Blog number 939. ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಾರ್ಗದ ಮದ್ಯದಲ್ಲಿರುವ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಅಜಿನೋಮೊಟೊ, ಕೃತಕ ಬಣ್ಣ - ಪ್ಲೇವರ್ ಬಳಸದೆ ತಯಾರಿಸುವ ದಕ್ಷಿಣ ಭಾರತೀಯ ಮತ್ತು ಉತ್ತರ ಬಾರತೀಯ ಆಹಾರಗಳು.
#ತಂದೂರಿ_ರೋಟಿ_ಉತ್ತರ_ಭಾರತೀಯ_ತಿನಿಸುಗಳು.
#ತಂದೂರಿ_ರೋಟಿ_ಮೂಲ_ಇಂಡಸ್_ಕಣಿವೆಯ_ಮೆಸಪೋಟಾಮಿಯ
#ಇಂಡಿಯನ್_ಬ್ರೆಡ್_ಎಂದೇ_ಪ್ರಖ್ಯಾತ
Mallika Veg
https://maps.app.goo.gl/zEftqmawuji4AhuX8
2020 ಮಾರ್ಚ್ ನಿಂದ ಎರೆಡು ಬಾರಿ ಕೊರಾನಾ ಲಾಕ್ ಡವನ್ ನಿಂದ ಹೋಟೆಲ್ ಉದ್ಯಮ ತಲ್ಲಣಿಸಿತು, ಅನೇಕ ಹೋಟೆಲ್ ಗಳು ಖಾಯಂ ಆಗಿ ಬಂದ್ ಆಯಿತು, ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮಗಳು ಜೀವ ಹಿಡಿದು ಬದುಕಿದೆ.
ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮದ್ಯದ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಇದೆ, ನಮಗೆ ಪ್ರವಾಸಿಗಳೇ ಅನ್ನದಾತರು.
ಕಳೆದ 16 ತಿಂಗಳ ನಂತರ ನಮ್ಮ ರೆಸ್ಟೋರೆಂಟ್ ನಲ್ಲಿ ಉತ್ತರ ಭಾರತೀಯ ತಿನಿಸುಗಳು ತಂದೂರಿ ರೋಟಿ ಪುನಾರಾರಂಭವಾಗಿದೆ ಇದನ್ನು ತಯಾರಿಸುವ ಅನುಭವಿ ಸಿಬ್ಬಂದಿಗಳು ದೂರದ ಪಶ್ಚಿಮ ಬಂಗಾಳದ ರಾಜ್ಯದಿಂದ ಬಂದಿದ್ದಾರೆ.
ಮದ್ಯಾಹ್ನ ಮತ್ತು ಸಂಜೆ ಆಶ್ರೀವಾದ ಬ್ರಾಂಡಿನ ಶುದ್ಧ ಗೋದಿ ಹಿಟ್ಟಿನಿಂದ ತಂದೂರಿ ಭಟ್ಟಿಯಲ್ಲಿ ತಂದೂರಿ ರೋಟಿ ಚಾರ್ ಕೋಲಿನಿಂದ, ತಯಾರಿಸುವಾಗ ಹೋಟೆಲ್ ಸುತ್ತ ಪಸರಿಸುವ ಅದರ ಸುವಾಸನೆಯೆ ಚೇತೋಹಾರಿ ಆಗಿರುತ್ತದೆ, ತಂದೂರಿ ರೋಟಿ ಜೊತೆ ಪನೀರ್ - ಕಾಜು-ಮಶ್ರೂಮ್ - ಬೇಬಿಕಾರ್ನ್ - ಆಲೂ- ಮಿಕ್ಸ್ ವೆಜ್ ನ ವಿವಿದ ರೀತಿಯ ಮಸಾಲಾ- ಕಡಾಯಿ - ಕೊಲಾಪುರಿಗಳು ಬಾಯಲ್ಲಿ ನೀರೂರಿಸುತ್ತದೆ.
