೆಫಿನ್ ನಿಂದ ಹೊರಬರಲು ಒಂದು ಪ್ರಯತ್ನ ಕೂಡ.
ಶ್ರಾವಣದ ಮೊದಲ ಒಂದು ವಾರ ಕಾಫಿ-ಟೀ ಬಿಟ್ಟ ಪರಿಣಾಮ ಕೆಫಿನ್ ಇಲ್ಲದ ದೇಹ ಉಲ್ಲಾಸ ಮತ್ತು ಉತ್ಸಾಹ ಕಳೆದುಕೊಳ್ಳುತ್ತದೆ,ಕ್ರಮೇಣ ಹೊಂದಿಕೊಳ್ಳುತ್ತದೆ ಶ್ರಾವಣದ ಮೊದಲ ದಿನ ಪುನಃ ಕಾಫಿ ಕುಡಿದಾಗ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.
ದಾರ್ಮಿಕ ಆಚರಣೆಯಲ್ಲಿ ಮಹಾರಾಷ್ಟ್ರೀಯರು ತು೦ಬಾ ಕಠೋರ ನಿಯಮ ಪಾಲಕರು, ನನ್ನ ಮ್ಯಾನೇಜರ್ ಅನಿಲ್ ಮಹಾರಾಷ್ಟ್ರದ ಕೊಂಕಣದ ರತ್ನಗಿರಿ ಸಮುದ್ರ ಕಿನಾರೆಯವರು.
ಈ ವಷ೯ದ ಮುಂಗಾರು ಸಮುದ್ರ ಇವರ ಊರಿನ ಸಮುದ್ರ ತೀರದ ಮನೆಗಳನ್ನು ಆಪೊಷನಗೊಳಿಸಿದ್ದರಿಂದ ಇವರ ಹಳ್ಳಿಯ ಅಂಬಾ ಭವಾನಿ ದೇವಾಲಯದಲ್ಲಿ ಒಂದು ಹರಕೆ ಹೊತ್ತಿದ್ದಾರೆ ಅದೇನೆಂದರೆ ಇಡೀ ಹಳ್ಳಿಯ ಜನ ಶ್ರಾವಣ ಮಾಸ ಪೂರ್ಣ ಹಾಲು ಹಣ್ಣು ಮಾತ್ರ ಸೇವಿಸಬೇಕು, ಕ್ಷೌರ ಮಾಡಬಾರದು ಮತ್ತು ನವರಾತ್ರಿ 9 ದಿನ ನೀರು ಮಾತ್ರ ಸೇವನೆ ಮಾಡಬೇಕು,ಶ್ರಾವಣ ಮಾಸದಿಂದ ನವರಾತ್ರಿ ಮುಗಿಯುವವರೆಗೆ ಪಾದರಕ್ಷೆ ಧರಿಸಬಾರದು.
ಭೀಮನ ಅಮಾವಸ್ಯೆಗೆ ಮಹಾರಾಷ್ಟ್ರದಲ್ಲಿ ಹಾಸ್ಯಕ್ಕಾಗಿ ಗಟಾರಿ ಅಮಾವಸ್ಯೆ ಅನ್ನುತ್ತಾರೆ ಅದರ ಮರುದಿನ ಶ್ರಾವಣ ಪ್ರಾರಂಭ ಆಗುವುದರಿಂದ ಈ ಅಮಾವಸ್ಯೆಗೆ ಮಾಂಸಹಾರ ಮಧ್ಯಪಾನ ಸೇವನೆಯ ಅಂತಿಮ ಅಂತ ದೊಡ್ಡ ಸೆಲೆಬ್ರೇಷನ್ ನಡೆಯುತ್ತದೆ ಕುಡಿದು ಚರಂಡಿಗೆ ಬೀಳುತ್ತಾರೆಂಬ ಹಾಸ್ಯಕ್ಕೆ ಈ ಹೆಸರು ಇದನ್ನು ಬಾರ್ ರೆಸ್ಟೊರೆಂಟ್ ಪ್ರಚಾರಕ್ಕೆ ಬಳಸುತ್ತದೆ.
ನಮ್ಮ ಸಂಸ್ಥೆಯ ನಿತ್ಯ ಕೆಲಸ ನಿರ್ವಹಿಸುತ್ತಾ ಶ್ರಾವಣ ಮಾಸದ ಅವರ ಮನ್ನತ್ (ಹರಕೆ) ನಿಯಮಾನುಸಾರ ಕೇವಲ ಹಾಲು ಹಣ್ಣು ಸೇವನೆಯಲ್ಲಿ ಮುಗಿಸಿ ನಿನ್ನೆ ಮಧ್ಯಾಹ್ನ ಊಟ ಮಾಡಿದ್ದಾರೆ ನಿಜಕ್ಕೂ ಅವರ ಈ ನಿಷ್ಟೆ ನನಗೆ ಖುಷಿ ಆಯಿತು ಅವರ ದೇಹ ದಂಡನೆಯ ಈ ಭಕ್ತಿ ಮಾರ್ಗದ ಪ್ರಾರ್ಥನೆ ದೇವರು ದಯಪಾಲಿಸಲಿ ಎಂದು ಅವರನ್ನ ಅಭಿನಂದಿಸಿದೆ.
Comments
Post a Comment