ಜೊತೆಗೆ ಹೂ ಕೋಸಿನಿಂದ ಮಾತ್ರ ಮಾಡುವ ಮಂಚೂರಿ - ಚಿಲ್ಲಿಗಳು ಕೂಡ ಇದರ ಜೊತೆ ಪನೀರ್ - ಬೇಬಿ ಕಾರ್ನ್ - ಮಶ್ರೂಮ್ ನಿಂದ ವಿವಿದ ವೆಜ್ ಬಿರಿಯಾನಿಗಳು, ಪ್ರೈಯಡ್ ರೈಸ್, ಸೂಪ್, ನೂಡಲ್ಸ್ ಮುಂತಾದ ತರಹಾವರಿ ತಿನಿಸುಗಳು ಮಧ್ಯಾಹ್ನ 12ರಿಂದ ರಾತ್ರಿ 10 ರ ತನಕ ಲಭ್ಯವಿದೆ.
ಒಂದು ವಿಶೇಷ ಅಂದರೆ ನಮ್ಮ ಹೃದಯದ ಅಪಧಮನಿಗಳನ್ನು ನಿರ್ಬಂದಿಸುವ ಟೀಸ್ಟಿಂಗ್ ಪೌಡರ್ ಗಳಾದ ಅಜಿನೋಮೋಟೋ ಅಥವ ಮೋನೋ ಸೋಡಿಯಂ ಗ್ಲುಟಮೇಟ್ ಯಾವ ಕಾರಣಕ್ಕೂ ನಮ್ಮ ಕಿಚನ್ ಗೆ ಪ್ರವೇಶ ಇಲ್ಲ, ಕಲಬೆರೆಕೆ ಪದಾರ್ಥಗಳು ಬ್ರಾಂಡೆಡ್ ಅಲ್ಲದ ವಸ್ತಗಳಿಗೂ ಅವಕಾಶ ಇಲ್ಲ, ಕೃತಕ ಬಣ್ಣ ಪ್ಲೇವರ್ ಕೂಡ ಬಳಸದೇ ತಯಾರಿಸುವ ಆಹಾರಗಳು ನಮ್ಮದು.
ಹಾಲು - ಬೆಣ್ಣೆ - ತುಪ್ಪ ಮತ್ತು ಪನೀರ್ ಗಳು, ಗೇರು ಬೀಜ, ಮಸಾಲ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ ಆದರೂ ಪರಿಶುದ್ಧ ರುಚಿಕರ ಆಹಾರ ಗ್ರಾಹಕರಿಗೆ ಕಳೆದ ಹತ್ತು ವರ್ಷದಿಂದ ನಿರಂತರವಾಗಿ ನೀಡುವಂತೆ ಮುಂದುವರಿಸಿದ್ಧೇವೆ.
ಬೆಳಗಿನ ಉಪಹಾರಕ್ಕೆ ಮಲೆನಾಡಿನ ಹಲಸಿನ ಎಲೆ ಕೊಟ್ಟೆ ಕಡುಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ,ಕೊಯಮುತ್ತೂರಿನ ಪೋಡಿ ಇಡ್ಲಿ, ತಟ್ಟೆ ಇಡ್ಲಿ ಜೊತೆಗೆ ಎಲ್ಲಾ ರೀತಿಯ ದೋಸೆ, ವಡಾ, ಪಲಾವ್, ಬಿಸಿಬೇಳೆಬಾತ್, ದಾರವಾಡದ ಪ್ರಖ್ಯಾತ ಗಿರ್ಮಿಟ್ ಮಿರ್ಚಿ ಬಜೆ, ಶುದ್ಧ ಹಾಲಿನಿಂದ ತಯಾರಿಸುವ ಪ್ರಸಿದ್ಧ ಬ್ರಾಂಡ್ ಕೊಥಾಸ್ ಕಾಫಿ ಪುಡಿಯಿಂದ ಪಿಲ್ಟರ್ ಕಾಫಿ, ಶುದ್ಧ ಹಾಲಿನಿಂದ ಲಿಪ್ಟನ್ ರವರ 3 Rose ಟೀಪುಡಿಯ ಚಹಾ, ದಕ್ಷಿಣ ಭಾರತದ ಊಟ ಹೀಗೆ ದೊಡ್ಡ ಪಟ್ಟಿ ಪ್ರತಿದಿನ ಬರುವ ಗ್ರಾಹಕರ ಹಸಿವು ತಣಿಸುವ ಕೆಲಸ ಮಾಡುತ್ತಿದೆ.
ಇದ್ದಿಲಿನ (ಚಾರ್ಕೋಲ್) ಬೆಂಕಿಯಿಂದ ಮಣ್ಣಿನ ಮಡಕೆಯಂತ ತಂದೂರ್ ಭಟ್ಟಿಯಲ್ಲಿ ತಯಾರಿಸುವ ಶುದ್ಧ ಗೋದಿ ಹಿಟ್ಟಿನ (ಅಟ್ಟಾದಿಂದ) ತಂದೂರಿ ರೋಟಿ ತುಂಬಾ ಪುರಾತನ ಆಹಾರ ಮತ್ತು ಅದರ ಮೂಲ ಇಂಡಸ್ ವ್ಯಾಲಿಯ ಮೆಸಪೋಟಾಮಿಯಾ ಆದ್ದರಿಂದ ಇಂಡಿಯನ್ ಬ್ರಿಡ್ ಹೆಸರಲ್ಲಿ ಈಗಲೂ ಭಾರತದ ನಾರ್ತ್ ವೆಸ್ಟ್ ಇಂಡಿಯ, ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್ ಗಳಲ್ಲಿ ನಿತ್ಯದ ಆಹಾರ ಆಗಿದೆ.
ಕೆಲ ಹೋಟೆಲ್ ಗಳು ಗೋದಿ ಹಿಟ್ಟಿಗೆ ಮೈದಾ ಸೇರಿಸುತ್ತಾರೆ ಮತ್ತು ಎಲ್ಲಾ ಆಹಾರಗಳಿಗೆ ಟೀಸ್ಟಿಂಗ್ ಪೌಡರ್, ಕಲರ್ ಗಳನ್ನು ಸೇರಿಸುವುದರಿಂದ ಕಡಿಮೆ ಬೆಲೆಗೆ ರುಚಿಕರ ಆಹಾರ ದೊರೆಯುತ್ತದೆ ಆದರೆ ಅದು ಆರೋಗ್ಯಕ್ಕೆ ಮಾರಕ ಎಂದು ಹೆಚ್ಚಿನ ಗ್ರಾಹಕರು ತಿಳಿದಿರುವುದರಿಂದ ಹೋಟೆಲ್ ಮಾಲಿಕರುಗಳು ಇದನ್ನು ಆಹಾರ ತಯಾರಿಕೆಯಲ್ಲಿ ಯಾವ ಕಾರಣಕ್ಕೂ ಬಳಸಬಾರದು ಇದರಿಂದ ಆಹಾರದ ಗುಣಮಟ್ಟ ಕಳೆದುಕೊಂಡು ಹೋಟೆಲ್ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ ಮತ್ತು ಅನೇಕ ಗ್ರಾಹಕರಿಗೆ ವಿಷ ಉಣಿಸಿದ ಪಾಪ ಗಳಿಸುತ್ತೇವೆ.
ಈಗ ನಾನು ಹೋಟೆಲ್ ಉದ್ಯಮದಲ್ಲಿ ಹೊಸ ಸಾಹಸಕ್ಕೆ ತಯಾರಾಗುತ್ತಿದ್ದೇನೆ, ಅದು ನನ್ನ ಕನಸಿನ ಉದ್ಯಮ ಎಲ್ಲವೂ ಸರಿಯಾದರೆ ಉದ್ಯಮ ಅನೇಕ ಊರಿಗೆ ತಲುಪಲಿದೆ ಅನೇಕರು ನಮ್ಮ ಜೊತೆ ಕೈ ಜೋಡಿಸಬಹುದು, ಅನೇಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವೂ ಲಭಿಸಲಿದೆ ಇದಕ್ಕಾಗಿ ಪಕ್ಕಾ ಅನುಭವಿ ವಿದೇಶಿ ಸಂಸ್ಥೆಗಳ ಸಲಹೆ ಪಡೆಯುತ್ತಿದ್ದೇನೆ ಅವರ ಜೊತೆಗೆ ಪರಿಣಿತರ ತಂಡಗಳು ಯೋಜನೆ ಕಾರ್ಯಗತ ಮಾಡಲು ಜೊತೆಯಾಗಿದೆ.
Comments
Post a Comment